'ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆ - 2015' ಅವೈಜ್ಞಾನಿಕವಾಗಿದೆ, ಹಾಗಾಗಿ ರಾಜ್ಯ ಸರ್ಕಾರವು ಸಮೀಕ್ಷೆಯನ್ನು ತಿರಸ್ಕರಿಸಬೇಕೆಂದು ಡಾ. ಗಾ.ನಂ. ಶ್ರೀಕಂಠಯ್ಯ ಅವರು ಒತ್ತಾಯಿಸಿದರು.
ಬೆಂಗಳೂರು, ಏಪ್ರಿಲ್ 16, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ'ಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡಾ. ಗಾ.ನಂ. ಶ್ರೀಕಂಠಯ್ಯ ಅವರು ಮಾತನಾಡಿದರು.
'ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆ - 2015' ಅವೈಜ್ಞಾನಿಕವಾಗಿದೆ, ಹಾಗಾಗಿ ರಾಜ್ಯ ಸರ್ಕಾರವು ಸಮೀಕ್ಷೆಯನ್ನು ತಿರಸ್ಕರಿಸಬೇಕೆಂದು ಡಾ. ಗಾ.ನಂ. ಶ್ರೀಕಂಠಯ್ಯ ಅವರು ಒತ್ತಾಯಿಸಿದರು.
ಇತ್ತೀಚೆಗೆ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಇತರೆ ಹಿಂದುಳಿದ ವರ್ಗಗಳ ಸಮಾಜಿಕ ಮತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024 ರ ಮುಚ್ಚಿದ ಲಕೋಟೆಯನ್ನು ತೆರೆದಿರುವುದಾಗಿ ವಾರ್ತಾ ಪತ್ರಿಕೆಗಳಲ್ಲಿ ವರದಿಯಾಗಿದೆ.
1) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಶೇಕಡ 15% ರಿಂದ 16% ರಷ್ಟು ಇರುವ ಒಕ್ಕಲಿಗ ಜನಸಂಖ್ಯೆಯನ್ನು ಅವೈಜ್ಞಾನಿಕ ಸಮೀಕ್ಷೆಯಿಂದಾಗಿ ಶೇಕಡ 10.3% ಎಂದು ನಮೂದಿಸಲಾಗಿದೆ. ಜಾತಿ ಜನಗಣತಿಯನ್ನು ಜನಗಳ ಆಧಾರ್‌ನೊಂದಿಗೆ geo-tag ಮಾಡಿದ್ದರೆ ಅಥವಾ ಪ್ರತಿಯೊಬ್ಬ ಜನರ ಸಹಿಯನ್ನು ಪಡೆದಿದ್ದರೆ ಈ ರೀತಿ ತಪ್ಪುಗಳು ಆಗುತ್ತಿರಲಿಲ್ಲ ಅವೈಜ್ಞಾನಿಕವಾಗಿ ಜಾತಿ ಜನಗಣತಿ ಮಾಡಿರುವುದರಿಂದ ಒಕ್ಕಲಿಗ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ.
ಉದಾಹರಣೆ (1).ಗಂಗಾಡ್ಕರ್ ಒಕ್ಕಲಿಗ ಜನಸಂಖ್ಯೆಯನ್ನು ಕೇವಲ 82.589 ಎಂದು ನಮೂದಿಸಲಾಗಿದೆ. (2), ಮರಸು ಒಕ್ಕಅಗರ ಜನಸಂಖ್ಯೆಯನ್ನು 3.859 ಎಂದು ನಮೂದಿಸಲಾಗಿದೆ.
2) ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಕೈಗೊಳ್ಳುವ ವೇಳೆಯಲ್ಲಿ ವ್ಯವಸ್ಥಿತವಾಗಿ ಅಧ್ಯಕ್ಷರು ಮತ್ತು ಸದಸ್ಯರಲ್ಲಿ ಅಂಗಾಯತ ಮತ್ತು ಒಕ್ಕಲಿಗ ಜನಾಂಗದವರನ್ನು ಉದ್ದೇಶಪೂರ್ವಕವಾಗಿ ಸೇರಿಸಿಲ್ಲವಾದ್ದರಿಂದ ಜೊತೆಗೆ ಒಕ್ಕಲಿಗ ಮತ್ತು ಅಂಗಾಯುತ ಜನಾಂಗಗಳ ಸಂಖ್ಯೆಯಲ್ಲಿ ಕಡಿಮೆಯಾಗಿರುವುದರಿಂದ ಸಮೀಕ್ಷೆಯಲ್ಲಿ ಜನಾಂಗದವರಿಗೆ ಅನುಮಾನ ಮೂಡಿಸಿದೆ.
3) ಸಂಶಯಾಸ್ಪದವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಿದ್ಧಪಡಿಸಿರುವುದನ್ನು ಕೈಬಿಟ್ಟು ಮತ್ತೊಮ್ಮೆ ವಿಶ್ವಾಸಯುತ ಸಮೀಕ್ಷೆ
ನಡೆಸಿ :
ಈಗ ಬಿಡುಗಡೆ ಮಾಡಿರುವ ಸಮೀಕ್ಷೆಯ ವರದಿಯು ಸಮಾಜದ ನಾಗರೀಕರ ವಿಶ್ವಾಸ ಕಳೆದುಕೊಂಡಿದೆ. ಕರ್ನಾಟಕ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು 2014ರಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಿತ್ತು. ಅದರಂತೆ ಶ್ರೀ ಹೆಚ್. ಕಾಂತರಾಜು, ಹಿರಿಯ ವಕೀಲರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಸದರಿ ಆಯೋಗವು 2014-15 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದ್ದು. ಸವೀಕ್ಷೆ ಕೈಗೊಳ್ಳುವಾಗ ರಾಜ್ಯದ ಎಲ್ಲಾ ನಾಗರೀಕರ ಮಾಹಿತಿಯನ್ನು ಸಂಗ್ರಹಿಸಿರುವುದಿಲ್ಲವೆಂದು ಸಮಾಜದ ಸಂಘದ ಕಛೇರಿಗೆ ಮಾಹಿತಿ ನೀಡಿರುತ್ತಾರೆ. ಈ ರೀತಿ ಮಾಡಿದ ಸಮೀಕ್ಷೆಯನ್ನು ಸದರಿ ಆಯೋಗವು ಸಕಾಲದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ವಿಫಲವಾಯಿತು. 2014-2015 ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 90 ರಷ್ಟು ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಸಿದ್ದು. ಪೂರ್ಣ ಪ್ರಮಾಣದ ಕಾರ್ಯ ಮಾಡಿರುವುದಿಲ್ಲ. ಹಿಂದಿನ 10 ವರ್ಷಗಳಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಗಣನೀಯ ಏರಿಕೆ ಕಂಡಿದೆ ಹಾಗೂ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಈ ಹಿನ್ನಲೆಯಲ್ಲಿ 10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ವಾಸ್ತವತೆಗೆ ದೂರವಿದ್ದು ಅಪ್ರಸ್ತುತವಾಗುತ್ತವೆ. ಮುಂದುವರೆದು ಸಮೀಕ್ಷೆಯಲ್ಲಿ ನಿಖರತೆ ಕಾಪಾಡಲು ಸಮೀಕ್ಷೆ ವೇಳೆ ಆಧಾರ್ ಅಂಕ್ ಮಾಡಿ, ಪ್ರತಿ ಮನೆಯ geo tagging ಮಾಡಬೇಕಿತ್ತು. ಸಮೀಕ್ಷೆಯಲ್ಲಿ ಈ ರೀತಿ ಆಗಿರುವುದಿಲ್ಲ.
4) ಸಮೀಕ್ಷೆಯಿಂದ ಕೈಬಿಟ್ಟಿರುವ ಶೇ.10ರಷ್ಟು ನಾಗರೀಕರ ಬಗ್ಗೆ ವಿಶ್ಲೇಷಣೆ ಮಾಡಿದ ಮಾಹಿತಿ ನೀಡಿಲ್ಲ:
ಸಮೀಕ್ಷೆಯಲ್ಲಿ ರಾಜ್ಯದ 1,35,35,772 ಮನೆಗಳನ್ನು ಸಂಪರ್ಕಿಸಿ, ಒಟ್ಟಾರೆ 5,98,14,942 ವ್ಯಕ್ತಿಗಳಿಂದ ದತ್ತಾಂಶವನ್ನು ಸಂಗ್ರಹಿಸಿರುವುದಾಗಿ ತಿಳಿಸಲಾಗಿದೆ. ಆದರೆ 2015ನೇ ಸಾಲಿಗೆ ರಾಜ್ಯದ ಒಟ್ಟಾರೆ ಅಂದಾಜು 6.5 ಕೋಟಿ ಯೋಜಿತ ಜನಸಂಖ್ಯೆಯ (ಕಿಡಿತರಿಚಿಛಿಣಜನ ತಿಲಠಿಣಟಚಿಣುಂಟಿ ) ಶೇ.90 ರಷ್ಟು ಜನಸಂಖ್ಯೆಯ ದತ್ತಾಂಶ ಸಂಗ್ರಹಿಸಿರುವುದಾಗಿ ತಿಳಿಸಲಾಗಿದೆ. ಹಾಗಾದಲ್ಲಿ ಶೇ. 10 ರಷ್ಟು ನಾಗರೀಕರ ಸಮೀಕ್ಷೆ ನಡೆಸದೇ ವರದಿ ತಯಾರಿಸಲಾಗಿದೆ. ಆದ್ದರಿಂದ. ಸಮೀಕ್ಷೆ ನಡೆಸದೇ ಕೈಬಿಟ್ಟಿರುವ ಶೇ.10 ಜನರು ಯಾರು? ಯಾವ ಜಾತಿಗೆ ಸೇರಿದವರು ಯಾವ ಪ್ರದೇಶಕ್ಕೆ ಸೇರಿದವರು? ಎಂಬ ಬಗ್ಗೆ ಮೊದಲು ವಿಶ್ಲೇಷಣೆ ಮಾಡಿ ಮನವರಿಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಯಾವುದಾದರೊಂದು ಜಾತಿಯ ಸಮೀಕ್ಷೆಯನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ತೀರ್ಮಾನ ಮಾಡಿದ ಅನುಮಾನ ಮೂಡುತ್ತದೆ.
5) ಪ್ರವರ್ಗ-3ಎ ಗೆ ಶೇ. 12ರಷ್ಟು ಮೀಸಲಾತಿ ಅವಶ್ಯಕ
ಶೂದ್ರರಾಗಿರುವ ಹಾಗೂ ಬೇಸಾಯವನ್ನೇ ಕುಲಕಸುಬಾಗಿ ಬದುಕುತ್ತಿರುವ ವಕ್ಕಲಿಗ ಹಾಗೂ ಇದರ ಉಪಜಾತಿಗಳು ಹಾಗೂ ಸಹೋದರ ಜಾತಿಗಳ ಒಟ್ಟು ಪ್ರವರ್ಗ-3ಎ ಗೆ ಸೇರಿದ ಜನಸಂಖ್ಯೆಯು 72.99.577 ಲಕ್ಷದಷ್ಟಿದ್ದು, ಒಟ್ಟು ಜನಸಂಖ್ಯೆಯ ಶೇ.12.20 ರಷ್ಟಿದೆ. ಹಾಗಾಗಿ ಸಮೀಕ್ಷೆಯಂತಿರುವ ಜನಸಂಖ್ಯೆಯ ಶೇಕಡಾವಾರು ಸರಿದೂಗುವಂತೆ ಪ್ರವರ್ಗ-3ಎ ಗೆ ಶೇ 12ರಷ್ಟು ಮೀಸಲಾತಿ ನೀಡುವ ಅವಶ್ಯಕತೆ ಇದೆ.
6) 2015ರ ಜಾತಿ ಜನಗಣತಿಯ ಪ್ರಕಾರ ಹಿಂದಿನ ಮೀಸಲಾತಿಗಳ ಅನ್ವಯ ಪ್ರವರ್ಗ-1 ಮತ್ತು 2ಎ ಗಳ ಒಟ್ಟು ಜನಸಂಖ್ಯೆ 162 ಲಕ್ಷಗಳು ಪ್ರವರ್ಗ-1 ಮತ್ತು 2ಎ ಗಳನ್ನು ಹೊಸ ಮೀಸಲಾತಿಯ ಪ್ರಕಾರ ಪ್ರವರ್ಗ-1 ಎ, 1ಬಿ ಮತ್ತು 2ಎ ಗಳಾಗಿ ವಿಂಗಡಿಸಲಾಗಿದ್ದು ಪ್ರವರ್ಗ 1 ಮತ್ತು 2ಎ ನಲ್ಲಿದ್ದ 15.75 ಲಕ್ಷ ಮುಸ್ಲಿಂ ಉಪ ಜಾತಿಗಳ ಜನಾಂಗವನ್ನು ಪ್ರವರ್ಗ 2 ಬಿ ಗೆ ವರ್ಗಾಯಿಸಲಾಗಿರುತ್ತದೆ.
ಅದೇ ರೀತಿ 28.4 ಲಕ್ಷ ಅಂಗಾಯತ ಉಪ ಪಂಗಡಗಳ ಜನಾಂಗವನ್ನು ಪ್ರವರ್ಗ-3 ಬಿ ಗೆ ವರ್ಗಾಯಿಸಲಾಗಿರುತ್ತದೆ ಆದ್ದರಿಂದ ಪ್ರವರ್ಗ-1ಎ, 1ಬಿ, 2ಎ ಒಟ್ಟು ಜನಸಂಖ್ಯೆ 118 ಲಕ್ಷಗಳಿಗೆ ಕಡಿಮೆಯಾಗುವ ಬದಲು 186 ಲಕ್ಷಗಳಿಗೆ ಹೆಚ್ಚಾಗಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಾತಿವಾರು ಮೌಲ್ಯಾಂಕಗಳ ವಿವರ ನೀಡಿಲ್ಲ:
* ವರದಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು 200 ಮೌಲ್ಯಾಂಕಗಳ
ಆಧಾರದಡಿ ಲೆಕ್ಕಾಚಾರ ಮಾಡಿ:
ಎ) ಪ್ರವರ್ಗ-1ಎ- 125 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಜಾತಿಗಳು
ಬಿ) ಪ್ರವರ್ಗ-1ಬಿ 90 ರಿಂದ 124ರ ವ್ಯಾಪ್ತಿಯಲ್ಲಿ ಅಂಕಗಳನ್ನು ಪಡೆದ ಜಾತಿಗಳು
ಸಿ) ಪ್ರವರ್ಗ-2ಎ 50 ರಿಂದ 89ರ ವ್ಯಾಪ್ತಿಯಲ್ಲಿ ಅಂಕಗಳನ್ನು ಪಡೆದ ಜಾತಿಗಳು
ಡಿ) ಪ್ರವರ್ಗ-2ಬಿ- ಮುಸ್ಲಿಂ ಹಾಗೂ ಇದರ ಉಪ ಜಾತಿಗಳು
ಇ) ಪ್ರವರ್ಗ-3ಎ 20 ರಿಂದ 49ರ ವ್ಯಾಪ್ತಿಯಲ್ಲಿ ಅಂಕಗಳನ್ನು ಪಡೆದ ಜಾತಿಗಳು, ಸರ್ಕಾರಿ ಆದೇಶದ ಪ್ರವರ್ಗ-3ಎ ರಲ್ಲಿ ಪಟ್ಟಿ ಮಾಡಲಾದ ಜಾತಿಗಳು
ಎಫ್) ಪ್ರವರ್ಗ 3ಬಿ- 20 ರಿಂದ 49ರ ವ್ಯಾಪ್ತಿಯಲ್ಲಿ ಅಂಕಗಳನ್ನು ಪಡೆದ ಜಾತಿಗಳು, ಸರ್ಕಾರಿ ಆದೇಶದ ಪ್ರವರ್ಗ-3ಬಿ ರಲ್ಲಿ ಪಟ್ಟಿ ಮಾಡಲಾದ ಜಾತಿಗಳು
ಎಂದು ವರ್ಗೀಕರಿಸಲಾಗಿದೆ. ಆದರೆ ವರದಿಯಲ್ಲಿ ಜಾತಿವಾರು ಪಡೆದಿರುವ ಅಂಕಗಳ ವಿವರ ನೀಡಿಲ್ಲ. ಇದರಿಂದ ಜಾತಿವಾರು ಹಿಂದುಳಿದಿರುವಿಕೆ ಅಂಕ ತಿಳಿಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಜಾತಿಯ ಉದ್ಯೋಗ/ಶೈಕ್ಷಣಿಕ ಸ್ಥಿತಿಗತಿಗಳ ಮಾಹಿತಿಯನ್ನು ವಿವರವಾಗಿ ಗಮನಿಸಿ ಆನಂತರ ಮಾಡುವ ತೀರ್ಮಾನ ಕ್ರಮಬದ್ದವಾಗಿರುತ್ತದೆ.
8) ಕುರುಬ ಜನಾಂಗಕ್ಕೆ, ಎಸ್ಸಿ/ಎಸ್ಟಿ ರೀತಿ ಶೇಕಡ 100ರಷ್ಟು ಮೀಸಲಾತಿ ನೀಡಿರುವುದು ಸ್ವಜನ ಪಕ್ಷಪಾತದಿಂದ ಕೂಡಿರುತ್ತದೆ.
9) ಮುಸ್ಲಿಂ ಧರ್ಮದಲ್ಲಿ ಸುಮಾರು 100 ಜಾತಿಗಳ ವರ್ಗೀಕರಣ ಮಾಡಿ ಜನಸಂಖ್ಯೆಯ ವಿವರವನ್ನು ನೀಡಲಾಗಿದೆ. ಆದರೆ ಇದರ ಮೌಲ್ಯಾಂಕದ ವಿವರ ನೀಡಿಲ್ಲ. ಈ ನೂರು ಜಾತಿಗಳಲ್ಲಿ ಹಲವಾರು ಜಾತಿಗಳು ಮೇಲ್ಬರ್ಗಕ್ಕೆ ಸೇರಿದ್ದು ಅವರನ್ನು ಮೀಸಲಾತಿಯಿಂದ ಹೊರಗಿಡಬೇಕಿದೆ. ಮುಸ್ಲಿಂ ಧರ್ಮದಲ್ಲಿಯೂ ಕೆಲವು ಜಾತಿಗಳು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಆ ಜಾತಿಗಳಿಗಳ ಪಟ್ಟಿ ಮಾಡಿ ಅವರಿಗಷ್ಟೇ ಮೀಸಲಾತಿ ನೀಡಬೇಕಾಗಿದೆ ಆದ್ದರಿಂದ ಕೇವಲ ಮುಸ್ಲಿಂ ಧರ್ಮದ ಹೆಸರಲ್ಲಿ ಮೀಸಲಾತಿ ನೀಡುವುದು ಅಸಾಂವಿಧಾನಿಕ ಹಾಗೂ ಅವೈಜ್ಞಾನಿಕವಾಗಿದೆ.
10) ಪ್ರವರ್ಗ-1 ಮತ್ತು ಪ್ರವರ್ಗ-2ಎ ಗುಂಪುಗಳಿಗೆ ಸುಮಾರು 30 ವರ್ಷಗಳಿಂದ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಶೇಕಡ 32% ಮೀಸಲಾತಿಯಲ್ಲಿ ಶೇಕಡ 19 ಮೀಸಲಾತಿ ನೀಡಲಾಗಿತ್ತು ಈ ಜನಾಂಗಗಳು 30 ವರ್ಷಗಳಿಂದ ಅತಿ ಹೆಚ್ಚು ಮೀಸಲಾತಿ ಉಪಯೋಗವನ್ನು ಪಡೆದಿರುತ್ತವೆ. ಈ ಎರಡು ಪ್ರವರ್ಗಗಗಳನ್ನು ಹೊಸ ಮೀಸಲಾತಿಯಲ್ಲಿ ಪ್ರವರ್ಗ-1ಎ ಪ್ರವರ್ಗ-1ಬಿ ಪ್ರವರ್ಗ-2ಎ ಎಂದು ಮೂರು ಗುಂಪುಗಳಾಗಿ ವಿಂಗಡಿಸಿ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಶೇಕಡ 51% ಮೀಸಲಾತಿಯಲ್ಲಿ ಶೇಕಡ 28% ರಷ್ಟು ಮೀಸಲಾತಿ ನೀಡಲಾಗಿದೆ.
ಆದರೆ 30 ವರ್ಷಗಳಿಂದ ಒಕ್ಕಲಿಗ ಜನಾಂಗಕ್ಕೆ ಬೇರೆ ಪ್ರವರ್ಗಗಳಿಗೆ ಹೋಲಿಸಿದಾಗ ಅತಿ ಕಡಿಮೆ ಶೇಕಡ 4% ಮೀಸಲಾತಿ ನೀಡಲಾಗಿತ್ತು ಈಗಲೂ ಕೂಡ ಹೊಸ ಮೀಸಲಾತಿಯಲ್ಲಿ ಬೇರೆ ಪ್ರವರ್ಗಗಳಿಗೆ ಹೋಲಿಸಿದಾಗ ಅತಿ ಕಡಿಮೆ ಮೀಸಲಾತಿ ಶೇಕಡ 7% ನೀಡಲಾಗಿದೆ.
11) ಶೇಕಡ 50 ಕಿಂತ ಹೆಚ್ಚು ಮೀಸಲಾತಿ ನೀಡಿರುವುದು ರಾಜಕೀಯದುರುದ್ದೇಶದಿಂದಕೂಡಿರುತ್ತದೆ.
12) 2015 ರಲ್ಲಿಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸಂಪೂರ್ಣವಾಗಿ ಅವೈಜ್ಞಾನಿಕವಾಗಿರುವುದರಿಂದ ಹಿಂದುಳಿದ ಆಯೋಗವು ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ವೈಜ್ಞಾನಿಕವಾಗಿ ಜಾತಿ ಜನಗಣತಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.
ಸಾಧ್ಯವಾಗದಿದ್ದಲ್ಲ ಸುಮಾರು 30 ವರ್ಷಗಳಿಂದ ಇತರ ಜನಾಂಗಳಿಗೆ ಅತಿ ಹೆಚ್ಚು ಮೀಸಲಾತಿ ನೀಡಿ ಒಕ್ಕಲಿಗ ಜನಾಂಗಕ್ಕೆ ಅತಿ ಕಡಿಮೆ ಮೀಸಲಾತಿ ನೀಡುತ್ತಾ ಬಂದಿರುವುದರಿಂದ ಮತ್ತು ಹೈದ್ರಾಬಾದ್ ಕರ್ನಾಟಕ ಮೀಸಲಾತಿಯಿಂದ ಒಕ್ಕಲಿಗ ಜನಾಂಗಕ್ಕೆ ತೊಂದರೆಯಾಗಿರುತ್ತಿರುವುದರಿಂದ ಈಗ ಹೊಸ ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸಿರುವುದರಿಂದ, 16% ಒಕ್ಕಲಿಗ ಜನಾಂಗಕ್ಕೆ ಶೇಕಡ 12% ಮೀಸಲಾತಿ ಕಲ್ಪಿಸಲು ಒತ್ತಾಯಿಸುತ್ತೇವೆ.
Comments
Post a Comment