ರಾಷ್ಟ್ರಮಟ್ಟದ ಯೂತ್ ಮೆನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ವಿವಾನ್ ಪದಕ ಪಡೆದಿದ್ದಾರೆ

ಏಪ್ರಿಲ್ 21ರಿಂದ 27ರವರೆಗೆ ಉತ್ತರ ಪ್ರದೇಶದ ನೋಯ್ದಾ ದಲ್ಲಿ ಭಾರತ ಸರ್ಕಾರದ ಮಾನ್ಯತೆ ಹೊಂದಿರುವ ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ 7ನೇ ಯೂಥ್ ಮೆನ್ ಮತ್ತು ವುಮೆನ್ಸ್ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಎನ್‌ಐಎಸ್ ಬಾಕ್ಸಿಂಗ್ ಕೋಚ್ ಚಂದ್ರ ಕುಮಾರ್ ರವರ ರಾಕ್ ಬುಲ್ ಅಕಾಡೆಮಿ ಆಫ್ ಆರ್ಟ್ಸ್ ಬಾಕ್ಸಿಂಗ್ ಕ್ಲಬ್ ನ ಕ್ರೀಡಾಪಟು ಹಾಗೂ ಶ್ರೀಮತಿ ಪಯಸ್ವಿನಿ ಮತ್ತು ಕೆ ಎಸ್ ಮಂಜುನಾಥ ದಂಪತಿಗಳ ಪುತ್ರ ಹಾಗೂ ಬೆಂಗಳೂರಿನ ಡೆಖನ್ ಇಂಟರ್ನ್ಯಾಷನಲ್ ಶಾಲೆಯ 12ನೇ ತರಗತಿ ವಿದ್ಯಾರ್ಥಿ ವಿವಾನ್ ಮಂಜುನಾಥ್ 80 ರಿಂದ 85 ಕೆಜಿ ತೂಕದ ವಿಭಾಗದಲ್ಲಿ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನಿಂದ ಅಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಬಹುಮಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದು ಬಾಕ್ಸಿಂಗ್ ಭಾರತ ಕ್ರೀಡಾ ಮಂತ್ರಾಲಯದಲ್ಲಿ ಅತಿ ಪ್ರಾಮುಖ್ಯತೆಯುಳ್ಳ ಕ್ರೀಡೆಯಾಗಿದ್ದು ಒಲಂಪಿಕ್ ಕ್ರೀಡೆ ಸಹ ಆಗಿದ್ದು ವಿಜೇತ ಕ್ರೀಡಾಪಟುವಿಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ ಮಂಜೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್ ಅಭಿನಂದಿಸಿದ್ದು ವಿಜೇತ ಕ್ರೀಡಾಪಟುವಿಗೆ ಸರ್ಕಾರದ ಕ್ರೀಡಾ ಸೌಲಭ್ಯಗಳು ದೊರೆಯಲಿದ್ದು ಮುಂದಿನ ಭವಿಷ್ಯದ ಕ್ರೀಡಾಕೂಟಗಳಲ್ಲಿ ಮತ್ತಷ್ಟು ಸಾಧನೆ ಮಾಡಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕ ಪಡೆಯಲಿ ಎಂದುಶಾಲಾ ಆಡಳಿತ ಮಂಡಳಿ ಸೇರಿದಂತೆ ಬಾಕ್ಸಿಂಗ್ ಕ್ಲಬ್ ಮತ್ತು ಕುಟುಂಬವೃಂದ ಸ್ನೇಹಿತರು ಶುಭಕೋರಿದ್ದಾರೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium