ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮೇ 17ರಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) "ಅಮೃತ ಮಹೋತ್ಸವಸಮಾರಂಭ ನಡೆಯಲಿದೆ".
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) 1949 ರಲ್ಲಿ ಸ್ಥಾಪಿತವಾಗಿದ್ದು, 75 ವರ್ಷಗಳ ಇತಿಹಾಸ ಹೊಂದಿರುತ್ತದೆ. ಹಾಗೂ ಪ್ರಸ್ತುತ ಅಮೃತ ಮಹೋತ್ಸವ ವರ್ಷ ಆಚರಿಸುತ್ತಿದೆ ಎಂದು ನಿಮಗೆ ತಿಳಿಸಲು ನಾವು ಸಂತೋಷಪಡುತ್ತೇವೆ, ಇದು ಎಂ.ಎಸ್.ಎಂ.ಇ. ವಲಯಕ್ಕೆ 75 ವರ್ಷಗಳ ಅಚಲ ಬೆಂಬಲ ಮತ್ತು ಬದ್ಧತೆಯನ್ನು ಸೂಚಿಸುತ್ತದೆ. ಈ ಮೈಲಿಗಲ್ಲು ಕಾರ್ಯಕ್ರಮವನ್ನು ಶನಿವಾರ, 17ನೇ ಮೇ, 2025 ರಂದು ಸಂಜೆ 5.00 ಗಂಟೆಗೆ ಜ್ಞಾನ ಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜ್ ಆವರಣ, ಪ್ಯಾಲೆಸ್ ರಸ್ತೆ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ಕಾಸಿಯಾ ಅಮೃತ ಮಹೋತ್ಸವ ಸಮಾರಂಭವನ್ನು ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಲಿದ್ದಾರೆ.
ಶ್ರೀ ಡಿ.ಕೆ. ಶಿವಕುಮಾರ್, ಗೌರವಾನ್ವಿತ ಉಪ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ಶ್ರೀ ಶರಣಬಸಪ್ಪ ದರ್ಶನಾಪುರ, ಮಾನ್ಯ ಸಣ್ಣ ಕೈಗಾರಿಕೆಗಳ ಸಚಿವರು, ಶ್ರೀ ಟಿ. ರಘುಮೂರ್ತಿ, ಶಾಸಕರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷರು, ಕೆ.ಎಸ್.ಎಸ್.ಐ.ಡಿ.ಸಿ. ಮತ್ತು ಶಾಸಕರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಿಯ ಕೃಷ್ಣ, ರವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಡಾ. ಎಸ್. ಸೆಲ್ವಕುಮಾರ್, ಭಾಆಸೇ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಶ್ರೀಮತಿ ಗುಂಜನ್ ಕೃಷ್ಣ, ಭಾಆಸೇ, ಕೈಗಾರಿಕಾಭಿವೃದ್ಧಿ ಆಯುಕ್ತರು ಮತ್ತು ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಶ್ರೀ ರಮಣದೀಪ್ ಚೌಧರಿ, ಭಾಆಸೇ, ಸರ್ಕಾರದ ಕಾರ್ಯದರ್ಶಿಗಳು (ಎಂ.ಎಸ್.ಎಂ.ಇ & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಶ್ರೀ ನಿತೇಶ್ ಪಾಟಿಲ್, ಭಾಆಸೇ, ನಿರ್ದೇಶಕರು, ಎಂ.ಎಸ್.ಎಂ.ಇ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಶ್ರೀ ಎ.ಎಲ್. ರವೀಂದ್ರನ್, ಮುಖ್ಯ ಪ್ರಧಾನ ವ್ಯವಸ್ಥಾಪಕರು ಮತ್ತು ಮುಖ್ಯ ವ್ಯವಹಾರ ಅಧಿಕಾರಿಗಳು ಸಿಡ್ಡಿ, ರವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭವು 5.00 ಗಂಟೆಗೆ ಆರಂಭವಾಗಲಿದ್ದು, ಉದ್ಘಾಟನಾ ಕಾರ್ಯಕ್ರಮದ ನಂತರ ಸನ್ಮಾನ್ಯ ಮುಖ್ಯ ಮಂತ್ರಿಗಳು ಕಾಸಿಯಾ ಅಮೃತ ಮಹೋತ್ಸವ ವಿಶಿಷ್ಠ ಲಾಂಛನವನ್ನು ಬಿಡುಗಡೆ ಮಾಡಲಿದ್ದಾರೆ. ತದನಂತರ ಕಾಸಿಯಾ ಪಯಣದ 75 ವರ್ಷಗಳು, ಕಾಸಿಯಾ ಅಮೃತ ಮಹೋತ್ಸವ ಇ-ಇನಿಶಿಯೇಟಿವ್‌ಗಳಾದ ಬಿ2ಬಿ ಪೋರ್ಟಲ್, ಉದ್ಯೋಗ ಪೋರ್ಟಲ್ ಮತ್ತು ವಾಣಿಜ್ಯ ಪೋರ್ಟಲ್, ಹಾಗೂ ಕಾಸಿಯಾ ಅಮೃತ ಮಹೋತ್ಸವ ಕೈಗಾರಿಕಾ ಡೈರೆಕ್ಟರಿ ಬಿಡುಗಡೆ, ಕಾಸಿಯಾ ಪೂರ್ವಾಧ್ಯಕ್ಷರುಗಳಿಗೆ ಅಭಿನಂದನೆ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರಮುಖ ಎಂ.ಎಸ್.ಎಂ.ಇ. ಘಟಕಗಳು, ಉದ್ಯಮ ಮುಖಂಡರು, ನೀತಿ ನಿರೂಪಕರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಮುಖ್ಯಸ್ಥರು ಸೇರಿದಂತೆ ಪ್ರಮುಖ ಪಾಲುದಾರರು ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ ಆರ್.ಎಸ್. ಆರಾಧ್ಯ ರವರಿಂದ 1949 ರಲ್ಲಿ ಸ್ಥಾಪಿತವಾದ ಸಂಸ್ಥೆ ಇಂದು ಅಗಾಧವಾಗಿ ಬೆಳೆದಿದೆ. ಮತ್ತು ದಿವಂಗತ ಶ್ರೀ ಆರ್.ಎಸ್. ಆರಾಧ್ಯ ರವರು ಸಂಸ್ಥಾಪಕ ಅಧ್ಯಕ್ಷರಾಗಿ 18 ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದರು ಹಾಗೂ ಕಾಸಿಯಾ ಮತ್ತು ಕರ್ನಾಟಕ ರಾಜ್ಯದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯಕ್ಕೆ ಉತ್ತಮ ಅಡಿಪಾಯ ಹಾಕಿದರು.
ಇಲ್ಲಿಯವರೆಗಿನ 54 ಅಧ್ಯಕ್ಷರ ನಾಯಕತ್ವದ ಶ್ರೇಯಸ್ಕರ ಹಿನ್ನೆಲೆ ಮತ್ತು ಕಾರ್ಯಕ್ಷಮತೆಯ ಯುಗದ ಸಂದರ್ಭದಲ್ಲಿ “ಅಮೃತ ಮಹೋತ್ಸವ” ಆಚರಣೆಯು ವಿಜೃಂಬಣೆಯಿಂದ ನಡೆಯಲಿದೆ.
ಕಳೆದ ಏಳು ದಶಕಗಳಲ್ಲಿ, ಕಾಸಿಯಾ ಕರ್ನಾಟಕದಲ್ಲಿ ಎಂ.ಎಸ್.ಎಂ.ಇ. ಗಳ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದ ಎಂ.ಎಸ್.ಎಂ.ಇ. ವಲಯ ರಾಷ್ಟ್ರೀಯ ಜಿ.ಡಿ.ಪಿ.ಗೆ ಶೇಕಡಾ 2.2 ರಷ್ಟು ಗಮನಾರ್ಹ ಕೊಡುಗೆಯನ್ನು ನೀಡಿದೆ ಹಾಗೂ ರಫ್ತುಗಳಲ್ಲಿ ಸ್ಥಿರವಾದ ಬೆಳವಣಿಗೆ ಮತ್ತು ಗಣನೀಯ ಉದ್ಯೋಗ ಸೃಷ್ಟಿಯೊಂದಿಗೆ, ನಾವೀನ್ಯತೆ ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಕಾಸಿಯಾ ಪ್ರಸ್ತುತ 13,000 ಕ್ಕೂ ಹೆಚ್ಚು ನೇರ ಸದಸ್ಯರನ್ನು ಮತ್ತು 132 ಸಂಯೋಜಿತ ಸಂಘಗಳನ್ನು ಹೊಂದಿದೆ, ಇದು ಪ್ರಾಥಮಿಕವಾಗಿ ಉತ್ಪಾದನಾ ವಲಯದಲ್ಲಿ ತೊಡಗಿಸಿಕೊಂಡಿದೆ. ಅಮೃತ ಮಹೋತ್ಸವ ಆಚರಣೆಯುನಮ್ಮ ಪ್ರಯಾಣಕ್ಕೆ ಗೌರವ ಮಾತ್ರವಲ್ಲದೆ ಎಂ.ಎಸ್.ಇ. ವಲಯದ ಪ್ರಮುಖ ನೀತಿ ಸಮಸ್ಯೆಗಳು ಮತ್ತು ಪ್ರಗತಿಗಳನ್ನು ಎತ್ತಿ ತೋರಿಸುವ ವೇದಿಕೆಯಾಗಿದೆ.
ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ & ಇನೋವೇಶನ್ ಯೋಜನೆಯ ಬಗ್ಗೆ:
ರಾಜ್ಯ ಮತ್ತು ದೇಶದಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸಹಾಯ ಮಾಡುವ ಸಲುವಾಗಿ, ಕಾಸಿಯಾ ಬೆಂಗಳೂರು-ತುಮಕೂರು ಕೈಗಾರಿಕಾ ಕಾರಿಡಾರ್‌ನ ದಾಬಸ್‌ಪೇಟೆಯಲ್ಲಿ 4.5 ಎಕರೆ ಭೂಮಿಯಲ್ಲಿ "ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ & ಇನೋವೇಶನ್" ಅನ್ನು ಸ್ಥಾಪಿಸುತ್ತಿದೆ. ಈ ಕೇಂದ್ರವು ಮಾರುಕಟ್ಟೆ ಅಭಿವೃದ್ಧಿ, ಕೌಶಲ್ಯಾಭಿವೃದ್ಧಿ ಕೇಂದ್ರ, ತಂತ್ರಜ್ಞಾನ ಉನ್ನತೀಕರಣ ಕೇಂದ್ರ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ಇತ್ಯಾದಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ಈ ಯೋಜನೆಯು ಎಸ್.ಎಂ.ಇ. ಉತ್ಪನ್ನಗಳನ್ನು ಪ್ರದರ್ಶಿಸಲು ಎಲ್ಲಾ ಸೌಲಭ್ಯಗಳನ್ನು ಹೊಂದಿರುವ 50000 ಚದರ ಅಡಿ ವಿಸ್ತೀರ್ಣದ ಪ್ರದರ್ಶನ ಕೇಂದ್ರವನ್ನು ಸಹ ಒಳಗೊಂಡಿದೆ ಮತ್ತು ಇದು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು ಜೂನ್, 2025 ರಲ್ಲಿ ಉದ್ಘಾಟನೆಗೊಳ್ಳಲಿದೆ.
ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದಕ್ಕಾಗಿ ಪತ್ರಿಕಾ ಮತ್ತು ಮಾಧ್ಯಮದ ಎಲ್ಲಾ ಪ್ರತಿನಿಧಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಕಾರ್ಯಕ್ರಮದ ಕುರಿತು ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡುವಲ್ಲಿ ನಿಮ್ಮ ಬೆಂಬಲ ಮತ್ತು ಸಹಕಾರವನ್ನು ಬಯಸುತ್ತೇನೆ.
Comments
Post a Comment