Posts

ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಒತ್ತಾಯ

Image
ಬೆಂಗಳೂರು, ಜೂನ್ 2, 2026  ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಕೊಡದೇ ಹೋದರೆ ಕಾಂಗ್ರೆಸ್ ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ರಾಜೀನಾಮೆ ಎಚ್ಚರಿಕೆ ಶಾಸಕ ವಿಜಯಾನಂದ್ ಎಸ್.ಕಾಶಪ್ಪನವರ್ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಿ-ಇಳ ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಒತ್ತಾಯ ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಇಲಕಲ್, ಹುನಗುಂದ್ ಮತಕ್ಷೇತ್ರ, ಬಾಗಲಕೋಟೆ ಜಿಲ್ಲೆ ವತಿಯಿಂದ ಹುನಗುಂದ್ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯಾನಂದ್ ಎಸ್.ಕಾಶಪ್ಪನವರ್ ನೂತನ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು. ಇಲಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ತಟಗಾರ , ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ವಿಶ್ವನಾಥಪಾಟೀಲ್, ಮಲ್ಲಣ್ಣ ಎಲೆಗಾರ , ಅಮರೇಶ್ ನಾಗೂರ್, , ಮುತ್ತಣ್ಣ ಕಲಗುಡಿ, ಮಹಾಂತೇಶ್ ನರಗುಂದ, ರವಿ ಹುಚ್ಚನೂರು, ಶಾಂತಣ್ಣರಾಘವೇಂದ್ರ ಧಾರವಾಡ, ಮೌನೇಶ್ ಬಂಡಿವಡ್ಡರ್, ನೀಲಪ್ಪ ಅಸೋಲಿ, ವಿಠ್ಠಲ್ ಜಕ್ಕ, ಸಿದ್ದ ಭಧ್ರಶೆಟ್ಟಿ, ಮನು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.  *ಅಬ್ದುಲ್ ರಜಾಕ್ ತಟಗಾರರವರು* ಮಾತನಾಡಿ ವಿಜಯಾನಂದ್ ಎಸ್.ಕಾಶಪ್ಪನವರ್ ಅವರ ಕುಟುಂಬ ಕಳೆದ 50ವರ್ಷಗಳಿಂದ ಮನೆತನ ನಿಷ್ಠೆಯಿಂದ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತ ಕುಟ...

IAS ಅಧಿಕಾರಿ ಪಿ.ಎಸ್. ಕಾಂತರಾಜು ಅವರಿಗೆ ಬೀಳ್ಕೊಡುಗೆ ಸಮಾರಂಭ

Image
ಬೆಂಗಳೂರು, ಜೂನ್ 1, 2026 ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಐಎಎಸ್‌ ಅಧಿಕಾರಿ ಪಿ.ಎಸ್. ಕಾಂತರಾಜು ಅವರಿಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ಸಂಘದ ನಿಬಂಧಕರಾಗಿ ರಾಜ್ಯ ಸರ್ಕಾರ ಆದೇಶಿಸಿದ್ದ ಹಿನ್ನಲೆಯಲ್ಲಿ ಸೋಮವಾರ ಲಿಡ್ಕರ್ ಸಂಸ್ಥೆಯ ಸಭಾಂಗಣದಲ್ಲಿ ಅವರ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಕೆಎಂಎಫ್ ನಿಂದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ (ಕ್ರೈಸ್) ಗೆ ವರ್ಗಾವಣೆ ಆಗಿರುವ ಶಿವಸ್ವಾಮಿ ಅವರು ಉಪಸ್ಥಿತರಿದ್ದರು.  ಈ ವೇಳೆಯಲ್ಲಿ ಪಿ.ಎಸ್. ಕಾಂತರಾಜು ಅವರ ಆಪ್ತರು, ಸಹೋದ್ಯೋಗಿಗಳು ಕಾಂತರಾಜು ಅವರಿಗೆ ಸನ್ಮಾನ ಮಾಡಿದರು.

ವಿಜಯಾನಂದ್ ಕಾಶಪ್ಪನವರ್ ಸಚಿವ ಸ್ಥಾನ: ವೀರಶೈವ ಲಿಂಗಾಯಿತ- ಪಂಚಮಸಾಲಿ ಸಮಾಜ ಒತ್ತಾಯ

Image
ಬೆಂಗಳೂರು, ಜೂನ್ 10, 2026 ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘ ಮತ್ತು ವಿಜಯಾನಂದ್ ಎಸ್.ಕಾಶಪ್ಪನವರ್ ಅಭಿಮಾನಿ ಬಳಗದ ವತಿಯಿಂದ ಕಾಂಗ್ರೆಸ್ ಪಕ್ಷದ ನೂತನ ಸಚಿವ ಸಂಪುಟದಲ್ಲಿ ಪಂಚಮಸಾಲಿ ಲಿಂಗಾಯಿತ ಸಮಾಜದ ನೇರ ನುಡಿಯ, ಯುವ ನಾಯಕ ಶಾಸಕರಾದ ವಿಜಯಾನಂದ್ ಎಸ್.ಕಾಶಪ್ಪನವರ್ ಅವರಿಗೆ ಸಚಿವ ಸಂಪುಟದಲ್ಲಿ ನೇಮಕ ಮಾಡುವಂತೆ ಅಗ್ರಹಿಸಿ ಮಾಧ್ಯಮಗೋಷ್ಠಿ. ಕರ್ನಾಟಕ ರಾಜ್ಯ ವೀರಶೈವ ಲಿಂಗಾಯಿತ-ಪಂಚಮಸಾಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ನಿಕಟಪೂರ್ವ ಅಧ್ಯಕ್ಷರಾದ ಬಸವರಾಜ್ ಡಿಂಡೂರ, ರಾಜ್ಯ ಉಪಾಧ್ಯಕ್ಷರಾದ ಶಂಕರ ಬಿಸರಹಳ್ಳಿ, ಪ್ರಧಾನ ಕಾರ್ಯದರ್ಶಿ ಉಮಾಪತಿ, ವೀರಶೈವ ಸಮಾಜದ ಮುಖಂಡರುಗಳಾದ ಶಿವಕುಮಾರ್ ಬೆಳಗಾಂ, ವೀರೇಶ್, ಎಂ.ಸಿದ್ದೇಶ್ ಬೇಗೂರು ಹೆಚ್.ಎನ್.ತಿಪ್ಪೇಸ್ವಾಮಿ, ಧರ್ಮದರ್ಶಿ ಪಿ.ಡಿ.ಶಿರೂರ್ ರವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು *ಬಸವರಾಜ್ ಡಿಂಡೂರರವರು* ಮಾತನಾಡಿ ಲಿಂಗಾಯಿತ ಪಂಚಮಸಾಲಿ ಸಮುದಾಯ ರಾಜ್ಯದಲ್ಲಿ 1ಕೋಟಿ ಜನಸಂಖ್ಯೆ ಇದೆ. ನಮ್ಮ ಸಮಾಜ ಕೃಷಿ ಪ್ರಧಾನವಾಗಿದೆ. ಕಿತ್ತೂರು ಚೆನ್ನಮ್ಮ ಆದರ್ಶ ಪಾಲಿಸುತ್ತಾ ಬಂದಿದ್ದೇವೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಚಾಣಕ್ಯ ರಾಜಕಾರಣಿ. ಲಿಂಗಾಯಿತ ಪಂಚಾಮಸಾಲಿ ಸಮುದಾಯಕ್ಕೆ ಯಾವ ಸರ್ಕಾರವು ನಮ್ಮ ಸಮುದಾಯಕ್ಕೆ ಆದ್ಯತೆ ನೀಡಿಲ್ಲ ಎಂಬ ಬೇಸರವಿದೆ. ನಮ್ಮ ಅಗ್ರಹ 1 ಉಪಮುಖ್ಯಮಂತ್ರಿ ಎರಡು ಸಚಿವ ಸ್ಥಾನ ನೀಡಬೇಕು ಎ...

ಬೆಂಗಳೂರಿನ ಟೌನ್ ಹಾಲ್ ನಲ್ಲಿ ವಿಶ್ವಕರ್ಮ ಮಹಾಸಭಾ ವತಿಯಿಂದ 'ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ ಆಯೋಜನೆ

Image
ಬೆಂಗಳೂರು, ಮೇ 31, 2026  ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ದೊಡ್ಡದು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದ್ದಾರೆ. ಭಾನುವಾರ ಸಂಜೆ ಟೌನ್‌ಹಾಲ್‌ನಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಗಾಲದಲ್ಲಿ ಯಾರೂ ದೇವರನ್ನು ನೇರವಾಗಿ ನೋಡಿಲ್ಲ. ಆದ್ದರಿಂದ ವಿಗ್ರಹಗಳು ಪರಮಾತ್ಮನನ್ನು ನೋಡುವ ಅತ್ಯುತ್ತಮ ಮತ್ತು ಏಕೈಕ ಪರಿಯಾಗಿದೆ. ಅಂತಹ ವಿಗ್ರಹಗಳನ್ನು, ದೇವಾಲಯಗಳನ್ನು ನಿರ್ಮಾಣ ಮಾಡುವವರು ವಿಶ್ವಕರ್ಮ ಸಮುದಾಯದವರಾಗಿದ್ದಾರೆ. ಇದರಿಂದ ವಿಶ್ವಕರ್ಮರ ಸೇವೆ ಸಮಾಜಕ್ಕೆ ಕೊಡುಗೆಯಾಗಿದೆ ಎಂದು ಹೇಳಿದರು. ಸಮಾಜದ ಸಂಘಟನೆಗಾಗಿ ಕೆ.ಪಿ. ನಂಜುಂಡಿ ಹಲವು ವರ್ಷಗಳಿಂದ ಬಹಳ ಶ್ರಮಪಟ್ಟಿದ್ದಾರೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ದರ್ಜೆ ದೇವಾಲಯಗಳ ವ್ಯವಸ್ಥಾಪನ ಸಮಿತಿಯಲ್ಲಿ ವಿಶ್ವಕರ್ಮರೊಬ್ಬರಿಗೆ ಸ್ಥಾನ ನೀಡುವ ಅವರ ಬೇಡಿಕೆಯನ್ನು ಈಗಾಗಲೇ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಅದನ್ನು ಪ್ರತ್ಯೇಕವಾಗಿ ಮತ್ತೊಮ್ಮೆ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮದಲ್ಲಿ ಭರವಸೆ ನೀಡಿದರು. ಶಾಸಕ ಎಸ್.ಟಿ ಸೋಮಶೇಖರ್ ಮಾತನಾಡಿ, ವಿಶ್ವಕರ್ಮರು ರಾಜ್ಯದ ಪ್ರಮುಖ ಸಮಾಜವಾಗಿದ್ದಾ...

ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನಲ್ಲಿ 16ನೇ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

Image
ಬೆಂಗಳೂರು, ಮೇ 30, 2026 ಬೆಂಗಳೂರಿನ ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನಲ್ಲಿ 16ನೇ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಿ.ಎನ್. ದೇಸಾಯಿ, ಗ್ರಿಫಿತ್ ಡೇವಿಡ್ ಉಪಸ್ಥಿತರಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಸೌಂದರ್ಯ ಪಿ. ಮಂಜಪ್ಪ ಅವರು ವಹಿಸಿದ್ದರು. ಸೌಂದರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನ ಸಿ.ಇ.ಒ ಆದ ಕೀರ್ತನ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.  ಸೌಂದರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಮೇ 31 ರಂದು ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ: ಎಲ್.ಶ್ರೀನಿವಾಸ್

Image
ಬೆಂಗಳೂರು: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ ಸಭಾಂಗಣದಲ್ಲಿ ಮೇ 31ರಂದು ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಮತ್ತು ಆಡಳಿತ ಮಂಡಳಿ ಸಭೆ ಏರ್ಪಡಿಸಲಾಗಿದೆ. ಇದು ಹನ್ನೊಂದು ವರ್ಷದ ನಂತರ ನಡೆಯುತ್ತಿರುವ ಪ್ರಮುಖ ಸಭೆಯಾಗಿದೆ ಎಂದು ಅಧ್ಯಕ್ಷ ಎಲ್.ಶ್ರೀನಿವಾಸ್ ಮಾಹಿತಿ ನೀಡಿದರು. ಬುಧವಾರ ವಿವಿ ಪುರದ ರಾಜ್ಯ ಒಕ್ಕಲಿಗರ ಸಂಘದ ಮುಖ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭೆಯಲ್ಲಿ 2014-15 ರಿಂದ 2024-25ರವರೆಗಿನ ಸಂಘದ ಆಡಳಿತ ವರದಿ ಮಂಡಿಸಲಾಗುತ್ತದೆ. ಆಡಿಟರ್‌ರವರಿಂದ ಪರಿಶೋಧಿಸಲ್ಪಟ್ಟ ಲೆಕ್ಕ ಪತ್ರಗಳನ್ನು ಮಂಡಿಸಲಾಗುತ್ತದೆ. ಜಮಾ-ಖರ್ಚು, ಆದಾಯ-ವೆಚ್ಚ ಮತ್ತು ಆಸ್ತಿ ಜವಾಬ್ದಾರಿ ಕುರಿತಾಗಿ ಸಭೆಯಲ್ಲಿ ಪರಿಶೀಲಿಸಿ ಅನುಮೋದಿಸಲಾಗುತ್ತದೆ ಎಂದರು. ಸಭೆಯಲ್ಲಿ 2025-26ನೇ ಸಾಲಿನ ಪರಿಷ್ಕೃತ ಹಾಗೂ 2026-27ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿಯನ್ನು ಇದೇ ಸಂದರ್ಭದಲ್ಲಿ ಮಂಡಿಸಿ ಅನುಮೋದಿಸಲಾಗುತ್ತದೆ. 2025-26ನೇ ಸಾಲಿನ ಲೆಕ್ಕಪುಸ್ತಕಗಳ ಪರಿಶೀಲನೆಗೆ ಆಡಿಟರ್ ಅವರನ್ನು ನೇಮಕ ಮಾಡುವ ಕುರಿತಾಗಿ ಚರ್ಚಿಸಲಾಗುತ್ತದೆ. ಜೊತೆಗೆ ಸಂಘದ ಸದಸ್ಯರಿಂದ ಸಭೆಗೆ 7 ದಿನಗಳ ಮುಂಚಿತವಾಗಿ ಬಂದಿರುವ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಮೇ 31ರಂದು ಬೆಳಗ್ಗೆ ಸರ್ವ ಸದಸ್ಯರ ಸಭೆ ನಡೆದ ನಂತರ ಮಧ್ಯಾಹ್ನ ಆಡಳಿತ ಮಂಡಳಿಯ ಸಭೆ ಜರುಗಲಿದೆ. ಸರ್ವ ಸದಸ್ಯರ ಸಭೆಯಲ್ಲಿ ಸಂಘದ...

ಸಂಪೂರ್ಣ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ದಸಂಸ ರಾಜ್ಯಾಧ್ಯಕ್ಷರಾದ ಡಾ|| ಎನ್. ಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ

Image
ಬೆಂಗಳೂರು, ಮೇ 27, 2026  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಂಪೂರ್ಣ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ದಸಂಸ ರಾಜ್ಯಾಧ್ಯಕ್ಷರಾದ ಡಾ|| ಎನ್. ಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಸಂಪೂರ್ಣ ಒಳ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ದಸಂಸ ರಾಜ್ಯಾಧ್ಯಕ್ಷ, ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ಡಾ||ಎನ್. ಮೂರ್ತಿ ಅವರ ನೇತೃತ್ವದಲ್ಲಿಂದು ಫ್ರೀಡಂ ಪಾರ್ಕ್ನಲ್ಲಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೀಸಲಾತಿಯಿಂದ ವಂಚಿತರಾದ ಮಾದಿಗ ಸಮುದಾಯಗಳಿಗೆ ಸಮಾನ ಪ್ರತಿಭಟನೆಯಲ್ಲಿ ಮಾತನಾಡಿದ ಡಾ. ಎನ್. ಮೂರ್ತಿ ಅವರು, ಕಳೆದ 75 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಒದಗಿಸಲಾದ ಅವಕಾಶಗಳನ್ನು ಒದಗಿಸಿಕೊಡುವ ಏಕೈಕ ಉದ್ದೇಶದಿಂದಒಳಮೀಸಲಾತಿ ವ್ಯವಸ್ಥೆತಂದಿದೆ.ಸುಪ್ರೀಂಕೋರ್ಟ್‌ 7 ಜನ ನ್ಯಾಯಾಧೀಶರ ತೀರ್ಪು ಬಂದು 2 ವರ್ಷವಾಗಿದೆ. ಆಂಧ್ರ, ತೆಲಂಗಾಣ, ತಮಿಳುನಾಡು, ಪಂಜಾಬ್, ಹರಿಯಾಣ ಇತರೆ ರಾಜ್ಯಗಳು ತತ್‌ ಕ್ಷಣ ಒಳಮೀಸಲಾತಿ ಜಾರಿಗೊಳಿಸಿವೆ. ಆದರೆ ರಾಜ್ಯದಲ್ಲಿ ನ್ಯಾಯಾಧೀಶರಾದಸದಾಶಿವ ಆಯೋಗ, ನಾಗಮೋಹನದಾಸ್ ಆಯೋಗ ಹಾಗೂ ಜೆ.ಸಿ. ಮಾಧುಸ್ವಾಮಿ ವರದಿಯನ್ನು ಸರ್ಕಾರ ತಳ್ಳಿ ಹಾಕಿತು. ಒಳಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದು ಬೀಸುವ ದೊಣ್ಣೆ ಏಟಿಗೆ ತಪ್ಪಿಸಿಕೊಳ್ಳಲು ರಾಜಕೀಯ ನಡೆಯ ಒಳಮೀಸಲಾತಿ ಜಾರಿಗೆ ತಂದಿರುವುದಾಗಿ ಬೀಗುತ್ತಿದೆ ಎಂದು ಡಾ|| ಎನ್. ಮೂರ್ತಿ ಅವರು ಕಿಡಿಕಾರಿದರು. ಸರ್ಕಾರ 2026ರ ಮೇ 8...