ರಾಜ್ಯ ಸರ್ಕಾರವು ಜಾತಿಗಣತಿ ಸಮೀಕ್ಷೆಯ ಕಾಲಾವಧಿ ವಿಸ್ತರಣೆ ಮಾಡಬೇಕೆಂದು 'ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ'ದ ಪದಾಧಿಕಾರಿಗಳು ಒತ್ತಾಯಿಸಿದರು.

ಬೆಂಗಳೂರು, ಮೇ 15, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

  ರಾಜ್ಯ ಸರ್ಕಾರವು ಜಾತಿಗಣತಿ ಸಮೀಕ್ಷೆಯ ಕಾಲಾವಧಿ ವಿಸ್ತರಣೆ ಮಾಡಬೇಕೆಂದು 'ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ'ದ ಪದಾಧಿಕಾರಿಗಳು ಒತ್ತಾಯಿಸಿದರು. 

 ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ನಾಗಮೋಹನ ದಾಸ್ ರವರು ಸಮಿತಿಯ ಮಧ್ಯಂತರ ವರದಿಯ ಶಿಫಾರಸ್ಸುಗಳನ್ನು ಮಾಡಿದ ಮೇರೆಗೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕೆಂಬ ನಿರ್ಣಯದ ಆಧಾರದ ಮೇರೆಗೆ ಸರ್ಕಾರವು 2 05.05.2025 80 17.05.2025 ដ ಪರಿಶಿಷ್ಟ ಜಾತಿಯ ದತ್ತಾಂಶವನ್ನು ಸಂಗ್ರಹಿಸಬೇಕೆಂಬುದನ್ನು ಸರ್ಕಾರದ ವತಿಯಿಂದ 56,000 ಶಿಕ್ಷಕರನ್ನು ನೇಮಕ ಮಾಡಿ ಹಲವಾರು ಅಂಶಗಳನ್ನು ಹೊಂದಿದ ಪಟ್ಟಿಯನ್ನು ಮನೆ ಮನೆಗೆ ಹೋಗಿ ದತ್ತಾಂಶವನ್ನು ಬರೆದುಕೊಂಡು ಸಲ್ಲಿಸುವ ಕುರಿತು.

De ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕೆಂಬ ನಿರ್ಣಯದ ಮೇರೆಗೆ ಸುಮಾರು 1 ರಿಂದ 48 ವಿವರಣೆಗಳನ್ನು ಹೊಂದಿದ ನಮೂನೆಯನ್ನು ಬರೆದು ತುಂಬಿಸಿ, ಸರ್ಕಾರಕ್ಕೆ ಸಲ್ಲಿಸಲು 15 ದಿನಗಳ ಕಾಲ ವೇಳೆಯನ್ನು ನಿಗಧಿಪಡಿಸಿರುತ್ತಾರೆ.

ಅದಾಗಿ ಲಂಬಾಣಿ ಜನಾಂಗದವರು ಯಾವುದೇ ರೀತಿಯ ಭೂಮಿಕಯ ಒಡೆತನ ಹೊಂದದೇ ಇದ್ದ ಕಾರಣ ಗೂಳೆ ಹೋಗುವುದು ಮತ್ತು ಮಕ್ಕಳನ್ನು ಮಾರಾಟ ಮಾಡುವ ಪದ್ಧತಿಯನ್ನು ರೂಢಿಸಿಕೊಂಡಿರುತ್ತಾರೆ. ಅದೇ ರೀತಿ ಈಗಾಗಲೇ ಗಡಿ ಪ್ರದೇಶಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ಹಾಗೂ ತಮಿಳುನಾಡು ಪ್ರದೇಶಗಳಿಗೆ ಹೋಗಿ ಜೀವನ ನಡೆಸುತ್ತಿರುವ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತಂದಿರುತ್ತೇವೆ.

ಅದಾಗಿ ಸರ್ಕಾರದ ವತಿಯಿಂದ ಇಲ್ಲಿಯವರೆಗೆ 101 ಜಾತಿಗಳ ವಿವರಣೆಗಳನ್ನು ಪತ್ರಿಕೆಗಳಲ್ಲಿ ಆಯಾ ಜಾತಿಯ ಜನರಿಗೆ ಮುಟ್ಟುವಂತೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ಇದ್ದ ಕಾರಣ ಮತ್ತು ಒಂದೇ ಜಾತಿಯ ಮಾದಿಗ ಜಾತಿಯ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟಣೆಯಾಗಿರುವುದನ್ನು ತಿಳಿಯಬಯಸುತ್ತೇವೆ. ಅದೇ ರೀತಿ ಲಂಬಾಣಿ ಜನಾಂಗದವರಿಗೆ ಶೈಕ್ಷಣಿಕ ಕೊರತೆ ಇರುವುದರಿಂದ ಮತ್ತು ಸ್ವಂತ ನೆಲೆ ಇರದೇ ಇರುವ ಕಾರಣ ಅವರು ಯಾವಾಗಲೂ ತಮ್ಮ ಪದ್ಧತಿಯ ಪ್ರಕಾರ ದೀಪಾವಳಿ ಹಬ್ಬದಂದು ತಮ್ಮ ಪೂರ್ವಜಿಕರಿಗೆ ವಂದನೆ ಮಾಡಲು ಎಡೆಯಿಡುವ ಪದ್ಧತಿಯನ್ನು ರೂಢಿಸಿಕೊಂಡಿರುತ್ತಾರೆ. ಆದ್ದರಿಂದ ಗೂಳೆ ಹೋಗಿರುವ ಲಂಬಾಣಿ ಜನಾಂಗದವರು ಈ ಹಬ್ಬದ ದಿನದಂದು ಆಚರಣೆ ಮಾಡಲು ತಮ್ಮ ಸ್ಥಳಕ್ಕೆ ಬರುತ್ತಾರೆ.

ಅದಾಗಿ ಬೆಂಗಳೂರು ನಗರ ಪ್ರದೇಶದಲ್ಲಿ ಯಲಹಂಕ, ಅರೆಕೆರೆ, ಜಿಗಣಿ, ಬನಶಂಕರಿ 3ನೇ ಹಂತ (ಪಿಇಎಸ್ ಕಾಲೇಜು ಎದುರು) ಕದಿುನಹಳ್ಳಿ, ಬನ್ನೇರುಘಟ್ಟರಸ್ತೆ, ಹೊಸಕೋಟೆ ಮುಖ್ಯರಸ್ತೆಯಲ್ಲಿರುವ ಅವಲಹಳ್ಳಿ ಗ್ರಾಮ ಹಾಗೂ ಇತರೆ ಪ್ರದೇಶಗಳಲ್ಲಿ ಕೂಲಿ ಕೆಲಸಕ್ಕಾಗಿ ಬಂದು ಎಲ್ಲರೂ ಇಲ್ಲಿಯೇ ವಾಸ ಮಾಡುತ್ತಿರುತ್ತಾರೆ. ಲಂಬಾಣಿ ಜನರ ವಿಳಾದ ಮುಖಾಂತರ ಬೆಂಗಳೂರಿನಲ್ಲಿ ಗುರುತಿಸಲಾಗಿ ಸುಮಾರು 5 ಲಕ್ಷ ಲಂಬಾಣಿ ಜನಾಂಗದವರು ವಾಸ ಮಾಡುತ್ತಿರುತ್ತಾರೆ. ಮುಖ್ಯವಾಗಿ ತಮ್ಮ ಗಮನಕ್ಕೆ ತರುವುದೇನೆಂದರೆ ಈಗಾಗಲೇ 10 ದಿವಸ ದತ್ತಾಂಶ ವಿಚಾರವಾಗಿ ಸಂಘದ ಅಧ್ಯಕ್ಷರ ಮನೆಗಾಗಲೀ ಅಥವಾ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಮನೆಗೆ ಯಾರೂ ದತ್ತಾಂಶ ವಿಚಾರವಾಗಿ ಬಂದಿರುವುದಿಲ್ಲ. ಈ ರೀತಿ ಇರುವುದರಿಂದ ಸಮಯದ ಅಭಾವ ಇರುತ್ತದೆ. ಈ ಮೇಲೆ ಹೇಳಿದ ಕಾರಣಗಳಿಂದು ಸುಮಾರು 6 ತಿಂಗಳ ಕಾಲ ಮುಂದುವರೆಸಿ ಇನ್ನು 100 ಜಾತಿಗಳ ಸಮೀಕ್ಷೆ ಆಗಬೇಕಾಗಿರುತ್ತದೆ.

 ಲಕ್ಕಿ ಪರಶೋಧಕರು : ಕೆ.ಜಿ. ಗೋವಿಂದಪ್ಪ

ಅದಾಗಿ ನಮ್ಮ ಸಂಘವು ಕರ್ನಾಟಕದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ಹೋಗಿ ನಮ್ಮ ಬಂಜಾರ/ಲಂಬಾಣಿ ತಾಂಡಗಳಿಗೆ ಹೋಗಿ ದತ್ತಾಂಶದ ಬಗ್ಗೆ ಅರಿವನ್ನು ಮೂಢಿಸಿ ಬಂದಿರುತ್ತೇವೆ. ಆದರೆ ಹಲವಾರು ಲಂಬಾಣಿ ಜನಾಂಗದವರು ಕೂಲಿ ಕೆಲಸಕ್ಕೆ ಅವಲಂಭಿತ ವಾಗಿದ್ದರಿಂದ ಬೆಳಿಗ್ಗೆ ಎದ್ದು ಕೂಲಿ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಬರುವ ರೂಢಿಯನ್ನು ಅಳವಡಿಸಿಕೊಂಡಿರುವುದು ಕಂಡುಬಂದಿರುತ್ತದೆ. ನಮ್ಮ ಕರ್ನಾಟಕದಲ್ಲಿ ಹಲವಾರು ತಾಂಡಗಳು ಕಂದಾಯ ತಾಂಡಗಳಾಗಿ ಬದಲಾವಣೆಯಾಗಿದ್ದರು. ನಮ್ಮ ಲಂಬಾಣಿ ಜನಾಂಗದವರು ಬೇರೆ ಬೇರೆ ತಾಂಡ/ಹಟ್ಟಿಗಳನ್ನು ಕಟ್ಟಿಕೊಂಡು ವಾಸವಾಗಿರುತ್ತಾರೆ. ಅವುಗಳು ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯದೇ ಇದ್ದ ಕಾರಣ ಅಲ್ಲಿಯೇ ವಾಸವಾಗಿದ್ದುಕೊಂಡು ಚುನಾವಣೆ ಕಾಲದಲ್ಲಿ ಬಂದು ಓಟು ಹಾಕುವ ವಾಡಿಕೆ ಇರುತ್ತದೆ. ಈಗಾಗಿ ನಮ್ಮ ಲಂಬಾಣಿ ಜನಾಂಗದವರು ಗೂಳೆ ಹೋಗುವುದು ಮತ್ತು ಬೇರೆ ಊರಿಗೆ ಕೂಲಿ ಮಾಡಲು ಹೋಗುತ್ತಿರುತ್ತಾರೆ. ಆದರೆ ಲಂಬಾಣಿಗಳಿಗೆ ಶ್ರೇಷ್ಠವಾದ ಹಬ್ಬವು ದೀಪಾವಳಿ ದಿನದಂದು ಎಲ್ಲರೂ ಊರಿಗೆ ಬರುವ ವಾಡಿಕೆಯನ್ನು ಹೊಂದಿರುತ್ತಾರೆ ಮತ್ತು ಆ ಊರಿನಲ್ಲಿ ಹಬ್ಬಗಳನ್ನು ಆಚರಿಸುತ್ತಾ 2-3 ದಿನಗಳ ಕಾಲ ಊರಿನಲ್ಲಿಯೇ ಇರುತ್ತಾರೆ.

ಅದಾಗಿ ನಮಗೆ ಬಂದ ವರದಿಯ ಪ್ರಕಾರ ನಿಯೋಜಿತ ಶಿಕ್ಷಕರು ತಾಂಡಗಳಿಗೆ ಬೆಳಿಗ್ಗೆ 10-00 ರಿಂದ ಸಂಜೆ 5-00 ಗಂಟೆಯ ಒಳಗೆ ಹೋಗಿದ್ದಾಗ ಯಾರು ಸಿಗದೇ ವಾಪಸ್ಸು ಬಂದಿರುವ ಕಂಡು ಬಂದಿರುತ್ತದೆ. ಏಕೆಂದರೆ ಲಂಬಾಣಿ ಜನಾಂಗದವರು ಕೂಲಿ ಮಾಡಲು ಬೇರೆ ಊರುಗಳಿಗೆ ಹೋಗಿದ್ದರಿಂದ ನಿಯೋಜಿತ ಶಿಕ್ಷಕರು ತಾಂಡಗಳಿಗೆ ಸೂಚನೆ ನೀಡದೇ ಹೋಗುವುದರಿಂದ, ದತ್ತಾಂಶ/ಜನಗಣತಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಲಂಬಾಣಿ/ಬಂಜಾರ ಜನಾಂಗದವರ ಹೆಸರುಗಳನ್ನು ಆಂಧ್ರ ಮತ್ತು ಮಹಾರಾಷ್ಟ್ರ ಗಡಿಗಳಲ್ಲಿ ವಾಸವಾಗಿರುವುದನ್ನು ನಮೂದಿಸಲಾಗಿರುತ್ತದೆ. ಆದರೆ ಈ ವಿಚಾರವಾಗಿ ರಾಯಚೂರು ಜಿಲ್ಲೆಯಲ್ಲಿ ತಕರಾರು ಮಾಡಿದ್ದರಿಂದ ದತ್ತಾಂಶ ಜನಗಣತಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.