Posts

Showing posts from July, 2025

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ಕದಂಬ ಪಡೆ - ವಿದ್ಯಾರ್ಥಿ ಘಟಕ' ದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

Image
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ಕದಂಬ ಪಡೆ - ವಿದ್ಯಾರ್ಥಿ ಘಟಕ' ದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ಆ‌ರ್.ಸಿ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಪರಿವರ್ತನೆ ಮಾಡಬಾರದು ಎಂದು 'ಕರ್ನಾಟಕ ಕದಂಬ ಪಡೆ - ವಿದ್ಯಾರ್ಥಿ ಘಟಕ' ದ ಸದಸ್ಯರು ಅಗ್ರಹಿಸಿದರು.  ಜತೆಗೆ ರಾಜ್ಯ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.  ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಹೃದಯಭಾಗದಲ್ಲಿರುವ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ಆ‌ರ್.ಸಿ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಪರಿವರ್ತನೆ ಮಾಡುತ್ತಿರುವುದರ ವಿರುದ್ಧ ಪ್ರತಿಭಟಿಸಿ ಐತಿಹಾಸಿಕ ಹಿನ್ನಲೆಯುಳ್ಳ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ಆರ್.ಸಿ ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಮಾಡುವ ನಿರ್ಧಾರವನ್ನು ಕೂಡಲೇ ಕೈಬಿಡಲು ಆಗ್ರಹಿಸಿ ಸರ್ಕಾರದ ವಿರುದ್ಧ ನಮ್ಮ ಸಂಘಡನೆಯ ವತಿಯಿಂದ ಬೃಹತ್ ಪ್ರತಿಭಟನೆಗೆ ಆಗಮಿಸಿ ವರದಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಮುಂದುವರೆದು ಸರ್ಕಾರಿ ಕಲಾ ಕಾಲೇಜಿನ ಆಟದ ಮೈದಾನವನ್ನು ಖಾಸಗಿ ಕ್ರಿಕೆಟ್ ಕ್ಲಬ್‌ನೊಂದಿಗೆ ಪ್ರ...

ಬೆಂಗಳೂರಿನ ಸೌಂದರ್ಯ ಪದವಿಪೂರ್ವ ಕಾಲೇಜಜಿನಲ್ಲಿ 'ಗುರುವಂದನಾ ಸಮಾರಂಭ' ನಡೆಯಿತು.

Image
ಬೆಂಗಳೂರಿನ ಸೌಂದರ್ಯ ಪದವಿಪೂರ್ವ ಕಾಲೇಜಜಿನಲ್ಲಿ 'ಗುರುವಂದನಾ ಸಮಾರಂಭ' ನಡೆಯಿತು.  ಈ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ಬಿ.ಆ‌ರ್.ಶಂಕರಾನಂದ, ಶಂಕರಪ್ಪ ವಿ. ಹಲ್ವೆ, ಅಶೋಕ್‌ ಆಲೂರು, ಟಿ.ಸಿ. ತಾರಾನಾಥ್, ನಿರಂಜನ ವಾನಳ್ಳಿ, ಎಂ.ಆರ್. ಗಂಗಾಧರ್, ಸತೀಶ್.ವಿ. ಕೈಲಾಸ್ ಅವರು ಉಪಸ್ಥಿತರಿದ್ದರು.  ಸೌಂದರ್ಯ ಕಾಲೇಜಿನ ಮುಖ್ಯಸ್ಥರಾದ ಸೌಂದರ್ಯ ಮಂಜಪ್ಪ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರಿನ ಸೌಂದರ್ಯ ಪದವಿಪೂರ್ವ ಕಾಲೇಜಜಿನಲ್ಲಿ ಗುರುವಂದನಾ ಸಮಾರಂಭ ನಡೆಯಿತು.  ಈ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ಬಿ.ಆ‌ರ್.ಶಂಕರಾನಂದ, ಶಂಕರಪ್ಪ ವಿ. ಹಲ್ವೆ, ಅಶೋಕ್‌ ಆಲೂರು, ಟಿ.ಸಿ. ತಾರಾನಾಥ್, ನಿರಂಜನ ವಾನಳ್ಳಿ, ಎಂ.ಆರ್. ಗಂಗಾಧರ್, ಸತೀಶ್.ವಿ. ಕೈಲಾಸ್ ಅವರು ಉಪಸ್ಥಿತರಿದ್ದರು.  ಸೌಂದರ್ಯ ಕಾಲೇಜಿನ ಮುಖ್ಯಸ್ಥರಾದ ಸೌಂದರ್ಯ ಮಂಜಪ್ಪ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಮಾರಂಭದಲ್ಲಿ ಸುನೀತಾ ಮಂಜಪ್ಪ, ಕೀರ್ತನ್ ಕುಮಾ‌ರ್.ಎಂ, ವರುಣ ಕುಮಾರ್ ಎಂ. ಅವರು ಭಾಗಿಯಾಗಿದ್ದರು.  ಗುರುವಂದನಾ ಸಮಾರಂಭವನ್ನು 'ಭಾರತೀಯ ಶಿಕ್ಷಣ ಮಂಡಳಿ-ಕರ್ನಾಟಕ ದಕ್ಷಿಣ' ಪ್ರಾಂತ್ಯದ ಸದಸ್ಯರು ಆಯೋಜಿಸಿದ್ದರು.   ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ, ಉಪನ್ಯಾಸಕರಿಗೆ ಸನ್ಮಾನ ಮಾಡಲಾಯಿತು.ಈ ಸಮಾರಂಭದಲ್ಲಿ ಸುನೀತಾ ಮಂಜಪ್ಪ, ಕೀರ್ತನ್ ...

ಬೆಂಗಳೂರಿನ ಮತ್ತಿಕೆರೆಯ ರಾಯಲ್ ಕಾಲೇಜಿನಲ್ಲಿ 'ಸಂಸ್ಕೃತಿ ಸಭಾಂಗಣ'ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

Image
ಬೆಂಗಳೂರಿನ ಮತ್ತಿಕೆರೆಯ ರಾಯಲ್ ಕಾಲೇಜಿನಲ್ಲಿ 'ಸಂಸ್ಕೃತಿ ಸಭಾಂಗಣ'ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.   ಬಿಜೆಪಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಸಂಸ್ಕೃತಿ ಸಭಾಂಗಣವನ್ನು ಉದ್ಘಾಟನೆ ಮಾಡಿದರು.   ಈ ಸಂದರ್ಭದಲ್ಲಿ ರಾಯಲ್ ಕಾಲೇಜಿನ ಮುಖ್ಯಸ್ಥರಾದ ಡಾ. ಬಿ.ಕೆ. ದೇವರಾಜ್ ಅವರು ಉಪಸ್ಥಿತರಿದ್ದರು.   ಎಲ್ಲಾ ವರ್ಗದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುವುದು ರಾಯಲ್ ಕಾಲೇಜಿನ ಪ್ರಮುಖ ಆದ್ಯತೆಯಾಗಿದೆ ಎಂದು ಡಾ. ಬಿ.ಕೆ. ದೇವರಾಜ್eq 4r4ಹಾಜರಿದ್ದರು.

ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ "ಬಾಂಧವ ಕೌನ್ಸಿಲ‌ರ್ ಕಪ್ -2025" ಉದ್ಘಾಟನಾ ಸಮಾರಂಭ ನಡೆಯಿತು.

Image
ಬೆಂಗಳೂರು, ಜುಲೈ 24, 2025 ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ "ಬಾಂಧವ ಕೌನ್ಸಿಲ‌ರ್ ಕಪ್ -2025" ಉದ್ಘಾಟನಾ ಸಮಾರಂಭ ನಡೆಯಿತು. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು "ಬಾಂಧವ ಕೌನ್ಸಿಲರ್ ಕಪ್ -2025" ಉದ್ಘಾಟನೆ ಮಾಡಿದರು. ಕ್ರೀಡಾ ಶ್ರೀ ಎನ್ ನಾಗರಾಜ ಅವರ ನೇತೃತ್ವದಲ್ಲಿ ಬಾಂಧವ ಕೌನ್ಸಿಲ‌ರ್ ಕಪ್ -2025 ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿ ಮೂರು ಜನಗಳ ಕಾಲ ನಡೆಯಲಿದೆ.

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0 ; ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

Image
ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0 ; ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು ಬೆಂಗಳೂರು, ಜುಲೈ 24, 2025  ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿ ನಗರದ ಮಂತ್ರಿ ಮಾಲ್‌ನ ಐನಾಕ್ಸ್‌ ಚಿತ್ರಮಂದಿರಲ್ಲಿ ಗುರುವಾರ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವು ವಿಜ್ಞಾನಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳಶಾಸ್ತ್ರದಲ್ಲಿನ ಬೆಳವಣಿಗೆಗಳನ್ನು ಅನ್ವೇಷಿಸಲು ಹೊಸ ಸಾಧ್ಯತೆಯನ್ನು ಪರಿಚಯಿಸಿತು. ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಅಸ್ಟ್ರಾನೋಮಿ ಎಕ್ಸ್‌ಪೋ 1.0 ಪ್ರದರ್ಶನದಲ್ಲಿ ಐಎನ್‌-ಸ್ಪೇಸ್‌ನ ಪ್ರಚಾರ ನಿರ್ದೇಶನಾಲಯದ ನಿರ್ದೇಶಕ ಡಾ. ವಿನೋದ್ ಕುಮಾರ್, ಇಸ್ರೋದ ಮಾಜಿ ಮಿಷನ್ ನಿರ್ದೇಶಕ ಟಿ.ಕೆ. ಸುಂದರಮೂರ್ತಿ, ಯುಆರ್‌ಎಸ್‌ಸಿಯ ಮಾಜಿ ನಿರ್ದೇಶಕ ಎಂ.ಎಸ್. ಶ್ರೀನಿವಾಸನ್, ಮತ್ತು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ಸದಸ್ಯೆ ಮತ್ತು ಖಗೋಳ ಭೌತಶಾಸ್ತ್ರಜ್ಞೆ ಡಾ. ಮಾರ್ಗರಿಟಾ ಸಫೊನೊವಾ ಸೇರಿದಂತೆ ಪ್ರಮುಖ ಬಾಹ್ಯಾಕಾಶ ತಜ್ಞರು ಭಾಗವಹಿಸಿದ್ದರು. ಮಕ್ಕಳ ಹಕ್ಕುಗಳ ಕಾರ್ಯಕರ್ತ ಮತ್ತು ಡಿಒಪಿಟಿ ಸಚಿವಾಲಯದ ಹಿಂದಿ ಸಲಹಾ ಸಮಿತಿಯ ಸದಸ್ಯ ರಾಘವೇಂಧೀರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೈಬರಹ ತಜ್ಞ ಪ್ರೊ. ಕೆ.ಸಿ. ಜನ...

ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ "ಬಾಂಧವ ಕೌನ್ಸಿಲರ್ ಕಪ್ -2025" ಉದ್ಘಾಟನಾ ಸಮಾರಂಭ ನಡೆಯಿತು.

Image
ಬೆಂಗಳೂರಿನ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ "ಬಾಂಧವ ಕೌನ್ಸಿಲರ್ ಕಪ್ -2025" ಉದ್ಘಾಟನಾ ಸಮಾರಂಭ ನಡೆಯಿತು.  ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು "ಬಾಂಧವ ಕೌನ್ಸಿಲರ್ ಕಪ್ -2025" ಉದ್ಘಾಟನೆ ಮಾಡಿದರು.   ಕ್ರೀಡಾ ಶ್ರೀ ಎನ್ ನಾಗರಾಜ ಅವರ ನೇತೃತ್ವದಲ್ಲಿ ಬಾಂಧವ ಕೌನ್ಸಿಲರ್ ಕಪ್ -2025 ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿ ಮೂರು ಜನಗಳ ಕಾಲ ನಡೆಯಲಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ) ಹಾಗೂ ವೈಯಾ ವಿಕಾಸ್ ಸಂಸ್ಥೆಯ ಸಹಯೋಗದೊಂದಿಗೆ "ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ" ನಡೆಯಿತು.

Image
ಬೆಂಗಳೂರು, ಜುಲೈ 21, 2025 ಬೆಂಗಳೂರಿನ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ) ಹಾಗೂ ವೈಯಾ ವಿಕಾಸ್ ಸಂಸ್ಥೆಯ ಸಹಯೋಗದೊಂದಿಗೆ "ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ" ನಡೆಯಿತು.  ಹೆಸರಾಂತ ಖ್ಯಾತ ಆಸ್ಪತ್ರೆಗಳಾದ “ಸ್ಪರ್ಶ ಆಸ್ಪತ್ರೆ” ಮತ್ತು “ವಾಸನ್ ಐ ಕೇರ್” ಆಸ್ಪತ್ರೆಗಳಿಂದ ನುರಿತ ಅನುಭವಶಾಲಿ ವೈದ್ಯರುಗಳಿಂದ "ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ" ನಡೆಯಿತು.  ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಭೈರಪ್ಪ ಅವರ ನೇತೃತ್ವದಲ್ಲಿ ಈ ಶಿಬಿರ ನಡೆಯಿತು.    ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ಸರ್ಕಾರಿ ನಿವೃತ್ತ ನೌಕರರು ತಮ್ಮ ಆರೋಗ್ಯತಪಾಸಣೆ ಮಾಡಿಸಿಕೊಂಡರು.

ರಾಯಚೂರು ತಾಲೂಕಿನ ಯರಗೇರಾ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು 'ಯರಗೇರಾ ತಾಲೂಕ ರಚನೆ ಹೋರಾಟ ಸಮಿತಿ' ಸದಸ್ಯರು ಒತ್ತಾಯಿಸಿದರು.

Image
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಯರಗೇರಾ ತಾಲೂಕ ರಚನೆ ಹೋರಾಟ ಸಮಿತಿ' ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.  ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಯರಗೇರಾ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.  ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯರವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ರಾಯಚೂರು ತಾಲೂಕಿನ ಸುಮಾರು 7-8 ಲಕ್ಷ ಜನಸಂಖ್ಯೆ ಹೊಂದಿರುವ ರಾಯಚೂರು ಅತ್ಯಂತ ದೊಡ್ಡ ತಾಲೂಕು ಆಗಿರುವುದರಿಂದ ವಿವಿಧ ಇಲಾಖೆಗಳ ಸರ್ಕಾರಿ ಕೆಲಸಗಳಲ್ಲಿ ತೊಂದರೆಯನ್ನು ಅನುಭವಿಸುತ್ತಿರುವ ಗ್ರಾಮೀಣ ಪ್ರದೇಶದ ಜನರಿಗೆ ರಾಯಚೂರು ತಾಲೂಕಿನಲ್ಲಿ ಅತ್ಯಂತ ದೊಡ್ಡ ಹೋಬಳಿಯಾಗಿರುವ ಮತು 78 ಗ್ರಾಮಗಳ ಮಧ್ಯಭಾಗದಲ್ಲಿರುವ ಯರಗೇರಾ ಹೋಬಳಿಯನ್ನು ತಾಲೂಕ ಕೇಂದ್ರವನ್ನಾಗಿ ಪರಿವರ್ತಿಸಿದರೆ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುತ್ತದೆ.

ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ ಮತ್ತು ನಳಂದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ 'ಸಂಸ್ಥಾಪಕರ ದಿನಾಚರಣೆ' ನಡೆಯಿತು.

Image
ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯ ಮತ್ತು ನಳಂದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನ 'ಸಂಸ್ಥಾಪಕರ ದಿನಾಚರಣೆ' ನಡೆಯಿತು.  ಈ ಸಂದರ್ಭದಲ್ಲಿ ನಳಂದ ನ್ಯಾಷನಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥಾಪಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.  ಕಾರ್ಯಕ್ರಮದಲ್ಲಿ ಸಾಹಿತಿ ಪ್ರೋ. ಹಂಪ ನಾಗರಾಜಯ್ಯ, ಬೆಂ.ವಿ.ವಿ. ಮಾಜಿ ಕುಲಪತಿ ಪ್ರೋ ಡಾ.ಜಯಕರ ಎಸ್.ಎಮ್, ಮಹಂತಪ್ಪ ಕೆ.ಸಂಗಾವಿ,ಡಾ.ಶಿವಣ್ಣ ವಿ.ಟಿ.ಶಾಂತಪ್ಪ ಸೂರೆನ್,ಡಾ.ಚಂದ್ರಶೇಖರ್ ಶೀಲವಂತ್ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಗಾಂಧಿಭವನದಲ್ಲಿ 'ದಲಿತ ಸಂಘಟನೆಗಳ ಒಕ್ಕೂಟ'ದ ವತಿಯಿಂದ ಡಾ|| ಎಂ. ವೆಂಕಟಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.

ಬೆಂಗಳೂರು, ಜುಲೈ 17, 2025    ಬೆಂಗಳೂರಿನ ಗಾಂಧಿಭವನದಲ್ಲಿ 'ದಲಿತ ಸಂಘಟನೆಗಳ ಒಕ್ಕೂಟ'ದ ವತಿಯಿಂದ ಡಾ|| ಎಂ. ವೆಂಕಟಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.   ಬೌದ್ಧ ಧರ್ಮದ ಪದ್ಧತಿಯಂತೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ದೀಪ ಬೆಳಗುವ ಮುಖೇನ ಅಭಿನಂದನಾ ಸಮಾರಂಭವನ್ನು ಉದ್ಘಾಟನೆ ಮಾಡಲಾಯಿತು.  ಈ ಸಮಾರಂಭವು 'ಕರ್ನಾಟಕ ಭೀಮ ಸೇನೆ' ಸಂಘಟನೆಯ ಅಧ್ಯಕ್ಷರಾದ ಶಂಕರ್ ಅವರ ನೇತೃತ್ವದಲ್ಲಿ ನಡೆಯಿತು. ಸಮತಾ ಸೈನಿಕ ದಳ ಹಾಗೂ ಇನ್ನಿತರ ದಲಿತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.