ವಿಜಯಪುರ ಜಿಲ್ಲೆಯ ಮಣೂರ, ಬೊಮ್ಮನಜೋಗಿ ಗ್ರಾಮ ಪಂಚಾಯತ್ ನಲ್ಲಿ ಕಾಮಗಾರಿ ನಡೆಸದೆ, ₹3 ಕೋಟಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಜಾಂಬವ ಯುವ ಸೇನೆ' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ವಿಜಯಪುರ ಜಿಲ್ಲೆಯ ಮಣೂರ, ಬೊಮ್ಮನಜೋಗಿ ಗ್ರಾಮ ಪಂಚಾಯತ್ ನಲ್ಲಿ ಕಾಮಗಾರಿ ನಡೆಸದೆ, ₹3 ಕೋಟಿಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

 ಮಣೂರ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳಾದ ವಿನೋದ ರಾಠೋಡ ಇವರು 15 ನೇ ಹಣಕಾಸು ಯೋಜನೆಯಡಿ.ಪಿ.ಆರ್.ಡಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಯಾವುದೆ ಕಾಮಗಾರಿ ಕೈಗೊಳ್ಳದೆ ಮತ್ತು ವರ್ಗ 1 ರ ಅಡಿಯಲ್ಲಿ ಅವ್ಯವಹಾರ ಆಗಿದ್ದು.ಪಿಡಿಓ ರವರನ್ನು ಸೆವೆಯಿಂದ ಅಮಾನತ್ತು ಮಾಡಿ ಗ್ರಾ.ಪಂ ಅಧ್ಯಕ್ಷರ ಸದಸ್ಯತ್ವ ರದ್ದು ಮಾಡಿ.ದುರ್ಭಳಿಕೆ ಮಾಡಿಕೊಂಡಿರುವ ಹಣವನ್ನು ಸರಕಾರಕ್ಕೆ ಮರಳಿ ಭರಣ ಮಾಡಿಕೊಳ್ಳುವ ಬಗ್ಗೆ ದೂರು ಅರ್ಜಿ.

ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ತಮಗೆ ತಿಳಿಸುವುದೆನಂದರೆ ವಿಜಯಪುರ 23-8-2023000-29-03-20

ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿಬಾಯಿ ಸಂ ಬಿರಾದರ ಹಾಗೂ ಗ್ರಾ.ಪಂ.ಅಭಿವೃದ್ಧಿ ವಿನೋದ ರಾಠೋಡ ಇವರು ಈ ಸದರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಯಾವುದೆ ಕಾಮಗಾರಿ ಮಾಡದೆ.ಎಸ್ಟಿಮೇಂಟ್ ಮತ್ತು ಕ್ರಿಯಾಯೋಜನೆ ಮಾಡದೆ ತಮ್ಮ ಮನಸ್ಸಿಗೆ ಬಂದ ಹಾಗೆ ಗ್ರಾ.ಪಂ.ಹಣವನ್ನು ಕೊಳ್ಳೆ ಹೊಡೆದಿರುತ್ತಾರೆ.

ಪಿ.ಆ‌ರ್.ಡಿ ಯೋಜನೆಯಡಿ ದುರ್ಭಳಿಕೆಯಾದ ಮೊತ್ತ. 71,90,45 (ಎಪ್ಪತ್ತೊಂದು ಲಕ್ಷ ತೊಂಬತ್ತು ಸಾವಿರದ ನಲವತ್ತೈದು ರೂಪಾಯಿಗಳು) (1) ದೇವೂರ - 2654350=00, (2) ಮಣೂರ – 2122995 =00, (3) ಬೊಮ್ಮನಜೋಗಿ 2412700 =00 ಈ ಮೂರು ಗ್ರಾಮಗಳಲ್ಲಿ ಯಾವುದೆ ಈ ರಿತಿಯಾಗಿ ಕಾಮಗಾರಿನ ಮಾಡದೆ ಅನಾಮತ ಹಣ ಡ್ರಾ ಮಾಡಿಕೊಂಡಿರುತ್ತಾರೆ.

15 ನೇ ಹಣಕಾಸು ಯೋಜನೆಯಡಿ ಅಧ್ಯಕ್ಷರಾದ ವಾಲುಬಾಯಿ ಕೇಸು ರಾಠೋಡ ಹಾಗೂ ಗ್ರಾ.ಪಂ. ವಿನೋದ ರಾಠೋಡ ಇವರು ಕೂಡಿಕೊಂಡು ಸೂಮಾರು ಅಂದಾಜು ಮೊತ್ತ 13475874=00 (ಒಂದುಕೊಟಿ ಮೂವತ್ತು ನಾಲ್ಕು ಕ್ಷದ ಎಪ್ಪತ್ತೈದು ಸಾವಿರದ ಎಂಟನೂರ ಎಪ್ಪತ್ತನಾಲ್ಕು ರೂಪಾಯಿಗಳು ಖರ್ಚು ಹಾಕಿದ್ದು, ಇವರು ಯಾವುದೇ ವಸುಲಿಯಾದ ಹಣ ವರ್ಗ 1 ರ ಖಾತೆಗೆ ಜಮೆಯಾದ ಹಣ 1387283=00 (ಹದಿಮೂರು ಲಕ್ಷ ಎಂಬತ್ತೇಳು ಸಾವಿರದ ಎರಡು ನೂರಾ ಎಂಬತ್ತೂ ಮೂರು) ರೂಪಾಯಿಗಳು ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಯಾವಬ್ಬ ಸದಸ್ಯರಗೂ ಕೂಡಾ ಗೊತ್ತಾಗದ ಹಾಗೆ ಹಣ ದುರ್ಭಳಿಕೆ ಮಾಡಿ ಕೊಂಡಿದ್ದಾರೆ.ವರ್ಗ 1 ರ ಖಾತೆಗೆ ಜಮೆಯಾದ ಶಿಶುಪಾಲನದ ಅನುದಾನ ಹಾಗೂ ಎಸ್ಸಿ-ಎಸ್ಪಿ ಜನಾಗದ ಸಮಾಜದ ವಾರ್ಡಿನಲ್ಲಿ ಕೆಲಸ ಮಾಡದೆ ಹಣ ದುರುಪಯೊಗ ಮಾಡಿಕೊಂಡಿದ್ದಾರೆ.

ಆದ್ದರಿಂದ ತಾವುಗಳು ಈ ಕೂಡಲೆ ಸದರಿ ಗ್ರಾಮ ಪಂಚಾತಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸತ್ಯ ಕಂಡುಬಂದಲ್ಲಿ ಸದರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಇದರಲ್ಲಿ ಶ್ಯಾಮಿಲ್ಲಾಗಿರುವ ಅಧಿಕಾರಿಗಳನ್ನು ಸೆವೆಯಿಂದ ಅಮಾನತ್ತು ಮಾಡಿ ಗ್ರಾ.ಪಂ.ಅಧ್ಯಕ್ಷರ ಸದಸ್ಯತ್ವ ರದ್ದು ಮಾಡಿ ಸರಕಾರಕ್ಕೆ ಮೊಸ ಮಾಡಿ ಸಾರ್ವಜನಿಕರ ತೆರಿಗೆ ಹಣ ದುರ್ಭಳಕೆ ಮಾಡಿ ಕೊಂಡಿರುವ ಇವರುಗಳು ಮೆಲೆ ಸಮಂಬಂಧ ಪಟ್ಟ ಪ್ರಕರಣವನ್ನು ದಾಖಲಿಸಿ ಶಿಸ್ತು ಕಾನೂನು ಕ್ರಮ ಕೈಗೊಂಡು.ಸಾರ್ವಜನಿಕರ ತೆರಿಗೆ ಹಣ ನ್ಯಾಯಯುತವಾಗಿ ಕಾಪಾಡಿಕೊಂಡು ಇಲ್ಲಿನ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೆಕೆಂದು ತಮ್ಮಲ್ಲಿ ನಾನು ಕೇಳಿಕೊಳ್ಳುತ್ತಿದ್ದೇನೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium