ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಜೂನ್ 18ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ "ವಜ್ರ ಮಹೋತ್ಸವ ಹಾಗೂ ವಜ್ರಜ್ಯೋತಿ ಸ್ಮರಣ ಸಂಚಿಕೆ ಕಾರ್ಯಕ್ರಮ" ನಡೆಯಲಿದೆ.



ಬೆಂಗಳೂರು, ಜೂನ್ 17, 2025 

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ' ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 


ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಜೂನ್ 18ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ "ವಜ್ರ ಮಹೋತ್ಸವ ಹಾಗೂ ವಜ್ರಜ್ಯೋತಿ ಸ್ಮರಣ ಸಂಚಿಕೆ ಕಾರ್ಯಕ್ರಮ" ನಡೆಯಲಿದೆ. 


ಕವಿಪ್ರನಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಕೆ. ಬಲರಾಮ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವರಾಂ, ಕಾರ್ಯಾಧ್ಯಕ್ಷರುಗಳಾದ ಶ್ರೀ ಜೆ. ಮಂಜುನಾಥ್, ಶ್ರೀ ಡಾಕ್ಯಾನಾಯಕ್, ಹಿರಿಯ ಉಪಾಧ್ಯಕ್ಷರಾದ ಶ್ರೀ ಹೆಚ್ ಆರ್ ಅಶ್ವಥಪ್ಪ, ಜಂಟಿ ಕಾರ್ಯದರ್ಶಿಗಳಾದ ಶ್ರೀ ಕೆ.ಪಿ. ಸೋಮಶೇಖರ್, ಖಜಾಂಚಿಗಳಾದ ಶ್ರೀ ಸಿ. ವರದರಾಜು ಮತ್ತು ಸಹ ಖಜಾಂಚಿಗಳಾದ ಶ್ರೀ ಜಿ.ಯು. ಅವೀನ್ ರವರು ಭಾಗವಹಿಸಲಿದ್ದಾರೆ.

1. 'ವಜ್ರಜ್ಯೋತಿ' ಸ್ಮರಣ ಸಂಚಿಕೆ ಬಿಡುಗಡೆ

2. 2024ನೇ ಸಾಲಿನಲ್ಲಿ SSLC ಮತ್ತು PUC ಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ.

3. ಸಂಘದ ಪ್ರಮುಖವಾದ 5 ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುತ್ತಿದ್ದು, ಅವುಗಳು:

1) 01.04.2006 2 7528 28, 01.04.20060 0 ಅಧಿಸೂಚನೆಯಂತೆ ನೇಮಕಾತಿಗೊಂಡು, 01.04.2006 ಮತ್ತು ನಂತರದ ದಿನಗಳಲ್ಲಿ ಕೆಲಸಕ್ಕೆ ಸೇರಿರುವ ನೌಕರರಿಗೆ ಮತ್ತು 01.04.2006ರ ನಂತರ ನೇಮಕಾತಿ ಹೊಂದಿದ ಎಲ್ಲಾ ನೌಕರರಿಗೂ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ. ಬುದ

2) ನಿಗಮದಲ್ಲಿ ಖಾಲಿ ಇರುವ ಸುಮಾರು 35000/- ಹುದ್ದೆಗಳನ್ನು ಭರ್ತಿ ಮಾಡುವಂತೆ, ಎಲ್ಲಾ ನೌಕರರಿಗೂ (ನಿವೃತ್ತ ನೌಕರರನ್ನು ಒಳಗೊಂಡಂತೆ) ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದು.

3) ವಿದ್ಯುತ್ ನಿಗಮಗಳನ್ನು ಖಾಸಗೀಕರಣಗೊಳಿಸದೆ, ಸರ್ಕಾರದ ಅಧೀನದಲ್ಲೇ ಉಳಿಸಿಕೊಳ್ಳುವುದು ಮತ್ತು 1998ರಿಂದ ಕೆಲಸ ನಿರ್ವಹಿಸುತ್ತಿರುವ ಶುಚಿಗಾರರ ಸೇವೆಯನ್ನು ಖಾಯಂಗೊಳಿಸುವುದು.

4) ನಿಗಮದಲ್ಲಿ ನೌಕರರ ಸೇವಾ ನಿಯಮಾವಳಿಯನುಸಾರ ಹಿಂದಿನಿಂದ ಪಾಲಿಸಿಕೊಂಡು ಬರುತ್ತಿದ್ದ ನಿಗಮದ 'ಸಿ' ಮತ್ತು' ಡಿ' ಗುಂಪಿನ ನೌಕರರ ನೇಮಕಾತಿ ಬಡ್ತಿ, ಮತ್ತು ವರ್ಗಾವಣೆಯ ಅಧಿಕಾರವನ್ನು ಈ ಹಿಂದಿನಂತೆ ಸಂಬಂಧಿಸಿದ ಪ್ರಾಧಿಕಾರಗಳೇ ನಿರ್ವಹಿಸಲು ಆದೇಶಿಸುವುದು.

5) ಈ ಹಿಂದೆಯೂ ನಿಗಮದಲ್ಲಿದ್ದ ಅವಕಾಶದಂತೆ ನಿಗಮದಲ್ಲಿ ವಿದ್ಯುತ್ ಅಪಘಾತದಿಂದ ಮತ್ತು ಅನಾರೋಗ್ಯದಿಂದ ದೈಹಿಕ ಅಶಕ್ತತೆ ಹೊಂದಿರುವ ನೌಕರರಿಗೆ ಸ್ವಯಂ ನಿವೃತ್ತಿ ನೀಡಿ, ಅವರ ಕುಟುಂಬದ ಅವಲಂಭಿತ ಸದಸ್ಯರೊಬ್ಬರಿಗೆ ವಿಶೇಷ ಅನುಕಂಪದ ಆಧಾರದಲ್ಲಿ ಅರ್ಹ ನೇಮಕಾತಿ ನೀಡಲು ಅದೇಶಿಸುವುದು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.