ಬಿಬಿಎಂಪಿ ವತಿಯಿಂದ ನಡೆದ 'ಅಪ್ಪು ಕಪ್ - ಸೀಸನ್ 1' ಪಂದ್ಯಾವಳಿಯಲ್ಲಿ ವಕೀಲರ ತಂಡಕ್ಕೆ ಜಯ !!

ಬೆಂಗಳೂರು, ಜೂನ್ 7, 2025

ಬೆಂಗಳೂರಿನ YMCA ಕ್ರೀಡಾಂಗಣದಲ್ಲಿ 'ಅಪ್ಪು ಕಪ್ - ಸೀಸನ್ 1' ಪಂದ್ಯಾವಳಿ ನಡೆಯಿತು. ಈ ಪಂದ್ಯಾವಳಿಯನ್ನು ಬಿಬಿಎಂಪಿ ನೌಕರರ ಕ್ಷೇಮಭಿವೃದ್ಧಿ ಸಂಘವು ಆಯೋಜಿಸಿತ್ತು. 

ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಅವರ ನೇತೃತ್ವದಲ್ಲಿ
'ಅಪ್ಪು ಕಪ್ - ಸೀಸನ್ 1' ಪಂದ್ಯಾವಳಿ ನಡೆಯಿತು.

ಈ ಪಂದ್ಯಾವಳಿಯಲ್ಲಿ ಬಿಬಿಎಂಪಿ ತಂಡ, ವಕೀಲರ ತಂಡ, ಮಾಧ್ಯಮ ತಂಡ ಮತ್ತು ಪೊಲೀಸ್ ತಂಡಗಳು ಭಾಗಿಯಾಗಿದ್ದವು. 

ವಕೀಲರ ತಂಡ ಹಾಗೂ ಮಾಧ್ಯಮ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ಫೈನಲ್ ಪಂದ್ಯದಲ್ಲಿ ವಕೀಲರ ತಂಡ ವಿಜಯ ಸಾಧಿಸಿತು. 

ಪಂದ್ಯಾವಳಿಯಲ್ಲಿ ಅದ್ಭುತವಾಗಿ ಆಟವಾಡಿದ ವಕೀಲರ ತಂಡವು 'ಅಪ್ಪು ಕಪ್ - ಸೀಸನ್ 1' ಪಂದ್ಯಾವಳಿಯ ವಿಜೇತ ತಂಡವಾಗಿ ಹೊರಹೊಮ್ಮಿತು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ