ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಅತಿ ಹಿಂದುಳಿದ ಪಂಗಡಗಳಿಗೆ ವಿಳಂಬ ಮಾಡದೇ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಎಂದುಬಸವರಾಜ್ ಕೌತಾಳ್ ಅವರು ಒತ್ತಾಯಿಸಿದರು.


ಬೆಂಗಳೂರು, ಜೂನ್ 20, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ - ರಾಜ್ಯ ಸಮಿತಿ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 


ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಸಂಚಾಲಕರಾದ ಬಸವರಾಜ್ ಕೌತಾಳ್ ಅವರು ಮಾತನಾಡಿದರು. 


ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯ ಹಿಂದುಳಿದ ಪಂಗಡಗಳಿಗೆ ವಿಳಂಬ ಮಾಡದೇ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು ಎಂದುಬಸವರಾಜ್ ಕೌತಾಳ್ ಅವರು ಒತ್ತಾಯಿಸಿದರು. 

30 ವರ್ಷಗಳ ಒಳಮೀಸಲಾತೊಗಾಗಿ ನಡೆದ ಹೋರಾಟವನ್ನು ಪರಿಗಣಿಸಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 1. 2024 ರಂದು ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ತೀರ್ಪು ನೀಡಿತ್ತು. ಅಲ್ಲದೇ ಸೂಕ್ತ ದತ್ತಾಂಶಗಳ ಸಹಾಯದಿಂದ ಒಳಮೀಸಲಾತಿಯನ್ನು ಜಾರಿ ಮಾಡುವಂತೆಯೂ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಜಾತಿಗಳ ಜನಸಂಖ್ಯೆಯನ್ನು ಅಧ್ಯಯನ ಮಾಡಲು ನೇಮಿಸಿದ್ದ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರಿಯಾದ ವೈಜ್ಞಾನಿಕ ದತ್ತಾಂಶಗಳು ಇಲ್ಲದ ಕಾರಣ ಹಲವು ಪರಿಶಿಷ್ಟ ಜಾತಿಗಳು ವಿರೋಧಿಸಿದ್ದವು. ಒತ್ತಡಕ್ಕೆ ಮಣಿದ ಸರ್ಕಾರ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ರಾಸ್ ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆದೇಶಿಸಿತ್ತು ಆಯೋಗಕ್ಕೆ ಸೂಕ್ತ ಕಾರ್ಯಸೂಚಿ ನೀಡಲು, ಕಛೇರಿಯನ್ನು ಒದಗಿಸಲೂ ಹೋರಾಟ ನಡೆಸಬೇಕಾಗಿಯಿತು. ನವೆಂಬರ್ 3ರಂದು ಸರ್ಕಾರದ ಕ್ಯಾಬಿನೆಟ್ ಸಭೆಯು ಜಸ್ಟೀಸ್ ನಾಗಮೋಹನ್ ದಾಸ್‌ರವರ ಏಕಸದಸ್ಯ ಆಯೋಗವನ್ನು ನೇಮಿಸಿ 2 ತಿಂಗಳ ಕಾಲಾವಕಾಶ ನೀಡಿತ್ತು ಅಲ್ಲದೇ ವರದಿ ಬರುವವರೆಗೂ, ಒಳಮೀಸಲಾತಿ ಜಾರಿಯಾಗುವವರೆಗೂ ಯಾವುದೇ ಹೊಸ ನೇಮಕಾತಿಯನ್ನು ನಡೆಸದಂತೆ ತೀರ್ಮಾನಿಸಿತ್ತು. 3 ತಿಂಗಳ ಕಾಲಾವಧಿಯ ನಂತರದಲ್ಲಿ ಪರಿಶಿಷ್ಟ ಜಾತಿಗಳ ಒತ್ತಡ ಹೆಚ್ಚಾದ ಕಾರಣ ಜಸ್ಟೀಸ್ ನಾಗಮೋಹನ್ ವಾಸ್ ಏಕಸದಸ್ಯ ಆಯೋಗವು ಮಧ್ಯಂತರ ಪರದಿಯನ್ನು 27 ಮಾರ್ಚ್ 2025ರಂದು ಸರ್ಕಾರಕ್ಕೆ ಸಲ್ಲಿಸಿತ್ತು

ವರದಿಯ ಶಿಫಾರಸ್ಸುಗಳಲ್ಲಿ ಮುಖ್ಯವಾಗಿ ಈಗ ಲಭ್ಯವಿರುವ ಯಾವುದೇ ವರದಿ, ದತ್ತಾಂಶಗಳಲ್ಲಿ ವೈಜ್ಞಾನಿಕ ಜನಸಂಖ್ಯೆಯ ಮಾಹಿತಿ ಇಲ್ಲದ ಕಾರಣ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಬೇಕೆಂದು ತಿಳಿಸಿತ್ತು. ಇದಕ್ಕೆ ಶಾಶ್ವತ ಪರಿಹಾರವೆಂದೇ ಆರಿತಿದ್ದ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ನಿರಂತರವಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಿ 101 ಜಾತಿಗಳಿಗೂ ಜನಸಂಖ್ಯೆಯ ಆಧಾರದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿತ್ತು.

ಮೇ 3, 2025ರಂದು ಹೊಸ ತಂತ್ರಜ್ಞಾನ ಸಹಾಯದಿಂದ ಜಿಪಿಎಸ್ ಬಳಸಿ ವೈಜ್ಞಾನಿಕವಾಗಿ ಸಮೀಕ್ಷೆ ಕೆಲಸ ಆರಂಭಿಸಿದ ಆಯೋಗವು ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಿತ್ತು 2011ರ ಜನಗಣತಿಯ ಆಧಾರದಲ್ಲಿ ಆಯಾ ಜಿಲ್ಲೆಗಳ ಪರಿಶಿಷ್ಟರ జనగణ తెయన్ను వడద నమిశ్రమల్లి కలవు పట్టిగపల్లి 100రెపు కమిరియల్లి వాటిునిండు మాటకియన్ను ದಗಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ 100ರಷ್ಟು ಸಮೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ಶೇ.91-92ರಷ್ಟು ಸಮೀಕ್ಷೆ ಮುಗಿದಿದೆ ಎಂದು ಆಯೋಗವು ಹೇಳುತ್ತಿದೆ. ಇದರ ಕುರಿತೂ ಆಯೋಗವು ಸಮುದಾಯಗಳ ಮುಖಂಡರನ್ನು ಸಮೀಕ್ಷೆಯಲ್ಲಿ ಸಹಕರಿಸುವಂತೆ ಕೋರಿತ್ತು ಈಗ ಸಮೀಕ್ಷೆಯ ಕಾಲಾವಧಿಯು ಮುಗಿಯುತ್ತಿದ್ದು, ಅವಧಿಯನ್ನು ವಿಸ್ತರಿಸಬೇಕೆಂಬ ಕೂಗು ಕೇಳಿಬರುತ್ತಿದೆ ಆದರೆ ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ವಿಳಂಬವನ್ನು ಮಾಡದೆ, ಒಳಮೀಸಲಾತಿ ಜಾರಿ ಮಾಡಲು ಸರ್ಕಾರ ಮುಂದಾಗಬೇಕಿದೆ. ಯಾವ ಕಾರಣಕ್ಕೂ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಬಾರದೆಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟವು ಸರ್ಕಾರವನ್ನೂ ಹಾಗೂ ಪರ್ಟಿ ನಾಗಮೋಹನ್ದಾಸ್ ಆಯೋಗವನ್ನು ಒತ್ತಾಯಿಸುತ್ತದೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.