ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 24 ರಂದು "ಸಂವಿಧಾನ ಜಾಗೃತಿ ಸಮಾವೇಶ" ನಡೆಯಲಿದೆ.


ಬೆಂಗಳೂರು, ಏಪ್ರಿಲ್ 28, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 24 ರಂದು "ಸಂವಿಧಾನ ಜಾಗೃತಿ ಸಮಾವೇಶ" ನಡೆಯಲಿದೆ ಎಂದು ತಿಳಿಸಿದರು. 

ಒಳ ಮೀಸಲಾತಿ ಸಂಬಂಧ ನಡೆಯುತ್ತಿರುವ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದ ಜನರು ಸಕ್ರಿಯವಾಗಿ ಭಾಗಿಯಾಗಬೇಕೆಂದು ಮನವಿ ಮಾಡಿದರು. 


ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟವು ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯ-ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ, ಜಗಜೀವನರಾಂ ಸಂಘ, ಮಾತಂಗ ಪರಿವಾರ, ಮಾತಂಗ ಫೌಂಡೇಷನ್, ಮಾದಿಗರ ಸಂಘ, ಮಾದಿಗ ಮಹಾಸಭಾ, ಆದಿಜಾಂಬವ ಮಹಾಸಭಾ, ಡೋಹರ ಕಕ್ಕಯ್ಯ ಸಮಾಜ, ರಾಜ್ಯ ಸಮಗಾರ ಹರಳಯ್ಯ ಸಮಾಜ, ಪೌರಕಾರ್ಮಿಕರ ಸಂಘ ಹಾಗೂ ವಿವಿಧ ಸಂಘಗಳನ್ನೊಳಗೊಂಡ ಒಕ್ಕೂಟವಾಗಿದ್ದು, ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಏಳಿಗೆ ಮತ್ತು ಅಭಿವೃದ್ಧಿಗಾಗಿ ಸಾಮೂಹಿಕ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಆಸ್ಪಷ್ಟ ಸಮುದಾಯಕ್ಕೆ ಸೇರಿದ. ಮಾದಿಗ, ಮಾದಾರ, ಮಾತಂಗ, ಚಮ್ಮಾರ, ಸಮಗಾರ, ಚಮಗಾರ, ಮಣೆಗಾರ, ಮೋಚಿ, ಮಚಿಗಾರ್,ಥೋರ್, ಕಕ್ಕಯ್ಯ, ಹರಳಯ್ಯ, ಅರುಂಧತೀಯ. ಬಿಕ್ಕಲು ವಕ್ಕಲಿಗ, ದೊಕ್ಕಲ್ನಾರ್, ಮಾಂಗ್, ಚಿಂದೋಳ್ಳು, ಯಲ್ಲಮ್ಮವಾಂಡು. ಎನಿಮಾದಿಗ, 'ಹಮಾದಿಗ, ಜಾಂಬವುಲು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಆದಿಶೈವ ಇತ್ಯಾದಿ ಸುಮಾರು 52ಕ್ಕೂ ಹೆಚ್ಚು ಹೆಸರಿನಿಂದ ಕರೆಯಲ್ಪಡುವ ಆದಿ ಜಾಂಬವ ಸಮುದಾಯಕ್ಕೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಮಾನವ ಬದುಕಿನ ಎಲ್ಲಾ ರಂಗಗಳಲ್ಲಿಯೂ ಸಮಪಾಲು ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟವು ಶ್ರಮಿಸುತ್ತಿದೆ.

ಚರ್ಮೋದ್ಯೋಗ ಮತ್ತು ಸಫಾಯಿ ಕರ್ಮಚಾರಿಗಳಾಗಿ ಹೀನಾಯ ರೀತಿಯಲ್ಲಿ ಜೀವಿಸುತ್ತಿರುವ ಈ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಜನಸಂಖ್ಯೆಗನುಗುಣವಾಗಿ ನೀಡಬೇಕಾದ ಸೌಲಭ್ಯಗಳನ್ನು ಸರ್ಕಾರಗಳು ಒದಗಿಸಬೇಕಾದ ಜವಾಬ್ದಾರಿ ಆಡಳಿತಾರೂಢ ಸರ್ಕಾರದ್ದಾಗಿರುತ್ತದೆ.

ಆದುದರಿಂದ, ಈ ದೇಶದ ಮೂಲನಿವಾಸಿಗಳಾದ ಆದಿಜಾಂಬವ ಸಮುದಾಯಕ್ಕೆ ಸರ್ಕಾರ ಜನಸಂಖ್ಯಾ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಶೇ.15ರ ಮೀಸಲಾತಿಯಲ್ಲಿ ಪ್ರತ್ಯೇಕ ಮೀಸಲಾತಿ ನಾವಂತೆ 1992ರಿಂದಲೂ ಸರ್ಕಾರವನ್ನು ಆಗ್ರಹ ಪಡಿಸುತ್ತಿದ್ದ ಪರಿಣಾಮ ಈಗಾಗಲೇ 2005ರಲ್ಲಿ ಹಿಂದಿನ ಶ್ರೀ ಎಸ್.ಎಂ.ಕೃಷ್ಣ ಸರ್ಕಾರ ಈ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಒಂದು ಏಕ ಸದಸ್ಯ ಆಯೋಗವನ್ನು ರಚಿಸಿ ಇದರ ವರದಿಯನ್ನು ಜೂನ್ 2012ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುತ್ತದೆ.

ಕರ್ನಾಟಕ ರಾಜ್ಯ ಆದಿಜಾಂಬವ/ಮಾದಿಗ ಸಂಘಟನೆಗಳ ಒಕ್ಕೂಟವು ಈ ಸಮುದಾಯದ ಏಳಿಗೆ ಮತ್ತು ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದ್ದು, 1992ರಿಂದಲೂ ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಶೇ. 15ರ ಮೀಸಲಾತಿಯಲ್ಲಿ: (1) 1975ರ ಎಲ್.ಜಿ. ಹಾವನೂರು ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಯ 12:-2-

4.55.37ರಷ್ಟಿರುವ ಆದಿಜಾಂಬವ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು ಮತ್ತು (2) ನಾನುನ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಇವರ ಶ್ರಮದ ಪ್ರಯತ್ನವಾಗಿ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದಿಂದ ಸಮೀಕ್ಷೆ ನಡೆಸಿ, ವರದಿ ನೀಡಲು ಸಾಧ್ಯವಾಗಿದ್ದು, ಸರ್ಕಾರ ಈಗ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚಿಸಿ ಈ ಆಯೋಗಕ್ಕೆ ವರದಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ.

ಹಾಗೂ ನ್ಯಾ. ನಾಗಮೋಹನದಾಸ್ ಆಯೋಗವು ಮೇ 5ರಿಂದ 17ರವರೆವಿಗೆ ಪ್ರಥಮ ಘಟ್ಟದಲ್ಲಿ ಮನೆ ಮನೆ ಸಮೀಕ್ಷೆ, ಹಾಗೂ 19ರಿಂದ 21ರವರೆಗೆ ಎರಡನೇ ಘಟ್ಟದಲ್ಲಿ ಬೂತ್ ಮಟ್ಟದಲ್ಲಿ ಸಮೀಕ್ಷಾ ಕಾರ್ಯ ಮಾಡಲಿದ್ದು, 19ರಿಂದ 23ರ ವರೆವಿಗೆ ಆನ್‌ಲೈನ್ ದಾಖಲೆಗೆ ಅವಕಾಶ ಮಾಡಿಕೊಡಲಿದೆ.

ಈಗಾಗಲೇ ಒಳ ಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ 32 ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದು, ಆಯೋಗವು ಶೀಘ್ರದಲ್ಲಿ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಹಾಗೂ ವಿಶೇಷವಾಗಿ ಕದಿಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳನ್ನು ಕೈಬಿಟ್ಟು ಸರಿಯಾದ ವರದಿ ನೀಡಲು. ಈ ಾಕ್ಷಿಯಲ್ಲಿ ಮಾದಿಗ ಸಮುದಾಯದವರು ಮಾದಿಗೆ ಎಂದು ಬರೆಸುವಂತೆ ಒಕ್ಕೂಟವು ರಾಜ್ಯಾದ್ಯಂತ ಪವಾಸ ಮಾಡಿ ಅರಿವು ಮೂಡಿಸುವ ಕೆಲಸ ಮಾಡಲಿದೆ.

ಹಾಗೂ, ರಾಜ್ಯದಲ್ಲಿ ಮಾದಿಗ ಸಮುದಾಯದವರಿಗೆ ಶೀಘ್ರದಲ್ಲಿ ಒಳಮೀಸಲಾತಿ ಜಾರಿಗಾಗಿ ಹಾಗೂ ಇತರೆ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಒಂದು ಮಾದಿಗರ ಬೃಹತ್ "ಸಂವಿಧಾನ ಜಾಗೃತಿ ಸಮಾವೇಶ" ವನ್ನು 24/5/2025ರ ಶನಿವಾರದಂದು ನಡೆಸಲು ತೀರ್ಮಾನಿಸಿದೆ.


Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium