Posts

Showing posts from July, 2026

ಆರೋಗ್ಯ, ಕೃಷಿ ಕ್ಷೇತ್ರದ ಅಗತ್ಯಗಳನ್ನು ಪೂರೈಸುವಲ್ಲಿ ರಾಸಾಯನಿಕ ಜೀವಶಾಸ್ತ್ರ, ಜೈವಿಕ ವಸ್ತುಗಳ ಪಾತ್ರ ಮಹತ್ವದ್ದು

Image
ಬೆಂಗಳೂರು, ಜುಲೈ 30, 2026 ಮಾನವ ಆರೋಗ್ಯ, ಪಶುವೈದ್ಯಕೀಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಸಾಯನಿಕ ಜೀವಶಾಸ್ತ್ರ (ಕೆಮಿಕಲ್ ಬಯಾಲಜಿ) ಮತ್ತು ಜೈವಿಕ ವಸ್ತುಗಳು (ಬಯೋಮೆಟೀರಿಯಲ್ಸ್) ಮಹತ್ವದ ಪಾತ್ರ ವಹಿಸಲಿವೆ ಎಂದು ಬೆಂಗಳೂರಿನ ಇನ್‌ಸ್ಟೆಮ್‌ (BRIC-inStem) ಸಂಸ್ಥೆಯ ಪ್ರೊ. ಪ್ರವೀಣ್ ಕುಮಾರ್ ವೇಮುಲಾ ಹೇಳಿದರು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ವಿಜ್ಞಾನ–35’ (VIGYAAN 35) ಕಾರ್ಯಕ್ರಮದಲ್ಲಿ ‘ಪೂರೈಸಲಾಗದ ವೈದ್ಯಕೀಯ ಅಗತ್ಯಗಳಿಗೆ ರಾಸಾಯನಿಕ ಜೀವಶಾಸ್ತ್ರ ಆಧಾರಿತ ತಂತ್ರಜ್ಞಾನಗಳು – ಅನುವಾದಾತ್ಮಕ ಸಂಶೋಧನೆಯ ಪಯಣ’ ವಿಷಯದ ಕುರಿತು ಅವರು ಮಾತನಾಡಿದರು. ರಾಸಾಯನಿಕ ಜೀವಶಾಸ್ತ್ರ ಮತ್ತು ಜೈವಿಕ ವಸ್ತುಗಳಲ್ಲಿನ ಪ್ರಗತಿಯು ಔಷಧ ವಿತರಣಾ ವ್ಯವಸ್ಥೆ, ರೋಗನಿರ್ಣಯ, ಪುನರುತ್ಪಾದಕ ವೈದ್ಯಕೀಯ, ಅಂಗಾಂಶ ಎಂಜಿನಿಯರಿಂಗ್ ಹಾಗೂ ನಿರ್ದಿಷ್ಟ ಗುರಿಯನ್ನು ತಲುಪುವ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ನೆರವಾಗಲಿದೆ ಎಂದು ಅವರು ತಿಳಿಸಿದರು. ಇದರ ಅನ್ವಯಿಕೆಗಳು ಪಶು ಆರೋಗ್ಯ ಕ್ಷೇತ್ರಕ್ಕೂ ಸಹಕಾರಿಯಾಗಲಿದ್ದು, ನವೀನ ಔಷಧ ವಿತರಣಾ ವ್ಯವಸ್ಥೆಗಳು ಹಾಗೂ ಬೆಳೆ ಸಂರಕ್ಷಣಾ ತಂತ್ರಜ್ಞಾನಗಳ ಮೂಲಕ ಸುಸ್ಥಿರ ಕೃಷಿ ಪದ್ಧತಿಗಳ ಅಭಿವೃದ್ಧಿಗೂ ನೆರವಾಗಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ರಾಮಚಂದ್ರ ಗೌಡ ಮ...

ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಭ್ರಷ್ಟಚಾರ, ದಲಿತ ಸಮುದಾಯದ ಅಧಿಕಾರಿಗಳಿಗೆ ಕಿರುಕುಳ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ - ಸಮತಾ ಸ್ವಾಭಿಮಾನಿ ದಳ ಪ್ರತಿಭಟನೆ

Image
ಬೆಂಗಳೂರು, ಜುಲೈ 30, 2026  ಬೆಂಗಳೂರು ಫೀಡಂ ಪಾರ್ಕ್ ನಲ್ಲಿ ಸಮತಾ ಸ್ವಾಭಿಮಾನ ದಳದ ವತಿಯಿಂದ ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ನಡೆದಿರುವ ಭ್ರಷ್ಟಚಾರ ಮತ್ತು ಪರಿಶಿಷ್ಷ ಜಾತಿ ಅಧಿಕಾರಿಗಳ ಮೇಲೆ ಹೇರುವ ಒತ್ತಡ ಹಾಗೂ ಮಾನಸಿಕ ಹಿಂಸೆ ಮತ್ತು ಮಾಹಿತಿ ಹಕ್ಕು ಅರ್ಜಿಗಳ ರಕ್ಷಣೆಗೆ, ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿ *ರಾಜ್ಯಾಧ್ಯಕ್ಷರಾದ ಡಾ|| ಕೆ. ಅರುಣ್ ಕುಮಾರ್* ರವರ ನೇತೃತ್ವದಲ್ಲಿ ನೂರಾರು ದಲಿತ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ *ಡಾ||ಅರುಣ್ ಕುಮಾರ್ ಕೆ.ರವರು* ಮಾತನಾಡಿ ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಎಸ್.ಸಿ/ಎಸ್.ಟಿ. ಸಮುದಾಯದ ಅಧಿಕಾರಿಗಳ ಮೇಲೆ ವಿನಾಕಾರಣ ಭ್ರಷ್ಟಚಾರ, ಇಲಾಖೆ ವಿಚಾರಣೆ ಮಾಡುತ್ತಿದ್ದಾರೆ ನೊಂದ ಅಧಿಕಾರಿಗಳಿಗೆ ನ್ಯಾಯ ಸಿಗುತ್ತಿಲ್ಲ. ಅಲ್ಪಸಂಖ್ಯಾತ ನಿರ್ದೇಶನಾಲಯ ಇಲಾಖೆಯಲ್ಲಿ ಕೊಟ್ಯಂತರ ಅನುದಾನ ಬಿಡುಗಡೆಯಾಗುತ್ತದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಅಭಿವೃದ್ಧಿ ಮಾಡದೇ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳ ಒತ್ತಡ ಮತ್ತು ವಿನಾಕಾರಣ ಶಿಸ್ತು ಕ್ರಮ ಹಿಂಪಡೆಯಬೇಕು. ಅನುದಾನ ಸಮರ್ಪಕ ಬಳಕೆಯಾಗಬೇಕು. ಮಾಹಿತಿ ಹಕ್ಕು ಕಾಯ್ಡೆ ಅಡಿ ಅರ್ಜಿ ಸಲ್ಲಿಕೆ ತತಕ್ಷಣ ವಿಲೇವಾರಿಯಾಗಬೇಕು. ಪ್ರಥಮ ಚಿಕಿತ್ಸಾ ಕಿಟ್ ಖರೀದಿ , ಆಹಾರ ಟೆಂಡರ್, ಪೌಷ್ಟಿಕಾ...

ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡಲು ಪುರೋಹಿತರ ಆಗ್ರಹ.

Image
ಬೆಂಗಳೂರು ಜುಲೈ 28, 2026: ಆಗಸ್ಟ್-15ರ ಒಳಗೆ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ವತಿಯಿಂದ ಬೃಹತ್ ಸಮಾವೇಶ ಹಾಗೂ ಹಿಂದಿನ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ರಾಜ್ಯ ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘ ಆಗ್ರಹಿಸಿದೆ.  ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಶ್ರೀ ವತ್ಸ,ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ರಾಮಲಿಂಗರೆಡ್ಡಿಯವರು 8 ಬಾರಿ ಶಾಸಕರಾಗಿ ಸೋಲ್ಲಿಲದ ಸರದಾರರಾಗಿ ಆನೇಕ ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿ, ಕೊಟ್ಟ ಖಾತೆಗಳಿಗೆ ಜೀವ ತುಂಬಿ ಎಲ್ಲಾ ಖಾತೆಗಳಲ್ಲು ಉತ್ತಮ ಕಾರ್ಯನಿರ್ವಹಿಸಿ ಅಜಾತಶತೃಎನಿಸಿಕೊಂಡ ಮಂತ್ರಿಗಳಾಗಿದ್ದಾರೆ, ಮುಜರಾಯಿ ಸಚಿವರಾಗಿದ್ದಾಗ 1947 ಸ್ವಾತಂತ್ರ ಬಂದಾಗಿನಿಂದ ಅನೇಕ ಸರ್ಕಾರಗಳು ಬಂದವು ಹೋದವು ಆನೇಕರು ಮುಜರಾಯಿ ಸಚಿವರಾಗಿ ಹೋದರೂ ರಾಮಲಿಂಗರೆಡ್ಡಿಯವರು 2023ರಲ್ಲಿ ಸಚಿವರಾದ ಮೇಲೆ ದೇವಾಲಯಗಳಿಗೆ ಎ, ಬಿ ಮತ್ತು ಸಿ ವರ್ಗಗಗಳ ಅರ್ಚಕರಿಗೆ ಬಹಳ ಅನುಕೂಲಗಳನ್ನು ಮಾಡಿದ್ದಾರೆ.  ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ಮನವಿಗೆ ಸ್ಪಂದಿಸಿ ಒಂದೆ ದಿನದಲ್ಲಿ ಹಲವು ಆದೇಶಗಳನ್ನು ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದರು. ಬಡ 'ಸಿ' ವರ್ಗಗಳ ಮುಜರಾಯಿ ದೇವಾಲಯಗಳ ಅರ್ಚಕರ ಒದುತ್ತಿರುವ ಮಕ್ಕಳಿಗೆ ಪ್ರತಿ ವರ್ಷ...

ಹಲವು ಇಲಾಖೆಗಳ ಅಧಿಕಾರಿಗಳು ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ: ಬಿ. ಆರ್ ಮುನಿರಾಜು

Image
ಬೆಂಗಳೂರು, ಜುಲೈ 27, 2026 ಕಂದಾಯ, ಗೃಹ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳು ದಲಿತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಸತತ ಅನ್ಯಾಯವೆಸಗುವುದನ್ನು ಕಾಯಕವಾಗಿಸಿಕೊಂಡಿದ್ದಾರೆ ಎಂದು ಜೈ ಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಬಿ. ಆರ್ ಮುನಿರಾಜು ಕಿಡಿಕಾರಿದರು. ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ನಗರ ಜಿಲ್ಲೆಯ ಭೂದಾಖಲೆಗಳ ಉಪನಿರ್ದೇಶಕ ಸುಜಯ್ ಕುಮಾರ್ ಅವರ ವ್ಯಾಪ್ತಿಗೆ ಬರುವ 5 ತಾಲೂಕುಗಳಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಅಧಿಕಾರಿಗಳ ಮೇಲೆ ಜಾತಿಧೋರಣೆಯನ್ನು ಅನುಸರಿಸುತ್ತಿದ್ದು, ಅಮಾಯಕರನ್ನು ಅಮಾನತುಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮದ್ಯರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವ, ಬೆದರಿಕೆ ಒಡ್ಡುತ್ತಿದ್ದಾರೆ. ತಾವೇ ಕಚೇರಿಯಲ್ಲಿ ಸರಿಯಾಗಿ ಇರದೆ ಈ ರೀತಿಯ ನಡುವಳಿಕೆ ತೋರುತ್ತಿರುವುದನ್ನು ಉನ್ನತಾಧಿಕಾರಿಗಳು ಗಮನಿಸಿದೆ ಜಾಣ ಕುರುಡು ತೋರುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಂಡಿಕೊಡಿಗೇಹಳ್ಳಿ ಗ್ರಾಮದಲ್ಲಿ ದಲಿತರು ವಾಸಿಸುವ ಎರಡೂ ಬದಿಗಳಲ್ಲಿ ಕಿರಿದಾದ ರಸ್ತೆ ಇದ್ದು, ಇಲ್ಲಿ ಬಿ.ಎಂ.ಆರ್.ಸಿ.ಎಲ್ ಮತ್ತು ಗೇಲ್ ಗ್ಯಾಸ್ ಕಾಮಗಾರಿಗಳನ್ನು ಅನುಮತಿ ಪಡೆದ ಅಧಿಕೃತ ಗುತ್ತಿಗೆದಾರರಿಗೆ ನೀಡದೆ ಖಾ...

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

Image
ಬೆಂಗಳೂರು, ಜುಲೈ 24, 2026 ದೇಶ ನಿರ್ಮಾಣವು ಜವಾಬ್ದಾರಿಯುತ ನಾಗರಿಕರಿಂದ ಆರಂಭವಾಗುತ್ತದೆ. ದೇಶಭಕ್ತಿ, ಶಿಸ್ತು ಮತ್ತು ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರ್ಗಿಲ್ ಯುದ್ಧದ ವೀರ ಹಾಗೂ ಗಢ್ವಾಲ್ ರೈಫಲ್ಸ್‌ನ ನಿವೃತ್ತ ಕರ್ನಲ್ ರಾಜನಾರಾಯಣ ಹೇಳಿದರು. ನಗರದ ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಎನ್‌ಸಿಸಿ ಘಟಕ ಆಯೋಜಿಸಿದ್ದ 27ನೇ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಗಿಲ್ ಯುದ್ಧದ ಅನುಭವಗಳನ್ನು ಹಂಚಿಕೊಂಡ ಅವರು, ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಭಾರತೀಯ ಸೇನೆ ಧೈರ್ಯ, ತಂಡದ ಮನೋಭಾವ ಮತ್ತು ರಾಷ್ಟ್ರದ ಮೇಲಿನ ಅಚಲ ಬದ್ಧತೆಯಿಂದ ವಿಜಯ ಸಾಧಿಸಿತು ಎಂದು ಹೇಳಿದರು. ವಿದ್ಯಾರ್ಥಿಗಳು ಜೀವನದ ಸವಾಲುಗಳನ್ನು ಎದುರಿಸಲು ಸಹಿಷ್ಣುತೆ, ನಾಯಕತ್ವದ ಗುಣಗಳು ಮತ್ತು ನೈತಿಕ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ದೇಶವನ್ನು ಬಲಿಷ್ಠಗೊಳಿಸುವಲ್ಲಿ ಪ್ರತಿಯೊಬ್ಬ ಯುವಕ–ಯುವತಿಯೂ ತನ್ನದೇ ಆದ ಪಾತ್ರವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು. ದೈಹಿಕವಾಗಿ ಸದೃಢರಾಗಿರುವುದರ ಜೊತೆಗೆ ಮಾನಸಿಕವಾಗಿ ದೃಢತೆ ಮತ್ತು ತಂತ್ರಜ್ಞಾನದಲ್ಲಿ ಪರಿಣತಿಯನ್ನು ಬೆಳೆಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಾಮಾಣಿಕತೆ ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು. ದೇಶಭಕ್ತಿ ಎಂದರೆ ಕೇವಲ ಗಡಿಯಲ್ಲಿ ಹೋರಾಡುವುದಲ್ಲ. ...

Patriotism is Reflected Through Service, Discipline and Integrity" – Col. Rajnarayan

Image
Bengaluru, July 24, 2026 Col. Rajnarayan (Garhwal Rifles), a Kargil War veteran, called upon students to imbibe the values of patriotism, discipline and selfless service, stating that true nation-building begins with responsible citizens committed to excellence in every sphere of life. He was speaking at the 27th Kargil Vijay Diwas commemoration organised by the NCC Unit of , Garden City University, at the university auditorium . Sharing his experiences from the Kargil War, Col. Rajnarayan said the victory was achieved through courage, teamwork and an unwavering commitment to the nation despite extreme hardships. He urged students to develop resilience, leadership qualities and moral courage to face life's challenges, adding that every young citizen has a role to play in strengthening the country. He encouraged students to remain physically fit, mentally strong and technologically competent while upholding the highest standards of ethics and integrity. Stres...

ಬೆಂಗಳೂರಿನಲ್ಲಿ 'ಅಶ್ರೇ ಬೆಂಗಳೂರು ಚಾಪ್ಟರ್' ವತಿಯಿಂದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

Image
ಬೆಂಗಳೂರು, ಜುಲೈ 23, 2026 'ಅಶ್ರೀ ಬೆಂಗಳೂರು ಚಾಪ್ಟರ್ ವತಿಯಿಂದ ಜು.24ರಂದು ನಗರದ ಚಾನ್ಸೆರಿ ಪೆವಿಲಿಯನ್ ಹೋಟೆಲ್ ನಲ್ಲಿ ಕ್ಲೆ 'ಮಾಕಾನ ಎಂಬ ಶೀರ್ಷಿಕೆಯಡಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣವ ಹಮ್ಮಿಕೊಳ್ಳಲಾಗಿದೆ.  ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಶ್ರೇ ಬೆಂಗಳೂರು ಚಾಪ್ಟರ್‌ನ ಅಧ್ಯಕ್ಷ ಎ.ಅಮರ್ ನಾರಾಯಣ್ ಮಾತನಾಡಿ, ವಿಚಾರ ಸಂಕಿರಣದಲ್ಲಿ ಪ್ರಸಕ್ತ ಸಂದರ್ಭದಲ್ಲಿ ಜಾಗತಿಕ ತಾಪಮಾನದಿಂದ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಚರ್ಚಿಸಿ, ಪ್ರಯತ್ನ ಮೀರಿ ಇಂಗಾಲ ತಡೆಗಟ್ಟುವ ಕುರಿತಾಗಿ ಸಂವಾದ ನಡೆಯಲಿದೆ ಎಂದು ತಿಳಿಸಿದರು. ಪ್ರಮುಖ ಭಾಷಣಕಾರರಾಗಿ ಗೌರವ್ ಶೌರಿ, ಸ್ವಾತಿ ಪುಚಲಪ ಬಿ.ಗೌತಮ್ ಬಳಿಗಾ, ಪಂಕಜ್ ಹಾಗೂ ಇತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಶ್ರೇ ಬೆಂಗಳೂರು ಚಾಪ್ಟರ್‌ನ ರೂಪೇಶ್ ಅಯ್ಯಂಗಾರ್, ಮುನಿರಾಜು, ಸತೀಶ್ ಇತರರಿದ್ದರು.

Emotional Intelligence Is the Foundation of Leadership, Says Infosys Co-founder S. D. Shibulal at Garden City University Convocation

Image
Bengaluru, July 22, 2026  Emotional intelligence, an open mindset, and respect for others are indispensable qualities of effective leadership, Infosys Co-founder S. D. Shibulal said while addressing graduates at the 8th Convocation of Garden City University. Delivering the convocation address on the second day of the university's two-day convocation at the GCU Knowledge Park campus on Tuesday, Shibulal urged students to embrace the philosophy of "Learn, Unlearn, and Relearn" to remain relevant in an era of rapid technological and societal transformation. "Leadership is not merely about making decisions. It is about understanding people, demonstrating emotional intelligence, maintaining an open mind, and treating others with respect," he said, encouraging graduates to cultivate lifelong learning and adaptability. Highlighting the importance of purpose-driven education, Shibulal said knowledge must always be pursued with a highe...

ಶಿಕ್ಷಣವೇ ಶೋಷಿತ ಸಮುದಾಯಗಳ ಏಳಿಗೆಗೆ ಮೊದಲ ಮೆಟ್ಟಿಲು: ಸಚಿವ ಡಾ. ಯತೀಂದ್ರ ಸಿದ್ಧರಾಮಯ್ಯ

Image
ಬೆಂಗಳೂರು, ಜುಲೈ 22, 2026 "ಸಮಾಜದಲ್ಲಿ ಶೋಷಿತ ಮತ್ತು ಹಿಂದುಳಿದ ವರ್ಗಗಳ ಜನರು ಮುನ್ನೆಲೆಗೆ ಬರಲು ಶಿಕ್ಷಣವೇ ಏಕೈಕ ಅಸ್ತ್ರ. ವಿದ್ಯೆ ಹಾಗೂ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಕಷ್ಟಪಟ್ಟು ಅಭ್ಯಾಸ ಮಾಡುವ ಪ್ರತಿಯೊಬ್ಬರಿಗೂ ವಿದ್ಯೆ ಒಲಿಯುತ್ತದೆ," ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ ಅವರು ಪ್ರತಿಪಾದಿಸಿದರು. ​ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ ‘ಪ್ರತಿಭಾ ಪುರಸ್ಕಾರ - 2026’ ಕಾರ್ಯಕ್ರಮವನ್ನು ಉದ್ಘಾಟಿಸಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ "ಶಿಕ್ಷಣದ ಹಾಲು ಕುಡಿದವರು ಗರ್ಜಿಸಲೇಬೇಕು" ಎಂಬ ಮಾತನ್ನು ಸ್ಮರಿಸಿದ ಸಚಿವರು , ಶಿಕ್ಷಣವು ಕೇವಲ ಜೀವನೋಪಾಯಕ್ಕಷ್ಟೇ ಸೀಮಿತವಾಗಿರದೆ, ಜಾಗೃತಿ ಮತ್ತು ಹಕ್ಕುಗಳ ಹೋರಾಟಕ್ಕೆ ದಾರಿದೀಪವಾಗಿದೆ ಎಂದರು. ನಮ್ಮ ಸಮುದಾಯದ ಯುವಜನರು ಕೇವಲ ಮೂಲಭೂತ ಶಿಕ್ಷಣಕ್ಕೆ ತೃಪ್ತರಾಗದೆ ಉನ್ನತ ಶಿಕ್ಷಣ ಪಡೆಯಬೇಕು. ರಾಜಕೀಯ, ಐಎಎಸ್, ಕೆಎಎಸ್, ನ್ಯಾಯಾಂಗ, ಮಾಧ್ಯಮ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ಬೆಳೆಯಬೇಕು ಎಂದು ಕರೆ ನೀಡಿದರ...

ಭಾವನಾತ್ಮಕ ಬುದ್ಧಿಮತ್ತೆಯೊಂದಿಗೆ ನಾಯಕತ್ವ ಅಗತ್ಯ: ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್. ಡಿ. ಶಿಬುಲಾಲ್ ಕರೆ

Image
ಬೆಂಗಳೂರು, ಜುಲೈ 21, 2026  ನಾಯಕತ್ವ ಎಂದರೆ ಕೇವಲ ನಿರ್ಧಾರಗಳನ್ನು ತೆಗೆದುಕೊಳ್ಳುವುದಲ್ಲ. ಭಾವನಾತ್ಮಕ ಬುದ್ಧಿಮತ್ತೆ, ಮುಕ್ತ ಮನೋಭಾವ ಮತ್ತು ಇತರರ ಬಗ್ಗೆ ಗೌರವ ಹೊಂದಿರುವುದೇ ಉತ್ತಮ ನಾಯಕತ್ವದ ಗುಣಗಳಾಗಿವೆ ಎಂದು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ಎಸ್. ಡಿ. ಶಿಬುಲಾಲ್ ಹೇಳಿದರು. ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ನಾಲೆಜ್ ಪಾರ್ಕ್ ಆವರಣದಲ್ಲಿ ಮಂಗಳವಾರ ನಡೆದ 8ನೇ ಘಟಿಕೋತ್ಸವದ ಎರಡನೇ ದಿನದ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರಸ್ತುತವಾಗಿರಲು "ಕಲಿಯಿರಿ, ಕಲಿತದ್ದನ್ನು ಮರೆತು ಮತ್ತೆ ಹೊಸದನ್ನು ಕಲಿಯಿರಿ" ಎಂಬ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜ್ಞಾನವನ್ನು ಉನ್ನತ ಗುರಿಯೊಂದಿಗೆ ಸಂಪಾದಿಸಬೇಕು. ಜೀವನದ ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯಶಸ್ಸಿನ ಮೂಲ ಮಂತ್ರ ನಿರಂತರತೆ ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಅವರು ಹೇಳಿದರು. ಎರಡು ದಿನಗಳ ಕಾಲ ನಡೆದ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವವು ಮಂಗಳವಾರ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಒಂಬತ್ತು ಶಾಲೆಗಳ ಒಟ್ಟು 1,275 ಇದೇ ವೇಳೆ ನಾಲ್ವರು ಸಂಶೋಧಕರಿಗೆ ಪಿಎಚ್‌.ಡಿ. ಪದವಿ ಪ್ರದಾನ ಮಾಡಲಾಗಿದ್ದು, ಶೈಕ್ಷಣಿಕ ಸಾಧನೆ ಮೆರೆದ 33 ವಿದ್ಯಾರ್ಥಿಗಳಿಗೆ ರಾಂಕ್ ಹೋಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತ...

AZORTE Deepens Its Bengaluru Footprint with Phoenix Marketcity Launch

Image
Actor Sharanya Shetty headlines the opening as AZORTE brings its signature retail experience to Whitefield  Bengaluru, 17th July, 2026: AZORTE, Reliance Retail's premium fashion and lifestyle destination, has opened its newest store at Phoenix Marketcity, Whitefield, further strengthening its presence in Bengaluru's competitive retail landscape. Marking the brand's eighth store in Bengaluru and 43rd store nationally, the expansion reflects the growing appetite for AZORTE's fashion-meets-technology proposition among the city's shoppers. Designed with an emphasis on ease and discovery, the new store offers a seamless shopping experience, giving customers the freedom to browse, try, and buy with ease.     Designed with an emphasis on ease and discovery, the Whitefield store offers an immersive shopping environment, giving customers the freedom to browse, explore, try, and shop seamlessly.     The opening was celebrated with a ribbo...

ರಾಜ್ಯ ಲಾಟರಿ ಯೋಜನೆ ಮರು ಜಾರಿಗೊಳಿಸಿ: ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಆಗ್ರಹ

Image
ಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿ – ರಾಜ್ಯ ಲಾಟರಿ ಯೋಜನೆ ಮರು ಜಾರಿಗೊಳಿಸಿ: ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಆಗ್ರಹ ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಅಕ್ರಮ ಲಾಟರಿ ಮಾರಾಟವನ್ನು ಸಂಪೂರ್ಣವಾಗಿ ತಡೆದು, ಶಾಸನಬದ್ಧ ಕರ್ನಾಟಕ ರಾಜ್ಯ ಲಾಟರಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘ (ರಿ.)  ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸಿ. ರಾಮಕೃಷ್ಣ, ವಕೀಲರಾದ ಭಾಸ್ಕರ್ ಬಾಬುರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.  ರಾಜ್ಯದಲ್ಲಿ ಅಕ್ರಮ ಲಾಟರಿಯಿಂದ ಉಂಟಾಗಿರುವ ಸಮಸ್ಯೆಗಳು, ಸರ್ಕಾರದ ನಿರ್ಲಕ್ಷ್ಯ ಹಾಗೂ ಸಾವಿರಾರು ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳು ಹಲವಾರು. ಸಂಘದ ಪ್ರಕಾರ, 1998ರಲ್ಲಿ ಕೇರಳ ಸರ್ಕಾರ ಆರಂಭಿಸಿದ ಲಾಟರಿ ಯೋಜನೆಯು ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಅಕ್ರಮವಾಗಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದು, ಪ್ರತಿದಿನ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ಇದರಿಂದ ಕರ್ನಾಟಕ ಸರ್ಕಾರಕ್ಕೆ ಅಪಾರ ಪ್ರಮಾಣದ ಆದಾಯ ನಷ್ಟವಾಗುತ್ತಿದ್ದು. ಈ ಹಿಂದೆ ಕರ್ನಾಟಕ ಸರ್ಕಾರದ ಲಾಟರಿ ಯೋಜನೆಯ ಮೂಲಕ ಸುಮಾರು 5,000 ರಿಂದ 6,000 ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ರಾ...

ನವಜಾತ ಶಿಶುವನ್ನು ಕ್ಯಾನ್ಸ‌ರ್ ಮೃತ್ಯುಕೂಪದಿಂದ ಹೊರಗೆಳೆದ ಎಚ್‌ಸಿಜಿ ಆಸ್ಪತ್ರೆ ವೈದ್ಯರು!!

Image
ಬೆಂಗಳೂರು, ಜುಲೈ 15, 2026 ಅತ್ಯಂತ ಅಪರೂಪದ 'ಫೈಬೊಸಾರ್ಕೊಮಾ' ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 28 ದಿನಗಳ ನವಜಾತ ಶಿಶುವಿಗೆ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ನಡೆಸಿದ್ದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಈ ಬಗ್ಗೆ ಬುಧವಾರ ಇಲ್ಲಿ ಸುದ್ದಿಗೋಷ್ಠಿಯ-ಲ್ಲಿ ಮಾಹಿತಿ ನೀಡಿದ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಪ್ರಮೋದ್ ಎಸ್. ಚಿಂದರ್, 'ಈ ಶಸ್ತ್ರಚಿಕಿತ್ಸೆ ನಡೆಸಿ ಒಂದೂವರೆ ವರ್ಷ ಕಳೆದಿದ್ದು, ಮಗು ಸಂಪೂರ್ಣ ಗುಣಮುಖವಾಗಿದೆ. ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿಲ್ಲ' ಎಂದು ಮಾಹಿತಿ ನೀಡಿದರು.  'ಈ ಕ್ಯಾನ್ಸರ್ ವಾಸಿ ಮಾಡಲು ಮಗುವಿನ ಕೈ ಕತ್ತರಿಸುವುದೇ ಅಂತಿಮ ಮಾರ್ಗವೆಂದು ಪರೀಕ್ಷೆ ನಡೆಸಿದ್ದ ಆಸ್ಪತ್ರೆಗಳ ವೈದ್ಯರು ಕೈಚೆಲ್ಲಿದ್ದರು. ಎಚ್‌ಸಿಜಿಗೆ ದಾಖಲಾದ ಬಳಿಕ 16 ವೈದ್ಯರ ತಂಡವು ಸುಧಾರಿತ ತಂತ್ರಜ್ಞಾನದ ನೆರವಿನೊಂದಿಗೆ ಮಗುವಿನ ಜೀವ ಹಾಗೂ ಕೈ ಉಳಿಸುವಲ್ಲಿ ಯಶಸ್ವಿಯಾಗಿದೆ. ಸುಮಾರು ₹ 35 ಲಕ್ಷ ವೆಚ್ಚದ ಈ ಅತ್ಯಾಧುನಿಕ ಚಿಕಿತ್ಸೆಯ ವೆಚ್ಚವನ್ನು ದಾನಿಗಳು ಹಾಗೂ ವಿವಿಧ ಮೂಲಗಳಿಂದ ಹೊಂದಿಸಲಾಗಿದೆ' ಎಂದು ಹೇಳಿದರು. 'ಹೆಣ್ಣು ಮಗುವಿನ ಬಲ ಮುಂಗೈನಲ್ಲಿ ಕಾಣಿಸಿಕೊಂಡ ಸಣ್ಣ ಊತ. ಕೆಲವೇ ದಿನಗಳಲ್ಲಿ ಅದು 11.3X9.8 ಸೆಂ.ಮೀ ಗಾತ್ರದ ಗಡ್ಡೆಯಾಗಿ ಬೆಳೆದಿತ್ತು. ಆಸ್ಪತ್ರೆಗೆ ದಾಖಲಾದಾಗ ಮಗು ತೀವ್ರ ರಕ್ತಹೀನತೆಯಿಂದ ಬಳಲುತ್ತಿತ್ತು. ಗಡ್ಡೆಯು ಪ್ರಮುಖ ರಕ್ತನಾಳ ಮತ್ತು ...

ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಡದಿದ್ದರೆ ಗಾಂಧೀಜಿ ಪ್ರತಿಮೆ ಮುಂದೆ ಧರಣಿ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್.ಡಿ.ದೇವೇಗೌಡರ ನೇರ ಎಚ್ಚರಿಕೆ

Image
ಬೆಂಗಳೂರು 14 ಜುಲೈ 2026 ಸಿಎಂ ಮಾಡಿದ್ದಕ್ಕೆ ಪ್ರತಿಯಾಗಿ ಹೈಕಮಾಂಡ್'ಗೆ ಒಡ್ಡಿರುವ ಆಮಿಷಗಳನ್ನು ಪೂರೈಸಲು ಬಿಡದಿ ಯೋಜನೆ ಕೈಗೆತ್ತಿಕೊಂಡ ಡಿಕೆಶಿ! ಹಾಲಿ ಮುಖ್ಯಮಂತ್ರಿ ಮೇಲೆ ಮಾಜಿ ಪ್ರಧಾನಿ ಅತ್ಯಂತ ಗಂಭೀರ ಆರೋಪ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಲು ವರಿಷ್ಠರಿಗೆ ಆಮಿಷ ಒಡ್ಡಿರುವ ಹಾಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಇಳಿಸಿ ತಮ್ಮನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ಹೈಕಮಾಂಡ್'ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಅತ್ಯಂತ ಗಂಭೀರ ಆರೋಪ ಮಾಡಿದರು. ಈ ಟೌನ್ಶಿಪ್'ಗೆ ಭೂಮಿ ಕೊಡಲು ರೈತರು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಬಡರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಹೈಕಮಾಂಡ್ ಗೆ ಒಡ್ಡಿರುವ ಆಮಿಷಗಳನ್ನು ಈಡೇರಿಸಲು ಬೇರೆ ಬೇರೆ ದಾರಿಗಳಿವೆ. ದಯಮಾಡಿ ಈ ಯೋಜನೆಯನ್ನು ಇಲ್ಲಿಗೇ ಕೈಬಿಡಿ. ಒಂದು ವೇಳೆ ಯೋಜನೆಯನ್ನು ನೀವು ಕೈ ಬಿಡದಿದ್ದರೆ ವಿಧಾನಸೌಧದ ಪಕ್ಕದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಮುಂದೆ ಧರಣಿ ಕೂರುತ್ತೇನೆ. ಅಂತಹ ಪರಿಸ್ಥಿತಿಗೆ ನನ್ನನ್ನು ದೂಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು ಮಾಜಿ ಪ್ರಧಾನಿಗಳು. ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪ...

ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ 'ನಮ್ಮಭಿಮಾನದ ಅಭಿನಂದನೆ' ಹಾಗೂ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ ಆಯೋಜನೆ

Image
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ 'ನಮ್ಮಭಿಮಾ ನದ ಅಭಿನಂದನೆ' ಹಾಗೂ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ ಆಯೋಜಿಸಲಾಗಿತ್ತು.  ಕಷ್ಟ ಹೇಳಿಕೊಂಡು ಕಚೇರಿಗಳಿಗೆ ಬರುವ ಜನರಿಗೆ ಮಾನವೀಯತೆಯಿಂದ ಸ್ಪಂದಿಸಿ, ಕಾನೂನು ಚೌಕಟ್ಟಿನಲ್ಲಿ ಪರಿಹಾರ ಹುಡುಕಿಕೊಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಸರಕಾರಿ ನೌಕರರಿಗೆ ಕಿವಿಮಾತು ಹೇಳಿದರು.  ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ನಮ್ಮಭಿಮಾ ನದ ಅಭಿನಂದನೆ' ಹಾಗೂ 'ಪ್ರತಿಭಾ ಪುರಸ್ಕಾರ' ಕಾರ್ಯ ಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. "ಜನರು ತಮಗೆ ಬೇಕಾಗಿರುವುದನ್ನು ದೇವರ ಬಳಿ ಕೇಳಿಕೊಳ್ಳಲು ದೇವಾಲಯಗಳಿಗೆ ಹೋಗುತ್ತಾರೆ. ಅದೇ ರೀತಿ ತಮ್ಮ ಕಷ್ಟಗಳಿಗೆ ಪರಿಹಾರ ಪಡೆಯಲು ಸರಕಾರಿ ನೌಕರರು, ಶಾಸಕರು, ಸಚಿವರ ಬಳಿ ಬರುತ್ತಾರೆ. ಆಗ ನಾವು ಶ್ರದ್ದೆಯಿಂದ ಅವರ ಸೇವೆ ಮಾಡಬೇಕು,'' ಎಂದು ಹೇಳಿದರು. "ನಾನು ಅಧಿಕಾರ ಸ್ವೀಕರಿಸಿದ ಕೂಡಲೇ ಜನರ ಮನೆ ಬಾಗಿಲಿಗೆ ಸರಕಾರ ಕೊಂಡೊಯ್ಯಲು ಪ್ರಜಾಸೇವೆ ಇಲಾಖೆ ರಚಿಸಿದ್ದೇನೆ. ಇದಕ್ಕೆ ಉತ್ತಮ ಅಧಿಕಾರಿಗಳ ತಂಡವನ್ನೂ ನಿಯೋಜಿಸಲಾಗಿದೆ. ಸಂಘ-ಸಂಸ್ಥೆಗಳು, ಜನರ ಬೇಡಿಕೆ ಗಳನ್ನು ಈಡೇರಿಸಲು, ಕಾನೂನು ಚೌಕಟ್ಟಿನಲ್ಲಿ ಹೇ...

ಲೋಕಭವನದಲ್ಲಿ ಸೌಟ್ಸ್, ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭ

Image
ಬೆಂಗಳೂರು, ಜುಲೈ 10, 2026  ಲೋಕಭವನದಲ್ಲಿ ಸೌಟ್ಸ್, ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.   ಈ ಜಗತ್ತಿಗೆ ನಮ್ಮನ್ನು ಪರಿಚಯಿಸಿ ಬೆಳೆಸಿದ ಸಮಾಜದ ಸೇವೆ ಮಾಡುವ, ಋಣ ತೀರಿಸುವುದೇ ಪ್ರತಿಯೊಬ್ಬ ಮನುಷ್ಯನ ಮುಖ್ಯ ಧೈಯ ಆಗಬೇಕು ಎಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ, ಮಾಜಿ ಸಚಿವ ಡಾ.ಪಿ.ಜಿ.ಆರ್. ಸಿಂಧ್ಯಾ ಹೇಳಿದರು. ಭಾರತ್ ಸೈಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಶುಕ್ರವಾರ ಲೋಕಭವನದಲ್ಲಿ ಆಯೋಜಿಸಿದ್ದ 'ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ಪ್ರದಾನ ಸಮಾರಂಭ'ದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಬೆಳೆಸುವಲ್ಲಿ 'ಭಾರತ್ ಸೌಟ್ಸ್ ಮತ್ತು ಗೈಡ್ಸ್' ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು. ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ ಮತ್ತು ನೈತಿಕ ಶಿಸ್ತನ್ನು ಮೂಡಿಸಿ, ಅವರನ್ನು ದೇಶ ದೇಶದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತದೆ. ಸದಾ ಸಿದ್ದರಾಗಿರಿ ಎಂಬ ಮನೋಭಾವ ಮತ್ತು ಪರಿಸರ ಜಾಗೃತಿ ಬೆಳೆಸುತ್ತದೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ನಾಯಕತ್ವ ಗುಣ, ಸೋದರಭಾವ ಮತ್ತು ಧೈರ್ಯವನ್ನು ತುಂಬುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುತ್ತದೆ. ಇದು ವಿದ್ಯಾರ್ಥಿಗಳ ಬೆಳವಣಿಗೆಗೆ ಅತ್ಯಗತ್ಯ ಎಂದರು.  ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರ...

Chief Minister D.K. Shivakumar participated in the 'Our Pride Felicitation Ceremony' in Palace Ground, Bengaluru

Image
Chief Minister DKShivakumar participated in the 'Our Pride Felicitation Ceremony' held today at the Palace Grounds by the Karnataka State Government Employees Association. On this occasion, Shri Nirmalanandanath Swamiji of Adi Chunchanagiri Mahasamsthan, Shri Siddalinga Swamiji of Siddaganga Mutt, Deputy Chief Minister Dr. G. Parameshwara, President of the Karnataka State Government Employees Association C.S. Shadakshari, L. Byrappe, Ramesh Sanga, Amrut Raj, Basavaraju, and others were present.

ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಎಂದ ಮುಖ್ಯಮಂತ್ರಿಗೆ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತರಾಟೆ

Image
ಬೆಂಗಳೂರು, ಜುಲೈ 10, 2026 ಜಾಲಿ ಟ್ರಿಪ್ ಮಾಡುತ್ತಿರುವ ಮುಖ್ಯಮಂತ್ರಿಗೆ ಜವಾಬ್ದಾರಿ ಇಲ್ಲ ಎಂದು ಕೇಂದ್ರ ಸಚಿವರ ಆಕ್ರೋಶ ನೀರಿನ ಹಂಚಿಕೆ ನಿಗದಿ ಆಗದೇ ನದಿ ಜೋಡಣೆಗೆ ಹೇಗೆ ಒಪ್ಪಿಗೆ ಕೊಡುತ್ತೀರಿ ಎಂದು ಪ್ರಶ್ನೆ ನದಿ ಜೋಡಣೆ, ನೀರಿನ ಹಂಚಿಕೆ ಎಂದರೆ ಬೆಂಗಳೂರಿನಲ್ಲಿ ಕೂತು ರಿಯಲ್ ಎಸ್ಟೇಟ್ ಮಾಡಿದಂತಲ್ಲ ಎಂದು ಲೇವಡಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜನ ಗುಳೆ ಹೋಗುತ್ತಿದ್ದಾರೆ; ಮುಖ್ಯಮಂತ್ರಿ, ಗೃಹ ಸಚಿವರು ವಿರುದ್ಧ ಹೆಚ್ಡಿಕೆ ವಾಗ್ದಾಳಿ ಪ್ರಗತಿ ಪರಿಶೀಲನೆ ನೆಪದಲ್ಲಿ ರಾಜ್ಯದ ಉದ್ದಗಲಕ್ಕೂ ಜಾಲಿ ಟ್ರಿಪ್ ಮಾಡುತ್ತಿರುವ ಮುಖ್ಯಮಂತ್ರಿಗಳು, ರಾಜ್ಯದ ನೀರಾವರಿ ಹಿತಾಸಕ್ತಿಯ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಟೀಕಾಪ್ರಹಾರ ನಡೆಸಿದರು.  ಕಲಬುರ್ಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಅವರ ನಡೆಸಿದ ಪ್ರಗತಿ ಪರಿಶೀಲನೆ ಕೇವಲ ಜಾಲಿಟ್ರಿಪ್ ಮಾತ್ರ. ಹಾಗೆಯೇ ಕೃಷ್ಣಾ, ಗೋದಾವರಿ, ಕಾವೇರಿ ಜೋಡಣೆಗೆ ರಾಜ್ಯದ ಸಮ್ಮತಿ ಇದೆ ಎಂದು ಹೇಳಿರುವ ಮುಖ್ಯಮಂತ್ರಿ ವರ್ತನೆ ಅತ್ಯಂತ ಹೊಣೆಗೇಡಿತನದಿಂದ ಕೂಡಿದೆ. ರಾಜ್ಯದ ನೀರಾವರಿಯ ಸಂಕಷ್ಟಗಳ ಬಗ್ಗೆ ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ ಎಂದು ಸಚಿವರು ಕಿಡಿಕಾರಿದರು. *ನದಿ ಜೋಡಣೆ ಬಗ್ಗೆ ನನ್ನ ವಿರೋಧ ಇಲ್ಲ. ಯೋಜನೆ ಜಾರಿಗೆ ಬರಲೇಬೇಕು.* ಆದರೆ ಗೋದಾವರಿ ಮತ್ತು ...

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಕೆಎಸ್‌ಜಿಇಎ ವತಿಯಿಂದ 'ನಮ್ಮಭಿಮಾನದ ಅಭಿನಂದನೆ ಕಾರ್ಯಕ್ರಮ' ಆಯೋಜನೆ: ಸಿ.ಎಸ್. ಷಡಕ್ಷರಿ

Image
ಬೆಂಗಳೂರು, ಜುಲೈ 8, 2026: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಜುಲೈ 11ರಂದು ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವ‌ರ್ ಅವರಿಗೆ "ನಮ್ಮಭಿಮಾನದ ಅಭಿನಂದನೆ ಕಾರ್ಯಕ್ರಮ" ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಕ್ಷರಿ ತಿಳಿಸಿದರು. ಬುಧವಾರ ಕಬ್ಬನ್ ಪಾರ್ಕ್ ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಅಭಿನಂದನೆ ಸಲ್ಲಿಸುವಂತಹ ಕಾರ್ಯಕ್ರಮಗಳನ್ನು ನಮ್ಮ ಸಂಘದಿಂದ ನಿರಂತರವಾಗಿ ನಡೆಸಲಾಗುತ್ತಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಾಹಸ್ವಾಮಿ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಭಾಗಿಯಾಗಲಿದ್ದಾರೆ ಎಂದರು.  ಅಭಿನಂದನಾ ಕಾರ್ಯಕ್ರಮದ ನಂತರ, 2026ನೇ ವರ್ಷದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿರುವ 10 ಜಿಲ್ಲೆಗಳ ಸುಮಾರು 3 ಸಾವಿರ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗುವುದು ಎಂದ...

ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಜಿ.ಮದಿಯರಸನ್ ಒತ್ತಾಯ

Image
ಬೆಂಗಳೂರು: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಮಂತ್ರಿಮಂಡಲದಲ್ಲಿ ಬಿ ಝಡ್ ಜಮೀರ್ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕುಬೆಂದು ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್ ವರಿಷ್ಠ ನಾಯಕರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ (ರಿ) (ಸಂಯೋಜಕ) ಬೆಂಗಳೂರು ನಗರಾಧ್ಯಕ್ಷ ಜಿ.ಮದಿಯರಸನ್ ಒತ್ತಾಯಿಸಿದರು. ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ವಸತಿ, ವಕ್ಸ್, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಬಡವರ ಕಲ್ಯಾಣಕ್ಕಾಗಿ ಉತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ರಾಜ್ಯದ ಎಲ್ಲಾ ಜಾತಿಯ ಬಡವರಿಗೆ ಲಕ್ಷಾಂತರ ಮನೆಗಳನ್ನು ಸರ್ಕಾರದಿಂದ ನಿರ್ಮಿಸಿಕೊಟ್ಟಿದ್ದಾರೆ.  ಬೆಳಗಾವಿ ಜಿಲ್ಲೆಯ ರಾಯಭಾಗ ಮತ್ತು ಕಾಗವಾಡ ತಾಲ್ಲೂಕಿನ ಗ್ರಾಮಗಳಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ನೆರೆಸಂತ್ರಸ್ಥರಿಗೆ ಮನೆಗಳನ್ನು ಕಟ್ಟಿಕೊಡುವ ಕಾರ್ಯವನ್ನು ಮುಂದುವರೆಸಿದ್ದಾರೆ. ಇಂಥಹ ಜನಪ್ರಿಯ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಮತ್ತು ಮುಖ್ಯಮಂತ್ರಿ ಡಿ ಕೆ ಶಿವಕುಮರ್ ರವರಿ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಬಿ ಝಡ್ ಜಮೀ ಅಹ್ಮದ್ ಖಾನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನ...

ಅಪೋಲೋ ಕ್ಯಾನ್ಸರ್ ಸೆಂಟರ್ಸ್ ಗಾರ್ಡಿಯನ್ ಹೆಲ್ತ್ ನ ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್ ಪರೀಕ್ಷೆಯನ್ನು ಭಾರತದಲ್ಲಿ ಮೊದಲ ಬಾರಿಗೆ ತರುತ್ತಿರುವ ಸಂಸ್ಥೆಯಾಗಿದೆ.

Image
ಅಪೋಲೋ ಕ್ಯಾನ್ಸರ್ ಸೆಂಟರ್ಸ್ ಗಾರ್ಡಿಯನ್ ಹೆಲ್ತ್ ನ ಶೀಲ್ಡ್ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್ ಪರೀಕ್ಷೆಯನ್ನು ಭಾರತದಲ್ಲಿ ಮೊದಲ ಬಾರಿಗೆ ತರುತ್ತಿರುವ ಸಂಸ್ಥೆಯಾಗಿದೆ. - ಜೈಡಸ್ ಲೈಫ್ ಸೈನ್ಸಸ್‍ ಜೊತೆಯಲ್ಲಿ ಈ ರಕ್ತ-ಆಧರಿತ ಕ್ಯಾನ್ಸರ್ ಪರೀಕ್ಷೆಯನ್ನು ದೇಶದಲ್ಲಿ ವಿಸ್ತರಿಸಲು ಒಡಂಬಡಿಕೆಗೆ ಸಹಿ  ಚೆನ್ನೈ, ಜುಲೈ 3, 2026: ಕ್ಯಾನ್ಸರ್‌ನಿಂದ ಬದುಕುಳಿಯುವ ಸಾಧ್ಯತೆಯನ್ನು ಹಾಗೂ ರೋಗಿಗಳ ಜೀವನದ ಗುಣಮಟ್ಟವನ್ನು ಉತ್ತಮಪಡಿಸುವಲ್ಲಿ ಆರಂಭಿಕ ಹಂತದಲ್ಲೇ ರೋಗ ಪತ್ತೆ ಹಚ್ಚುವುದು ಅತ್ಯಂತ ಪ್ರಬಲವಾದ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ, ಭಾರತದ ಪ್ರಮುಖ ಮತ್ತು ಸಮಗ್ರ ಕ್ಯಾನ್ಸರ್ ಆರೈಕೆ ಸೇವೆ ಒದಗಿಸುವ ಸಂಸ್ಥೆಯಾದ ಅಪೊಲೊ ಕ್ಯಾನ್ಸರ್ ಸೆಂಟರ್ಸ್, ನಿಖರ ಆಂಕಾಲಜಿ ಕಂಪನಿಯಾದ ಗಾರ್ಡಂಟ್ ಹೆಲ್ತ್ (ನಾಸ್ಡಾಕ್ ಜಿ.ಎಚ್) ಅಭಿವೃದ್ಧಿಪಡಿಸಿರುವ ಶೀಲ್ಡ್™️ ಮಲ್ಟಿ-ಕ್ಯಾನ್ಸರ್ ಡಿಟೆಕ್ಷನ್(ಎಂಸಿಡಿ) ಪ್ರಯೋಗಾಲಯ ಪರೀಕ್ಷೆಯನ್ನು ಭಾರತದಲ್ಲಿ ಪರಿಚಯಿಸಲು ಜೈಡಸ್ ಲೈಫ್‌ಸೈನ್ಸಸ್ ಸಂಸ್ಥೆಯೊಂದಿಗೆ ಇಂದು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಈ ಬಿಡುಗಡೆಯೊಂದಿಗೆ, ಭಾರತದಲ್ಲಿ ಈ ತಪಾಸಣಾ ಪರೀಕ್ಷೆಯನ್ನು ಒದಗಿಸುತ್ತಿರುವ ಮೊದಲ ಆರೋಗ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸಿಸಿಗಳು ಪಾತ್ರವಾಗಿವೆ.  ಭಾರತದ ಕ್ಯಾನ್ಸರ್ ಹೊರೆಯು 2040ರ ವೇಳೆಗೆ 2.08 ಮಿಲಿಯನ್ ಪ್ರಕರಣಗಳಿಗೆ ಹೆಚ್ಚಾಗುವ ನಿರೀಕ್ಷೆ ಇದ್ದು 2020 ರಿಂದ ಶೇ.57.5ರಷ್ಟು...

India's Got Talent Fame Vicky Krish Brings International Magic Show to Bengaluru

Image
Bengaluru, July 2, 2026 Vicky Krish of India's Got Talent fame is coming to Bangalore to give a wonderful experience of the magic world Famous magician Vicky Krish of India's Got Talent fame witnessed an amazing magic show at Bangalore Press Club today. In the presence of journalists, photographers and media representatives, Vicky Krupp surprised everyone by giving some unique and surprising magic shows of her international level. . Regarded as one of India's leading magicians, Vicky Krish is renowned across the country for skillfully combining magic, mind reading, psychology, comedy and grand illusions to deliver a unique entertainment experience. With more than a decade of professional experience, he has been greatly appreciated in India and abroad for his innovative and engaging performances. Vicky Krish, who was a finalist of India's Got Talent, is also an artist who has gained billions of views on social networks. His popular talent for turning ordinary...

ಶಾಸಕ ಪ್ರದೀಪ್ ಈಶ್ವ‌ರ್ ಮೇಲೆ ಚಪ್ಪಲಿ ಎಸೆತ ಪ್ರಕರಣ : ಕಾನೂನು ಕ್ರಮ ಕೈಗೊಳ್ಳಲು ಕೆ.ಎಂ.ರಾಮಚಂದ್ರಪ್ಪ ಅಗ್ರಹ

Image
ಬೆಂಗಳೂರು, ಜುಲೈ 1, 2026 ಇತ್ತೀಚಿಗೆ ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವ‌ರ್ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಒತ್ತಾಯಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕರಿಗೆ ಅವಮಾನಿಸಿರುವುದನ್ನು ಒಕ್ಕೂಟ ಖಂಡಿಸುತ್ತದೆ. ಶೋಷಿತ ಸಮುದಾಯಕ್ಕೆ ಸೇರಿದ ಜನ ಪ್ರತಿನಿಧಿಯ ಮೇಲೆ ದೌರ್ಜನ್ಯ ನಡೆದಿರುವಾಗ ಧ್ವನಿ ಇಲ್ಲದ ಜನರ ಪರಿಸ್ಥಿತಿ ಏನು' ಎಂದು ಪ್ರಶ್ನಿಸಿದರು. 'ರಾಜ್ಯದ ಯಾವುದೇ ಮೂಲೆಯಲ್ಲಿ ಹಿಂದುಳಿದವರ ಮೇಲೆ ದಬ್ಬಾಳಿಕೆ ನಡೆದರೆ ಒಕ್ಕೂಟವು ತೀವ್ರ ಹೋರಾಟ ನಡೆಸಲಿದೆ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದರು.    ಸುದ್ದಿಗೋಷ್ಠಿಯಲ್ಲಿ ಮಾವಳ್ಳಿ ಶಂಕ‌ರ್, ಕೆ.ವೆಂಕಟಸುಬ್ಬರಾಜು, ಬಸವರಾಜ ಲ. ಬಸಲಿಗುಂದಿ, ಜಿ.ಡಿ.ಗೋಪಾಲ್‌, ಬಾಲಕೃಷಸ್ವಾಮಿ ಯಾದವ್‌, ರಂಗಪ್ಪ, ಮಹಾಂತೇಶ್‌ ಎಸ್. ಕೌಲಗಿ, ಬಿ.ಟಿ.ಜಗದೀಶ್, ಬಸವರಾಜ ಮಾಳಗೆ ಪಾಲ್ಗೊಂಡಿದ್ದರು.