ಅಧಿಕಾರಿಗಳ ನೆರವಿನೊಂದಿಗೆ ಗೋಮಾಳ ಮತ್ತು ಬಗರ್‌ಹುಕುಂ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರು ಕಬಳಿಸಿದ್ದಾರೆ ಎಂದು ನಟರಾಜ್ ಅವರು ಆರೋಪಿಸಿದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಧುಗಿರಿ ತಾಲೂಕಿನ ದೊಡ್ಡ ಮಾಲೂರು ಗ್ರಾಮದ ನಟರಾಜ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಅಧಿಕಾರಿಗಳ ನೆರವಿನೊಂದಿಗೆ ಗೋಮಾಳ ಮತ್ತು ಬಗರ್‌ಹುಕುಂ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಭೂಗಳ್ಳರು ಕಬಳಿಸಿದ್ದಾರೆ ಎಂದು ನಟರಾಜ್ ಅವರು ಆರೋಪಿಸಿದರು.
ಈ ಮೂಲಕ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ, ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಕೋಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಗ್ರಾಮದ ಸರ್ವೆ ಸಂಖ್ಯೆ 64 ರಲ್ಲಿ 113 ಎಕರೆ ಸರ್ಕಾರಿ ಭೂಮಿ (ಗೋಮಾಳ) ಇದೆ. ಅದರಲ್ಲಿ 49 ಎಕರೆ ಭೂಮಿಯನ್ನು ಕಳೆದ 50 ವರ್ಷಗಳ ಹಿಂದೆಯೇ ಶಾರದಮ್ಮ ಕೊಂ ಲಕ್ಷ್ಮೀನಾರಾಯಣ, ಜಿ.ಎನ್. ಚಂದ್ರಶೇಖರ್ ಬಿನ್ ಲೇಟ್ ಕುರಿ ನಂಜುಂಡಪ್ಪ, ಜಿ.ಎನ್.ನಟರಾಜು ಬಿನ್ ಎಂ. ನಂಜುಂಡಪ್ಪ ಸೇರಿದಂತೆ 15 ಮಂದಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡಿರುತ್ತಾರೆ. ಉಳಿದ 57.04 ಎಕರೆ ಭೂಮಿ ಗೋಮಾಳ ವಾಗಿದ್ದು, ಉಳಿದ ಭೂಮಿ ಬಿ ಖರಾಬು ಸೇರಿದಂತೆ ಮತ್ತಿತರ ವರ್ಗದ್ದಾಗಿದೆ. ಈ ಕುರಿತಂತೆ 1993-94ರ ಸರ್ಕಾರಿ ದಾಖಲೆಗಳು ಇವೆ.
ಆದರೆ, ಇತ್ತೀಚೆಗೆ ಡಿ.ವಿ.ಮಂಜುನಾಥ್ ಬಿನ್ ಡಿ.ವೀರಭದ್ರಪ್ಪ ಮತ್ತು ಜಿ.ಎನ್.ಹರೀಶ್ ಕುಮಾರ್ ಬಿನ್ ನಂಜುಂಡಯ್ಯ ಎಂಬುವವರು ಸರ್ವೆ ಸಂಖ್ಯೆ 64ರ 12ನೇ ಬ್ಲಾಕ್‌ನ ಖುಷಿ ವಿಸ್ತೀರ್ಣ 4 ಎಕರೆ ಭೂಮಿಗೆ ಮಂಗಮ್ಮ ಕೊಂ ಲೇಟ್ ನಂಜುಂಡಪ್ಪ, ಭಾಗ್ಯಮ್ಮ ಕೊಂ ಲೇಟ್ ನಂಜುಂಡಪ್ಪ, ಸಿದ್ದಪ್ಪ ಬಿನ್ ಲೇಟ್ ನಂಜುಂಡಪ್ಪ ಸಎಂಬುವವರರಿ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಜೊತೆಗೆ ಹಲವು ವರ್ಷಗಳಿಂದ ಆ ನಾಲ್ವರು ನಿಗದಿತ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ ಎಂಬಂತೆಯೂ ದಾಖಲೆ ಸೃಷ್ಟಿಸಲಾಗಿದೆ. ಹೀಗೆ ನಕಲಿ ದಾಖಲೆ ಸೃಷ್ಟಿಸಿದ ನಂತರ ಆ ಭೂಮಿಯನ್ನು ತಾವು ಕ್ರಯ ಮಾಡಿಕೊಂಡು, ಅದಕ್ಕೆ ಕ್ರಯಪತ್ರವನ್ನೂ ಮಾಡಿಸಿದ್ದಾರೆ.
ಹೀಗೆ ಕ್ರಯ ಮಾಡುವುದಕ್ಕೂ ಮುನ್ನ ಮಧುಗಿರಿ ತಾಲ್ಲೂಕು ಪಂಚಾಯಿತಿಯ ಸಂಬಂಧಪಟ್ಟ ಅಧಿಕಾರಿ ಅಥವಾ ತಹಸೀಲ್ದಾರ್ ಸ್ಥಳ ಪರಿಶಿಶೀಲನೆ ಮಾಡಬೇಕಿತ್ತು. ಆದರೆ, ತಹಸೀಲ್ದಾರ್ ಸ್ಥಳ ಪರಿಶೀಲಿಸದೆ, ಆ ಭೂಮಿಯಲ್ಲಿ ಯಾರು ಸಾಗುವಳಿ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟ ದಾಖಲೆಗಳನ್ನು ಪರಿಶೀಲಿಸಿಲ್ಲ. ಜೊತೆಗೆ ಕ್ರಯ ಮಾಡಿಕೊಡುವುದಕ್ಕೂ ಮುನ್ನ ಜಿಲ್ಲಾಧಿಕಾರಿಗಳಿಂದ ಅನುಮತಿಯನ್ನು ಪಡೆದಿಲ್ಲ. ಹೀಗೆ ಅಧಿಕಾರಿಗಳು ಸಂಪೂರ್ಣವಾಗಿ ನಿಯಮಗಳನ್ನು ಗಾಳಿಗೆ ತೂರಿ ಭೂಗಳ್ಳರಿಗೆ ನೆರವಾಗುವಂತೆ ಮಾಡಿದ್ದಾರೆ.
ಈ ಕುರಿತಂತೆ ನಿಗದಿತ ಸರ್ವೆ ಸಂಖ್ಯೆಯ ದಾಖಲೆಗಳನ್ನು ನೀಡುವಂತೆ ತಹಸೀಲ್ದಾರ್ ಕಛೇರಿಗೆ ಕೋರಿದ್ದರೂ, ಅದರ ದಾಖಲೆ ನೀಡದೇ ಇಲ್ಲದ ಸಬೂಬು ಹೇಳಲಾಗುತ್ತಿದೆ. ಒಟ್ಟಾರೆ, ಗೋಮಾಳ ಮತ್ತು ಬಗರ್ ಹುಕುಂ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಈ ಕುರಿತು ತಾವು ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಭೂಗಳ್ಳರ ಪಾಲಾಗಿರುವ ಭೂಮಿಯನ್ನು ಮರುವಶಕ್ಕೆ ಪಡೆಯಬೇಕೆಂದು ಕಳಕಳಿಯಿಂದ ಕೋರುತ್ತಿದ್ದೇವೆ. ಈ ಬಗ್ಗೆ ತಾವು ತೆಗೆದುಕೊಂಡ ಬಗ್ಗೆ ನಮಗೆ ಮಾಹಿತಿ ನೀಡಲು ಕೋರಿದೆ. ಇದಕ್ಕೆ ತಪ್ಪಿದಲ್ಲಿ ಇತರೆ ಸಂಘ ಸಂಸ್ಥೆಗಳು ಒಗ್ಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಮ್ಮ ಗಮನಕ್ಕೆ ತರಬಯಸುತ್ತೇವೆ.
Comments
Post a Comment