ಬೆಂಗಳೂರಿನ ಹೊಯ್ಸಳ ವಾರ್ಡಿನಲ್ಲಿ ಜೆಡಿಎಸ್ ( ಜಾತ್ಯಾತೀತ) ಪಕ್ಷದ ಕಚೇರಿ ಉದ್ಘಾಟನೆ ಮಾಡಲಾಯಿತು.



ಬೆಂಗಳೂರು, ಜೂನ್ 21, 2025 

ಬೆಂಗಳೂರಿನ ಹೊಯ್ಸಳ ವಾರ್ಡಿನಲ್ಲಿ ಜೆಡಿಎಸ್ ( ಜಾತ್ಯಾತೀತ) ಪಕ್ಷದ ಕಚೇರಿ ಉದ್ಘಾಟನೆ ಮಾಡಲಾಯಿತು. ಬೆಂಗಳೂರು ಮಹಾನಗರ ಜನತಾದಳ ಜಾತ್ಯತೀತ ಘಟಕದ ಅಧ್ಯಕ್ಷರಾದ ಎಚ್. ಎಂ. ರಮೇಶ್ ಗೌಡರು ಹೊಯ್ಸಳ ವಾರ್ಡಿನ ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಿದರು.

 ಸರ್ ಸಿ ವಿ ರಾಮನ್ ವಿಧಾನಸಭಾ ಕ್ಷೇತ್ರದ ಜನತಾದಳ ಜಾತ್ಯಾತೀತ ಪಕ್ಷದ ಅಧ್ಯಕ್ಷರಾದ ವೆಂಕಟಸ್ವಾಮಿ, ಜನತಾದಳ ಪಕ್ಷದ ನಾಯಕರಾದ ರಮೇಶ್, ಶೈಲಾ ಸಂತೋಜಿರಾವ್, ಶ್ರೀಕಾಂತ್ ಗೌಡ, ಅಂಜನಪ್ಪ, ವೇಲು ಸೇರಿದಂತೆ ಅನೇಕ ಜನತಾದಳ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

 ಹೊಯ್ಸಳ ವಾರ್ಡ್ ನ ಯುವ ಘಟಕದ ಅಧ್ಯಕ್ಷರಾದ ಜಿ. ನವೀನ್ ಕುಮಾರ್ ಅವರ ನೇತೃತ್ವದಲ್ಲಿ ಪಕ್ಷದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

 ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಕನ್ನಡಕ ಹಾಗೂ ಸೀರೆಗಳನ್ನು ಹಂಚಿಕೆ ಮಾಡಲಾಯಿತು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium