ಕೆ.ಎಸ್.& ಡಿ.ಎಲ್.ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಜಿ. ಆರ್. ಶಿವಶಂಕರ್ ಅವರು ಒತ್ತಾಯಿಸಿದರು.

ಬೆಂಗಳೂರು, ಮೇ 22, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕೆ.ಎಸ್.& ಡಿ.ಎಲ್ ಮಾರ್ಕೆಟಿಂಗ್ ಸ್ಟಾಫ್ ಅಂಡ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಜಿ. ಆರ್. ಶಿವಶಂಕರ್ ಅವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಕೆ.ಎಸ್.& ಡಿ.ಎಲ್. ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನೇರ ಗುತ್ತಿಗೆ ಕಾರ್ಮಿಕರಿಗೆ, ಗುತ್ತಿಗೆ ಕಾರ್ಮಿಕರ ಮತ್ತು ಕೆ.ಎಸ್.& ಡಿ.ಎಲ್.ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು. 

ಕೆ.ಎಸ್.ಹಿಡಿ.ಎಲ್. ಕಾರ್ಖಾನೆಯಲ್ಲಿ ಕಳೆದ 25 ವರ್ಷಗಳಿಂದ ಮಾರುಕಟ್ಟೆ ವಿಭಾಗದಲ್ಲಿ ನೇರ ಗುತ್ತಿಗೆ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ನಾವು ಮಾರುಕಟ್ಟೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದರಿಂದ ಕಾರ್ಖಾನೆ 10-15 ವರ್ಷಗಳಿಂದ ನಿರಂತರವಾಗಿ ಲಾಭಗಳಿಸುತ್ತಿರುವುದಲ್ಲದೇ ಸರ್ಕಾರಕ್ಕೆ ಡಿವಿಡೆಂಟ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಸಹ ಪ್ರತಿ ವರ್ಷ ಕೆ.ಎಸ್.ಹಿಡಿ.ಎಲ್. ವತಿಯಿಂದ ಹಣ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ಕೆ.ಎಸ್.&ಡಿ.ಎಲ್. ವತಿಯಿಂದ 435ಕ್ಕೂ ಹೆಚ್ಚು ಕೋಟಿ ಡಿವಿಡೆಂಟ್, ಸ್ಪೆಷಲ್ ಡಿವಿಡೆಂಟ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಲಾಗಿದೆ.

ಕೆ.ಎಸ್.ಹಿಡಿ.ಎಲ್. ಕಾರ್ಖಾನೆಯಲ್ಲಿ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ನೌಕರರಿಗೆ ತುಟ್ಟಿಭತ್ಯೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ, ಬೋನಸ್ ಕಾಯಿದೆ ಪ್ರಕಾರ ಬೋನಸ್ ಇತ್ಯಾಧಿಗಳನ್ನು ನೀಡುತ್ತಿಲ್ಲ. ಇದರ ಬಗ್ಗೆ ನಮ್ಮ ಸಂಘದ ವತಿಯಿಂದ ಹಲವಾರು ಬಾರಿ ಮನವಿ ಮಾಡಿದರು ಕಳೆದ 2ವರ್ಷದಿಂದ ಇನ್‌ ಕ್ರಿಮೆಂಟ್ ಅನ್ನು ಸಹ ನೀಡಿಲ್ಲ. ನಮಗೆ 20,000/- ದಿಂದ 30.000/- ದವರೆಗೆ ವೇತನ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಕೆ.ಎಸ್.&ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಗುತ್ತಿಗೆ ಕಾರ್ಮಿಕರಿಗೆ ನಿರೀಕ್ಷೆಗೂ ಮೀರಿ ವೇತನ ನೀಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರೂ.21000/- ದಿಂದ 30.000/- ವರೆಗೆ ವೇತನ ನೀಡಲಾಗುತ್ತಿದೆ.

ಆದರೆ ಇತ್ತೀಚೆಗೆ ಆಡಳಿತ ವರ್ಗ ನೇಮಿಸಿಕೊಂಡ ರಂಜಿತ್, ಬಿ.ಎ. - 60,000/-, ಶಮಿ ಮಹಮದ್ ಬಿ.ಬಿ.ಎ. ಇವರಿಗೆ 75,000/-, ಎಸ್.ಪಲ್ಲವಿ, ಬಿಕಾಂ. ಇವರಿಗೆ 61,000/-, ಶ್ರೀಧರ್ ಯಾದವ್, ಬಿಕಾಂ.. ಇವರಿಗೆ 96,889/-, ಮೊಹಮದ್ ರಫಿ, ಬಿ.ಕಾಂ. 1,50,000/-, ಅಖಿಲ ವೆಂಕಟೇಶ ಗೌಡ, ಬಿ.ಕಾಂ. ರವರಿಗೆ 75,000/-, ಶ್ರೀ ಸುಶಾಂತ್ ಕುಂದೂರು, ಬಿಕಾಂ., 75,000/-. ನವೀನ್ ಕುಮಾರ್, ಪಿಯುಸಿ -65,000/-, ಶ್ರೀನಿವಾಸಯ್ಯ (ರೀಟೈರ್ಸ್) - 50,000/- ಶಂಕರಪ್ಪ (ರೀಟೈರ್)-65,000/-, ಮಹದೇವ (ಅಟೆಂಡರ್ ರಿಟೈರ್)-55,000/-, ತಿಮ್ಮಾರೆಡ್ಡಿ (ರೀಟೈರ್)-51.400/-, ಶಶಿಕುಮಾರ್-5,0000/- ಶಶಿಕುಮಾರ್ ಸುಂದರ್ ರಾಜ್ (ರೀಟೈರ್)-55,000/-. ಶ್ರೀಕಂಠ ಮೂರ್ತಿ (ರೀಟೈರ್)-65.000/-, ಶಿವಮೂರ್ತಿ, ಎಸ್.ಎಸ್.ಎಲ್.ಸಿ. 65,000/-. ಆದರೆ ಕಳೆದ 10-15-25 ವರ್ಷಗಳಿಂದ ಕೆಲಸ ಮಾಡುವ ಕಾರ್ಮಿಕರಿಗೆ ಉದಾಹರಣೆ ಮೂಲಕ ಹೇಳುವುದಾದರೆ , 20.50-16265/-, . 2.2.-16,225/-, 3., 20.50-30,000/-, 5 ಕಾರ್ಮಿಕರಿಗೆ 15,000/- ರಿಂದ 30.000/- ವರೆಗೆ ಮಾತ್ರ ನೀಡಲಾಗುತ್ತಿದೆ.

ಸದರಿ ಮಾರುಕಟ್ಟೆ ವಿಭಾಗದ ನೌಕರರ 2 ವಿವಾದಗಳು ಈಗಾಗಲೇ ಕಾರ್ಮಿಕ ನ್ಯಾಯಾಲಯದಲ್ಲಿವೆ. ವಿವಾದ ನಡೆಯುತ್ತಿರುವಾಗಲೇ ಆ ಕಾರ್ಮಿಕರಿಗೆ ಯಾವುದೇ ತೊಂದರೆ ಅಂದರೆ ಕೆಲಸದಿಂದ ತೆಗೆಯುವುದು ಮತ್ತು ವೇತನ ಕಡಿಮೆ ಮಾಡಲು ಅವಕಾಶವಿಲ್ಲ. ಆದರೆ ಕೆ.ಎಸ್.&ಡಿ.ಎಲ್. ಪ್ರಧಾನ ವ್ಯವಸ್ಥಾಪಕರಾದ ಎಂ.ಗಂಗಪ್ಪ, ಬಿ.ಎನ್.ಅರವಿಂದ್, ಆಡಳಿತಾಧಿಕಾರಿ ಪ್ರಜ್ಞಾ ಅಂಬಾಳ್ ಹಾಗೂ ಬೆಂಗಳೂರು ಮಾರುಕಟ್ಟೆ ವ್ಯವಸ್ಥಾಪಕರಾದ ನ್.ಗುರುಪ್ರಸಾದ್ ರವರು ವಿವಾದವಿರುವಾಗಲೇ ಎಲ್ಲಾ ಕಾರ್ಮಿಕರು ನವೀಕರಣದ ಪತ್ರಕ್ಕೆ ಸಹಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಮಾಡದಿದ್ದಲ್ಲಿ ಇವರನ್ನು 25-05-2025 ರಿಂದ ಕೆಲಸ ನಿರಾಕರಿಸುವುದಾಗಿ ತಿಳಿಸಿದ್ದಾರೆ.

ಕೆ.ಎಸ್.&ಡಿ.ಎಲ್. ಕಾರ್ಖಾನೆಯಲ್ಲಿ ಕಳೆದ 2 ವರ್ಷದಿಂದ ಕಾರ್ಮಿಕರಿಗೆ ಕಾನೂನಿನ ಪ್ರಕಾರ ನೀಡಬೇಕಿರುವ 09 ವರ್ಷದ ಬೋನಸ್, ರಜೆಗಳ ಸವಲತ್ತು ಹಾಗೂ ಇತರ ಅರ್ಹ ಸವಲತ್ತುಗಳನ್ನು ನೀಡುವ ಬಗ್ಗೆ ಈಗಾಗಲೇ ಕಾರ್ಮಿಕ ಇಲಾಖೆ ನೋಟೀಸ್ ಹಾಗೂ ಶೋಕಾಸ್ ನೋಟೀಸ್ ನೀಡಿದ್ದಾರೆ. ಅದರ ಪ್ರತಿಗಳನ್ನು ಇದರ ಜೊತೆ ಲಗತ್ತಿಸಲಾಗಿದೆ.

ಕೆ.ಎಸ್.&ಡಿ.ಎಲ್. ಕಾರ್ಖಾನೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪನವರ ಕಾಲದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಇನ್ನು ದುಪ್ಪಟ್ಟು ರೀತಿಯಲ್ಲಿ ನಡೆಯುತ್ತಿದೆ. ಕೆ.ಎಸ್.&ಡಿ.ಎಲ್. ಕಾರ್ಖಾನೆಗೆ ಕೊಂಡುಕೊಳ್ಳುವ ಕಚ್ಚಾ ಸಾಮಗ್ರಿ, ಸುಗಂಧ ದ್ರವ್ಯಗಳು, ಸೋಪ್ ನ್ಯೂಡಲ್ಸ್, ಶ್ರೀಗಂಧದ ಎಣ್ಣೆಯ ಖರೀದಿಯ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಇತರೆ ನಿಗಮಗಳಲ್ಲಿ ನಡೆದಿರುವ ಲೂಟಿಗಿಂತ ದುಪ್ಪಟ್ಟಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಕೆ.ಎಸ್.&ಡಿ.ಎಲ್.ನಲ್ಲಿ ನಡೆದಿರುವ ಒಂದೊಂದು ಭ್ರಷ್ಟಾಚಾರಗಳ ಬಗ್ಗೆ ಸಿ.ಐ.ಡಿ. ಅಥವಾ ಸಿ.ಓ.ಡಿ ತನಿಖೆ ನಡೆಸಿದರೆ ಭ್ರಷ್ಟಾಚಾರ ಬೆಳಕಿಗೆ ಬರುತ್ತದೆ. ಕಳೆದ 25 ವರ್ಷಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ನೇರ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಿ ಸೂಕ್ತರಕ್ಷಣೆ ನೀಡಲು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತಿದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium