ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಭ್ರಷ್ಟಚಾರ, ದಲಿತ ಸಮುದಾಯದ ಅಧಿಕಾರಿಗಳಿಗೆ ಕಿರುಕುಳ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ - ಸಮತಾ ಸ್ವಾಭಿಮಾನಿ ದಳ ಪ್ರತಿಭಟನೆ

ಬೆಂಗಳೂರು, ಜುಲೈ 30, 2026 

ಬೆಂಗಳೂರು ಫೀಡಂ ಪಾರ್ಕ್ ನಲ್ಲಿ ಸಮತಾ ಸ್ವಾಭಿಮಾನ ದಳದ ವತಿಯಿಂದ ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ನಡೆದಿರುವ ಭ್ರಷ್ಟಚಾರ ಮತ್ತು ಪರಿಶಿಷ್ಷ ಜಾತಿ ಅಧಿಕಾರಿಗಳ ಮೇಲೆ ಹೇರುವ ಒತ್ತಡ ಹಾಗೂ ಮಾನಸಿಕ ಹಿಂಸೆ ಮತ್ತು ಮಾಹಿತಿ ಹಕ್ಕು ಅರ್ಜಿಗಳ ರಕ್ಷಣೆಗೆ, ಸಿಬಿಐ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿ *ರಾಜ್ಯಾಧ್ಯಕ್ಷರಾದ ಡಾ|| ಕೆ. ಅರುಣ್ ಕುಮಾರ್* ರವರ ನೇತೃತ್ವದಲ್ಲಿ ನೂರಾರು ದಲಿತ ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ *ಡಾ||ಅರುಣ್ ಕುಮಾರ್ ಕೆ.ರವರು* ಮಾತನಾಡಿ ಅಲ್ಪಸಂಖ್ಯಾತ ನಿರ್ದೇಶನಾಲಯದಲ್ಲಿ ಎಸ್.ಸಿ/ಎಸ್.ಟಿ. ಸಮುದಾಯದ ಅಧಿಕಾರಿಗಳ ಮೇಲೆ ವಿನಾಕಾರಣ ಭ್ರಷ್ಟಚಾರ, ಇಲಾಖೆ ವಿಚಾರಣೆ ಮಾಡುತ್ತಿದ್ದಾರೆ ನೊಂದ ಅಧಿಕಾರಿಗಳಿಗೆ ನ್ಯಾಯ ಸಿಗುತ್ತಿಲ್ಲ.

ಅಲ್ಪಸಂಖ್ಯಾತ ನಿರ್ದೇಶನಾಲಯ ಇಲಾಖೆಯಲ್ಲಿ ಕೊಟ್ಯಂತರ ಅನುದಾನ ಬಿಡುಗಡೆಯಾಗುತ್ತದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಅಭಿವೃದ್ಧಿ ಮಾಡದೇ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳ ಒತ್ತಡ ಮತ್ತು ವಿನಾಕಾರಣ ಶಿಸ್ತು ಕ್ರಮ ಹಿಂಪಡೆಯಬೇಕು. ಅನುದಾನ ಸಮರ್ಪಕ ಬಳಕೆಯಾಗಬೇಕು.

ಮಾಹಿತಿ ಹಕ್ಕು ಕಾಯ್ಡೆ ಅಡಿ ಅರ್ಜಿ ಸಲ್ಲಿಕೆ ತತಕ್ಷಣ ವಿಲೇವಾರಿಯಾಗಬೇಕು. ಪ್ರಥಮ ಚಿಕಿತ್ಸಾ ಕಿಟ್ ಖರೀದಿ , ಆಹಾರ ಟೆಂಡರ್, ಪೌಷ್ಟಿಕಾಂಶದ ಪುಡಿ, ಕರಾಟೆ ಡ್ರೆಸ್, ಅಲೆಮಾರಿ ಬಂಧು ಪೇಪರ್ ಖರೀದಿ, ಬಯೋಮೆಟ್ರಿಕ್ , ಆನ್ ಲೈನ್ ತರಗತಿ, ಅಧ್ಯಯನ ಸಾಮಾಗ್ರಿ, ಉನ್ನತ ಪರೀಕ್ಷೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಹಾಯಧನ, ಮುಂಬಡ್ತಿ ಒಟ್ಟಾರೆ 21ಬೇಡಿಕೆಗಳು ಹಕ್ಕೋತ್ತಾಯಗಳನ್ನು ಇಲಾಖೆ ಅಧಿಕಾರಿ ಸ್ಥಳಕ್ಕೆ ಬಂದ್ದಿದ್ದರು ಅವರ ಮನವಿ ಪತ್ರ ಸಲ್ಲಿಸಲಾಗಿದೆ ನಮಗೆ ನ್ಯಾಯ ಸಿಗುವವರೆ ಹೋರಾಟ ನಿಲ್ಲದು ಎಂದು ಹೇಳಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium