ರಾಜ್ಯ ಸರ್ಕಾರವು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಶಂಕರ್ ರಾಮಲಿಂಗಾಯ್ಯ ಅವರು ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಭೀಮ್ ಸೇನೆ (ರಿ)' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ರಾಜ್ಯ ಸರ್ಕಾರವು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಶಂಕರ್ ರಾಮಲಿಂಗಾಯ್ಯ ಅವರು ತಿಳಿಸಿದರು. 

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಭೀಮ್ ಸೇನೆ (ರಿ) ಸಂಘಟನೆ ಆಡಳಿತ ಸರ್ಕಾರಕ್ಕೆ ನೀಡಿದ ಮನವಿ ಏನೆಂದರೆ. ತೆಲಂಗಣ ರಾಜ್ಯದಲ್ಲಿ 125 ಅಡಿ ಎತ್ತರ ಮತ್ತು ಆಂಧ್ರದಲ್ಲಿ 206 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿರುತ್ತಾರೆ,

2. ಅದೇ ರೀತಿ ನಮ್ಮ ರಾಜ್ಯದಲ್ಲೂ 250 ಅಡಿ ಬೃಹತ್ ಎತ್ತರದ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ" ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದು. ಕರ್ನಾಟಕ ಭೀಮ್ ಸೇನೆ (ರಿ) ಸಂಘಟನೆ ವತಿಯಿಂದ, ಸಮುದಾಯದ ಪರವಾಗಿ ಹಾಗೂ ಬಾಬಾ ಸಾಹೇಬ್ ಡಾ" ಬಿ. ಆರ್.ಅಂಬೇಡ್ಕರ್ ರವರ ಅನುಯಾಯಿಗಳ ಪರವಾಗಿ, ಕರ್ನಾಟಕ ರಾಜ್ಯದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 250 ಅಡಿ ಎತ್ತರದ ಬೃಹತ್ ಪ್ರತಿಮೆ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕೆಂದು, ದಿನಾಂಕ 27-1-2024 ರಿಂದ, ರಾಜ್ಯದ 30 ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳಿಗೆ ಏಕಕಾಲಕ್ಕೆ ಮನವಿಯನ್ನು ಸಲ್ಲಿಸಿರುತ್ತೇವೆ.

3. ನಂತರ ಬೆಳಗಾವಿ ಜಿಲ್ಲೆಯಲ್ಲಿ ಚಳಿಗಾಲ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಬೆಂಗಳೂರಿನಿಂದ ಬೆಳಗಾವಿ ಚಲೋ ಹೋರಾಟದ ಮೂಲಕ ನೂರಾರು ಜನ ಕರ್ನಾಟಕ ಭೀಮ್ ಸೇನೆ ಮತ್ತು ದಲಿತ ಪರ ಮುಖಂಡರು ಸೇರಿ ಮನವಿ ಸಲ್ಲಿಸಿರುತ್ತೇವೆ,

4. ಹಾಗೂ ಕರ್ನಾಟಕ ರಾಜ್ಯಪಾಲರಿಗೆ, E-MAIL ಮೂಲಕ, ಮಲ್ಲಿಕಾರ್ಜುನ್ ಖರ್ಗೆ ರವರಿಗೆ, ರಾಹುಲ್ ಗಾಂಧಿ ರವರಿಗೆ ಮನವಿ ಸಲ್ಲಿಸಿರುತ್ತೇವೆ, ಹಾಗು ಮಾನ್ಯ ಮುಖ್ಯ ಮಂತ್ರಿಗಳನ್ನು ಹಾಗು ಸಚಿವರನ್ನು ಭೇಟಿ ಮಾಡಲು ದಿನಾಂಕಗಳನ್ನೂ ನಿಗದಿ ಮಾಡಿಕೊಂಡು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವುಕುಮಾರ್ ಅವರಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ" ಹೆಚ್. ಸಿ. ಮಹದೇವಪ್ಪ ಅವರಿಗೆ ಮತ್ತು ರಾಜ್ಯ ಸರ್ಕಾರದ ಎಲ್ಲಾ ಸಚಿವ ಸಂಪುಟದ ಸಚಿವರುಗಳಿಗೆ, ಸಮುದಾಯದ ಶಾಸಕರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ವಿಧಾನಪರಿಷತ್ತು ಸದಸ್ಯರುಗಳಿಗೂ ಮನವಿ ಸಲ್ಲಿಸಿ ಜೊತೆಗೆ, ದಲಿತಪರ ಸಂಘಟನೆಯ ಹಿರಿಯ ಮುಖಂಡರುಗಳಿಗೂ ಮನವಿ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಿರುತ್ತೇವೆ,

5. ಜೊತೆಗೆ ರಾಜ್ಯವ್ಯಾಪಿ ಏಕಕಾಲಕ್ಕೆ ದಿನಾಂಕ 13-2-2025 ರಂದು ಪತ್ರಿಕಾಗೋಷ್ಟಿ ಕರೆದು ಪತ್ರಿಕಾ ಪ್ರಕಟಣೆ ಮತ್ತು ಟಿವಿ ಮಾಧ್ಯಮ ಗಳಲ್ಲಿ ವರದಿ ಮಾಡುವ ಮೂಲಕ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರ ಗಮನಕ್ಕೆ ತಂದಿರುತ್ತೇವೆ.
ಮತ್ತು ದಿನಾಂಕ 18.02.2025 ರಂದು, ವಿಧಾನಸೌಧದಲ್ಲಿ ದಲಿತ ಮುಖಂಡರನ್ನು ಒಳಗೊಂದು 25 -26 ಸಾಲಿನ ಬಜೆಟ್ ಸಭೆಯಲ್ಲಿ, ರಾಜ್ಯದ ಸುಮಾರು 500 ಕ್ಕೂ ಹೆಚ್ಚು, ದಲಿತ ಸಂಘಟನೆಗಳ ಮುಖಂಡರ ಪಾಲ್ಗೊಂಡಿದ್ದ ಸಭೆಯಲ್ಲಿ ಕರ್ನಾಟಕ ಭೀಮ್ ಸೇನೆ ಸಂಘಟನೆ, ಬಾಬಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ 250 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಸಭೆ ಮೂಲಕ ಒತ್ತಾಯಿಸಿದ ಸಂದರ್ಭದಲ್ಲಿ ಸಭೆಯಲ್ಲಿ ಸೇರಿದ ಎಲ್ಲ ಸಂಘಟನೆಗಳು ಬೆಂಬಲ ಸೂಚಿಸಿತ್ತು,

7. ಹಾಗೂ ದಿನಾಂಕ 6-3-2025 ರಂದು ಸ್ವತಂತ್ರ ಉದ್ಯಾನವನ ಬೆಂಗಳೂರು (ಫ್ರೀಡಂ ಪಾರ್ಕ್ ) ನಲ್ಲಿ ನೂರಾರು ಜನ ಸೇರಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿರುತ್ತೇವೆ.

8. ಇವೆಲ್ಲವನ್ನೂ ಗಮನಿಸಿದ ಮಾನ್ಯ ಜನಪ್ರಿಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ರವರು ಏಪ್ರಿಲ್ 14, 2025 ರಂದು ಬಾಬಾ ಸಾಹೇಬ್ ಡಾ" ಬಿ. ಆರ್.ಅಂಬೇಡ್ಕರ್ ರವರ 134 ನೇ ಜಯಂತಿಯಂದು ಘೋಷಣೆ ಮಾಡಿದ್ದೂ ನಿಜಕ್ಕೂ ಶ್ಲಾಘನೀಯ.

9. ನುಡಿದಂತೆ ನಡೆವ ಸರ್ಕಾರ ಎಂದು ಮತ್ತೊಮ್ಮೆ ಸಾಬೀತು ಮಾಡಿಕೊಂಡ ಆಡಳಿತ ಸರ್ಕಾರವು ದಿನಾಂಕ : 19-6-2025 ರಂದು ನೀಲಿ ನಕ್ಷೆ ಹಾಗೂ ಸ್ಥಳ ಸೂಚಿಸುವ ಮೂಲಕ ಮಾನ್ಯ ಜನಪ್ರಿಯ ಮುಖ್ಯಮಂತ್ರಿ ಗಳಾದ ಶ್ರೀಯುತ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧ ದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರತಿಮೆ ನಿರ್ಮಾಣ ಮಾಡಲು ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಳ ಸೂಚಿಸಿರುತ್ತಾರೆ.

10. ಕರ್ನಾಟಕ ಭೀಮ್ ಸೇನೆ (ರಿ) ಸಂಘಟನೆಯ ಮನವಿಗೆ ಸ್ಪಂದಿಸಿದ ಆಡಳಿತ ಸರಕಾರಕ್ಕೆ, ಹಾಗೂ ಈ ಒಂದು ವಿಷಯಕ್ಕೆ ಬೆಂಬಲ ಸೂಚಿಸಿದ ರಾಜ್ಯದ ಎಲ್ಲ ದಲಿತ ಹಾಗೂ ಪ್ರಗತಿಪಾರ ಸಂಘಟನೆಯ ಮುಖಂಡರಿಗೂ ಹಾಗೂ ಈ ಮನವಿ ಸಲ್ಲಿಸಲು ನಿರಂತರವಾಗಿ ನಮ್ಮ ಮ್ಮ ಜೊತೆ ಸಹಕರಿಸಿದ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೂ ಈ ದಿನ 24.06.2025ರಂದು ಪತ್ರಿಕಾಗೋಷ್ಠಿ ಮೂಲಕ ಸಾರ್ವಜನಿಕರಿಗೆ ಸಿಹಿ ಹಂಚಿ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ, ವಂದನೆಗಳೊಂದಿಗೆ

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.