ಸಾಮಾಜಿಕ - ಆರ್ಥಿಕ - ಶೈಕ್ಷಣಿಕ ಸಮೀಕ್ಷೆಗೆ ನೊಳಂಬ ಲಿಂಗಾಯತ ಸಂಘ ವಿರೋಧ.


ಬೆಂಗಳೂರು ಏಪ್ರಿಲ್ 17; ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಮುಂದಾಗಿರುವ ಸಮಾಜಿಕ,ಆರ್ಥಿಕ,ಶೈಕ್ಷಣಿಕ ವರದಿ ವೀರಶೈವ ಸಮುದಾಯದ ನೊಳಂಬ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದ್ದು ಇದನ್ನು ಸಂಪೂರ್ಣ ತಿರಸ್ಕರಿಸುವುದಾಗಿ ನೊಳಂಬ ಲಿಂಗಾಯತ ಸಮಾಜ ವಿರೋಧ ವ್ಯಕ್ತಪಡಿಸಿದೆ.

ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಕೆ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಬಿ.ಎಸ್.ಪಾಟೀಲ್ , ನೊಳಂಬ ಸಮುದಾಯ ರಾಜ್ಯದಲ್ಲಿ 20ಲಕ್ಷ ಸಂಖ್ಯೆಯಿದ್ದು ಆದರೆ ನೊಳಂಬ ಸಮುದಾಯದ ಸಂಖ್ಯೆಯನ್ನು ತಪ್ಪಾಗಿ ತಿಳಿಸಲಾಗಿದೆ, ಈ ವರದಿಯನ್ನು ಜಾರಿ ತರಲು ಮುಂದಾದರೆ ಬಾರೀ ಪ್ರಮಾಣದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

 ತರೀಕೆರೆ ಮಾಜಿ ಶಾಸಕ ನಾಗರಾಜಪ್ಪ ಮಾತನಾಡಿ,ನೊಳಂಬ ಸಮುದಾಯ 12ಜಿಲ್ಲೆಗಳಲ್ಲಿ ತನ್ನ‌ ಸಂಖ್ಯೆಯನ್ನು ಹೊಂದಿದೆ, ಈ ಹಿಂದೆ ಒಂಬತ್ತು ಜಿಲ್ಲೆಗಳಿಂದ ಶಾಸಕರು ಆಯ್ಕೆಯಾಗಿ ಬಂದಿದ್ದಾರೆ,ನಮ್ಮ ಸಂಘದಿಂದ ಮಾಡಿಸಿದ ಸಮೀಕ್ಷೆಯಲ್ಲಿ 20ಲಕ್ಷ ನೊಳಂಬ ಲಿಂಗಾಯತ ಜನಸಂಖ್ಯೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ಜಾತಿ ಗಣತಿ ವಿರುದ್ಧ ಒಕ್ಕಲಿಗ ಸಂಘದವರು ನಡೆಸುತ್ತಿರುವ ಹೋರಾಟಕ್ಕೆ ನಾವೂ ಕೂಡ ದ್ವನಿಗೂಡಿಸಿ ಹೋರಾಟ ನಡೆಸುವುದಾಗಿ ಹೇಳಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.