ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿನ 'ವೆಂಕಟಪ್ಪ ಕಲಾ ಗ್ಯಾಲರಿ'ಯ ನವೀಕೃತ ಕಟ್ಟಡವನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಸಚಿವರಾದ ಎಚ್.ಕೆ.ಪಾಟೀಲ್ ಅವರು ಉದ್ಘಾಟನೆ ನೆರವೇರಿಸಿದರು.

ಬೆಂಗಳೂರು, ಜೂನ್ 12, 202

ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿನ 'ವೆಂಕಟಪ್ಪ ಕಲಾ ಗ್ಯಾಲರಿ'ಯ ನವೀಕೃತ ಕಟ್ಟಡವನ್ನು ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಸಚಿವರಾದ ಎಚ್.ಕೆ.ಪಾಟೀಲ್ ಅವರು ಉದ್ಘಾಟನೆ ನೆರವೇರಿಸಿದರು. 

‘ಸ್ಮಾರಕ ದತ್ತು’ ಯೋಜನೆಯಡಿ ಬ್ರಿಗೇಡ್ ಫೌಂಡೇಷನ್ ಈ ಗ್ಯಾಲರಿಗೆ ಆಧುನಿಕ ಸ್ಪರ್ಶ ನೀಡಿದೆ. ಸ್ಮಾರಕಗಳ ಸಂರಕ್ಷಣೆಗೆ ಬ್ರಿಗೇಡ್ ಗ್ರೂಪ್‌ನಂತಹ ಸಂಘ- ಸಂಸ್ಥೆಗಳು ಜೊತೆಗೂಡಿದಾಗ ಸಮಾಜಕ್ಕೆ ನಾವೆಲ್ಲರೂ ಸೇರಿ ಉತ್ತಮ ಕೊಡುಗೆಗಳನ್ನು ನೀಡಬಹುದಾಗಿದೆ ಎಂದು ಡಿ. ಕೆ. ಶಿವಕುಮಾರ್ ಅವರು ಹೇಳಿದರು. 

 ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಅವರು ಮಾತನಾಡಿದರು. ಬ್ರಿಗೇಡ್ ಫೌಂಡೇಷನ್ ಅವರು ವೆಂಕಟಪ್ಪ ಕಲಾ ಗ್ಯಾಲರಿಯನ್ನು ಅಭಿವೃದ್ಧಿ ಪಡಿಸಿದಂತೆ ರಾಜ್ಯದಲ್ಲಿರುವ ಇನ್ನಿತರ ದೇವಾಲಯಗಳು, ಕಲಾ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಮನವಿ ಮಾಡಿದರು. ಖಾಸಗಿ ಸಂಸ್ಥೆಯವರು ಸಿ.ಎಸ್.ಆರ್ (CSR) ನಿಧಿಯನ್ನು ಸಮಾಜದ ಉದ್ದಾರಕ್ಕೆ ಬಳಕೆ ಮಾಡಬೇಕೆಂದು ಎಚ್.ಕೆ. ಪಾಟೀಲ್ ಅವರು ಸಲಹೆ ನೀಡಿದರು.

 4 ವರ್ಷಗಳ ಹಿಂದೆ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ವೆಂಕಟಪ್ಪ ಕಲಾ ಗ್ಯಾಲರಿ'ಯ ದುಸ್ಥಿತಿಯ ಬಗ್ಗೆ ಸವಿಸ್ತಾರವಾದ ವರದಿ ಪ್ರಕಟವಾಗಿತ್ತು. ವರದಿ ಓದಿದ ನಂತರ ವೆಂಕಟಪ್ಪ ಕಲಾ ಗ್ಯಾಲರಿ'ಯ ನವೀಕರಣ ಮಾಡಬೇಕೆಂದು ನಿರ್ಧಾರ ಮಾಡಲಾಯಿತು ಎಂದು ಬ್ರಿಗೇಡ್ ಫೌಂಡೇಷನ್ ನ ಪ್ರಮುಖರಾದ ಜೈಶಂಕರ್ ಅವರು ತಿಳಿಸಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium