ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.
ಕರ್ನಾಟಕ ಹಾಗೂ ಭಾರತದ ಹಲವು ರಾಜ್ಯಗಳಿಂದ ಸುಮಾರು 350 ಕ್ಕಿಂತಲೂ ಹೆಚ್ಚಿನ ವೈದ್ಯರು, ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರನ್ನು ಒಂದೇ ವೇದಿಕೆಯಲ್ಲಿ ತರುವ ವಿನೂತನ ಕಾರ್ಯಕ್ರಮವೊಂದನ್ನು ಇದೇ ಸೆಪ್ಟೆಂಬರ್ 20ರಂದು ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಜೊತೆಗೆ ಮರುದಿನ ಸೆಪ್ಟೆಂಬರ್ 21ರಂದು ಸಿಗಂದೂರು ಮತ್ತು ಜೋಗಕ್ಕೆ ನೆಟ್ವರ್ಕಿಂಗ್ ಟ್ರಿಪ್ ಏರ್ಪಡಿಸಲಾಗಿದೆ ಎಂದು ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ( ILYF) ಯ ಶಿವಮೊಗ್ಗ ಚಾಪ್ಟರ್ ಇಂದು ಪತ್ರಿಕೋಷಿಯಲ್ಲಿ ತಿಳಿಸಿದೆ.
ವೈಧ್ಯರು ತಮ್ಮ ಕ್ಲಿನಿಕಲ್ ಪ್ರಾಕ್ಸಿಸ್ ಗಿಂತಲೂ ಮುಂದೆ ಹೋಗಿ ಉದ್ಯಮಿಗಳಾಗಲು, ಹೊಸ ಕಾಲದ ವೈಧ್ಯಕೀಯ ಸೇವಾ ಅಗತ್ಯಗಳು ಹಾಗೂ ಆರೋಗ್ಯ ಸೇವೆಗಳಲ್ಲಿ ಬೇಕಾದ ನೂತನ ತಂತ್ರಜ್ಞಾನಗಳನ್ನು ಸಂಶೋಧನೆ ಮಾಡಿ ಹೆಚ್ಚಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವಂತೆ ಮಾಡಲು ಹಾಗೂ ತಮ್ಮ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಜಿಗಿಯಲು ಈ ಕಾರ್ಯಕ್ರಮ ನೆರವಾಗಲಿದೆ ಎಂದು ।LYF ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಕೆಂಚಾಂಬ ಹಾಗೂ ಬೆಂಗಳೂರು ಚಾಪ್ಪರ್ LYFನ ಅಧ್ಯಕ್ಷರಾದ ಪ್ರತಾಪ್ ಆರಾಧ್ಯ ಹೇಳಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಹಲವು ತಾಂತ್ರಿಕ ಹಾಗೂ ಕಾನೂನಾತ್ಮಕ ಅಂಶಗಳನ್ನು ಜಗತ್ತಿನ ಎಲ್ಲೆಡೆಯಿಂದ ಶೋಧಿಸಿ ಕ್ಷಿಪ್ರವಾಗಿ ಒದಗಿಸುವ ಎ ಐ ಒಳನೋಟಗಳು, ಹಾಸ್ಪಿಟಲ್ ವಿಸ್ತರಣೆ, ಸಂಪನ್ಮೂಲ ಕ್ರೂಡೀಕರಣ, ಸಂಪತ್ತಿನ ಸೃಷ್ಟಿ, ಮತ್ತು ನೂತನ ಡಿಜಿಟಲ್ ಹೆಲ್ತ್ ಕೇರ್ ನ ಸಾಧಕ ಬಾದಕಗಳ ಬಗ್ಗೆ ವಿಶೇಷ ಚರ್ಚೆಗಳಿಗೆ ಈ ಸಮಾವೇಷ ಸಾಕ್ಷಿಯಾಗಲಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಮತ್ತು ಸ್ಕಿಲ್ ಡೆವಲಪ್ಟೆಂಟ್ ಖಾತೆಯ ಸಚಿವರಾದ ಮಾನ್ಯ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್, ಶಿವಮೊಗ್ಗದ ಸಂಸದರಾದ ಶ್ರೀ ಬಿ ವೈ ರಾಘವೇಂದ್ರ, ದಾವಣಗೆರೆಯ ಸಂಸದರಾದ ಶ್ರೀಮತಿ ಡಾ. ಪ್ರಭ ಮಲ್ಲಿಕಾರ್ಜುನ, ಶಿವಮೊಗ್ಗದ ಶಾಸಕರು ಶ್ರೀ ಚನ್ನಬಸಪ್ಪ ಎನ್. ಎನ್. ಶಿವಮೊಗ್ಗದ ವಿಧಾನ ಪರಿಷತ್ ಶಾಸಕರು ಶ್ರೀ ಧನಂಜಯ ಸರ್ಜಿ, ಚಿತ್ರದುರ್ಗದ ವಿಧಾನ ಪರಿಷತ್ ಶಾಸಕರು ಶ್ರೀ ನವೀನ್ ಕೊಟ್ಟಿಗೆ, LYF ಟ್ರಸ್ಟ್ ನ ಅಧ್ಯಕ್ಷರು ಶ್ರೀ ಸಂತೋಷ್ ಕೆಂಚಾಂಬ ಮತ್ತಿತರರು ಉಪಸ್ಥಿತರಿರುವರು.
ಈ ಸಮಾವೇಶದ ಸಂಯೋಜಕರಾಗಿ ಡಾ. ಶಾಲಿನಿ ನಲ್ವಾಡ್ ( ಕೋ ಫೌಂಡರ್, ICATT, ಏರ್ ಅಂಬುಲೆನ್ಸ್), ಡಾ. ಧನಂಜಯ ಸರ್ಜಿ ( MLC & ಸರ್ಜಿ ಗ್ರೂಪ್ ಆಫ್ ಹಾಸ್ಪಿಟಲ್ಸ್) ಹಾಗೂ ILYF ಟ್ರಸ್ಟಿಗಳು ಹಾಗೂ ಸದಸ್ಯರು ಭಾಗವಹಿಸುವರು.
ಖ್ಯಾತನಾಮರಾದ ಡಾ. ನಾಗೇಂದ್ರ ಸ್ವಾಮಿ ( ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್), ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಡಾ. ಧನಂಜಯ್ ಅರೋರ ( ಬ್ರಾಂಡ್ ಮ್ಯಾನೇಜ್‌ಂಟ್ ಎಕ್ಸರ್ಟ್ & TEDx ಸ್ಪೀಕರ್), ಡಾ. ಸುರೇಶ್ ಬಾಡ ಮಠ ( ಪ್ರೊಫೆಸರ್ ನಿಮಾನ್ಸ್), ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಬಹಳಷ್ಟು ಸಾಧನೆ ಮಾಡಿದ ವ್ಯಕ್ತಿಗಳು ಈ ಸಮಿತ್ ನಲ್ಲಿ ವೈದ್ಯಕೀಯ ಸೇವೆಯನ್ನು ವಿಸ್ತರಿಸುವ ಬಗ್ಗೆ, ಆರ್ಥಿಕ ನಿರ್ವಹಣೆ ಬಗ್ಗೆ, ಆಡಳಿತ ದ ಬಗ್ಗೆ, ವೈದ್ಯರುಗಳ ಸಾಂಘಿಕ ವ್ಯವಹಾರ, ಉದ್ಯಮದ ಬಗ್ಗೆ ಮಲ್ಟಿಪಲ್ ಪ್ಯಾನೆಲ್ ಡಿಸ್ಕಶನ್ಸ್ ನಡೆಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವೈದ್ಯರುಗಳು, ಸೇವಾ ಸಂಸ್ಥೆಗಳು, ಉದ್ಯಮಿಗಳು ಹೀಗೆ ಹಲವು ಪರಿಣಿತರು ಒಂದೆಡೆ ಸೇರುವುದರಿಂದ ಪರಸ್ಪರರಿಗೆ ಸುಸ್ಥಿರ ವ್ಯವಹಾರಿಕ ಬೆಳವಣಿಗೆಯನ್ನು ಸಾಧಿಸಲು ನೆರವಾಗಲಿದೆ.
Comments
Post a Comment