ಮೌಂಟ್ ಕಾರ್ಮೆಲ್ ಕಾಲೇಜು ಸಂಸ್ಥಾಪನಾ ದಿನ; ಬೂಕರ್ ವಿಜೇತೆ ಬಾನು ಮುಶ್ತಾಕ್ ಅವರಿಂದ ವಿಶೇಷ ಉಪನ್ಯಾಸ.

ಬೆಂಗಳೂರು, ಜುಲೈ 12, 2025

 ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಶ್ತಾಕ್ ಅವರ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾನು ಮುಶ್ತಾಕ್, ನಾನು ಬಾಲ್ಯದ ದಿನಗಳಲ್ಲಿ ಉರ್ದು ಮತ್ತು ಕನ್ನಡ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆದೆ.ನನ್ನ ಬರವಣಿಗೆಯನ್ನು ಜೀವನದುದ್ದಕ್ಕೂ ನಿಲ್ಲಿಸಿಲ್ಲ, ಕಥೆ,ಕಾದಂಬರಿ, ಕವನಗಳನ್ನು ಬರೆದಿದ್ದೇನೆ,ಲಂಕೇಶ್ ನಂತಹ ವಾರ ಪತ್ರಿಕೆಯಲ್ಲಿ ನನ್ನ ನಿರಂತರ ಬರವಣಿಗೆ ಇತ್ತು,ನಿಜವಾಗಿಯೂ ನೇರವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಬೂಕರ್ ನಂತಹ ಪ್ರತಿಷ್ಢಿತ ಪ್ರಶಸ್ತಿಗಳು ಪಡೆದೆ ಎಂದು ಹೇಳಿದರು.

ನನ್ನ ಕಥೆಯಾದ ಹಸೀನಾ ಕತೆಯ ಸಿನಿಮಾವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಪ್ರಶಸ್ತಿ ಪಡೆದಿದೆ. ನನ್ನ ಸ್ನೇಹಿತೆ ದೀಪಾ ಬಾಸ್ತಿ "ಎದೆಯ ಹಣತೆ" ಪುಸ್ತಕವನ್ನು ಒದುವ ಮೂಲಕ ಇಂಗ್ಲಿಷ್‌ ಗೆ ಭಾಷಾಂತರಿಸಿದರು.ನನ್ನ ಎದೆಯ ಪುಸ್ತಕ ಕಾಮನ್ ವೆಲ್ತ್ ಪ್ರಶಸ್ತಿಗೆ ಆಯ್ಕೆಯಾದ ಹದಿಮೂರು ಪುಸ್ತಕಗಳಲ್ಲಿ ಒಂದಾಗಿತ್ತು.ನನ್ನ ಪುಸ್ತಕ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದಾಗ ಅಶ್ಚರ್ಯ ಉಂಟಾಗಿತ್ತು. ನನ್ನ ಪಾಡಿಗೆ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಬೆಳಗ್ಗೆ ಮಾಧ್ಯಮದವರು ಮನೆಯ ಮುಂದೆ ಬಂದಾಗ ದೊಡ್ಡ ಆಶ್ಚರ್ಯವು ಕಾದಿತ್ತು ಎಂದು ಹೇಳಿದರು.

ಬೂಕರ್ ಪ್ರಶಸ್ತಿ ಸ್ವೀಕರಿಸಲು ಲಂಡನ್ ಗೆ ತೆರಳಿದಾಗ ನನ್ನ ಲಗೇಜ್ ಮಿಸ್ ಆಗಿ ರಾತ್ರಿ ಎರಡು ಗಂಟೆಯವರೆಗೂ ಅದನ್ನು ಹುಡುಕುವ ಪ್ರಯತ್ನದಲೇ ಮಕ್ಕಳು ಕಾಲ ಕಳೆಯಬೇಕಾಯಿತು,ಪ್ರಶಸ್ತಿ ಸಮಾರಂಭಕ್ಕೆ ಧರಿಸಬೇಕಾದ ಮೈಸೂರು ರೇಷ್ಮೆ ಸೀರೆ ಬದಲು ವಿದೇಶಿ ಪ್ಯಾಂಟ್,ಶರ್ಟ್ ಧರಿಸಬೇಕಾಯಿತು ಎಂದು ಅನುಭವ ಹಂಚಿಕೊಂಡರು.

ನನ್ನ "ಎದೆಯ ಹಣತೆ" ಪುಸ್ತಕ ಮಕ್ಕಳ ಕಥೆಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಮಾತು ಲಂಡನ್ ನಲ್ಲಿ ಕೇಳಿ ಬಂದಿದೆ,ಕನ್ನಡ ಭಾಷೆ ನಮ್ಮನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿದೆ ಎಂದು ಹೇಳಿದರು.

ಯಾವ ಮಹಿಳೆ ರಾಜಕಾರಣ, ಲೈಂಗಿಕತೆ,ಧರ್ಮವನ್ನು ಪ್ರಶ್ನಿಸಿ ಲೇಖನ ಬರೆದರೆ ಮಹಿಳೆಯರ ಮೇಲೆ ವಿನಾಕಾರಣ ಆರೋಪಗಳು ಶುರುವಾಗಲಿವೆ,ನನ್ನ ಜೀವನದಲ್ಲಿ ಒಂದು ಧರ್ಮದ ವ್ಯಕ್ತಿಯ ದುರುಪಯೋಗ ಕುರಿತು ಲೇಖನ ಬರೆದಾಗ ನನ್ನ ಕೊಲೆಯ ಪ್ರಯತ್ನ ನಡೆದಿತು ಎಂದು ತಮ್ಮ ಅನುಭವ ಹಂಚಿಕೊಂಡರು.

ಸಮಾರಂಭದಲ್ಲಿ ಕಾಲೇಜಿನ ನಿರ್ದೇಶಕರಾದ ಸಿಸ್ಟರ್ ಅಲ್ಬಿನಾ, ಪ್ರಾಂಶುಪಾಲರಾದ ಜಾರ್ಜ್ ಲೇಖ,ಸಿಸ್ಟರ್ ಸಜಿತಾ,ವಿವಿಧ ನಿಕಾಯಗಳ ಅಧ್ಯಾಪಕ ಮುಖ್ಯಸ್ಥರು,ಉಪನ್ಯಾಸಕರು ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium