ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ' ದ ಪದಾಧಿಕಾರಿಗಳು ಪಾರ್ಟಿಕಗೋಷ್ಠಿ ಹಮ್ಮಿಕೊಂಡಿದ್ದರು.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ' ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಸರ್ಕಾರದಿಂದ 1 ಕೋಟಿ ಅನುದಾನ ಬಿಡುಗಡೆ ಆದ ನಂತರ ಹಳೆಯ ವಿದ್ಯಾರ್ಥಿ ನಿಲಯವನ್ನು ನೆಲಸಮ ಮಾಡಿ ಹೊಸ ವಿದ್ಯಾರ್ಥಿ
ನಿಲಯವನ್ನು ನಿರ್ಮಿಸಲು ಸರ್ಕಾರದ ಹಣವನ್ನು ಜೊತೆಗೆ ದಾನಿಗಳಿಂದ ವಿದ್ಯುತ್ ಉಪಕರಣ ಮತ್ತು ಟೆಲ್ಸ್ ಪಡೆಯುವ ಮೂಲಕ ಐದು ಅಂತಸ್ತಿನ 150 ಜನ ವಿದ್ಯಾರ್ಥಿಗಳು ಅಧ್ಯಯನ ಮಾಡಲು ವಿದ್ಯಾರ್ಥಿ ನಿಲಯವನ್ನು ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಯಿತು ಮತ್ತೆ ನಮ್ಮ ಆಡಳಿತ ಮಂಡಳಿಯು ಸರ್ಕಾರಕ್ಕೆ 1.5 ಕೋಟಿ ಅನುದಾನಕ್ಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಯನ್ನು ಸ್ವೀಕರಿಸಿ ಸರ್ಕಾರದಿಂದ 1.5 ಕೋಟಿ ಅನುದಾನವನ್ನು ಅನುದಾನವನ್ನು ಬಿಡುಗಡೆ ಮಾಡಲು ಆದೇಶಿಸಲಾಯಿತು. ಅನುದಾನದ ಮೊದಲ ಹಂತದಲ್ಲಿ 75 ಲಕ್ಷ ಬಿಡುಗಡೆ ಆಯಿತು. ಈ ಹಣದಲ್ಲಿ ಮುಖ್ಯ ರಸ್ತೆಯ ಎರಡನೇ ಕಟ್ಟಡವನ್ನು ಕಟ್ಟಲು ಪ್ರಾರಂಭ ಮಾಡಲಾಯಿತು. ಅನುದಾನದ ಎರಡನೇ ಹಂತದ ಹಣವು 37 ½ ಲಕ್ಷ ಹಣವು ಬಿಡುಗಡೆ ಮಾಡಲಾಯಿತು ಇದರಲ್ಲಿ ಕಟ್ಟಡದ ಮುಂದುವರಿದ ಕಾಮಗಾರಿ ನಡೆಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಉತ್ತಮ ಗುಣಮಟ್ಟದ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಿರುತ್ತಾರೆ ಹಾಗು ಮೂರನೇ ವ್ಯಕ್ತಿಯಿಂದ ತಪಾಸಣೆ ಮಾಡಿ ಉತ್ತಮ ಗುಣಮಟ್ಟದ ಕಟ್ಟಡ ಎಂದು ದೃಡೀಕರಣ ಪ್ರಮಾಣ ಪತ್ರ
ನೀಡಿರುತ್ತಾರೆ. ಒಟ್ಟಾರೆಯಾಗಿ ಸರ್ಕಾರದಿಂದ 2 ಕೋಟಿ 12 % ಲಕ್ಷ ಅನುದಾನವು ಸ್ವೀಕರಿಸಲಾಗಿದೆ. ಇನ್ನು 37 % ಲಕ್ಷ ಸರ್ಕಾರದಿಂದ ಬರಬೇಕಾಗಿದೆ.
ಇತಿಹಾಸ ಹೊಂದಿರುವಂತ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನವನ್ನು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ದೇವಸ್ಥಾನ ನಿರ್ಮಾಣಕ್ಕೆ ಎಂದು ದಾನಿಗಳಿಂದ ಸಂಗ್ರಹವಾಗಿರುವಂತಹ ಹಣ 543444 ರು ಮತ್ತು ವಾಣಿಜ್ಯ ಮಳಿಗೆಗಳಿಂದ ಸಂಗ್ರಹವಾಗಿರುವಂತ ಮುಂಗಡ ಹಣ 58 ಲಕ್ಷ ಪ್ರತಿ ತಿಂಗಳು ಬಂದಂತ ಬಾಡಿಗೆ ಹಣವನ್ನು ದೇವಸ್ಥಾನ ನಿರ್ಮಾಣ ಹಂತದಲ್ಲಿ ಬಳಸಿಕೊಳ್ಳಲಾಗಿದೆ. 14 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ತಳಮಟ್ಟದಿಂದ ಆರಂಭಿಸಲಾಯಿತು. ಶಿಲ್ಪಿಗಳಾದ ವಿಶ್ವನಾಥ್ ಭಟ್ ಅವರಿಗೆ 94 ಲಕ್ಷದ 50 ಸಾವಿರ ಹಣವನ್ನು ಸಂದಾಯ ಮಾಡಲಾಗಿದೆ.
ನಮ್ಮ ಆಡಳಿತದ ಅವಧಿ 2018 ನವೆಂಬರ್ ಇಂದ 2024 ಏಪ್ರಿಲ್ ವರೆಗೆ ಆಡಳಿತ ಅವಧಿಯಲ್ಲಿ ನಮಗೆ ಸಿಕ್ಕಂತಹ ಅವಧಿ ಕೇವಲ 3 ವರ್ಷ ಮಾತ್ರ ಇನ್ನುಳಿದ 2 ವರ್ಷ ಕರೋನ ಮಾರಕ ರೋಗದಿಂದ ಕಟ್ಟಡ ಕಾಮಗಾರಿ ಮಾಡಲು ಯಾವುದೇ ರೀತಿ ಅವಕಾಶ ಸಿಗದೇ ಕಾರಣ
ನಮ್ಮ ಅವಧಿ ವಿಸ್ತರಿಸುವಂತೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಂತಹ ಜನರಲ್ ಬಾಡಿ ಮೀಟಿಂಗ್ ನಲ್ಲಿ 6 ತಿಂಗಳ ಅವಕಾಶ ಕೇಳಿ ಸರ್ವ ಸದಸ್ಯರ ಒಪ್ಪಿಗೆಯ ಮೇರೆಗೆ ಮುಂದುವರೆಯಲಾಯಿತು.
2018 ರಲ್ಲಿ ಸದಸ್ಯರ ಸಂಖ್ಯೆ 21187 ಅಲ್ಲಿಂದ ಇಲ್ಲಿವರೆಗೆ ಅಂದರೆ 2024 ಏಪ್ರಿಲ್ ಅಲ್ಲಿವರೆಗೆ ಸದಸ್ಯರ ಸಂಖ್ಯೆ 29056 ಆಗಿದೆ ಅದರಲ್ಲಿ ನಮ್ಮ ಆಡಳಿತ ಅವಧಿಯಲ್ಲಿನ ಸದಸ್ಯರ ಸಂಖ್ಯೆ 6869 ಆಗಿದೆ. 6869*101 = 6.93.769 ಹಣದ ಮೊತ್ತ ಆಗಿರುತ್ತದೆ ಆದರೆ ಅದನ್ನು 1 ಕೋಟಿ 61 ಲಕ್ಷ ಎಂದು ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ.
ಆಡಳಿತ ಅಧಿಕಾರಿಗಳು ಬಂದು 13 ತಿಂಗಳು ಕಳೆದರೂ ಇನ್ನೂ ಚುನಾವಣೆ ನಡೆಸಲಿಲ್ಲ. ಆದರೆ ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ದಿನ ಕಳೆಯುತ್ತಾ ಬಂದಿರುತ್ತಾರೆ.
ಸಮಾಜದ ಬಂಧುಗಳೇ ಇಲ್ಲಿಯವರೆಗೂ ನಮಗೆ ಸಹಕಾರವನ್ನು ನೀಡಿದ್ದೀರಿ ನಿಮ್ಮ ಸಹಕಾರದಿಂದ ಪ್ರತಿ ತಾಲೂಕಿನಲ್ಲಿ ಕೂಡ ಸಂವಿಧಾನದಂತೆ ಚುನಾವಣೆ ನಡೆಸುವಂತಹ ಕಾರ್ಯವನ್ನು ಮಾಡಿದ್ದೇವೆ. ಸಂಘದ ಮಳಿಗೆಗಳಿಂದ ಬರುವಂತಹ ಬಾಡಿಗೆ 3 ಲಕ್ಷ 80 ಸಾವಿರ ಬರುವಂತೆ ಮಾಡಿರುವ ನಮ್ಮ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದರೆ ಸರ್ಕಾರದಿಂದ ಮಂಜೂರು ಮಾಡಿರುವಂತಹ 5 ಎಕರೆ ಜಮೀನಿನಲ್ಲಿ ನಮ್ಮ ಯೋಜನೆ ಈ ರೀತಿ ಇದೆ ಆತ್ಮೀಯ ಬಂಧುಗಳೇ ನಾವು ಈ 5 ಎಕರೆ ಜಮೀನಿನಲ್ಲಿ ಒಂದು ವಿದ್ಯಾಸಂಸ್ಥೆಯನ್ನು ಕಟ್ಟಬೇಕೆಂಬುವ ನಿರೀಕ್ಷೆಯನ್ನು ಹೊಂದಿದ್ದೇವೆ ನಮ್ಮ ರಾಜ್ಯದ ಏಕೈಕ ಮಠಾಧೀಶರಾದಂತಹ ಶಾಂತಭೀಷ್ಮ ಸ್ವಾಮೀಜಿಗಳ ಶಾಖ ಮಠವನ್ನು ಕೂಡ ಅದರಲ್ಲಿ ಸ್ಥಾಪನೆ ಮಾಡಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದೇವೆ ಹಾಗೂ ಇಡೀ ರಾಜ್ಯದಲ್ಲಿ ಮಹಿಳಾ ವಿದ್ಯಾರ್ಥಿ ನಿಲಯವನ್ನು ಕಟ್ಟುವಂತ ನಿರೀಕ್ಷೆಯನ್ನು ಹೊಂದಿದ್ದೇವೆ ಮಹಿಳಾ ವಿದ್ಯಾರ್ಥಿ ನಿಲಯವನ್ನು ಈ ಸ್ಥಳದಲ್ಲಿ ಪ್ರಾರಂಭಿಸಬೇಕು ಎಂಬ ಹಂಬಲವಿದೆ 45 ಲಕ್ಷ ಇರುವ ನಮ್ಮ ಸಮಾಜದ ಬಂಧುಗಳು ನಮಗೆ ಹಾಗೂ ನಮ್ಮ ತಂಡವನ್ನು ಪುನರ್ ಆಯ್ಕೆ ಮಾಡಿದ್ದಲ್ಲಿ ಇದೆಲ್ಲದನ್ನು ಕೂಡ ನಾವು ಮಾಡೇ ಮಾಡುತ್ತೇವೆ ಈಗಾಗಲೇ ನಮ್ಮ ಕೆಲಸವನ್ನು ತಾವುಗಳು ಕಣ್ಣಿಂದ ನೋಡಿದ್ದೀರಿ ಹಾಗಾಗಿ ತಮ್ಮಲ್ಲಿ ಇನ್ನೊಂದು ಸಾರಿ ಮನವಿ ಮಾಡಿಕೊಳ್ಳುತ್ತೇವೆ ಮುಂಬರುವ ದಿನಗಳಲ್ಲಿ ಮೌಲಾಲಿ ಅವರ ತಂಡಕ್ಕೆ ಅಬುತಪೂರ್ವಕವಾದ ಜಯವನ್ನು ನೀವು ಕೊಟ್ಟರೆ ಖಂಡಿತವಾಗಿ ನಾವು ಹೇಳಿದಂತ ಕೆಲಸ ಕಾರ್ಯಗಳನ್ನು ಸುಸೂತ್ರವಾಗಿ ಮಾಡೇ
ಮಾಡುತ್ತೇವೆ ವಂದನೆಗಳೊಂದಿಗೆ ಬಿ ಮೌಲಾಲಿ ಮತ್ತು ತಂಡ ಹಾಗೂ ನಮ್ಮ ತಂಡ ಪುನರ್ ಆಯ್ಕೆಯಾದರೆ ಪ್ರತಿ ಜಿಲ್ಲೆಗಳಲ್ಲೂ ಕೂಡ ನಮ್ಮ ಸಂಘದ ವಿದ್ಯಾರ್ಥಿ ನಿಲಯ ಸ್ವಂತ ಕಟ್ಟಡವನ್ನು ನಿರ್ಮಿಸಲು ಸಂಪೂರ್ಣವಾದಂತ ಸಾಕಾರವನ್ನು ನಮ್ಮ ರಾಜ್ಯ ಸಂಘದಿಂದ ನೀಡಲು ನಾವು ತಯಾರಿದ್ದೇವೆ ರಾಜ್ಯ ಸಂಘದಿಂದ ಎಲ್ಲಾ ಸವಲತ್ತುಗಳನ್ನು ಕೊಡಿಸಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಆತ್ಮೀಯ ನನ್ನ ಬಂಧುಗಳೇ ಆಯ್ಕೆ ನಿಮ್ಮ ಕೈಯಲ್ಲಿದೆ ಸಮಾಜಕ್ಕೆ ದ್ರೋಹ ಬಗೆದಂತಹ ಜನಗಳು ನಿಮ್ಮ ಮುಂದೆ ಬಣ್ಣ ಬಣ್ಣದ ಮಾತುಗಳನ್ನು ಆಡುತ್ತಾ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಬರುತ್ತಾರೆ ಅವರಿಗೆ ನಿಮ್ಮ ಬೆಂಬಲವನ್ನು ದಯವಿಟ್ಟು ನೀಡಬೇಡಿ ನಮ್ಮ ಸಮಾಜವನ್ನು ಹಾಳು ಮಾಡಲು ಅನುವು ಮಾಡಿಕೊಡಬೇಡಿ. ಈಗಾಗಲೇ ಚುನಾವಣೆ ಅಧಿಕಾರಿಗಳು ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿರುವಂತೆ ಅದನ್ನು ಚಾಚಿ ತಪ್ಪದೆ ಜಾರಿಗೊಳಿಸಿ ಚುನಾವಣೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ.
Comments
Post a Comment