ಬೆಂಗಳೂರಿನಲ್ಲಿ ಜೂನ್ 25ರಿಂದ 'ಪಾರಂಪರಿಕ ಬಂಡಿದೇವರ ಉತ್ಸವ' ನಡೆಯಲಿದೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಬೆಂಗಳೂರು ಬಂಡಿದೇವರ ಉತ್ಸವ ಸಮಿತಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಬೆಂಗಳೂರಿನಲ್ಲಿ ಜೂನ್ 25ರಿಂದ 'ಪಾರಂಪರಿಕ ಬಂಡಿದೇವರ ಉತ್ಸವ' ನಡೆಯಲಿದೆ. 

ದಕ್ಷಿಣ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾದ 'ಬಂಡಿದೇವರ ಉತ್ಸವ ವನ್ನು ಬೆಂಗಳೂರು ನಿರ್ಮಾತೃ ಕೇಂಪೇಗೌಡರ ಜಯಂತಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ಇದೇ ಜೂನ್ ತಿಂಗಳ 25, 26 ಮತ್ತು 27 ರಂದು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಕೆಂಪೇಗೌಡರ ಪೂರ್ವಜರಾದ ರಣಭೈರೇಗೌಡರು ತಮಿಳುಕಂಡ ದಿಕ್ಕಿನ ಯಣಮಂಜಿಪುತ್ತೂರಿನಿಂದ ತಮ್ಮ ಸಹೋದರರು ಮತ್ತು ಕುಟುಂಬದೊಡನೆ ಮಾತೃನೆಲ ಕನ್ನಡನಾಡಿಗೆ ಬಂಡಿಗಳಲ್ಲಿ ಬಂದ ನೆನಪಿಗಾಗಿ ಹಾಗೂ ತಮ್ಮ ಪ್ರಾಣ ಉಳಿಸಿದ ಬಂಡಿಗಳನ್ನು ದೈವವೆಂದು ಗೌರವಿಸಲು ಮಾಡುವ ಹಬ್ಬವಿದು ಪ್ರತಿಯೊಂದು ಮನೆತನವೂ ಅತ್ಯಂತ ಶ್ರದ್ಧಾಭಕ್ತಿಯಿಂದ ಹಾಗೂ ನೇಮನಿಯಮಗಳಿಂದ ಆಚರಿಸುವ ಈ ಉತ್ಸವವನ್ನು ದಕ್ಷಿಣ ಕರ್ನಾಟಕದ ರೈತಾಪಿ ಸಮುದಾಯದ ಸ್ವಾಭಿಮಾನದ ಕುರುಹಾಗಿ ಸಜ್ಜನಿಕೆ ಸಂಭ್ರಮದಿಂದ ಸರಳವಾಗಿ ಆಚರಿಸಲಾಗುತ್ತಿದೆ.

ಜೂನ್ 25 ರಂದು ಬೆಳಿಗ್ಗೆ 9 ಗಂಟೆಗೆ ಬಸವನಗುಡಿಯ ದೊಡ್ಡಬಸವನಗುಡಿಯಲ್ಲಿ ಪೂಜೆ ಸಲ್ಲಿಸಿ ಗಂಗೆಯನ್ನು ಹೊತ್ತು ಚಾಮರಾಜಪೇಟೆಯ ಒಕ್ಕಲಿಗರ ಸಂಘದ ಆವರಣಕ್ಕೆ ಬರಲಾಗುವುದು, ಸಂಘದ ಆವರಣದಲ್ಲಿ ನೀರು ತುಂಬುವ ಮತ್ತು ಸಿಹಿ ತಯ್ಯಾರಿಸಿ ಹೊಟ್ಟಣಗಳಲ್ಲಿ ತುಂಬುವ ಆಚರಣೆಯನ್ನು ಹೆಣ್ಣುಮಕ್ಕಳ ಸಂಭ್ರಮ ಸಡಗರದಿಂದ ಆಚರಿಸಲಾಗುವುದು. ಇದೇ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಹಲವು ಪಾರಂಪರಿಕ ಶಾಸ್ತ್ರಗಳನ್ನು ಹೇಳಿಕೊಡಲಾಗುವುದು ಮತ್ತು ಸ್ಪರ್ಧಾತ್ಮಕ ಆಟಗಳನ್ನು ಏರ್ಪಡಿಸಲಾಗುವುದು.

ಜೂನ್ 26 ರಂದು ಸಂಜೆಯ ಹೊತ್ತಿಗೆ ಹನ್ನೆರೆಡು ಅಲಂಕೃತ ಬಂಡಿಗಳಲ್ಲಿ ಶಾಸ್ರೋಕ್ತವಾಗಿ ಮೆರವಣಿಗೆಯಲ್ಲಿ ಬಂದು ವಿಧಾನಸೌಧದ ಮುಂದಿನ ಕೆಂಪೇಗೌಡರ ಪ್ರತಿಮೆಗೆ ಗೌರವ ಸಲ್ಲಿಸಿ ಸಾಂಕೇತಿಕವಾಗಿ 'ಬೆಂಗಳೂರು ಬಂಡಿದೇವರ ಉತ್ಸವ ದ ಮುಖ್ಯ ಉತ್ಸವ ಆಚರಿಸಲಾಗುವುದು ಸದರಿ ಮೆರವಣಿಗೆಯಲ್ಲಿ ನಾಡಿನ ಗುರು-ಹಿರಿಯರು ಬಂಡಿಗಳೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಬಿಬಿಎಂಪಿ ಆವರಣದಿಂದ ಸಂಜೆ ಏಳು ಘಂಟೆಗೆ ಹೊರಟು ಹಡ್ನನ್ ವೃತ್ತವನ್ನು ದಾಟಿ ಕಬ್ಬನ್ ಪಾರ್ಕಿನ ಒಳಗಿನಿಂದ ಕೇಂದ್ರ ಗ್ರಂಥಾಲಯ ಹಾಗೂ ಉಚ್ಛ ನ್ಯಾಯಾಲಯ ಕಟ್ಟಡಗಳ ಮಾರ್ಗವಾಗಿ ಗೋಪಾಲಗೌಡ ವೃತ್ತವನ್ನು ದಾಟಿ ವಿಧಾನಸೌಧದ ಕೆಂಪೇಗೌಡರ ಪ್ರತಿಮೆಯ ಬಳಿ ರಾತ್ರಿ ಎಂಟು ಘಂಟೆಗೆ ತಲುಪುವುದು. ಗಣ್ಯರಿಂದ ಪ್ರತಿಮೆಗೆ ಆರತಿ ಪೂಜೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಮೆರವಣಿಗೆಯಲ್ಲಿ ಗ್ರಾಮೀಣ ಸೊಗಡು ತೋರುವ ಜೊತೆಗೆ ಕೆಲವು ಜನಪದ ತಂಡಗಳೂ ಭಾಗವಹಿಸಲಿವೆ. ವಿಧಾನಸೌಧದ ಮುಂದೆ ಪೂಜ್ಯ ಸ್ವಾಮೀಜಿಗಳು, ಗೌರವಾನ್ವಿತ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿಧಾನಸಭೆಯ ಅಧ್ಯಕ್ಷರು, ವಿಧಾನಪರಿಷತ್ತಿನ ಅಧ್ಯಕ್ಷರು ಒಳಗೊಂಡಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಆರತಿ ಪೂಜೆಯ ನಂತರ ಮೆರವಣಿಗೆಯು ಬಂದದಾರಿಯಲ್ಲಿಯೇ ಹಿಂದಿರುಗಿ ಬಿಬಿಎಂಪಿ ಆವರಣಕ್ಕೆ ಮರಳುವುದು.

ಬೆಂಗಳೂರು ಬಂಡಿದೇವರ ಉತ್ಸವ ಸಮಿತಿ

ದಿವ್ಯ ಮಾರ್ಗದರ್ಶನ: ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶೋಷಕರು: ಶ್ರೀ ಬಿ.ಎನ್.ಬಚ್ಚೇಗೌಡ, ಶ್ರೀ ಪ್ರಶಾಂತ್ ಪ್ರಕಾಶ್ ಗೌರವಾಧ್ಯಕ್ಷರು: ಶ್ರೀ ಜಯರಾಮ್ ರಾಯಪುರ, ಅಧ್ಯಕ್ಷರು: ಡಾ.ತಲಕಾಡು ಚಿಕ್ಕರಂಗೇಗೌಡ, ಉಪಾಧ್ಯಕ್ಷರು: ಶ್ರೀ ಡಿ.ಮುನಿರಾಜು, ಶ್ರೀ ನಯನ್ ಗೌಡ ಬಿ.ಎಸ್. ಶ್ರೀ ಎನ್.ನಾಗರಾಜ, ಕಾರ್ಯದರ್ಶಿ: ಶ್ರೀ ಎಂ.ಅಮರೇಶ, ಖಜಾಂಚಿ: ಶ್ರೀ ಕೆ.ಮಧು, ಕಾರ್ಯಕಾರಿ ಸಮಿತಿ ಸದಸ್ಯರು: ಶ್ರೀ/ಶ್ರೀಮತಿ ಡಾ.ಬಿ.ಎಸ್.ಪುಟ್ಟಸ್ವಾಮಿ. ದಿವ್ಯ ರಂಗೇನಹಳ್ಳಿ, ಜಿ.ನಾಗರಾಜ್, ಡಾ.ಸುನೀತ, ದಿವ್ಯ ಹರ್ಷ, ಡಾ.ಬಿ.ಪಾಂಡುಕುಮಾರ್, ಎನ್.ಆರ್.ಧನಂಜಯ್ಯ, ಮಾಗೇರಿ ನಾರಾಯಣಸ್ವಾಮಿ, ಶ್ರೀನಿವಾಸ್ ಜಿ ಕಪ್ಪಣ್ಣ, ಪ್ರೊಜಯಪ್ರಕಾಶ್ ಗೌಡ, ಎಸ್.ಎ.ಹುಟ್ಟರಾಜು, ಎಂ.ಎ.ಮದನ್ ಕುಮಾರ್, ಗೋವಿಂದೇಗೌಡ, ಹಳ್ಳಿಕಾರ್ ದೊಡ್ಡಗೌಡ

ಜೂನ್ 21 ರಂದು ನಾಡಿನೆಲ್ಲೆಡೆ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ಸಡಗರದಿಂದ ಆಚರಿಸಿ ಬೆಂಗಳೂರು ಬಂಡಿದೇವರ ಉತ್ಸವವನ್ನು ನಾಡಿನ ಎಲ್ಲ ರೈತಾಪಿ ಮನೆತನಗಳ ಹೆಮ್ಮೆಯ ಆಚರಣೆಯಾಗಿ ಸಂಭ್ರಮಿಸಲಾಗುವುದು. 27 ರಂದು ಎಲ್ಲ ರೈತಾಪಿ ಮನೆತನಗಳು ತಮ್ಮ ನೆರೆಹೊರೆ ಬಂಧುಬಾಂಧವರಿಗೆ ಊಟದ ವ್ಯವಸ್ಥೆಯನ್ನು ಮಾಡಿ ಭ್ರಾತೃತ್ವದ ನೆಲೆಯಲ್ಲಿ ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿರುವುದನ್ನು ಎತ್ತಿ ತೋರಿಸುತ್ತವೆ. ಈ ಮೂರು ದಿನಗಳ ಬೆಂಗಳೂರು ಬಂಡಿದೇವರ ಉತ್ಸವವು ಕರ್ನಾಟಕದ ಉದಾತ್ತ ಚರಿತೆಯನ್ನು ಹಾಗೂ ರೈತಾಪಿ ಸಮುದಾಯದ ಕೊಡುಗೈ ಸಂಸ್ಕೃತಿಯನ್ನು ಬಿಂಬಿಸುತ್ತದೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.