ಭಾವನಾತ್ಮಕ ಬುದ್ಧಿಮತ್ತೆಯೊಂದಿಗೆ ನಾಯಕತ್ವ ಅಗತ್ಯ: ಗಾರ್ಡನ್ ಸಿಟಿ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್. ಡಿ. ಶಿಬುಲಾಲ್ ಕರೆ
ಬೆಂಗಳೂರು, ಜುಲೈ 21, 2026
ನಾಯಕತ್ವ ಎಂದರೆ ಕೇವಲ ನಿರ್ಧಾರಗಳನ್ನು ತೆಗೆದುಕೊಳ್ಳುವುದಲ್ಲ. ಭಾವನಾತ್ಮಕ ಬುದ್ಧಿಮತ್ತೆ, ಮುಕ್ತ ಮನೋಭಾವ ಮತ್ತು ಇತರರ ಬಗ್ಗೆ ಗೌರವ ಹೊಂದಿರುವುದೇ ಉತ್ತಮ ನಾಯಕತ್ವದ ಗುಣಗಳಾಗಿವೆ ಎಂದು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ಎಸ್. ಡಿ. ಶಿಬುಲಾಲ್ ಹೇಳಿದರು.
ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ನಾಲೆಜ್ ಪಾರ್ಕ್ ಆವರಣದಲ್ಲಿ ಮಂಗಳವಾರ ನಡೆದ 8ನೇ ಘಟಿಕೋತ್ಸವದ ಎರಡನೇ ದಿನದ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರಸ್ತುತವಾಗಿರಲು "ಕಲಿಯಿರಿ, ಕಲಿತದ್ದನ್ನು ಮರೆತು ಮತ್ತೆ ಹೊಸದನ್ನು ಕಲಿಯಿರಿ" ಎಂಬ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜ್ಞಾನವನ್ನು ಉನ್ನತ ಗುರಿಯೊಂದಿಗೆ ಸಂಪಾದಿಸಬೇಕು. ಜೀವನದ ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯಶಸ್ಸಿನ ಮೂಲ ಮಂತ್ರ ನಿರಂತರತೆ ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಅವರು ಹೇಳಿದರು.
ಎರಡು ದಿನಗಳ ಕಾಲ ನಡೆದ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವವು ಮಂಗಳವಾರ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಒಂಬತ್ತು ಶಾಲೆಗಳ ಒಟ್ಟು 1,275 ಇದೇ ವೇಳೆ ನಾಲ್ವರು ಸಂಶೋಧಕರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗಿದ್ದು, ಶೈಕ್ಷಣಿಕ ಸಾಧನೆ ಮೆರೆದ 33 ವಿದ್ಯಾರ್ಥಿಗಳಿಗೆ ರಾಂಕ್ ಹೋಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಲಾಧಿಪತಿ ಡಾ. ಜೋಸೆಫ್ ವಿ. ಜಿ., ಕುಲಪತಿ ಡಾ. ಎಂ. ರಾಮಚಂದ್ರ ಗೌಡ, ನೋಂದಣಾಧಿಕಾರಿ ಡಾ. ಶೀಜಾ ಎಂ. ಎಸ್., ಪ್ರೊ-ಕುಲಪತಿ ಹಾಗೂ ಪರೀಕ್ಷಾ ನಿಯಂತ್ರಕರಾದ ಡಾ. ಸಿಬಿ ಶಾಜಿ ಉಪಸ್ಥಿತರಿದ್ದು, ಪದವೀಧರರನ್ನು ಅಭಿನಂದಿಸಿ ಶುಭ ಹಾರೈಸಿದರು.
ಸಮಾರಂಭವು ವಿದ್ಯಾರ್ಥಿಗಳು ಸಹಾನುಭೂತಿ, ಜ್ಞಾನ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವಂತೆ ಕರೆ ನೀಡುವುದರೊಂದಿಗೆ ಸಮಾರೋಪಗೊಂಡಿತು
Comments
Post a Comment