ಧಾರವಾಡದ ಕಿಟಲ್ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಯಿಂದ ಗುತ್ತಿಗೆದಾರನಿಗೆ ವಂಚನೆ ಆರೋಪ
ಬೆಂಗಳೂರು, ಜೂನ್ 23, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ದಲಿತ ಸೇನೆ-ಕರ್ನಾಟಕ' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಧಾರವಾಡದ ಕಿಟಲ್ ವಿಜ್ಞಾನ ಕಾಲೇಜಿನ ಆಡಳಿತ ಮಂಡಳಿಯಿಂದ ಗುತ್ತಿಗೆದಾರನಿಗೆ ವಂಚನೆ ಆರೋಪ
ಶ್ರೀ ಎಮ್. ಎ. ಬಡಬಡೆರವರು ಕಿಟಲ್ ವಿಜ್ಞಾನ ಕಾಲೇಜ ಧಾರವಾಡ, ಇಲ್ಲಿ ಗುತ್ತಿಗೆದಾರರಾಗಿದ್ದು 2014 ರಿಂದ 29-09-2020ರ ವರೆಗೆ ಹೊಸ ಕಟ್ಟಡ ನಿರ್ಮಾಣ, ಗೌಂಡ ಪ್ಲೋರ, ಫಸ್ಟ ಪ್ಲೋರ, ಸೇಕೆಂಡ ಪ್ಲೋರ ಮತ್ತು ಮೂರನೇ ಪ್ಲೋರ ಸುಮಾರು 7500 ಸೈರ ಫೂಟ ಅಳತೆಯ ನಿರ್ಮಾಣ ಕಾರ್ಯವನ್ನು ಮುಗಿಸಿರುತ್ತಾರೆ, ಹೊಸ ಕಟ್ಟಡದ ಮೇಲ್ಬಾಗದಲ್ಲಿ ಟೈಲ್ಸ್ ಗಳನ್ನು ಹಚ್ಚಿ ವಾಟರ ಪೂಫಿಂಗ ಮಾಡಿರುತ್ತಾರೆ. ಅಲ್ಲದೇ ಕಾಲೇಜಿನ ಹಳೇ ಕಟ್ಟಡದಲ್ಲಿ ಪಿ.ಯು.ಸಿ ವಿಭಾಗಕ್ಕೆ ಮೂರು ಪ್ರಯೋಗಾಲಯಗಳನ್ನು, ಸುಮಾರು (3500 ರಿಂದ 4000 ಸೈರ ಫೂಟ), ಗ್ರಂಥಾಲಯದ ಕೆಳಗಿನ ಹಾಗೂ ಮೇಲಿನ ಅಂತಿಸ್ತಿನಲ್ಲಿ (ವಿಸ್ತೀರ್ಣ ಸುಮಾರು 2500 ರಿಂದ 3000 ಸೈರ ಫೂಟ), ಮಧ್ಯಮ ಅಳತೆಯ ವರ್ಗ ಕೊಠಡಿಗಳನ್ನು. ಸೋಲಾರ ಪೆನಲಗಳನ್ನು ಹಚ್ಚಲು ಬೇಕಾಗಿರುವ ಎಲ್ಲ ಸಿವಿಲ್ ಕೆಲಸ ಸೌಕರ್ಯಗಳುಳ್ಳ ಕೋಠಡಿಯನ್ನು. ಪರೀಕ್ಷಾ ಕಾರ್ಯಗಳಿಗೆ ಕೊಠಡಿಯನ್ನು, ವಿದ್ಯಾರ್ಥಿನಿಯರ ಕೊಠಡಿಗಳನ್ನು, ವಿದ್ಯಾರ್ಥಿಗಳ ಶೌಚಾಲಯಗಳನ್ನು, ಮೇನ ಗೇಟ, 2ನೇ ಗೇಟ, 3ನೇ ಗೇಟ ಮತ್ತು ಪೂರ್ಣ ಕಂಪೌಂಡ ಕೆಲಸ ಮಾಡಿರುತ್ತಾರೆ ಹಾಗೂ ಹತ್ತು ಹಲವಾರು ಕೊಠಡಿಗಳ ರಿಪೇರಿ ವಗೈರೆ ಕಾರ್ಯಗಳನ್ನು ಮಾಡಿರುತ್ತಾರೆ. ಮಾಡಿದ ಪೂರ್ಣಗೊಂಡ ಕೆಲಸಗಳಿಗೆ ಸೆಪ್ಟೆಂಬರ 2019ರ ವರೆಗೆ ಬಿಲ್ಲು ಸಲ್ಲಿಸಿದ್ದು ಬಿಲ್ಲುಗಳಿಗೆ ಹಣ ಚೆಕ್ ಮೂಲಕ ಸಂದಾಯವಾಗಿರುತ್ತದೆ. ವಿದ್ಯಾರ್ಥಿಗಳ ಉಪಯೋಗಕ್ಕೆ ಮತ್ತು ಪರೀಕ್ಷಾ ಕಾರ್ಯಗಳಿಗೆ ಅನುಕೂಲವಾಗುವಷ್ಟು ಹೆಚ್ಚಿನ ಕೆಲಸಗಳನ್ನು ಮಾಡಿರುತ್ತಾರೆ. ಆದರೆ ಅಲ್ಪ ಸ್ವಲ್ಪ ಕೆಲಸಗಳು ಬಾಕಿ ಉಳದಿದ್ದು ಅವುಗಳನ್ನು ಪೂರ್ಣಗೊಳಿಸಬೇಕಾಗಿತ್ತು ಪದವಿ ಪರೀಕ್ಷೆಗಳು ಮುಗಿದ ನಂತರ ನವೆಂಬರ 2019 ರಿಂದ ಮಾರ್ಚ 15, 2020ರ ವರೆಗೆ ಕೆಲಸ ಮಾಡಿರುತ್ತಾರೆ. ಈ ಅವಧಿಯಲ್ಲಿ ಕ್ರಿಮಸ್ ಹಬ್ಬ ಮತ್ತು ಪಿ.ಯು.ಸಿ ಪರೀಕ್ಷೆಗಳಿಗಾಗಿ ಕೆಲವು ಸಮಯ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಮುಂದೆ ಒಂದೇ ವಾರದಲ್ಲಿ "ಕೊವಿಡ ಮಹಾಮಾರಿ" ಕಾರಣಕ್ಕೆ ಎಲ್ಲ ಕೆಲಸಗಳು ಸ್ಥಗಿತಗೊಂಡವು, ಪುನಃ ಅಗಸ್ಟ ತಿಂಗಳಿನಲ್ಲಿ ಕೆಲಸವನ್ನು ಪ್ರಾರಂಭಿಸಿರುತ್ತಾರೆ. ಜುಲೈ 2020ರಲ್ಲಿ ಆಗಿನ ಪ್ರಾಚಾರ್ಯರು ನಿವೃತ್ತರಾಗಿರುತ್ತಾರೆ. ಪೂರ್ಣಗೊಳಿಸಿದ ಕೆಲಸಗಳಿಗೆ ಬರಬೇಕಾದ ಸುಮಾರು 65 ಲಕ್ಷಕ್ಕೂ ಹೆಚ್ಚಿನ ಬಿಲ್ಲುಗಳು ಇಲ್ಲಿಯವರೆಗೂ ಪಾವತಿಯಾಗಿರುವುದಿಲ್ಲ. ಸದರಿ ಎಮ್. ಎ. ಬಡಬಡೆರವರು ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದವರಾಗಿದ್ದು ಸಾಲ ಮಾಡಿ ಸದರಿ ಕಟ್ಟಡ ಕೆಲಸಗಳನ್ನು ಪೂರ್ಣಗೊಳಿಸಿರುತ್ತಾರೆ. 01-08-2020 ರಿಂದ ಹೊಸದಾಗಿ ಬಂದ ಪ್ರಾಚಾರ್ಯರು ಸಲ್ಲಿಸಿದ ಬಿಲ್ಲುಗಳನ್ನು ಪಾವತಿ ಮಾಡಬಾರದೆಂಬ ದುರುದ್ದೇಶದಿಂದ ದಿನಾಂಕ 29-09-2020 ರಂದು ಕೆಲಸಗಾರರನ್ನು ಹೊಡೆದು ಓಡಿಸಿ ಅವರ ಮೇಲೆ ಕ್ರಿಮಿನಲ್ ಮುಕದ್ದಮೆ ಹಾಕಿರುತ್ತಾರೆ.
1) ಈ ಸಂಧರ್ಭದಲ್ಲಿ ಸುಮಾರು 10 ಲಕ್ಷ ರೂಪಾಯಿ ಕಿಮ್ಮತ್ತಿನ ಕೆಲಸಕ್ಕೆ ಉಪಯೋಗಿಸುತ್ತಿದ್ದ ಸಲಕರಣೆಗಳು ಮತ್ತು ಸಾಮಗ್ರಿಗಳನ್ನು ಕಾಲೇಜಿನಲ್ಲಿಯೇ ಬಿಟ್ಟು ಬಂದಿರುತ್ತಾರೆ. ಎಮ್. ಎ. ಬಡಬಡೆರವರು ಆಗಿನ ಅಧ್ಯಕ್ಷರಾಗಿದ್ದ ರವಿಕುಮಾರ ನಿರಂಜನರವರನ್ನು ಹಲವಾರು ಸಲ ಭೇಟಿಯಾಗಿರುತ್ತಾರೆ. ಅಧ್ಯಕ್ಷರು ಎಮ್. ಎ. ಬಡಬಡೆರವರು ಕೆಲಸಗಳನ್ನು ಮಾಡಿದ್ದನ್ನು ಒಪ್ಪಿಕೊಂಡಿರುತ್ತಾರೆ. ಅಧಿಕ್ಷಕರೇ ತಿಳಿಸಿದಂತೆ ಹಿಂದಿನ ಪ್ರಾಚಾರ್ಯರಿಂದ ತರಬೇಕೆಂದು ತಿಳಿಸಿದ ಕಾಗದ ಪತ್ರಗಳನ್ನು ಬಡಬಡೆರವರು ಸಲ್ಲಿಸಿದ್ದಾಗಿಯೂ ರವಿಕುಮಾರ ನಿರಂಜನವರು ತಾವು ರಿಟಾರ್ಯಡ ಆಗುವವರೆಗೂ ಅಂದರೆ ಸೆಪ್ಟೆಂಬರ 2021ರ ವರೆಗೂ ಒಂದು ಬಿಲ್ಲನ್ನೂ ಪಾವತಿ ಮಾಡಲು ಕ್ರಮ ಕೈಗೊಳ್ಳಲಿಲ್ಲ. ಹೊಸದಾಗಿ ಬಂದ ಅಧ್ಯಕ್ಷರು ಶ್ರೀ ಮಾರ್ಟಿನ ಬೋರಗಾವಿರನ್ನು ಮತ್ತು ಟ್ರಸ್ಟಿಗಳ ಮನೆಗೂ ಸಹ ಹೋಗಿ ಭೇಟಿಯಾಗಿ ಕೆಲಸ ಪೂರ್ತಿಸೀದ ಬಿಲ್ಲುಗಳನ್ನು ಪಾವತಿಸಲು ವಿನಂತಿಸಿ ಹಲವಾರು ಬಾರಿ ಭೇಟಿಯಾಗಿರುತ್ತಾರೆ. ಜುಲೈ 2024 ರಿಂದ ನಮ್ಮ ಸಂಘಟನೆಯವರು ಸಹ ಬಡಬಡೆಯವರ ಬಿಲ್ಲು ಪಾವತಿಸುವ ಕುರಿತು ಕಿಟೆಲ್ ಲ ವಿಜ್ಞಾನ ಕಾಲೇಜಿನ ಪ್ರಾಚಾರ್ಯರನ್ನು, ಅಧ್ಯಕ್ಷರಾದ ಮಾರ್ಟಿನ ಬೋರಗಾವಿ ಯವರನ್ನು ಹಲವಾರು ಸಲ ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿ ಬಿಲ್ಲು ಪಾವತಿಸುವಂತೆ ವಿನಂತಿಸಿ ಒತ್ತಾಯಿಸಿರುತ್ತೇವೆ. ಮಾರ್ಟಿನ ಬೋರಗಾವಿಯವರು ಬಡಬಡೆಯವರ ಪ್ರಕರಣವನ್ನು ಇತ್ಯಾರ್ಥಗಳೊಳಿಸುವಂತೆ ಬೇರೆ ಇಬ್ಬರು ವ್ಯಕ್ತಿಗಳ ಬಳಿಗೆ ನಮ್ಮನ್ನು ಕಳುಹಿಸಿದರು. ಕೆಲವು ತಿಂಗಳಗಳ ಅಲ್ಲೆದಾಟದ ನಂತರ ಕಾಲೇಜಿಗೆ ಸಂಬಂಧ ಪಟ್ಟ ಬಡಬಡೆಯವರ 65 ಲಕ್ಷ ರೂಪಾಯಿಗೂ ಹೆಚ್ಚಿನ ರಕಮಿನ ಪಾವತಿಸುವ ಅಧಿಕಾರವು ಬಾಸೆಲ್ ಮಿಶನ ಸಂಸ್ಥೆಯ ಅಧ್ಯಕ್ಷರಾದ ಮಾರ್ಟಿನ ಬೋಗಾವಿಯವರಿಗೆ ಮಾತ್ರ ಇರುತ್ತದೆಂಬುದು ಅವರು ಸ್ಪಷ್ಟಗೊಳಿಸಿರುತ್ತಾರೆ. ಇವರಿಗೆ ತುಂಬಾ ಅನ್ಯಾಯ ವಾಗಿರುತ್ತದೆ. ಮುಂದುವರೆದು, ಕಿಟೆಲ್ ವಿಜ್ಞಾನ ಕಾಲೇಜ ಧಾರವಾಡ ಇದರ ಸಂಸ್ಥೆಯ ಕ್ರಿಶ್ಚಿಯನ್ ಟ್ರಸ್ಟ್ ಪ್ರಸ್ತುತ ಅನಧಿಕೃತವಾಗಿ ಕಾನೂನು ಬಾಹಿರವಾದ ಟ್ರಸ್ಟ್ ಆಗಿರುತ್ತದೆ. ಮತ್ತು ಇದರ ಬಿಷಪ್ ಸಹ ಕಾನೂನು ಬಾಹಿರವಾಗಿ ನೇಮಕವಾಗಿದ್ದು ಇವರ ಮೇಲೆ ಈಗಾಗಲೇ ಹಲವಾರು ದೂರುಗಳು ದಾಖಲಾಗಿರುತ್ತವೆ. ಶ್ರೀ ಎಮ್. ಎ. ಬಡಬಡೆರವರು ಕಟ್ಟಡದ ಎಲ್ಲ ಕಾಮಗಾರಿ ಕೆಲಸಗಳನ್ನು ಪೂರ್ಣಗೊಳಿಸಿ ತಮಗೆ ಬರಬೇಕಾದ ಬಿಲ್ಲುಗಳ ಪಾವತಿಗಾಗಿ ಸುಮಾರು ಐದು (05) ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಸಂಬಂಧಿಸಿದ ವ್ಯಕ್ತಿಗಳು ಧರ್ಮಗುರುಗಳು ಎನೆಸಿಕೊಂಡವರು ಬಡಬಡೆಯವರನ್ನು ಕಾಲೆಂಡಿನಂತೆ ಒದೆಯುತ್ತಾ ಬಂದಿದ್ದಾರೆ. ಸಾಲಗಾರರು ಬಡಬಡೆಯವರ ಬೆನ್ನು ಹತ್ತಿದ್ದಾರೆ. ಅವರಿಗೆ ತಮ್ಮ ಮನೆಯಲ್ಲಿಯೇ ಇರಲು ಬಿಡುತ್ತಿಲ್ಲ. ಅನಾರೋಗ್ಯ ಪಿಡಿತ ವೃದ್ಧ ತಂದೆ ತಾಯಿಗಳು ಕೊರಗುತ್ತಿದ್ದಾರೆ. ಮಕ್ಕಳ ಶಿಕ್ಷಣದ ಖರ್ಚನ್ನು ಭರಿಸಲು ಸಾಧ್ಯವಾಗದೆ ಅವರ ಶಿಕ್ಷಣ ಕುಂಠಿತವಾಗುತ್ತಿದೆ ಸ್ವಾಭಾವಿಕವಾಗಿರುವ ಮನೆಯ ಭಾಡಿಗೆ ಮತ್ತು ಇತರೆ ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಾದ್ಯವಾಗದೆ ಜೀವವನ್ನೆ ಕೊನೆಗೊಳಿಸಲು ನಿರ್ಧರಿಸಿರುತ್ತಾರೆ.
ಸಂಸ್ಥೆಯವರು ಮಾಡಿತ್ತಿರುವ ಅನಾಚಾರದಿಂದ ರೋಸಿ ಹೋಗಿ ಕೊಲೆಯಂತ ಅಹಿತಕರ ಘಟನೆಯೂ ನಡೆಯಬಹುದಾಗಿದೆ.
2) ಬಡಬಡೆಯವರು ಕೆಲಸ ಮಾಡುತ್ತಿದ್ದಾಗಿನ ಪ್ರಾಚಾರ್ಯರು 2020ರಲ್ಲಿ ರಿಟೈರ್ ಆದ ನಂತರ 02 ವರ್ಷಕ್ಕೊಬ್ಬರಂತೆ ಇಬ್ಬರು ಪ್ರಾಚಾರ್ಯರು ಮತ್ತು ಅಕ್ಟೋಬರ್ - ನವೆಂಬರ್ 2024. 02 ತಿಂಗಳಿಗೆ ಮತ್ತೊಬ್ಬರು ಪ್ರಾಚಾರ್ಯರಾಗಿರುತ್ತಾರೆ. ಸದ್ಯಕ್ಕೆ ಇದೇ ಸಂಸ್ಥೆಗೆ ಸೇರಿದ ಸಿ.ಎಸ್.ಐ. ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಕಮಲಾ ಡವಳೆಯವರು ಡಿಸೆಂಬರ್ 1, 2024 ರಿಂದ ವಿಜ್ಞಾನ ಕಾಲೇಜಿಗೂ ಪ್ರಭಾರ ವಹಿಸಿಕೊಂಡಿದ್ದು ಬಡಬಡೆಯವರಿಗೆ ಪಾವತಿಸಬೇಬೇಕಾಗಿರುವ 65 ಲಕ್ಷ ರೂಗಳನ್ನು ಪಾವತಿಸದಂತೆ ಹೊಸ ವರಸೆ, ಸ್ಟೋರಿ ವ ಐಡಿಯಾ ಮಾಡುತ್ತಿದ್ದಾರೆ. ಶ್ರೀ ಎಮ್. ಎ. ಬಡಬಡೆಯವರು ಗುತ್ತಿಗೆದಾರರಾಗಿ ಕೆಲಸ ಮಾಡಿದ ಕಿಟಲ್ ವಿಜ್ಞಾನ ಕಾಲೇಜಿನಲ್ಲಿ ಮಾಡಿದ ಹೊಸ ಕಟ್ಟಡ ನಿರ್ಮಾಣ ಮತ್ತು ಇತರ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ತಮಗೆ ಸಂದಾಯವಾಗಬೇಕಾಗಿದ್ದ ಸುಮಾರು ೧ ಲಕ್ಷ ರೂಪಾಯಿಗಿಂತ ಅಧಿಕ ರಕಂನ ಜಿಲ್ಲುಗಳ ಪಾವತಿಗಾಗಿ 5 ವರ್ಷಗಳಿಂದ ಸತಾಯಿಸುತ್ತಿರುವ, ಅವರಿಗೆ ಮಾನಸಿಕ ಹಿಂಸೆ ಕಿರುಕುಳ ನೀಡಿರುವ, ದೌರ್ಜನ್ಯ ಎಸಗಿರುವ, ಕಾಲೇಜಿನ ಪ್ರಾಚಾರ್ಯರು ಮತ್ತು ಸಂಸ್ಥೆಯ ಅಧ್ಯಕ್ಷರಾದ ಮಾರ್ಟಿನ ಬೋರಗಾವಿಯವರ ನಡೆಯು ಖಂಡನೀಯ, ತನ್ನಿಮಿತ್ತ ಶ್ರೀ ಎಮ್. ಎ. ಬಡಬಡೆಯವರಿಗೆ ನ್ಯಾಯದೊರಕಿಸಿ ಅವರಿಗೆ ಸಂದಾಯವಾಗಬೇಕಾಗಿರುವ 65 ಲಕ್ಷ ರೂಪಾಯಿಗಳು ಸಂದಾಯವಾಗುವರೆಗು ನಮ್ಮ ಸಂಘವು ಕಾಲೇಜಿನ ಪ್ರಾಚಾರ್ಯರ, ಅಧ್ಯಕ್ಷರ ವಿರುದ್ಧ ಉಗ್ರ ಹೊರಾಟವನ್ನು ಮಾಡುತ್ತದೆ.
Comments
Post a Comment