ಬೆಂಗಳೂರಿನ, ವಿಲ್ಸನ್ ಗಾರ್ಡನ್ ನ ಹೊಂಬೇಗೌಡ ನಗರದಲ್ಲಿ ಏಪ್ರಿಲ್ 25ರಂದು ನೂತನ "ಶ್ರೀ ನಾಮದೇವ ಭವನದ ಕಟ್ಟಡ ಲೋಕಾರ್ಪಣೆ" ಕಾರ್ಯಕ್ರಮ ನಡೆಯಲಿದೆ.


ಬೆಂಗಳೂರು, ಏಪ್ರಿಲ್ 21, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನ, ವಿಲ್ಸನ್ ಗಾರ್ಡನ್ ನ ಹೊಂಬೇಗೌಡ ನಗರದಲ್ಲಿ ಏಪ್ರಿಲ್ 25ರಂದು ನೂತನ "ಶ್ರೀ ನಾಮದೇವ ಭವನದ ಕಟ್ಟಡ ಲೋಕಾರ್ಪಣೆ" ಕಾರ್ಯಕ್ರಮ ನಡೆಯಲಿದೆ. 

ಕರ್ನಾಟಕ ಶ್ರೀ ನಾಮದೇವ ಸಿಂಪಿ ಸಮಾಜವು ಬೆಂಗಳೂರಿನ, ವಿಲ್ಸನ್ ಗಾರ್ಡನ್ ನ ಹೊಂಬೇಗೌಡ ನಗರದಲ್ಲಿ ಸಮಾಜದ ಬಂಧುಗಳ ಆರ್ಥಿಕ ನೆರವಿನಿಂದ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಿದ್ದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು 25-04-2025 ರ ಶುಕ್ರವಾರದಂದು ನೂತನ ಶ್ರೀ ನಾಮದೇವ ಭವನದ ಕಟ್ಟಡ ಲೋಕಾರ್ಪಣೆ ಮಾಡಲಿದ್ದಾರೆ.

ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲ್, ಕಾನೂನು ಮತ್ತು ಸಂಸದೀಯ ಸಚಿವರು ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವರು ಸನ್ಮಾನ್ಯ ಶ್ರೀ ಶಿವರಾಜ್ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು

ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್

ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರು ಸನ್ಮಾನ್ಯ ಶ್ರೀ ಸಿ.ಸಿ.ಪಾಟೀಲ್, ಮಾಜಿ ಸಚಿವರು ಹಾಗೂ ನರಗುಂದ ಕ್ಷೇತ್ರದ ಶಾಸಕರು

ಸನ್ಮಾನ್ಯ ಶ್ರೀ ಉದಯ ಗರುಡಾಚಾರ್, ಚಿಕ್ಕಪೇಟೆ ಶಾಸಕರು ಸನ್ಮಾನ್ಯ ಶ್ರೀ ಪ್ರಕಾಶ ಕೋಳಿವಾಡ, ರಾಣೆಬೆನ್ನೂರು ಕ್ಷೇತ್ರದ ಶಾಸಕರು ಶ್ರೀಮತಿ ಜಯಮಾಲಾ, ಮಾಜಿ ಸಚಿವರು ಸನ್ಮಾನ್ಯ ಶ್ರೀ ನಾಗರಾಜ್ ಯಾದವ, ವಿಧಾನಪರಿಷತ್ ಸದಸ್ಯರು ಅವರುಗಳು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಶ್ರೀ ನಾಮದೇವ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ 23-04-2025 ಬುಧವಾರ ಬೆಳಿಗ್ಗೆ 10 ಗಂಟೆಗೆ ಅಕರ್ಷಕ ಕಲಾತಂಡಗಳ ಹಿಮ್ಮೇಳದಲ್ಲಿ *ಶ್ರೀ ವಿಠಲ ರುಕ್ಕಾಯಿ ಮೂರ್ತಿಗಳ ವರ್ಣರಂಜಿತ ಸಂಪ್ರದಾಯಿಕ ಮೆರವಣಿಗೆ ನಡೆಯಲಿದೆ.

24-04-2025 ರ ಗುರುವಾರ ಬೆಳಿಗ್ಗೆ ಸಂತ ಶ್ರೀ ನಾಮದೇವ ಮಹಾರಾಜರ 17 ನೇಯ ವಂಶಸ್ಥರಾದ, ಪಂಢರಪುರದ ಶ್ರೀ ಜ್ಞಾನೇಶ್ವರ ತುಳಸಿದಾಸ್ ನಾಮದಾಸ್ ಮಹಾರಾಜರ ನೇತೃತ್ವದಲ್ಲಿ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠೆ ಹಾಗೂ ಇತರ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.