ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಸ್ಥೆ ಸಭಾಂಗಣದಲ್ಲಿ 'ಪ್ರೊ.ಬಿ. ಕೃಷ್ಣಪ್ಪ ಅವರ 87ನೇ ಜನ್ಮದಿನದ ಅಂಗವಾಗಿ 'ಬಹುಜನರ ಏಕತಾ ದಿನ ಸಮಾರಂಭ' ನಡೆಯಿತು.


ಬೆಂಗಳೂರು, ಜೂನ್ 9, 2025
ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಸ್ಥೆ ಸಭಾಂಗಣದಲ್ಲಿ 'ಪ್ರೊ.ಬಿ. ಕೃಷ್ಣಪ್ಪ ಅವರ 87ನೇ ಜನ್ಮದಿನದ ಅಂಗವಾಗಿ ಬಹುಜನರ ಏಕತಾ ದಿನ ಸಮಾರಂಭ' ನಡೆಯಿತು. 

ಈ ಸಮಾರಂಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್, ಎಂ. ಗೋಪಿನಾಥ್, ಶೇಖ‌ರ್ ಹಾವಂಜೆ, ಸ್ವಪ್ನ ಮೋಹನ್‌ ಸೇರಿದಂತೆ ಅನೇಕ ದಲಿತ ಹೋರಾಟಗಾರರು ಉಪಸ್ಥಿತರಿದ್ದರು. 

'ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ-ಭೀಮವಾದ' ಸಂಘಟನೆಯ ರಾಜ್ಯಾಧ್ಯಕ್ಷರಾದ ಆ‌ರ್. ಮೋಹನ್ ರಾಜ್ ಅವರ ನೇತೃತ್ವದಲ್ಲಿ ಈ ಸಮಾರಂಭ ನಡೆಯಿತು.
ಕಾಂಗ್ರೆಸ್, ಬಿಜೆಪಿಗೆ ನಮ್ಮ ಮತವಿಲ್ಲ. ನಮ್ಮ ಮತ ಪ್ರಗತಿಗೆ ಎಂದು ಎಲ್ಲ ಒಕ್ಕೂಟಗಳು ಶಪಥ ಮಾಡಬೇಕು. ಈಗಿರುವುದು ರಾಜಕಾರಣ, ರಾಜಕೀಯವಲ್ಲ. ದುಡ್ಡಿನ ಆಸೆಗೆ ನಾವು ಕಾಂಗ್ರೆಸ್, ಬಿಜೆಪಿಗೆ ಮತ ಹಾಕಬಾರದು. ಸಂವಿಧಾನದ ಆಶಯದಂತೆ ನಾವೆಲ್ಲ ಮರ್ಯಾದಸ್ಥರಾಗಿ, ಅಂಬೇಡ್ಕ‌ರ್ ಆಶಯದಂತೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಧಿಕಾರ ನಡೆಸಬೇಕು. ದಲಿತರು, ರೈತರು ನಮ್ಮ ರಾಜ್ಯವನ್ನು ನಾವೇ ನಿರ್ಮಿಸಿಕೊಳ್ಳಬೇಕು' ಎಂದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕದ ಅಧ್ಯಕ್ಷ ಆರ್. ಮೋಹನ್ ರಾಜ್ ಮಾತನಾಡಿ, 'ಕೃಷ್ಣಪ್ಪ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಕಡಿಮೆ ಜನರು ಬಂದಿರುವುದು ಬೇಸರ ತಂದಿದೆ. ನಮ್ಮ ಕಾರ್ಯಕರ್ತರೆಲ್ಲರೂ ಬರಬೇಕಿತ್ತು' ಎಂದರು.

'ಕೇಂದ, ಸರ್ಕಾರ ರಾಜ್ಯಗಳ ಮೇಲೆ ಹಿಂದಿಯನ್ನು ಮುಸ್ಲಿಮರು, ದಲಿತರಲ್ಲಿ ಒಗ್ಗಟ್ಟಿಲ್ಲ. ನಮ್ಮ ಸಮುದಾಯದ ನಾಯಕರನ್ನು ಒಪ್ಪದೆ, ಬೇರೆಯವರನ್ನು ಒಪ್ಪುತ್ತಾರೆ. ಅವರು ನಮ್ಮನ್ನು ಒಂದಾಗಿ ಬೆಳೆಯಲು ಬಿಡಲೇ ಇಲ್ಲ. ನಮ್ಮವರೆಲ್ಲ ಕಾಂಗ್ರೆಸ್‌ ಹಿಂದೆ ಹೋಗಿ, ಹಿಂದೆಯೇ ಉಳಿದರು. ಬಿಜೆಪಿಯವರು ಹಿಂದೂ ಎಂದು ಎಲ್ಲರಿಂದ ಮತ ಪಡೆದು, ಹೆಗಡೆ ಹೆಸರಿನವರನ್ನು ಮಾತ್ರ ಬೆಳೆಸಿದರು' ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ದೂರಿದರು.

'ಒಂದು ದೇಶ, ಒಂದು ಕಾನೂನು ಎನ್ನುವವರು ಮುಂದೆ ಒಂದು ಜಾತಿ ಎನ್ನುತ್ತಾರೆ. ಮೀಸಲಾತಿ ತೆಗೆದುಹಾಕಿ ಬ್ಯಾಂಕ್‌ ಬಂದವರಿಗೆ ಮಾತ್ರ ಕೆಲಸ ಸಿಗುತ್ತದೆ. ದಲಿತರು, ಮುಸ್ಲಿಮರಿಗೆ ಏನೂ ಸಿಗುವುದಿಲ್ಲ' ಎಂದರು.

ಆರ್‌ಪಿಐ ರಾಜ್ಯ ಘಟಕದ ಉಪಾಧ್ಯಕ್ಷೆ ಸ್ವಪ್ನಾ, ರಾಜ್ಯ ಸಂಚಾಲಕ ಕೆ.ಎಂ. ಶ್ರೀನಿವಾಸ್, ರಾಜ್ಯ ಕಾರ್ಯದರ್ಶಿ ಶಂಕ‌ರ್ ಉಪಸ್ಥಿತರಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium