Posts

Showing posts from October, 2026

🎬 ಪ್ರೇಮದ ಊರಲಿ — ಪ್ರೀತಿ, ನಂಬಿಕೆ ಮತ್ತು ತಂದೆಯ ಮಮತೆಯ ಭಾವಸಾಗರ!

Image
ಕೆಲವು ಸಿನಿಮಾಗಳು ಮನರಂಜನೆ ನೀಡುತ್ತವೆ. ಇನ್ನು ಕೆಲವು ಸಿನಿಮಾಗಳು ಮನಸ್ಸನ್ನು ಮುಟ್ಟುತ್ತವೆ. ಆದರೆ ಅಪರೂಪದ ಕೆಲವು ಸಿನಿಮಾಗಳು ಮಾತ್ರ ನಮ್ಮ ಬದುಕಿನ ಭಾವನೆಗಳನ್ನು ಪರದೆಯ ಮೇಲೆ ತೆರೆದಿಟ್ಟು, ಸಿನಿಮಾ ಮುಗಿದ ಮೇಲೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿರುತ್ತವೆ. ಅಂತಹ ಒಂದು ಭಾವನಾತ್ಮಕ ಅನುಭವವನ್ನು ನೀಡುವ ಚಿತ್ರವೇ ‘ಪ್ರೇಮದ ಊರಲಿ’. ಕನ್ನಡ ಚಿತ್ರರಂಗಕ್ಕೆ ಪ್ರೀತಿ, ಕುಟುಂಬ, ತಂದೆ-ಮಗನ ಬಾಂಧವ್ಯ, ದ್ರೋಹ, ನಂಬಿಕೆ ಮತ್ತು ಪಶ್ಚಾತ್ತಾಪದಂತಹ ಸೂಕ್ಷ್ಮ ಭಾವನೆಗಳನ್ನು ಹಳ್ಳಿಯ ಸೊಗಡಿನಲ್ಲಿ ಬೆರೆಸಿ ನೀಡಿರುವ ಈ ಸಿನಿಮಾ, ಕಥೆ ಹೇಳುವ ತನ್ನದೇ ಆದ ವಿಭಿನ್ನ ಶೈಲಿಯಿಂದ ಗಮನ ಸೆಳೆಯುತ್ತದೆ. ಈ ಕಥೆಯನ್ನು ಕಲ್ಪಿಸಿ, ಅದಕ್ಕೆ ಜೀವ ತುಂಬಿ, ದೃಶ್ಯಗಳ ಮೂಲಕ ಪ್ರೇಕ್ಷಕರ ಮನಸ್ಸಿಗೆ ತಲುಪಿಸಿರುವ ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಮೊದಲನೆಯದಾಗಿ ಒಂದು ಸಲಾಂ! 🌿 ಹಳ್ಳಿಯ ಸೊಬಗಿನಲ್ಲಿ ಅರಳಿದ ಪ್ರೀತಿಯ ಕಥೆ ‘ಪ್ರೇಮದ ಊರಲಿ’ ಚಿತ್ರದ ನಿಜವಾದ ಶಕ್ತಿ ಅದರ ಕಥೆಯಲ್ಲಿ ಮಾತ್ರವಲ್ಲ, ಕಥೆಯನ್ನು ತೆರೆಮೇಲೆ ಕಟ್ಟಿಕೊಟ್ಟಿರುವ ರೀತಿಯಲ್ಲಿಯೂ ಇದೆ. ಹಸಿರು ಹೊಲಗಳು, ಮಳೆಯ ಸೊಬಗು, ರೈತರ ಬದುಕು, ಹಳ್ಳಿಯ ಆಡುಭಾಷೆ ಮತ್ತು ಅಲ್ಲಿನ ಸಹಜ ಜೀವನಶೈಲಿ—ಇವೆಲ್ಲವೂ ಚಿತ್ರಕ್ಕೆ ನೈಜತೆಯ ಸ್ಪರ್ಶ ನೀಡುತ್ತವೆ. ಸಿನಿಮಾ ನೋಡುವ ಪ್ರತಿಯೊಬ್ಬ ಪ್ರೇಕ್ಷಕನಿಗೂ ತಾನು ಆ ಹಳ್ಳಿಯಲ್ಲೇ ಬದುಕುತ್ತಿರುವ ಅನುಭವ ಮೂಡಿಸುವಲ್ಲಿ ಚಿತ್ರದ ಪರಿಸರ ಮತ್ತು ದ...

ಧೀ ಹಾಸ್ಪಿಟಲ್ಸ್ ಮತ್ತು ಸ್ಮಿಥಮ್ ಸಹಯೋಗದೊಂದಿಗೆ "ಡೇರ್ ರನ್ 2026" ಆಯೋಜನೆ: ಕಾಂತಾರ ನಟಿ ಸಪ್ತಮಿ ಗೌಡ ಭಾಗಿ

Image
ಬೆಂಗಳೂರು, ಅಕ್ಟೋಬರ್ 11, 2026: ದೀ ಆಸ್ಪತ್ರೆ ವತಿಯಿಂದ ಡೇರ್ ರನ್ 2026 ನಡಿಗೆ ಫೋರಂ ಸೌತ್ ಬೆಂಗಳೂರುನಿಂದ ಡಿಹೆಚ್ಇಇ ಆಸ್ಪತ್ರೆವರೆಗೆ ನಡೆಯಿತು.  ವಿಶ್ವ ಸಂಧಿವಾತ ದಿನದ ಪ್ರಯುಕ ಚಲನೆಯೇ ಜೀವನ ಎಂಬ ಪ್ರಬಲ ಸಂದೇಶಕ್ಕಾಗಿ ಡೇರ್ ರನ್ 2026 ಆಯೋಜನೆ ಮಾಡಲಾಗಿತ್ತು. ಈ ಅಕ್ಟೋಬರ್ 12 ರಂದು, ಸಂಧಿವಾತ, ಕೀಲು ಆರೋಗ್ಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸ್ಮಿಟಮ್ ಎನ್‌ಜಿಡಿ ಮತ್ತು ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ಸ್ 3191 & 3192 ಸಹಯೋಗದೊಂದಿಗೆ ದೀ ಆಸ್ಪತ್ರೆಗಳು ನಡೆಸುವ ಸ್ಪೂರ್ತಿದಾಯಕ ಸಮುದಾಯ ಚಳುವಳಿ ಡೇರ್ ರನ್ 2026 ರಲ್ಲಿ 6,000ಕ್ಕೂ ಅಧಿಕ ಹೆಚ್ಚು ಓಟಗಾರರು ಭಾಗವಹಿಸಿದ್ದಾರೆ ಎಂದು ಡಾ.ಚಂದ್ರಶೇಖರ್ ಚಿಕ್ಕಮುನಿಯಪ್ಪ ತಿಳಿಸಿದರು. ನಟಿ ಸಪ್ತಮಿ ಗೌಡ, ಅಂತರಾಷ್ಟ್ರೀಯ ಖ್ಯಾತಿ ವೈರ್‌ಲೆಸ್ ವಾಕಿಂಗ್ ಪಿಟೀಲು ವಾದಕ ವಿಶೇಷ ಅತಿಥಿ ಡಾ. ಅನೀಶ್ ವಿದ್ಯಾಶಂಕರ್ ಅವರು ಭಾಗಿಯಾಗಿದ್ದರು.

PRR-2 ಅಂತಿಮ ಅಧಿಸೂಚನೆ ಕೈಬಿಡಲು ಶ್ರೀ ಕೃಷ್ಣ ಗಾರ್ಡನ್ಸ್ ಸೈಟ್ ಮಾಲೀಕರ ಸಂಘದ ಪ್ರೊ. ದೇವೇಂದ್ರ ಬಾಬು ಆಗ್ರಹ

Image
PRR-2 ಅಂತಿಮ ಅಧಿಸೂಚನೆ ಕೈಬಿಡಲು ಶ್ರೀ ಕೃಷ್ಣ ಗಾರ್ಡನ್ಸ್ ಸೈಟ್ ಮಾಲೀಕರ ಸಂಘದ ಪ್ರೊ. ದೇವೇಂದ್ರ ಬಾಬು ಆಗ್ರಹ  ಬೆಂಗಳೂರು, ಅಕ್ಟೋಬರ್ 9, 2026 PRR-2 ಅಂತಿಮ ಅಧಿಸೂಚನೆ: "Sri Krishna Gardens" ಹಾಲಿ ನಿವಾಸಿಗಳ ಮನೆ, ಆಸ್ತಿ ಹಕ್ಕು ಮತ್ತು ಭವಿಷ್ಯದ ಪ್ರಶ್ನೆ – ಭೂಮಾಲೀಕರು ಹಾಗೂ ನಿವಾಸಿಗಳ ಆತಂಕಗಳು ಗುಲಕಮಲೆ ಗ್ರಾಮದ ಸರ್ವೆ ನಂ. 16, 18, 20, ಮತ್ತು 21ರಲ್ಲಿ ಅಭಿವೃದ್ಧಿಗೊಂಡಿರುವ "Sri Krishna Gardens" ವಸತಿ ಬಡಾವಣೆಯು ಭೂ ಪರಿವರ್ತನೆ, ಕನಕಪುರ ಯೋಜನಾ ಪ್ರಾಧಿಕಾರದ ಅನುಮೋದನೆ, ರಸ್ತೆ-ಉದ್ಯಾನವನ-ನಾಗರಿಕ ಸೌಲಭ್ಯಗಳ ಅಭಿವೃದ್ಧಿ, RERA ನೋಂದಣಿ ಹಾಗೂ ಸೈಟ್‌ ಗಳ ನೋಂದಣಿ ಮತ್ತು ಖಾತಾ ಪ್ರಕ್ರಿಯೆ ಸೇರಿದಂತೆ ವಿವಿಧ ಹಂತಗಳ ಕಾನೂನುಬದ್ದ ಅನುಮೋದನೆಗಳನ್ನು ದಾಟಿ ಇಂದು ಹಾಲಿ ನಿವಾಸಿಗಳ ವಾಸಸ್ಥಳವಾಗಿದೆ. ಆದರೆ, 03.09.2026 ರಂದು ಹೊರಡಿಸಲಾದ PRR-2 ಅಂತಿಮ ಭೂಸ್ವಾಧೀನ ಅಧಿಸೂಚನೆಯ ಹಿನ್ನೆಲೆಯಲ್ಲಿ, ಈ ವಸತಿ ಬಡಾವಣೆಯ ಹಾಲಿ ನಿವಾಸಿಗಳ ಮನೆಗಳು, ಆಸ್ತಿ ಹಕ್ಕುಗಳು, ಕುಟುಂಬಗಳ ಭದ್ರತೆ ಹಾಗೂ ವರ್ಷಗಳ ಹೂಡಿಕೆಯ ಭವಿಷ್ಯದ ಕುರಿತು ಗಂಭೀರ ಆತಂಕ ಮತ್ತು ಪ್ರಶ್ನೆಗಳು ಉದ್ಭವಿಸಿವೆ. ಅಂತಿಮ ಅಧಿಸೂಚನೆಯಲ್ಲಿ PRR-2 ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನವನ್ನು ಉಲ್ಲೇಖಿಸಲಾಗಿದೆ. ವರ್ಷಗಳ ಹಿಂದೆ ಆರಂಭವಾದ PRR-2 ಪ್ರಕ್ರಿಯೆಯ ನಡುವೆ, ಇದೇ ಜಮೀನಿಗೆ ಭೂ ಪರಿವರ್ತನೆ, ಯೋಜನಾ ಅ...

ಭಾರತೀಯ ವಿದ್ಯಾಭವನದ ವಜ್ರಮಹೋತ್ಸವ ಸಮಾರಂಭ

Image
ಮನೆಯಲ್ಲಿ ಅಜ್ಜ-ಅಜ್ಜಿಯರ ಭಾಷೆಯಲ್ಲಿ ಮೊಮ್ಮಕ್ಕಳು ಮಾತನಾಡದೇ ಇದ್ದರೆ ಆ ಭಾಷೆ ಉಳಿಯದು ಎಂದು ಯುನೆಸ್ಕೊ ಮಾಜಿ ರಾಯಭಾರಿ ಚಿರುಜೀವ್ ಸಿಂಗ್ ಅಭಿಪ್ರಾಯಪಟ್ಟರು. ನಗರದ ಭಾರತೀಯ ವಿದ್ಯಾಭವನದಲ್ಲಿ ವಜ್ರಮ ಹೋತ್ಸವದ ಪ್ರಯುಕ್ತ ಆಯೋಜಿಸಿರುವ 'ಕರ್ನಾಟಕ ನುಡಿತೋಟ' ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಮೇಳದಲ್ಲಿ ಮಾತನಾಡಿದ ಅವರು, ಮೊಮ್ಮಕ್ಕಳ ಭಾಷೆಯಲ್ಲಿ ಇಲ್ಲದ ಪದಗಳು ಅಜ್ಜಿಯ ಕಥೆಗಳಲ್ಲಿ ಇರುತ್ತವೆ. ಭಾಷೆ ಸಮುದಾಯದ ಸ್ಮೃತಿ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಂಪೂರ್ಣವಾಗಿ ಭಾಷಾಂತರಿಸಲು ಕಷ್ಟವಾಗುವ ಪರಿಕಲ್ಪನೆಗಳಿರುತ್ತವೆ. ಇನ್ನೊಂದು ಭಾಷೆ ಅಸಮರ್ಥ ಎಂಬುದು ಇದಕ್ಕೆ ಕಾರಣವಲ್ಲ. ಪ್ರತಿ ಭಾಷೆಯಲ್ಲಿ ಅಂಥ ವಿಶಿಷ್ಟವಾದ ವ್ಯತ್ಯಾಸಗಳು ಇರುತ್ತವೆ ಅವುಗಳನ್ನು ನಾವು ಕಳೆದುಕೊಳ್ಳಬಾರದು ಎಂದರು. ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಸಾಹಿತ್ಯದ ಪರಿಚಯ ಮಾಡಿಸುವ ಕೆಲಸ ಮಾಡಬೇಕು. ಮಕ್ಕಳನ್ನು ಇಂತಹ ಸ್ಥಳಗಳಿಗೆ ಕರೆದುಕೊಂಡು ಬಂದು ಸಾಹಿತ್ಯ ಪರಿಚಯಿಸಬೇಕು. ಆಗ ಮುಂದಿನ ಪೀಳಿಗೆಗೆ ಭಾಷೆ, మికి ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವು ಮೂಡುತ್ತದೆ ಎಂದು ಸಲಹೆ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಬಾರಿ ಸಾಹಿತ್ಯ ಅಕಾಡೆಮಿ, ಕೊಡವ ಸಾಹಿತ್ಯ ಆಕಾಡೆಮಿ. ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಕಾರ್ಯ ಕ್ರಮದಲ್ಲಿಭಾಗಿಯಾ...