ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭವನ್ನು ನಟ ವಸಿಷ್ಠ ಸಿಂಹ ಅವರು ಉದ್ಘಾಟಿಸಿದರು.


ಬೆಂಗಳೂರು ಮೇ 9, 2025

ಬೆಂಗಳೂರಿನ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಎ.ಸಿ.ಎಸ್ ಸಭಾಂಗಣದಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭ ನಡೆಯಿತು. 

  ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ "ಕಲಾಸೌರಭ -2K25" ವಾರ್ಷಿಕ ಕ್ರೀಡಾ - ಸಾಂಸ್ಕೃತಿಕ ಸಮಾರಂಭವನ್ನು ನಟ ವಸಿಷ್ಠ ಸಿಂಹ ಅವರು ಉದ್ಘಾಟಿಸಿದರು. 

 ಈ ಸಮಾರಂಭದಲ್ಲಿ ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಆರ್. ಬಾಲಕೃಷ್ಣ ಅವರು ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ "ಕಲಾಸೌರಭ -2K25" ಸಮಾರಂಭ ಹಮ್ಮಿಕೊಂಡಿದ್ದೇವೆ. ಈ ಬಾರಿ ನಟ ವಸಿಷ್ಠ ಸಿಂಹ ಅವರು ಪ್ರಮುಖ ಅತಿಥಿಯಾಗಿ ಭಾಗಿಯಾಗಿದ್ದಾರೆ ಎಂದು ಆರ್. ಬಾಲಕೃಷ್ಣ ಅವರು ಹೇಳಿದರು. 

 ಈ ಸಮಾರಂಭದಲ್ಲಿ ನಟ ವಸಿಷ್ಠ ಸಿಂಹ ಅವರು ಮಾತನಾಡಿದರು. ರಾಜರಾಜೇಶ್ವರಿ ಕಾಲೇಜಿನ ಸುತ್ತಮುತ್ತ ಅನೇಕ ಬಾರಿ ಓಡಾಡಿದ್ದೇನೆ. ಈ ಬಾರಿ "ಕಲಾಸೌರಭ -2K25" ಸಮಾರಂಭ" ಕ್ಕೆ ಬಂದಿರುವುದು ಖುಷಿ ತಂದಿದೆ ಎಂದು ವಸಿಷ್ಠ ಸಿಂಹ ಅವರು ಹೇಳಿದರು. ವಿದ್ಯಾರ್ಥಿಗಳು ಗಮನವಿಟ್ಟು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಆದರೆ 'ಓದುವಾಗ ಆಟ ಆಡಬಾರದು, ಆಟ ಆಡುವಾಗ ಓದಬಾರದು ಎಂದು ವಸಿಷ್ಠ ಸಿಂಹ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಸಿಷ್ಠ ಸಿಂಹ ಅವರು ಪ್ರಶಸ್ತಿ ಫಲಕ ನೀಡಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium