ಬೆಂಗಳೂರಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಜೂನ್ 22 ರಂದು ರೋಟರಿ ಉದ್ಯೋಗ ಸಂಸ್ಥೆ ವತಿಯಿಂದ "ಸಂಗೀತ ಸಂಜೆ"ಯನ್ನು ಆಯೋಜಿಸಿದೆ.



ಬೆಂಗಳೂರು, ಜೂನ್ 19, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರೋಟರಿ ಬೆಂಗಳೂರು ಉದ್ಯೋಗ್ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ರವಿರಾಜ್ ಶೆಟ್ಟಿ ಅವರು ಮಾತನಾಡಿದರು. 

ರೋಟರಿ ಬೆಂಗಳೂರು ಉದ್ಯೋಗ್ ರಜತ ಮಹೋತ್ಸದ ಸಂಭ್ರಮವನ್ನು ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಜೂನ್ 22 ರಂದು ಸಂಜೆ ಆಚರಿಸುತ್ತಿದೆ.

ರೋಟರಿ ಬೆಂಗಳೂರು ಉದ್ಯೋಗ್ ಕಳೆದ 25 ವರ್ಷಗಳಿಂದ ಅನೇಕ ಸಮಾಜ ಮುಖಿ ಸೇವೆಗಳನ್ನು ಮಾಡುತ್ತಿದೆ. ಶಾಲೆಗಳಿಗೆ ಪುಸ್ತಕ, ಬೇಂಚ್, ಶೌಚಾಲಯ, ಸಂಭಾಗಣದ ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ.

ರೋಟರಿ ಬೆಂಗಳೂರು ಉದ್ಯೋಗ್ ಕಳೆದ ವರ್ಷದಿಂದ ರವಿ ಕಿರ್ಲೋಸ್ಕರ್ ಆಸ್ಪತ್ರೆಯಲ್ಲಿ ಬಡವರಿಗೆ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿ, ಅತಿ ಕಡಿಮೆ ದರದಲ್ಲಿ ಡಯಾಲಿಸಿಸ್‌ ಅನ್ನು ಮಾಡುತ್ತಿದ್ದೇವೆ. ಇದಲ್ಲದೇ ಸಿದ್ದಗಂಗಾ ಆಸ್ಪತ್ರೆ ಮತ್ತು ದೀ ಆಸ್ಪತ್ರೆಯಲ್ಲೂ ಸಹ ಡಯಾಲಿಸಿಸ್ ಕೇಂದ್ರವನ್ನು ತೆರೆದಿದ್ದೇವೆ.

ಈ ವರ್ಷ ರೆಡ್ ಕ್ರಾಸ್ ಮತ್ತು ರವಿ ಕಿರ್ಲೋಸ್ಕರ್ ಆಸ್ಪತ್ರೆಯ ಜೊತೆ ಸೇರಿ ಬ್ಲಡ್ ಬ್ಯಾಂಕ್ ಅನ್ನು ಸ್ಥಾಪಿಸಿದ್ದೇವೆ. ಇದೇ ತಿಂಗಳ ಕೊನೆಯಲ್ಲಿ ಉದ್ಘಾಟನೆಯಾಗಲಿದೆ.

ರೋಟರಿ ಉದ್ಯೋಗ ವಿದ್ಯಾಭ್ಯಾಸ ಯೋಜನೆ ಮುಂದುವರಿಸಲಾಗದ ಯುವ ಜನತೆಗೆ ವೃತ್ತಿ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ಅವಕಾಶವನ್ನು ಮಾಡಿಕೊಡುತ್ತಿದೆ.

ಈ ಎಲ್ಲಾ ಕಾರ್ಯಕ್ರಮಗಳ ಆರ್ಥಿಕ ಬೆಂಬಲಕ್ಕಾಗಿ ರೋಟರಿ ಉದ್ಯೋಗ ಸಂಸ್ಥೆಯು ಜೂನ್ 22 ರಂದು ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಶ್ರೀ.ವಿಜಯ ಪ್ರಕಾಶ್ ಮತ್ತು ಅನುರಾಧ ಭಟ್ ತಂಡದವರಿಂದ "ಸಂಗೀತ ಸಂಜೆ"ಯನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಸಹೃದಯರ ಬೆಂಬಲ ಕೋರಿದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium