ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ರಾಷ್ಟೀಯ ಅಧ್ಯಕ್ಷರಾದ ಡಾ|| ಎನ್.ಮೂರ್ತಿ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ನೇಮಕಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸದಿರುವುದನ್ನು ವಿರೋಧಿಸಿ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಡಾ|| ಎನ್.ಮೂರ್ತಿ ಅವರು ಎಚ್ಚರಿಕೆ ನೀಡಿದರು. ಪರಿಶಿಷ್ಟರ ಮೀಸಲಾತಿ 101 ಪರಿಶಿಷ್ಟ ಜಾತಿಗಳ ನಡುವೆ ಸಮಾನವಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಮೀಸಲಾತಿಯನ್ನು ವರ್ಗೀಕರಣ ಮಾಡಬೇಕು ಎಂದು ಮಾದಿಗ ಮತ್ತು ಸಂಭಂದಿತ ಜಾತಿಗಳು ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ನಡೆಸಿವೆ. ಈ ಹೋರಾಟಕ್ಕೆ ಮಣಿದು ಸುಪ್ರೀಂಕೋರ್ಟ್‌ನ 7 ಜನ ನ್ಯಾಯಾದೀಶರ ಪೀಠ ವರ್ಗೀಕರಣಕ್ಕೆ ತೀರ್ಪು ನೀಡಿತು. ಈ ತೀರ್ಪನ್ನು ಪರಿಗಣಿಸಿ ರಾಜ್ಯ ಸರ್ಕಾರ ರಚಿಸಿದ ಗೌರವಾನ್ವಿತ ನ್ಯಾಯ ಮೂರ್ತಿ ನಾಗಮೋಹನ್‌ದಾಸ್ ಆಯೋಗ ವರದಿಯ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರ 'ಎ'-ಮಾದಿಗ ಮತ್ತು ಸಂಬಂಧಿತ ಶೇ.6%, 'ಬಿ' ಹೊಲೆಯ ಮತ್ತು ಸಂಬಂಧಿತ ಶೇ.6%, 'ಸಿ'- '- ಸ್ಪೃಶ್ಯ ಮತ್ತು ಜಾತಿಗಳು ಶೇ.5%, ಒಟ್ಟು ಮೀಸಲಾತಿ ಶೇ.17% ಎಂದು ವಗೀಕರಿಸಿ ವಿಧೇಯಕ ಸಹ ತಂದಿತು. ರಾಜಕೀಯ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಗೆ ವೈತಿರಿಕ್ತ ನಡೆಯು ಹೈಕೋರ್ಟ್ ಮೆಟ್ಟಿಲ...