Posts

Showing posts with the label #bandidevara #ustava #bengaluru

ಬೆಂಗಳೂರಿನಲ್ಲಿ ಜೂನ್ 25ರಿಂದ 'ಪಾರಂಪರಿಕ ಬಂಡಿದೇವರ ಉತ್ಸವ' ನಡೆಯಲಿದೆ.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಬೆಂಗಳೂರು ಬಂಡಿದೇವರ ಉತ್ಸವ ಸಮಿತಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಬೆಂಗಳೂರಿನಲ್ಲಿ ಜೂನ್ 25ರಿಂದ 'ಪಾರಂಪರಿಕ ಬಂಡಿದೇವರ ಉತ್ಸವ' ನಡೆಯಲಿದೆ.  ದಕ್ಷಿಣ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾದ 'ಬಂಡಿದೇವರ ಉತ್ಸವ ವನ್ನು ಬೆಂಗಳೂರು ನಿರ್ಮಾತೃ ಕೇಂಪೇಗೌಡರ ಜಯಂತಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ಇದೇ ಜೂನ್ ತಿಂಗಳ 25, 26 ಮತ್ತು 27 ರಂದು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಕೆಂಪೇಗೌಡರ ಪೂರ್ವಜರಾದ ರಣಭೈರೇಗೌಡರು ತಮಿಳುಕಂಡ ದಿಕ್ಕಿನ ಯಣಮಂಜಿಪುತ್ತೂರಿನಿಂದ ತಮ್ಮ ಸಹೋದರರು ಮತ್ತು ಕುಟುಂಬದೊಡನೆ ಮಾತೃನೆಲ ಕನ್ನಡನಾಡಿಗೆ ಬಂಡಿಗಳಲ್ಲಿ ಬಂದ ನೆನಪಿಗಾಗಿ ಹಾಗೂ ತಮ್ಮ ಪ್ರಾಣ ಉಳಿಸಿದ ಬಂಡಿಗಳನ್ನು ದೈವವೆಂದು ಗೌರವಿಸಲು ಮಾಡುವ ಹಬ್ಬವಿದು ಪ್ರತಿಯೊಂದು ಮನೆತನವೂ ಅತ್ಯಂತ ಶ್ರದ್ಧಾಭಕ್ತಿಯಿಂದ ಹಾಗೂ ನೇಮನಿಯಮಗಳಿಂದ ಆಚರಿಸುವ ಈ ಉತ್ಸವವನ್ನು ದಕ್ಷಿಣ ಕರ್ನಾಟಕದ ರೈತಾಪಿ ಸಮುದಾಯದ ಸ್ವಾಭಿಮಾನದ ಕುರುಹಾಗಿ ಸಜ್ಜನಿಕೆ ಸಂಭ್ರಮದಿಂದ ಸರಳವಾಗಿ ಆಚರಿಸಲಾಗುತ್ತಿದೆ. ಜೂನ್ 25 ರಂದು ಬೆಳಿಗ್ಗೆ 9 ಗಂಟೆಗೆ ಬಸವನಗುಡಿಯ ದೊಡ್ಡಬಸವನಗುಡಿಯಲ್ಲಿ ಪೂಜೆ ಸಲ್ಲಿಸಿ ಗಂಗೆಯನ್ನು ಹೊತ್ತು ಚಾಮರಾಜಪೇಟೆಯ ಒಕ್ಕಲಿಗರ ಸಂಘದ ಆವರಣಕ್ಕೆ ಬರಲಾಗುವುದು, ಸಂಘದ ಆವರಣದಲ್ಲಿ ನೀರು ತುಂಬುವ ಮತ್ತು ಸಿಹಿ ತಯ್ಯಾರಿಸಿ ಹೊಟ್ಟಣಗಳಲ್ಲಿ ತುಂಬುವ ಆಚರಣೆಯನ್ನು ಹ...