ಬಿಬಿಎಂಪಿಯಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತಿರುವ ಪ್ರಕ್ರಿಯೆಯನ್ನು ಲೋಕಾಯುಕ್ತದಲ್ಲಿರುವ ಪ್ರಕರಣವು ಮುಕ್ತಾಯವಾಗುವರೆಗೂ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಅವರು ಒತ್ತಾಯಿಸಿದರು.


ಬೆಂಗಳೂರು, ಏಪ್ರಿಲ್ 28, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಭಾರತ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಮತ್ತು ಇತರರ ಒಕ್ಕೂಟ' ದ ಅಧ್ಯಕ್ಷರಾದ ಕೆ.ಜಿ. ಶ್ರೀನಿವಾಸ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬಿಬಿಎಂಪಿಯಲ್ಲಿ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತಿರುವ ಪ್ರಕ್ರಿಯೆಯನ್ನು ಲೋಕಾಯುಕ್ತದಲ್ಲಿರುವ ಪ್ರಕರಣವು ಮುಕ್ತಾಯವಾಗುವರೆಗೂ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಅವರು ಒತ್ತಾಯಿಸಿದರು. 

ಉಲ್ಲೇಖ: 1

) ಎ.ಸಿ.ಬಿ/ಬೆಂ.ನರಾ/ಮೊ.ಸಂಖ್ಯೆ. 40/2017

2) 22204/25(&)/4/441/2024-25 20: 29-08-2024

3) ಅನಧಿಕೃತ ಗೈರು ಹಾಜರಾಗಿರುವ ಮತ್ತು 1 ವರ್ಷದ ಒಳಗಿನ ಸೇವೆ ಸಲ್ಲಿಸುತ್ತಿರುವ ನೇರ ಪಾವತಿ ಪೌರ ಕಾರ್ಮಿಕರನ್ನು ಸಹ ಖಾಯಂ ಪ್ರಕ್ರಿಯೆಯಲ್ಲಿ ಪರಿಗಣಿಸುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಆದ್ಯ ಗಮನಕ್ಕೆ ತರಬಯಸುವುದೇನೆಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2005 ರಿಂದ 2017ರ ವರೆಗೂ ಗುತ್ತಿಗೆದಾರರ ಅಡಿಯಲ್ಲಿ ಕಾರ್ಯನಿರ್ವಹಿಸಿದ ಪೌರ ಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ಹಣದ ಮೊತ್ತ ರೂ.384 ಕೋಟಿ ಮತ್ತು 6.600 ಜನ ನಕಲಿ ಪೌರ ಕಾರ್ಮಿಕರ ವೇತನ 55ಂ ಕೋಟಗಳ ವಂಚನೆಯ ಕುರಿತು ಭ್ರಷ್ಟಾಚಾರ ನಿರ್ಮೂಲನ ಕಾಯಿದೆಯಡಿಯಲ್ಲಿ ಮೇಲ್ಕಂಡ ಉಲ್ಲೇಖ (1) ರಂತೆ ಪ್ರಕರಣವು ದಾಖಲಾಗಿ, ಪ್ರಸ್ತುತ ತನಿಖೆ
ಮುಂದುವರೆದು, ತಾವುಗಳು ಈಗಾಗಲೇ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯ ಸಂಭದ ಸದರಿಯವರುಗಳ ಇ.ಎಸ್.ಐ. ಮತ್ತು ಪಿ.ಎಫ್. ಹಣ ಪರಿಶೀಲಿಸಲು ತಂಡವನ್ನು ರಚಿಸಿ ಪಟ್ಟಿಯನ್ನು ಸಿದ್ದಪಡಿಸಿರುವುದಾಗಿ ತಿಳಿದುಬಂದಿರು ತ್ತದೆ. ಇವರುಗಳಲ್ಲಿ ಅನೇಕರು ಹೊರ ರಾಜ್ಯದವರಾಗಿರುವುದು ತಿಳಿದು ಬಂದಿರುತ್ತದೆ. ಆದರೆ ಈ ಮೇಲ್ಕಂಡ ಪ್ರಕರಣದಲ್ಲಿ 6600 ಜನ ನಕಲಿ ಪೌರ ಕಾರ್ಮಿಕರುಗಳ ಹೆಸರುಗಳನ್ನು ಇನ್ನು ತನಿಖೆಯಲ್ಲಿ ಅಧಿಕೃತವಾಗಿ ಪ್ರಕಟಿಸಿರುವುದಿಲ್ಲ. ಆದಕಾರಣ ತಾವು ಒಂದು ವೇಳೆ ಸದರಿರವರುಗಳ ಹೆಸರುಗಳನ್ನು ಸೇರ್ಪಡೆಗೊಳಿಸಿದ್ದಲ್ಲಿ ನ್ಯಾಯಯುತವಾಗಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರುಗಳು ವಂಚಿತರಾಗುತ್ತಾರೆ. ಮತ್ತು 2005 ರಿಂದ 2017ರವರೆಗೆ ಕಾರ್ಯ ನಿರ್ವಹಿಸಿರುವ ಪೌರಕಾರ್ಮಿಕರುಗಳ ಗುತ್ತಿಗೆದಾರರ ಮತ್ತು ಕಿರಿಯ ಪರಿವೀಕ್ಷಕರ ಅಕ್ರಮದಿಂದ ಹೆಚ್ಚು ಕಿರುಕುಳಕ್ಕೆ ಒಳಗಾಗಿ ಕೆಲಸಗಳನ್ನು ಬಿಟ್ಟಿರುತ್ತಾರೆ. ಮತ್ತು ಅನಾರೋಗ್ಯಕ್ಕೂ ಮತ್ತು ಕೆಲವರು ಗಂಭೀರ ಕಾಯಿಲೆಗೆ ತುತ್ತಾಗಿ ನಿಸ್ಸಾಯಕರಾಗಿ ಕೆಲಸವನ್ನು ತ್ಯಜಿಸುತ್ತಾರೆ ಮತ್ತು ಅನಧಿಕೃತ ಗೈರು ಹಾಜರಿಗಳಾಗಿರುತ್ತಾರೆ. ಆ ಕಾರಣ ನಿಸ್ಸಾಯಕರಾಗಿ ಕೆಲಸಗಳನ್ನು ಬಿಟ್ಟಿರುವ ಮತ್ತು ಅನಧಿಕೃತ ಗೈರು ಹಾಜರಾಗಿರುವ ಮತ್ತು 1 ವರ್ಷದ ಕೆಳಗಿನ ನೇರ ಪಾವತಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಕಾರ್ಮಿಕರು ಹೆಸರುಗಳನ್ನು ಪ್ರಚುರಪಡಿಸುವವರೆಗೂ ಪೌರ ಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ತಡೆಹಿಡಿಯಬೇಕಾಗಿ ಮತ್ತು ಈ ಸಂಬಂಧ ತಾಂತ್ರಿಕ ತಂಡ ಮತ್ತು ಕಾನೂನು ಕೋಶದ ಮುಖ್ಯಸ್ಥರೊಂದಿಗೆ ಜಂಟಿ ಸಭೆ ಕರೆದು ಪ್ರಸ್ತಾವನೆ ಬಗ್ಗೆ ತೀರ್ಮಾನಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇವೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium