ರಾಜ್ಯ ಸರ್ಕಾರವು ಉದ್ದೇಶಿಸಿರುವ ಹೊಸ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ಅನುಭವಿ ತಜ್ಞರ ಸಮಿತಿ ರಚಿಸಿ ಯಾವುದೇ ತಪ್ಪುಗಳಾಗದಂತೆ ತ್ವರಿತಗತಿಯಲ್ಲಿ ಸಮೀಕ್ಷೆ ಮಾಡಬೇಕು - ಕೆ.ಎಂ. ರಾಮಚಂದ್ರಪ್ಪ

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ' ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಸಂಚಾಲಕರಾದ ಕೆ. ಎಂ. ರಾಮಚಂದ್ರಪ್ಪ av ಮಾತನಾಡಿದರು. 

ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಈ ಹಿಂದೆ ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ವರದಿಯನ್ನು ಪ್ರಕಟಣೆಗಾಗಿ ಒತ್ತಾಯಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಲವಾರು ಹೋರಾಟಗಳನ್ನು ನಡೆಸುತ್ತಾ ಬಂದಿರುವುದು ತಮಗೆ ತಿಳಿದ ಸಂಗತಿ.

ನೆನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ "ಮರು ಸಮೀಕ್ಷೆ" ಮಾಡುವುದಾಗಿ ವರದಿಯಾಗಿದೆ. ಈ ಮೂಲಕ ಈ ಹಿಂದೆ ನಡೆಸಲಾದ ವರದಿಯನ್ನು ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ವರದಿ ಮತ್ತು ಅದರ ಶಿಪಾರಸ್ಸುಗಳನ್ನು ಬಹಿರಂಗ ಪಡಿಸಬೇಕು.

ರಾಜ್ಯ ಸರ್ಕಾರ ಜನರಲ್ಲಿ ಮೂಡಿರುವ ಗೊಂದಲ ನಿವಾರಿಸಬೇಕು. ಜನತೆಯ ತಾಳ್ಮೆ ಪರೀಕ್ಷೆ ಮಾಡಬಾರದು. ರಾಜ್ಯ ಸರ್ಕಾರ ಯಾವುದೇ ಸಮುದಾಯಗಳ ಪಕ್ಷಾಪಾತಿಯಾಗದೇ ಸಂವಿಧಾನ, ಸಾಮಾಜಿಕ ನ್ಯಾಯ ದಾರಿಯಲ್ಲಿ ನಡೆಯಬೇಕು.

ಈಗ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಪ್ರಕಟಿಸಬೇಕು. ವಿಳಂಭ ಮಾಡದೆ ವೈಜ್ಞಾನಿಕವಾಗಿ, ನಿಖರವಾಗಿ ಸಮೀಕ್ಷೆ ಮಾಡಬೇಕು.

ಸಮೀಕ್ಷೆಯ ಮೇಲುಸ್ತುವಾರಿಗಾಗಿ ಎಲ್ಲಾ ಸಮುದಾಯಗಳ ಒಳಗೊಂಡ ಜನಪ್ರತಿನಿಧಿಗಳ ಮತ್ತು ಮುಖಂಡರ, ಜಂಟಿ ಸಮಿತಿಯನ್ನು ರಚಿಸಬೇಕು.

ಸಮೀಕ್ಷೆಗಾಗಿ ಅನುಭವಿ ತಜ್ಞರ ಸಮಿತಿ ರಚಿಸಬೇಕು. ಆ ಮೂಲಕ ಮುಂದೆ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು.

ಈ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ಮಾಡದೆ ಮತ್ತೆ ವಿಳಂಬ ಮಾಡಿದರೆ ಶೋಷಿತ ಸಮುದಾಯಗಳು ತೀರ್ವವಾದ ಹೋರಾಟಗಳನ್ನು ಸಂಘಟಿಸುತ್ತಾವೆ ಎಂದು ಎಚ್ಚರಿಕೆ ನೀಡುತ್ತೇವೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium