ರಾಜ್ಯ ಸರ್ಕಾರವು 'ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ - 2015' ಜಾರಿಗೊಳಿಸಬೇಕು ಎಂದು 'ಕರ್ನಾಟಕ ಪ್ರದೇಶ ಕುರುಬರ ಸಂಘ'ದ ಖಜಾಂಚಿಯಾದ ಕೃಷ್ಣಮೂರ್ತಿ ಅವರು ಒತ್ತಾಯಿಸಿದರು.

ಬೆಂಗಳೂರು, ಏಪ್ರಿಲ್ 18, 2025

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ಪ್ರದೇಶ ಕುರುಬರ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿಯಾದ ಕೃಷ್ಣಮೂರ್ತಿ ಅವರು ಮಾತನಾಡಿದರು. 

  ರಾಜ್ಯ ಸರ್ಕಾರವು 'ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ - 2015' ಜಾರಿಗೊಳಿಸಬೇಕು ಎಂದು ಕೃಷ್ಣಮೂರ್ತಿ ಅವರು ಒತ್ತಾಯಿಸಿದರು. 

'ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಯು ವೈಜ್ಞಾನಿಕವಾಗಿದೆ ಎಂದು ಕೃಷ್ಣಮೂರ್ತಿ ಅವರು ತಿಳಿಸಿದರು. 

 ಬೆಂಗಳೂರು ವತಿಯಿಂದ ಕರ್ನಾಟಕ ಸರ್ಕಾರಕ್ಕೆ ಮಾನ್ಯ ಮುಖ್ಯ ಮಂತ್ರಿಗಳಲ್ಲಿ, ಉಪ ಮುಖ್ಯಮಂತ್ರಿಗಳಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುವುದೇನೆಂದರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಹಿರಿಯ ನ್ಯಾಯವಾದಿ ಹೆಚ್ ಕಾಂತರಾಜು ಮತ್ತು ಡಾ|| ಜಯಪ್ರಕಾಶ್ ಹೆಗಡೆರವರ ನೇತೃತ್ವದಲ್ಲಿ ಸಿದ್ಧಪಡಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಈಗಾಗಲೇ ಸರ್ಕಾರ ಸ್ವೀಕಾರ ಮಾಡಿ ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಚರ್ಚೆ ಮಾಡುತ್ತಿರುವುದಕ್ಕೆ ಸಂಘ ಅಭಿನಂದಿಸುತ್ತದೆ.

ವರದಿ ದತ್ತಾಂಶ ಸಂಗ್ರಹಣೆ ಮಾಡುವುದಕಿಂತ ಮುಂಚೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಅಧ್ಯಕ್ಷತರೆಯಲ್ಲಿ ಸಭೆಯನ್ನು ಮಾಡಿ ಜನರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಬಗ್ಗೆ ತಿಳುವಳಿಕೆ ಮೂಡಿಸಿ ಮತ್ತು ಗಣತಿದಾರರಿಗೆ ತರಬೇತಿಯನ್ನು ನೀಡಿ ಸುಮಾರು ಇಪ್ಪತ್ತು ದಿನಗಳ ಕಾಲ ಏಪ್ರಿಲ್ 11 2015 ರಿಂದ ಏಪ್ರಿಲ್ 31 2015ರವರೆಗೆ ಸಮೀಕ್ಷೆಯನ್ನು ಮಾಡಲಾಗಿದೆ. ಈ ಸಮೀಕ್ಷೆಯ ಸಂಧರ್ಭದಲ್ಲಿ ರಾಜ್ಯದ ಯಾವ ಸಮುದಾಯಗಳು ಸಮೀಕ್ಷೆಯಿಂದ ದೂರ ಉಳಿಯಬಾರದೆಂದು ಮತ್ತು ಯಾವುದೇ ಸಮಸ್ಯೆ ಆಗಬಾರದೆಂದು ಏಪ್ರಿಲ್ 14 2015ರಂದು 200 ಸಹಾಯವಾಣಿಗಳನ್ನು ತೆರೆದು ಅದಕ್ಕೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿ ಗಣತಿಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಆಯೋಗ ತಿಳಿಸಿದೆ.

163 ಕೋಟಿ ರೂಪಾಯಿ ಖರ್ಚು ಮಾಡಿ 1,30,000 ಗಣತಿದಾರರು 1,27,00,000 ಮನೆಗಳಿಗೆ ಹೋಗಿ ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕ, ಔದ್ಯೋಗಿಕ ಮೀಸಲಾತಿ ರಾಜಕೀಯ ಸೇರಿದಂತೆ ಸುಮಾರು 54 ಅಂಶಗಳನೊಳಗೊಂಡ ಪ್ರಶ್ನಾವಳಿಗಳನ್ನು ರಚಿಸಿ ಆ ಮೂಲಕ ದತ್ತಾಂಶವನ್ನು ಸಂಗ್ರಹಣೆ ಮಾಡಿ ಸಮೀಕ್ಷೆಗೊಳಪಟ್ಟ ಮನೆಯ ಒಬ್ಬ ಸದಸ್ಯರ ಸಹಿಯನ್ನು ಸಹ ಪಡೆದು ವೈಜ್ಞಾನಿಕವಾಗಿ ವರದಿಯನ್ನ ತಯಾರಿಸಲಾಗಿದೆ ಎಂದು ಆಯೋಗದ ಅಧ್ಯಕ್ಷರು ಇಬ್ಬರು ತಿಳಿಸಿರುತ್ತಾರೆ.

ಹೀಗಿದ್ದರು ಮುಂದುವರೆದ ಕೆಲವು ಜನರು ಈ ವರದಿ ಜಾರಿಯಾಗಬಾರದೆಂದು. ಈ ವರದಿ ವೈಜ್ಞಾನಿಕವಾಗಿಲ್ಲವೆಂದು ಸುಖಾ ಸುಮ್ಮನೆ ವಿರೋಧವನ್ನು ಮಾಡುತ್ತಿದ್ದಾರೆ. ಈ ವರದಿ ವೈಜ್ಞಾನಿಕವಾಗಿದೆಯೋ ಇಲ್ಲವೊ ಎಂಬುದರ ಬಗ್ಗೆ ಆಯೋಗ ಬಿಟ್ಟರೆ, ರಾಜ್ಯದ ಯಾರಿಗೂ ಈ ಮಾಹಿತಿ ಗೊತ್ತಿರುವುದಿಲ್ಲ ವಿರೋಧಿಸುವವರು ಈ ವರದಿಯನ್ನು ಓದಿದ್ದಾರಾ ಇಲ್ಲ ನೋಡಿದ್ದಾರ? ದುರುದ್ದೇಶವನ್ನು ಇಟ್ಟುಕೊಂಡು ಉದ್ದೇಶ 
ಪ್ಯಾಕ್ಟರಿಗಳು, ಉಧ್ಯಮಗಳಿವೆ, ಎಷ್ಟು ಶಿಕ್ಷಣ ಸಂಸ್ಥೆಗಳಿವೆ ಸರ್ಕಾರದಿಂದ ಯಾರು ಎಷ್ಟು ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಎಷ್ಟು ಜನ ಶಾಸಕರು, ಸಂಸದರು ಇದ್ದಾರೆ ಇದ್ದಲವನ್ನು ಸಹ ರಾಜ್ಯದ ಜನತೆಗೆ ಸತ್ಯವನ್ನು ಬಿಚ್ಚಿಡಲಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಅವರಲ್ಲಿ ಸವಾಲನ್ನು ಹಾಕುತ್ತೇವೆ.

ಮಾನ್ಯ ಕುಮಾರಸ್ವಾಮಿರವರು ಸುಳ್ಳು ಹೇಳುವುದನ್ನು ಬಿಟ್ಟು ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಲಿ, ರಾಜ್ಯದ ಶೋಷಿತರ ಪರವಾಗಿ ಎಲ್ಲಾ ಜನಾಂಗದ ಬಡವರ ಪರವಾಗಿ ಸಂವಿಧಾನದ ಆಶಯದಂತೆ ಸರ್ಕಾರ ನಡೆಸುತ್ತಿರುವ ಮಾನ್ಯ ಸಿದ್ದರಾಮಯ್ಯರವರ ವಿರುದ್ಧ ಯಾವುದೇ ತಂತ್ರ ಕುತಂತ್ರ ಮಾಡದೇ ಅವರ ಮಾಡು ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನ ಹರಿಸಿಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘವು ಆಗ್ರಹಿಸುತ್ತೇವೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.