ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಿದ್ದಾರ್ಥ್ ಆನಂದ ಅವರು ಒತ್ತಾಯಿಸಿದರು.
ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ
ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಿದ್ದಾರ್ಥ್ ಆನಂದ ಅವರು ಒತ್ತಾಯಿಸಿದರು.
ಪ್ರಥಮ ಭಾರಿಗೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಗೆ ನಿರ್ದೇಶಕರಾಗಿರುವ ದಲಿತ ಪ್ರತಿನಿಧಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎನ್.ನಾರಾಯಣಸ್ವಾಮಿ ರವರನ್ನು ಅಧ್ಯಕ್ಷರನ್ನಾಗಿ ಮಾಡಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಪತ್ರಿಕಾಗೋಷ್ಠಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, (KOMUL) ಕ್ಕೆ ಕಳೆದ ವಾರ ನಿರ್ದೇಶಕರುಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೋಮುಲ್-ಗೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಒಬ್ಬ ದಲಿತ ಜನರಲ್ ಕ್ಷೇತ್ರದಲ್ಲಿ ಬಹು ಮತಗಳಿಂದ ಗೆದ್ದು ನಿರ್ದೇಶಕ ಸ್ನಾನಕ್ಕೆ ಆಯ್ಕೆಯಾಗಿದ್ದಾರೆ, ಕೋಲಾರ ಜಿಲ್ಲೆ ಬಹು ಸಂಖ್ಯಾತ ದಲಿತ ಮತಗಳಿರುವ ಜಿಲ್ಲೆಯಾಗಿದ್ದು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು 4 ಎಂಎಲ್‌ಎ ಗಳನ್ನು ಕೊಡುಗೆಯಾಗಿ ನೀಡಿದೆ. ಜಿಲ್ಲೆಯಲ್ಲಿ ಶೇಕಡ 90ರಷ್ಟು ದಲಿತರು ಕಾಂಗ್ರೆಸ್, ಮತ ನೀಡಿ ಕಾಂಗ್ರೆಸ್ ಇಂದು ಅಧಿಕಾರದಲಿರಲು ಪ್ರಮುಖ ಕಾರಣರಾಗಿದ್ದಾರೆ,
ಕೋಮುಲ್ ಪ್ರಾರಂಭವಾಗಿದ್ದರಿಂದ ಇಲಿಯವರೆಗೆ ಒಬ್ಬ ಒಬ್ಬ ದಲಿತ ನಿರ್ದೇಶಕರು ಆಯ್ಕೆ ಆಗದೆ ಇರುವುದು ದಲಿತರು ಬಹುಸಂಖ್ಯಾತರಾಗಿರುವ ಜಿಲ್ಲೆಗೆ ಮತ್ತು ಜನಸಂಖ್ಯಾವಾರು ಪ್ರಾತಿನಿಧ್ಯ ಕ್ಕೆ ಆದ ಅನ್ಯಾಯವಾಗಿದೆ, ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲದಿದ್ದರೂ ಈ ಬಾರಿ ಎಸ್ ಎನ್ ನಾರಾಯಣಸ್ವಾಮಿ ರವರು ನಿರ್ದೇಶಕರಾಗಿ ಆಯ್ಕೆ ಆಗಿರುವುದು ಕಾಂಗ್ರೆಸ್ ಪಕ್ಷಕ್ಕೆ ವರ್ಚಸ್ಸನ್ನು ಹೆಚ್ಚಿಸಿದೆ.
ಕಾಂಗ್ರೆಸ್ ಪಕ್ಷವು ಅಹಿಂದ ಸಿದ್ಧಾಂತದ ಮೇಲೆ ಅನೇಕ ಬಾರಿ ಅಧಿಕಾರಕ್ಕೆ ಬಂದಿದ್ದು ಒಮ್ಮೆಯೂ ಕೋಮುಲ್ ನಲಿ.. ಅವಕಾಶ ಸಿಗದ ದಲಿತರನ್ನು ಅಧ್ಯಕ್ಷರನ್ನಾಗಿ ಮಾಡಿ ಕಾಂಗ್ರೆಸ್ ಕೋಲಾರ ಜಿಲ್ಲೆ ದಲಿತರ ಋಣ ತೀರಿಸಬೇಕಾಗಿದೆ, ಎಸ್.ಎನ್ ನಾರಯಣಸ್ವಾಮಿ ರವರು 3 ಭಾರಿ ಶಾಸಕರು ಅಷ್ಟೇ ಅಲ್ಲದೆ, ಕರ್ನಾಟಕದ ಅಭಿವೃದ್ಧಿ ಹೊಂದಿದ ತಾಲೂಕುಗಳಲ್ಲಿ ಬಂಗಾರಪಟೆಯನ್ನು ಟಾಪ್-ಹತ್ತರ ಪಟ್ಟಿಯಲ್ಲಿ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಗೌರವ ತಂದವರು.
ಇವರ ಪ್ರತಿಸ್ಪರ್ಧಿಯಾದ ಮಾಲೂರು ಶಾಸಕರಾದ ನಂಜೇಗೌಡರ ಮೇಲೆ ED ಕೇಸ್, ನೇಮಕಾತಿ ಹಗರಣ, ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನು ಮಂಜೂರು ಅರೋಪ, 200 ಕೋಟಿ ಮೇಘಾಡೈರಿ ಹಗರಣ, 140 ಕೋಟಿ ರಾಜಧನ ವಂಚನೆ ಸೇರಿದಂತೆ ಅನೇಕ ಭ್ರಷ್ಟಚಾರದ ಕೇಸುಗಳು ಹಾಗೂ ಅರೋಪಗಳು ಇದ್ದು ಅವು ಇತ್ಯಾರ್ಥ ಆಗದೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಕಾಂಗ್ರೆಸ್ ಗೆ ಮುಖಭಂಗ ಜೊತೆಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ವಿರುದ್ಧವಾಗಿ ದಲಿತರ ತಮ್ಮ ರಾಜಕೀಯ ನಿಲುವು ಬದಲಾಯಿಸುವ ಅವಕಾಶ ಇದೆ.
Comments
Post a Comment