ಬೆಂಗಳೂರು ನಗರದ ರಿಯ್ಯಾಲ್ಟೊ ಹೋಟೆಲ್ ನಲ್ಲಿ ಏಪ್ರಿಲ್ 20ರಂದು 'ಅಂತರ್ ರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಸಮಾವೇಶ' ನಡೆಯಲಿದೆ.


ಬೆಂಗಳೂರು, ಏಪ್ರಿಲ್ 17, 2025

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರು ನಗರದ ರಿಯ್ಯಾಲ್ಟೊ ಹೋಟೆಲ್ ನಲ್ಲಿ ಏಪ್ರಿಲ್ 20ರಂದು 'ಅಂತರ್ ರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಸಮಾವೇಶ' ನಡೆಯಲಿದೆ. 

ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ (ರಿ) ವತಿಯಿಂದ ದಿನಾಂಕ 20-04-2025 ರ ಭಾನುವಾರದಂದು ಬೆಂಗಳೂರಿನ ಆನಂದರಾವ್ ಸರ್ಕಲ್ ಗಾಂಧಿನಗರ ಇಲ್ಲಿನ ರಿಯ್ಯಾಲೋ ಹೋಟೆಲ್ ನಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಉಪ್ಪಾರ ಸಮಾಜದ ವಧು-ವರರ ಮತ್ತು ಪಾಲಕರ ಸಮಾಗಮ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿವಿಧ ರಾಷ್ಟ್ರಗಳಿಂದ ಮತ್ತು ವಿವಿಧ ರಾಜ್ಯಗಳಿಂದ ಉಪ್ಪಾರ ಸಮಾಜದ ಹಲವಾರು ವಧು ಮತ್ತು ವರರು ಆಗಮಿಸುತ್ತಿದ್ದಾರೆ. ಉಪ್ಪಾರ ಸಮಾಜದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಪೋಲಿಸ್ ಇಲಾಖೆ, ಸರ್ಕಾರಿ ಹಾಗೂ ಆರೇ ಸರ್ಕಾರಿ ವಿವಿಧ ಇಲಾಖೆಗಳ ನೌಕರ ವರ್ಗ, ಪ್ರಗತಿಪರ ರೈತಾಪಿ ವರ್ಗ, ನ್ಯಾಯವಾದಿಗಳು, ಖಾಸಗಿ ನೌಕರರು ಮತ್ತು ವ್ಯಾಪಾರಿ ವರ್ಗಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉಪ್ಪಾರ ವಧು-ವರರು ಈ ಸಮಾಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಉಪ್ಪಾರ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀರಾಲ ರಾಮುಲು ಸಗರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರು ನಗರವು ವ್ಯವಸ್ಥಿತ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ದರ್ಜೆಯ ಹೋಟೆಲ್ ಮತ್ತು ವಸತಿ ನಿಲಯವನ್ನು ಹೊಂದಿರುತ್ತದೆ. ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಲು ರೈಲ್ವೇ ಮತ್ತು ವಿಮಾನ ಸೌಕರ್ಯಗಳನ್ನು ಹೊಂದಿರುತ್ತದೆ. ಆದ ಕಾರಣ ಉಪ್ಪಾರ ವಧು-ವರರು ಮತ್ತು ಪಾಲಕರು ಮುಂಚಿತವಾಗಿ ತಮ್ಮ ಪ್ರಯಾಣದ ಟಿಕೇಟ್ ಲಾಡ್ಜ್ ಗಳನ್ನು ಬುಕ್ ಮಾಡಿಕೊಳ್ಳಲು ತಿಳಿಸುತ್ತಿದ್ದೇವೆ. ಸಮಾಜ ಭಾಂದವರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಮಾಧ್ಯಮ ಮಿತ್ರರಾದ ತಾವು ಈ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕ ವಲಯಕ್ಕೆ ತಿಳಿಯುವಂತೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium