ಬೆಂಗಳೂರಿನ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ 5 ವಿದ್ಯಾರ್ಥಿಗಳಿಗೆ ಜೆಇಇ ಅಡ್ವಾನ್ಸ್ಡ್ 2025 ರಲ್ಲಿ ಅತ್ಯುನ್ನತ ಅಂಕ
ಬೆಂಗಳೂರು, ಜೂನ್ 02, 2025
ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL), ತನ್ನ ಸಂಸ್ಥೆಯಲ್ಲಿ ತರಬೇತಿ ಪಡೆದ ಬೆಂಗಳೂರಿನ 5 ವಿದ್ಯಾರ್ಥಿಗಳು ಅತ್ಯಂತ ಕಠಿಣ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ JEE ಅಡ್ವಾನ್ಸ್ಡ್ 2025 ರಲ್ಲಿ ಅತ್ಯುನ್ನತ ಅಂಕ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಘೋಷಿಸಿದೆ. ಫಲಿತಾಂಶಗಳನ್ನು ಐಐಟಿ ಕಾನ್ಪುರ ಪ್ರಕಟಿಸಿದೆ.
ಈ ಅತ್ಯುತ್ತಮ ಪ್ರದರ್ಶನವು ವಿದ್ಯಾರ್ಥಿಗಳ ಸಮರ್ಪಣೆ, ಶ್ರದ್ಧೆ, ನಿರಂತರ ಕಠಿಣ ಪರಿಶ್ರಮ ಮತ್ತು AESL ನ ಪರಿಣಿತ ಅಧ್ಯಾಪಕರು ಮತ್ತು ಸಮಗ್ರ ಪಠ್ಯಕ್ರಮವು ಒದಗಿಸಿದ ದೃಢವಾದ ಶೈಕ್ಷಣಿಕ ಬೆಂಬಲಕ್ಕೆ ಸಾಕ್ಷಿಯಾಗಿದೆ
ವಿದ್ಯಾರ್ಥಿಗಳಾದ ಆಕಾಶ್ ದೀಪ್ ಅವರು AIR 99, ಅನಿಕೇತ್ ಜೈನ್ ಅವರು AIR 486, ಅನೀಶ್ ಶಾಸ್ತ್ರಿ ಅವರು AIR 1478, ಚಿರಾಗ್ ಬಿ.ಹೆಚ್ ಅವರು AIR 1521 ಮತ್ತು ರಯಾನ್‌ಕ್ರಿಸ್ ಡಯಾಸ್ ಅವರು AIR 2839 ಅಂಕಗಳನ್ನು ಗಳಿಸಿ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.
ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಎದುರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ AESL ನ ತರಗತಿಗಳಿಗೆ ಹಾಜರಾಗಿದ್ದರು. ಜಾಗತಿಕವಾಗಿ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಜೆಇಇ ಅಡ್ವಾನ್ಸ್‌ಡ್ ನಲ್ಲಿ ಉತ್ತಮ ಅಂಕ ಪಡೆಯಬೇಕಾದರೆ ಆಳವಾದ ಪರಿಕಲ್ಪನಾತ್ಮಕ ತಿಳುವಳಿಕೆ ಮತ್ತು ಬಲವಾದ ಸಮಸ್ಯೆ-ಪರಿಹರಿಸುವ ಸಾಮರ್ಥ್ಯವಿರಬೇಕಾಗುತ್ತದೆ.
ತಮ್ಮ ಪರೀಕ್ಷಾ ತಯಾರಿ ಮತ್ತು ಸಾಧನೆ ಬಗ್ಗೆ ವಿವರಿಸಿದ ವಿದ್ಯಾರ್ಥಿಗಳು, "ಬಲಿಷ್ಟ ಶೈಕ್ಷಣಿಕ ಅಡಿಪಾಯ ಮತ್ತು ಸ್ಥಿರವಾದ ಮಾರ್ಗದರ್ಶನವನ್ನು ಒದಗಿಸಿದ್ದಕ್ಕಾಗಿ ನಾವು ಆಕಾಶ್‌ಗೆ ಕೃತಜ್ಞರಾಗಿರುತ್ತೇವೆ. AESL ನಲ್ಲಿನ ವಿಷಯ ಮತ್ತು ತರಗತಿ ಕೋಚಿಂಗ್ ಕಡಿಮೆ ಅವಧಿಯಲ್ಲಿ ಕಷ್ಟಕರ ವಿಷಯಗಳನ್ನು ಕಲಿಯಲು ನಮಗೆ ಸಹಾಯ ಮಾಡಿತು. ಅವರ ಬೆಂಬಲವಿಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳಿದರು.
ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್‌ನ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥ ಡಾ. ಧೀರಜ್ ಮಿಶ್ರಾ, ವಿದ್ಯಾರ್ಥಿಗಳನ್ನು ಅಭಿನಂದಿಸಿ, "ಈ ಫಲಿತಾಂಶಗಳು AESL ತನ್ನ ವಿದ್ಯಾರ್ಥಿಗಳಲ್ಲಿ ತುಂಬುವ ಶೈಕ್ಷಣಿಕ ಕಠಿಣ ತರಬೇತಿ ಮತ್ತು ಶಿಸ್ತಿನ ಪ್ರತಿಬಿಂಬವಾಗಿದೆ. ನಮ್ಮ ಸಾಧಕರ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ ಮತ್ತು IIT ಗಳಲ್ಲಿ ಮತ್ತು ಅದಕ್ಕೂ ಮೀರಿದ ಅವರ ಭವಿಷ್ಯದ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇವೆ" ಎಂದು ಹೇಳಿದರು.
ಐಐಟಿಗಳಲ್ಲಿ ಯಾವುದಾದರೂ ಒಂದು ಐಐಟಿ ವಾರ್ಷಿಕವಾಗಿ ಆಯೋಜಿಸಲ್ಪಡುವ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳಿಗಾಗಿ ಜೆಇಇ ಅಡ್ವಾನ್ಸ್‌ಡ್ ಅನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ. ಭಾರತದ ಹಲವಾರು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (NIT) ಮತ್ತು ಇತರ ಕೇಂದ್ರ-ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶಕ್ಕಾಗಿ JEE ಮುಖ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ, ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಪ್ರವೇಶಕ್ಕೆ JEE ಅಡ್ವಾನ್ಸ್ಡ್ ಏಕೈಕ ಪರೀಕ್ಷೆಯಾಗಿದೆ. ಆದರೂ, ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಡ್‌ಗೆ ಕುಳಿತುಕೊಳ್ಳಲು ಜೆಇಇ ಮುಖ್ಯ ಪರೀಕ್ಷೆಗೆ ಹಾಜರಾಗಬೇಕು.
ಆಕಾಶ್ ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ ಸ್ವರೂಪಗಳ ಮೂಲಕ ಸಮಗ್ರ ಐಐಟಿ-ಜೆಇಇ ತರಬೇತಿಯನ್ನು ನೀಡುತ್ತದೆ. ಇತ್ತೀಚೆಗೆ, ಆಕಾಶ್ ಕಂಪ್ಯೂಟರ್ ಆಧಾರಿತ ತರಬೇತಿಯನ್ನು ಅಭಿವೃದ್ಧಿಪಡಿಸಿದೆ. ಇದರ ಹೊಸ ʼಐಟ್ಯೂಟರ್ʼ ಪ್ಲಾಟ್‌ಫಾರ್ಮ್ ರೆಕಾರ್ಡ್ ಮಾಡಿದ ವೀಡಿಯೊ ಉಪನ್ಯಾಸಗಳನ್ನು ನೀಡುತ್ತದೆ, ವಿದ್ಯಾರ್ಥಿಗಳು ಸ್ವಯಂ- ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ತಪ್ಪಿಸಿದ ತರಗತಿಗಳ ಪಾಠವನ್ನು ಕಲಿಯಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಮಾದರಿ ಪರೀಕ್ಷೆಗಳು ನೈಜ ಪರೀಕ್ಷಾ ಸವಾಲುಗಳನ್ನು ಅನುಕರಿಸುತ್ತವೆ, ಇದು ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಗತ್ಯವಾದ ಆತ್ಮವಿಶ್ವಾಸವನ್ನು ನೀಡುತ್ತದೆ.
ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಬಗ್ಗೆ
ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಭಾರತದ ಪ್ರಮುಖ ಪರೀಕ್ಷಾ ಪೂರ್ವಸಿದ್ಧತಾ ಕಂಪನಿಯಾಗಿದ್ದು, ಹೆಚ್ಚಿನ ಮಟ್ಟದ ವೈದ್ಯಕೀಯ (NEET) ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳು (JEE) ಮತ್ತು NTSE ಮತ್ತು ಒಲಿಂಪಿಯಾಡ್‌ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ಮತ್ತು ಪರಿಣಾಮಕಾರಿ ತಯಾರಿ ತರಬೇತಿಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದೆ.
AESL 400 ಕ್ಕೂ ಹೆಚ್ಚು ಕೇಂದ್ರಗಳ ಪ್ಯಾನ್ ಇಂಡಿಯಾ ಜಾಲವನ್ನು ಹೊಂದಿದ್ದು, ಪ್ರಸ್ತುತ 400,000+ ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಮತ್ತು ಕಳೆದ 36 ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಥಾನ ಮತ್ತು ಬ್ರಾಂಡ್ ಮೌಲ್ಯವನ್ನು ಸ್ಥಾಪಿಸಿದೆ. ವಿದ್ಯಾರ್ಥಿಗಳ ನಿಜವಾದ ಸಾಮರ್ಥ್ಯವನ್ನು ಹೊರತರಲು ಮತ್ತು ಅವರ ಶೈಕ್ಷಣಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಲು ಅತ್ಯುನ್ನತ ಗುಣಮಟ್ಟದ ಪರೀಕ್ಷಾ ತಯಾರಿ ಸೇವೆಗಳನ್ನು ಒದಗಿಸಲು ಇದು ಬದ್ಧವಾಗಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯು ವಿಶಿಷ್ಟ ಮತ್ತು ವೈಯಕ್ತಿಕ ಅಗತ್ಯಗಳನ್ನು ಹೊಂದಿರುತ್ತಾನೆ ಎಂಬುದನ್ನು ಗುರುತಿಸಿ, AESL ಪರೀಕ್ಷಾ ತಯಾರಿಗೆ ವಿದ್ಯಾರ್ಥಿ ಕೇಂದ್ರಿತ ವಿಧಾನವನ್ನು ತೆಗೆದುಕೊಳ್ಳುತ್ತದೆ. ಇದು ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಧಿಸಲು ಸಹಾಯ ಮಾಡಲು ಉತ್ಸುಕ ಹೆಚ್ಚು ಅರ್ಹ ಮತ್ತು ಅನುಭವಿ ಬೋಧಕರ ತಂಡವನ್ನು ಹೊಂದಿದೆ. ಕಂಪನಿಯ ಕಾರ್ಯಕ್ರಮಗಳನ್ನು ಹೊಸತನ್ನು ಅಳವಡಿಸಿಕೊಂಡು ವಿನ್ಯಾಸಗೊಳಿಸಲಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಉತ್ತಮವಾಗಿ ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅದರ ಬೋಧನಾ ವಿಧಾನಗಳು ಇತ್ತೀಚಿನ ತಂತ್ರಜ್ಞಾನಗಳಿಂದ ಬೆಂಬಲಿತವಾಗಿವೆ.
www.aakash.ac.in
Comments
Post a Comment