ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು - ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಸದಾಶಿವ ರೆಡ್ಡಿಯವರ ಮೇಲೆ ನಡೆದಿರುವ ಭೀಕರ ಹಲ್ಲೆಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಎಸ್.ಎಸ್. ಮಿಟ್ಟಲಕೋಡ ಅವರು ತಿಳಿಸಿದರು.


ಬೆಂಗಳೂರು, ಏಪ್ರಿಲ್ 19, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ವಕೀಲರ ಪರಿಷತ್ತು' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಎಸ್.ಎಸ್. ಮಿಟ್ಟಲಕೋಡ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು - ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಸದಾಶಿವ ರೆಡ್ಡಿಯವರ ಮೇಲೆ ನಡೆದಿರುವ ಭೀಕರ ಹಲ್ಲೆಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಎಸ್.ಎಸ್. ಮಿಟ್ಟಲಕೋಡ ಅವರು ತಿಳಿಸಿದರು.

 ಹಾಗಾಗಿ ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಎಲ್ಲಾ ವಕೀಲರಿಗೆ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಎಸ್.ಎಸ್. ಮಿಟ್ಟಲಕೋಡ ಅವರು ಒತ್ತಾಯಿಸಿದರು.

ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು,ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಶ್ರೀ. ಸದಾಶಿವ ರೆಡ್ಡಿಯವರ ಕಚೇರಿಯಲ್ಲಿ ದಿನಾಂಕ 16/4/2025 ರಂದು ಬೆಳಿಗ್ಗೆ ೮.೩೦ ಕ್ಕೆ ಅವರ ಮೇಲೆ ನಡೆದ ಭೀಕರ ಹಲ್ಲೆ ಮತ್ತು ದಾಳಿಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರ ಪರವಾಗಿ ಹಾಗೂ ರಾಜ್ಯದ ಎಲ್ಲಾ ವಕೀಲ ಭಾಂದವರ ಪರವಾಗಿ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷನಾದ ನಾನು, ಈ ದೌರ್ಜನ್ಯಕಾರಿ ಹಲ್ಲೆಯ ಬಗ್ಗೆ ತೀವ್ರ ಆಕ್ರೋಶ ಹಾಗೂ ವಿಷಾದವನ್ನು ವ್ಯಕ್ತಪಡಿಸುತ್ತೇನೆ.

ದಿನಾಂಕ 19/4/2025 ರಂದು ರಾಜ್ಯ ವಕೀಲರ ಪರಿಷತ್ತಿನಲ್ಲಿ ತುರ್ತು ಸಭೆಯನ್ನು ಕರೆದು ಈ ರ್ದುಘಟನೆಯ ಬಗ್ಗೆ ದೀರ್ಘವಾಗಿ ಚರ್ಚಿಸಿಲಾಯಿತು.

೧. ಭಾರತೀಯ ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಶ್ರೀ ಸದಾಶಿವ ರೆಡ್ಡಿಯವರ ಕಚೇರಿಯಲ್ಲಿ ಬೆಳಿಗ್ಗೆ ೮.೩೦ ಕ್ಕೆ ದಿನಾಂಕ 16/4/2025 ರಂದು ಅವರ ಮೇಲೆ ನಡೆದ ಭೀಕರ ಹಲ್ಲೆ ಮತ್ತು ದಾಳಿಯನ್ನು ನಡೆಸಿದ ಇಬ್ಬರು ಅಪರಿಚಿತ ವ್ಯಕ್ತಿಗಳಿಗೂ ಶ್ರೀ ಸದಾಶಿವರೆಡ್ಡಿಯವರಿಗೂ ಯಾವುದೇ ಸಂಬಂಧ ಮತ್ತು ಇವರಿಬ್ಬರ ನಡುವೆ ಯಾವುದೇ ಕಕ್ಷಿದಾರರ ಹಾಗೂ ವಕೀಲರ ಸಂಬಂಧ ಹಾಗೂ ಇನ್ನಿತರ ವ್ಯವಹಾರಗಳು ಇರುವುದಿಲ್ಲ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium