ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಬಿಜೆಪಿ ಕುರುಬ ಸಮಾಜದ ಮುಖಂಡರ ಪೂರ್ವಭಾವಿ ಸಭೆ' ನಡೆಯಿತು.

ಬೆಂಗಳೂರು ಜೂನ್ 28, 2025 

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಬಿಜೆಪಿ ಕುರುಬ ಸಮಾಜದ ಮುಖಂಡರ ಪೂರ್ವಭಾವಿ ಸಭೆ' ನಡೆಯಿತು. 

 ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯ 224ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಕನಿಷ್ಟ ಮೂವತ್ತು ಮಂದಿ ಶಾಸಕರು ಆಯ್ಕೆಯಾಗುವಂತೆ ಪಕ್ಷದ ಸಂಘಟನೆಯಲ್ಲಿ ಕುರುವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಬೇಕೆಂದು ಮಾಜಿ ಸಚಿವ ಶಾಸಕ ಬೈರತಿ ಬಸವರಾಜ್ ಕರೆ ನೀಡಿದರು.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಕುರುಬ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಬಿಜೆಪಿ ಪಕ್ಷದಿಂದ ಅನೇಕು ಕುರುಬ ಮುಖಂಡರು ಅಧಿಕಾರ ಅನುಭವಿಸಿದ್ದೇವೆ,ಕಳೆದ ಬಾರೀ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರವಹಿಸಿದ್ದೇವೆ,2028ರ ಚುನಾವಣೆಯಲ್ಲಿ ಹೆಚ್ಚಿನ ಶಾಸಕರನ್ನು ನಮ್ಮ ಸಮುದಾಯದಿಂದ ಆಯ್ಕೆಯಾಗಬೇಕಿದೆ ಎಂದು ಹೇಳಿದರು.

ಮಾಜಿ ಸಚಿವ ವರ್ತೂರ್ ಪ್ರಕಾಶ್ ಮಾತನಾಡಿ,ಮುಂಬರುವ ದಿನಗಳಲ್ಲಿ ಬೈರತಿ ಬಸವರಾಜ್‌ ಅವರು ತಮ್ಮ ತನು,ಮನ ಧನವನ್ನು ಆರ್ಪಿಸಿ ಹೆಚ್ಚಿನ ಸಂಖ್ಯೆಯ ಶಾಸಕರು ಆಯ್ಕೆಯಾಗಿ ಬರುವಂತೆ ನೋಡಿಕೊಳ್ಳಬೇಕು,ನಾನು ಹಿಂದೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಸಾಕಷ್ಟು ಹಣ ಕಳೆದು ಕೊಂಡಿದ್ದೇನೆ.
ಇರುವಾಗ ಸಾಕಷ್ಟು ಖರ್ಚು ಮಾಡಿದ್ದೇನೆ.ಬೈರತಿ ಬಸವರಾಜ್‌ ಅವರು ಮುಂಬರುವ ಚುನಾವಣೆಯಲ್ಲಿ ಒಬ್ಬ ಕುರುಬ ಅಭ್ಯರ್ಥಿಗೆ ಕನಿಷ್ಠ 10ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ಇಪ್ಪತ್ತರಿಂದ ಮೂವತ್ತು ಮಂದಿ ಶಾಸಕರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು,ಸಿದ್ದರಾಮಯ್ಯ ಅದೃಷ್ಟವಂತ ಕೈಯಿಂದ ಹತ್ತು ರೂಪಾಯಿ ಖರ್ಚು ಮಾಡದೇ,ಇನ್ನೋಬ್ಬರಿಗೆ ಕೊಡದೇ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ಮಾಜಿ ಪಾಲಿಕೆ ಸದಸ್ಯ, ಹಿರಿಯ ಮುಖಂಡ ಜಯನಗರ ಸೋಮಶೇಖ‌ರ್ ಮಾತನಾಡಿ,ಇತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದಲ್ಲಿ ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಕುರುಬರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿಲ್ಲ ಈ ಹಿನ್ನಲೆಯಲ್ಲಿ ಬಿಜೆಪಿಯ ಕುರುಬ ಸಮಾಜದ ಮುಖಂಡರ ಸಭೆ ಕರೆಯಲಾಗಿತ್ತು,ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಂದಿ ಮುಖಂಡರು ಭಾಗವಹಿಸಿದ್ದರು, ಮುಂದಿನ ದಿನಗಳಲ್ಲಿ ಕುರುಬ ಸಮಾಜದ ಮುಖಂಡರಿಗೆ ಉನ್ನತ ಸ್ಥಾನ ನೀಡಬೇಕು,ಕುರುಬರ ಪ್ರಾಬಲ್ಯ ಕುರಿತು ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್‌ ಅವರ ಜತೆ ಸದ್ಯದಲ್ಲೆ ಸಭೆ ನಡೆಸಿ ಮನವರಿಕೆ ಮಾಡಲಾಗುವುದು,ದಾವಣಗೆರೆಯಲ್ಲಿ ಪಕ್ಷದವತಿಯಿಂದ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ವಿಧಾನ ಸಭೆಯ ಮುಖ್ಯ ಸಚೇತಕ ದೊಡ್ಡನ ಗೌಡ, ವಿಧಾನ ಪರಿಷತ್‌ ಸದಸ್ಯ ರಘನಾಥ್ ಮಲ್ಕಾಪುರೆ,ಮಾಜಿ ವಿಧಾನ ಪರಿಷತ್‌ ಸದಸ್ಯ ಹುಲಿನಾಯ್ಕ‌ರ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium