ಒಳ ಮೀಸಲಾತಿ ಜಾತಿಗಣತಿಯ ಸಮೀಕ್ಷೆ ಸಂದರ್ಭದಲ್ಲಿ 'ಹೊಲೆಯ' ಎಂದು ಬರೆಸಬೇಕೆಂದು ಶ್ರೀ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘ ಕರೆ ನೀಡಿದೆ.


ಬೆಂಗಳೂರು ಮೇ 13, 2025 

ಜಾತಿ ಗಣತಿಯಲ್ಲಿ 'ಹೊಲೆಯ' ಎಂದು ಬರೆಸಲು ಶ್ರೀ ರೇಣುಕಮ್ಮ ಯಲ್ಲಮ್ಮ ಬಳಗ ಕರೆ.

 ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಒಳ ಮೀಸಲಾತಿ ಜಾತಿ ಗಣತಿಯ ಸಂದರ್ಭದಲ್ಲಿ 'ಹೊಲೆಯ' ಎಂದು ಬರೆಸಬೇಕೆಂದು ಶ್ರೀ ರೇಣುಕಾ ಯಲ್ಲಮ್ಮ ಬಳಗದ ಅಭಿವೃದ್ಧಿ ಸಂಘ ಕೆರೆ ನೀಡಿದೆ.

ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ನಾಗೇಂದ್ರ, ಉಪಾಧ್ಯಕ್ಷ ಸಿ.ರಾಮಯ್ಯ, 

ನಿವೃತ್ತ ನ್ಯಾಯಮೂರ್ತಿ ಹೆಚ್‌.ಎನ್. ನಾಗಮೋಹನ ದಾಸ್ ಅವರ ನೇತೃತದಲಿ ಸಮಿತಿಯನ್ನು ನೇಮಿಸಿ ಕರ್ನಾಟಕ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯವರ ಜಾತಿ ಸಮೀಕ್ಷೆಯನ್ನು ವೈಜಾನಿಕವಾಗಿ, ಸಮಗ್ರವಾಗಿ ಪಾರದರ್ಶಕವಾಗಿ ಮಾಡಲು ಸೂಚನೆ ನೀಡಿರುವುದು ಸಾಧ್ಯತಾರ್ಹವಾಗಿದೆ,ಪರಿಶಿಷ್ಟ ಜಾತಿಯಲ್ಲಿ, 101 ಉಪಜಾತಿಗಳಿದ್ದು ಅದರಲ್ಲಿ ನಮ್ಮ ಜನಾಂಗವು ಸೇರಿರುತ್ತದೆ. ನಮ್ಮ ಜನಾಂಗದ ಜನರು ತಮಿಳು ಮಿಶ್ರಿತ ಕನ್ನಡ ಮಾತನಾಡುತಿದ್ದು ಕರ್ನಾಟಕ ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ,ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತಿರುವುದು ಸರಿಯಷ್ಟೇ ನಮ್ಮ ಭಾಷೆಗೆ ಲಿಪಿ ಇರುವುದಿಲ್ಲ. ಇದುವರೆಗೆ ನಮ್ಮಜನಾಂಗವನ್ನು ಆದಿ ಕರ್ನಾಟಕ,ಆದಿ ದಾವಿಡ, ಆದಿ ಆಂದ್ರ ಎಂದು ಕರೆಯಲಾಗುತ್ತಿತ್ತು. ಒಳ ಮೀಸಲಾತಿ ಸಂಬಂಧ ಜಾತಿಗಣತಿಗಾಗಿ ಸರ್ಕಾರದ ಸಮೀಕ್ಷಾ ತಂಡ ಬಂದಾಗ ನಮ್ಮ ಜಾತಿ ಸೂಚಕ "ಹೊಲೆಯ" ಎಂಬುದಾಗಿ ಬರೆಸಬೇಕು ಎಂದು ರೇಣುಕಾ ಯಲಮ್ಮ ಬಳಗದ ಅಭಿವೃದ್ಧಿ ಸಂಘ ಮೇ10ರಂದು ನಡೆದ ವಿಶೇಷ ಸಭೆಯಲ್ಲಿ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ,ಆದರಿಂದ ನಮ್ಮ ಎಲ್ಲಾ ಸಮುದಾಯದ ಬಂಧುಗಳು ನಮ್ಮಜಾತಿ ಸೂಚಕ ಹೊಲೆಯ ಎಂದು ಬರೆಸಬೇಕೆಂದು ಮನವಿ ಮಾಡಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium