ಪರಿಶಿಷ್ಟ ಜಾತಿ ಒಳಮೀಸಲಾತಿ ಜಾತಿಗಣತಿಯಲ್ಲಿ ರಾಜ್ಯದ ಸಮಸ್ತ ಕೊರಚ & ಕೊರಮ ಕುಟುಂಬಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಮಿತಿಯ ಸದಸ್ಯರು ಮನವಿ ಮಾಡಿದರು.
ಬೆಂಗಳೂರು, ಮೇ 2, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರವನ್, ಕೇಪ್‌ಮಾರಿಸ್ ವೈಜ್ಞಾನಿಕ ಒಳಮೀಸಲಾತಿ ಅನುಷ್ಠಾನ ಹೋರಾಟ ಸಮಿತಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ಜಾತಿಗಣತಿಯಲ್ಲಿ ರಾಜ್ಯದ ಸಮಸ್ತ ಕೊರಚ & ಕೊರಮ ಕುಟುಂಬಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಮಿತಿಯ ಸದಸ್ಯರು ಮನವಿ ಮಾಡಿದರು.
ಮೇ-1 ರಿಂದ ರಾಜ್ಯಾದ್ಯಾಂತ ಸರ್ಕಾರವು ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ಆಯೋಗದ ನೇತೃತ್ವದಲ್ಲಿ 101 ಪರಿಶಿಷ್ಟ ಜಾತಿಗಳ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ರಾಜ್ಯದ ಪರಿಶಿಷ್ಟ ಜಾತಿಯ ಕೊರಮ, ಕೊರಚ, ಕುರುವನ್ ಮತ್ತು ಕೇಪ್ ಮಾರಿಷ್ಟ ಸಮಾಜದ ಕುಟುಂಬಗಳು ಕಡ್ಡಾಯವಾಗಿ ಈ ಗಣತಿಯಲ್ಲಿ ಪಾಲ್ಗೊಳ್ಳುವಂತೆ “ಕರ್ನಾಟಕ ಪರಿಶಿಷ್ಟ ಜಾತಿ ಕೊರಮ-ಕೊರಚ ವೈಜ್ಞಾನಿಕ ಒಳಮೀಸಲಾತಿ ಅನುಷ್ಟಾನ ಹೋರಾಟ ಸಮಿತಿ" ಈ ಮಾಧ್ಯಮ ಗೋಷ್ಠಿಯ ಮುಖಾಂತರ ಕರೆ ನೀಡುತ್ತದೆ.ಈ ಬಗ್ಗೆ ಪ್ರತಿ ಮನೆ-ಮನೆಗೂ ಅರಿವು ಮೂಡಿಸಲು ರಾಜ್ಯಾದ್ಯಾಂತ 15 ದಿನಗಳ ಕಾಲ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ 10 ಪರಿಶಿಷ್ಟ ಜಾತಿಗಳ ಪೈಕಿ 51 ಜಾತಿಯ ಸುಮಾರು 20 ಲಕ್ಷಕ್ಕೂ ಹೆಚ್ಚಿನ ಜನರು ಅಲೆಮಾರಿ ಹಿನ್ನಲೆಯುಳ್ಳವಾಗಿದ್ದು, ಇವರಿಗೆ ನಿರ್ದಿಷ್ಟ ನೆಲೆ ಇಲ್ಲದೇ, ನಿರ್ದಿಷ್ಟ ವಿಳಾಸವೂ ಸಹ ಇಲ್ಲ. ಸರ್ಕಾರ ಕುಟುಂಬಗಳ ನೋಂದಣಿಗಾಗಿ ನಿರ್ದಿಷ್ಟಪಡಿಸಿರುವ ದಾಖಲೆಗಳನ್ನು ಸಹ ಇವರು ಹೊಂದಿಲ್ಲ. ಇಂತಹ ಅಲೆಮಾರಿ ಕುಟುಂಬಗಳ ಗಣತಿಗೆ ಸರ್ಕಾರ ಮತ್ತು ಆಯೋಗ ವಿಶೇಷ ಗಮನಹರಿಸಿಲ್ಲ. ಈ ಕುರಿತು ಸಮಾಜಗಳ ಮುಖಂಡರ ಸಭೆ ಕರೆದು ಚರ್ಚಿಸುವಂತೆ ಈಗಾಗಲೇ ಆಯೋಗಕ್ಕೆ ಪತ್ರ ಬರೆದರೂ ಸಹ ನಿರ್ಲಕ್ಷಿಸಲಾಗಿದೆ. ಒಂದೆಡೆ ನೆಲೆಯೇ ಇಲ್ಲದ ಪ್ರಜಾ ಅಲೆಮಾರಿ ಹಾಗೂ ಸಾಮಾಜಿಕ ಕಳಂಕಿತ ಹಿನ್ನಲೆಯುಳ್ಳ ಸಮುದಾಯಗಳನ್ನು ನಿರ್ದಿಷ್ಟವಾಗಿ ಗಣತಿಗೆ ಒಳಪಡಿಸಲು ವಿಶಿಷ್ಟವಾದ ತಜ್ಞರು ಮತ್ತು ಸ್ವಯಂ ಸ್ವಯಂಸೇವಾ ಸಂಸ್ಥೆಗಳ ಸಮನ್ವಯದೊಂದಿಗೆ ವಿಶೇಷ ನೋಂದಣಿ ಅಭಿಯಾನವನ್ನು ಕೈಗೊಳ್ಳಬೇಕು. ಹಾಗೂ ಸಮೀಕ್ಷಾ ಪೂರ್ವದಲ್ಲಿ ಸ್ಥಳೀಯ ಜಿಲ್ಲಾಡಳಿತ ಪ್ರಚಾ ಅಲೆಮಾರಿ ಸಂಘಟನೆಗಳ ಮುಖಂಡರ ಸಲಹೆ ಮತ್ತು ಸಹಕಾರವನ್ನು ಪಡೆದುಕೊಳ್ಳುವಂತೆ ಈ ಕೂಡಲೇ 'ಸರ್ಕಾರ ಮತ್ತು ಆಯೋಗ ಜಿಲ್ಲಾಡಳಿಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಒತ್ತಾಯಿಸುತ್ತೇವೆ.
ಈ ಜಾತಿಗಣತಿ ಕಾರ್ಯದಲ್ಲಿ ಯಾವುದೇ ಜಾತಿಗಳ ನಡುವಿನ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಮತ್ತು ರಾಜಕೀಯ ಸ್ಥಾನಮಾನಗಳ ಕುರಿತ ಮಾಹಿತಿಗಳನ್ನು ಯಾವುದೇ ಲೋಪದೋಷಗಳಿಲ್ಲದೇ ವಾಸ್ತವಿಕವಾಗಿ ನಮೂದಿಸಬೇಕು. ಪಕ್ಷಪಾತವಿಲ್ಲದಂತೆ ಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳುವಂತೆ ಗಣತಿದಾರರಿಗೆ ಆಯೋಗ & ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕು, ಹೀಗೆ ಎಲ್ಲಾ ಹಂತದಲ್ಲಿಯೂ ಎಚ್ಚರ ವಹಿಸುವಂತೆ ಆಗ್ರಹಿಸುತ್ತದೆ. ಒಂದು ವೇಳೆ ಉಪಜಾತಿಗಳನ್ನು ಗುರುತಿಸುವಲ್ಲಿ ಪಟ್ಟಭದ್ರ ಹಿತಾಶಕ್ತಿಯುಳ್ಳ ಷಡ್ಯಂತ್ರ ಮಾಡಿದರೆ, ಗಣತಿಯನ್ನು ತಿರಸ್ಕರಿಸುವಂತೆ ನ್ಯಾಯಾಲಯಲ್ಲಿ ಪ್ರಶ್ನಿಸಲಾಗುವುದು. ಆದ್ದರಿಂದ ಈ ಬಗ್ಗೆ ಪ್ರಾಥಮಿಕ ಹಂತದಲ್ಲಿಯೇ ಸಮೀಕ್ಷೆ ಪಾರದರ್ಶಕವಾಗುವಂತೆ ಆಯಾ ಜಿಲ್ಲಾಡಳಿತ ಹಾಗೂ ಗಣತಿಯ ಉಸ್ತುವಾರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಒತ್ತಾಯಿಸಿದರು.
Comments
Post a Comment