ಕೆ.ಪಿ.ಜೆ.ಪಿ ಪಕ್ಷದಿಂದ ನೂತನ ರಾಜ್ಯ ಯುವಜನ ಅಧ್ಯಕ್ಷರ ಮತ್ತು ರಾಜ್ಯ ಮಹಿಳಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಬೆಂಗಳೂರು, ಏಪ್ರಿಲ್ 29, 2025 ಬೆಂಗಳೂರು ಪ್ರೆಸ್ ಕ್ಲನ್ ನಲ್ಲಿ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ' ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಮಹೇಶ್ ಗೌಡ ಅವರು ಮಾತನಾಡಿದರು. ಕೆ.ಪಿ.ಜೆ.ಪಿ ಪಕ್ಷದಿಂದ ನೂತನ ರಾಜ್ಯ ಯುವಜನ ಅಧ್ಯಕ್ಷರ ಮತ್ತು ರಾಜ್ಯ ಮಹಿಳಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ನಮ್ಮ ರಾಜಕೀಯ ಪಕ್ಷ ಕೆಪಿಜೆಪಿ ಯಲ್ಲಿ ಬೂತ್ ಮಟ್ಟದಿಂದ ಬಲಿಷ್ಟ ಸಂಘಟನೆ ಸ್ಥಾಪನೆ ಮಾಡಲು ಮುಂದಾಗಿರುವ ಸಂದರ್ಭದಲ್ಲಿ ರಾಜ್ಯದ ಕೆಲವು ಪ್ರಮುಖ ಸ್ಥಾನಗಳಾದ ರಾಜ್ಯ ಯುವ ಅಧ್ಯಕ್ಷ ಮತ್ತು ರಾಜ್ಯ ಮಹಿಳಾ ಅಧ್ಯಕ್ಷ ಪದವಿಯನ್ನು ಆಯ್ಕೆ ಮಾಡುವ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುವ ಪ್ರಯತ್ನವನ್ನು ಕೆಪಿಜೆಪಿ ಪಕ್ಷವು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಯುವ ಜನರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಾನೂನು ಭದ್ರತೆ, ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಹಾಗೂ ಸವಲತ್ತುಗಳನ್ನು ಒದಗಿಸಲು ಕೆಪಿಜೆಪಿ ಪಕ್ಷವು ಕಂಕಣ ಬದ್ಧವಾಗಿರುತ್ತದೆ.