ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 24 ರಂದು "ಸಂವಿಧಾನ ಜಾಗೃತಿ ಸಮಾವೇಶ" ಆಯೋಜಿಸಲಾಗಿದೆ.


ಬೆಂಗಳೂರು, ಏಪ್ರಿಲ್ 17, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರು ಹಾಗೂ ರಾಜ್ಯಾಧ್ಯಕ್ಷರಾದ ಆಲ್ನೋಡ್ ಹನುಮಂತಪ್ಪ ಅವರು ಮಾತನಾಡಿದರು. 

ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೇ 24 ರಂದು "ಸಂವಿಧಾನ ಜಾಗೃತಿ ಸಮಾವೇಶ" ಆಯೋಜಿಸಲಾಗಿದೆ ಎಂದು ಆಲ್ನೋಡ್ ಹನುಮಂತಪ್ಪ ಅವರು ತಿಳಿಸಿದರು.  

ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟವು ರಾಜ್ಯದಲ್ಲಿ ಸಕ್ರಿಯವಾಗಿ ಕಾರ್ಯ-ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ, ಜಗಜೀವನರಾಂ ಸಂಘ, ಮಾತಂಗ ಪರಿವಾರ, ಮಾತಂಗ ಫೌಂಡೇಷನ್, ಮಾದಿಗರ ಸಂಘ, ಮಾದಿಗ ಮಹಾಸಭಾ, ಆದಿಜಾಂಬವ ಮಹಾಸಭಾ, ಪೌರಕಾರ್ಮಿಕರ ಸಂಘ ಹಾಗೂ ವಿವಿಧ ಸಂಘಗಳನ್ನೊಳಗೊಂಡ ಒಕ್ಕೂಟವಾಗಿದ್ದು, ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಏಳಿಗೆ ಮತ್ತು ಅಭಿವೃದ್ಧಿಗಾಗಿ ಸಾಮೂಹಿಕ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಅಸ್ಪಷ್ಟ ಸಮುದಾಯಕ್ಕೆ ಸೇರಿದ, ಮಾದಿಗ, ಮಾದಾರ, ಮಾತಂಗ, ಚಮ್ಮಾರ, ಸಮಗಾರ, ಚಮಗಾರ, ಮಣೆಗಾರ, ಮೋಚಿ, ಮಚಿಗಾರ್,ಡೋರ್, ಕಕ್ಕಯ್ಯ, ಹರಳಯ್ಯ, ಅರುಂಧತೀಯ. ದಕ್ಕಲ, ದಕ್ಕಲಿಗ, ದೊಕ್ಕಲ್‌ವಾರ್, ಮಾಂಗ್, ಚಿಂದೋಳ್ಳು, ಯಲ್ಲಮ್ಮವಾಂಡ್ಲು, ಮಿನಿಮಾದಿಗ, ಸಿಂಥ್‌ ಮಾದಿಗ, ಜಾಂಬವುಲು, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಆದಿಶೈವ ಇತ್ಯಾದಿ ಸುಮಾರು 52ಕ್ಕೂ ಹೆಚ್ಚು ಹೆಸರಿನಿಂದ ಕರೆಯಲ್ಪಡುವ ಆದಿ ಜಾಂಬವ ಸಮುದಾಯಕ್ಕೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಮಾನವ ಬದುಕಿನ ಎಲ್ಲಾ ರಂಗಗಳಲ್ಲಿಯೂ ಸಮಪಾಲು ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ಆದಿಜಾಂಬವ/ಮಾದಿಗ/ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟವು ಶ್ರಮಿಸುತ್ತಿದೆ.

ಚರ್ಮೋದ್ಯೋಗ ಮತ್ತು ಸಫಾಯಿ ಕರ್ಮಚಾರಿಗಳಾಗಿ ಹೀನಾಯ ರೀತಿಯಲ್ಲಿ ಜೀವಿಸುತ್ತಿರುವ ಈ ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಜನಸಂಖ್ಯೆಗನುಗುಣವಾಗಿ ನೀಡಬೇಕಾದ ಒದಗಿಸಬೇಕಾದ ಸರ್ಕಾರಗಳು ಸೌಲಭ್ಯಗಳನ್ನು ಸರ್ಕಾರದ್ದಾಗಿರುತ್ತದೆ. ಜವಾಬ್ದಾರಿ ಆಡಳಿತಾರೂಢ

ಆದುದರಿಂದ, ಈ ದೇಶದ ಮೂಲನಿವಾಸಿಗಳಾದ ಆದಿಜಾಂಬವ ಸಮುದಾಯಕ್ಕೆ ಸರ್ಕಾರ ಜನಸಂಖ್ಯಾ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಶೇ.15ರ ಮೀಸಲಾತಿಯಲ್ಲಿ ಪ್ರತ್ಯೇಕ ಮೀಸಲಾತಿ ನೀಡುವಂತೆ 1992ರಿಂದಲೂ ಸರ್ಕಾರವನ್ನು ಆಗ್ರಹ ಪಡಿಸುತ್ತಿದ್ದ ಪರಿಣಾಮ ಈಗಾಗಲೇ 2005ರಲ್ಲಿ ಸಂದಿನ ಶ್ರೀ ಎಸ್.ಎಂ.ಕೃಷ್ಣ ಸರ್ಕಾರ ಈ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಒಂದು ಏಕ ಸದಸ್ಯ ಆಯೋಗವನ್ನು ರಚಿಸಿ ಇದರ ವರದಿಯನ್ನು ಜೂನ್ 2012ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುತ್ತದೆ.

ಕರ್ನಾಟಕ ರಾಜ್ಯ ಆದಿಜಾಂಬವ/ಮಾದಿಗ ಸಂಘಟನೆಗಳ ಒಕ್ಕೂಟವು ಈ ಸಮುದಾಯದ ಏಳಿಗೆ ಮತ್ತು ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದ್ದು, 1992ರಿಂದಲೂ ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಶೇ. 15ರ ಮೀಸಲಾತಿಯಲ್ಲಿ: (1) 1975ರ ಎಲ್.ಜಿ. ಹಾವನೂರು ಆಯೋಗದ ವರದಿಯನ್ವಯ ಪರಿಶಿಷ್ಟ ಜಾತಿಯ

ಶೇ.55.57ರಷ್ಟಿರುವ ಆದಿಜಾಂಬವ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು ಮತ್ತು (2) ಆದಿಜಾಂಬವ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು. ಇವರ ಶ್ರಮದ ಪ್ರಯತ್ನವಾಗಿ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದಿಂದ ಸಮೀಕ್ಷೆ ನಡೆಸಿ ವರದಿ ನೀಡಲು ಸಾಧ್ಯವಾಗಿದ್ದು, ಸರ್ಕಾರ ಈಗ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚಿಸಿ ಈ ಆಯೋಗಕ್ಕೆ ವರದಿ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ.

ಈಗಾಗಲೇ ಒಳ ಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ 32 ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದು, ಆಯೋಗವು ಶೀಘ್ರದಲ್ಲಿ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಹಾಗೂ ವಿಶೇಷವಾಗಿ ಕಟಕರ್ನಾಟಕ, ಆದಿ ಆಂದ್ರ ಮತ್ತು ಆದಿ ದ್ರಾವಿಡ ಜಾತಿಗಳನ್ನು ಕೈಬಿಟ್ಟು ಸರಿಯಾದ ವರದಿ ನೀಡಲು. ಮಾದಿಗ ಎಂಬ ಮಾಹಿತಿಯನ್ನು ಈ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ಬರೆಸುವಂತೆ ಒಕ್ಕೂಟವು ರಾಜ್ಯಾದ್ಯಂತ ಪ್ರವಾಸ ಮಾಡಿ ಅರಿವು ಮೂಡಿಸುವ ಕೆಲಸ ಮಾಡಲಿದೆ.

ಹಾಗೂ, ರಾಜ್ಯದಲ್ಲಿ ಮಾದಿಗ ಸಮುದಾಯದವರಿಗೆ ಶೀಘ್ರದಲ್ಲಿ ಒಳಮೀಸಲಾತಿ ಜಾರಿಗಾಗಿ ಹಾಗೂ ಇತರೆ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ (ಫ್ರೀಡಂ ಪಾರ್ಕ್) ಒಂದು ಮಾದಿಗ ಬೃಹತ್ "ಸಂವಿಧಾನ ಜಾಗೃತಿ ಸಮಾವೇಶ" ವನ್ನು 24/5/2025ರ ಶನಿವಾರದಂದು ನಡೆಸಲು ತೀರ್ಮಾನಿಸಿದೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.