ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ಕದಂಬ ಪಡೆ - ವಿದ್ಯಾರ್ಥಿ ಘಟಕ' ದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ಕದಂಬ ಪಡೆ - ವಿದ್ಯಾರ್ಥಿ ಘಟಕ' ದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ಆ‌ರ್.ಸಿ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಪರಿವರ್ತನೆ ಮಾಡಬಾರದು ಎಂದು 'ಕರ್ನಾಟಕ ಕದಂಬ ಪಡೆ - ವಿದ್ಯಾರ್ಥಿ ಘಟಕ' ದ ಸದಸ್ಯರು ಅಗ್ರಹಿಸಿದರು. 

ಜತೆಗೆ ರಾಜ್ಯ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. 

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಹೃದಯಭಾಗದಲ್ಲಿರುವ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ಆ‌ರ್.ಸಿ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಪರಿವರ್ತನೆ ಮಾಡುತ್ತಿರುವುದರ ವಿರುದ್ಧ ಪ್ರತಿಭಟಿಸಿ ಐತಿಹಾಸಿಕ ಹಿನ್ನಲೆಯುಳ್ಳ ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ಆರ್.ಸಿ ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ಮಾಡುವ ನಿರ್ಧಾರವನ್ನು ಕೂಡಲೇ ಕೈಬಿಡಲು ಆಗ್ರಹಿಸಿ ಸರ್ಕಾರದ ವಿರುದ್ಧ ನಮ್ಮ ಸಂಘಡನೆಯ ವತಿಯಿಂದ ಬೃಹತ್ ಪ್ರತಿಭಟನೆಗೆ ಆಗಮಿಸಿ ವರದಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಮುಂದುವರೆದು ಸರ್ಕಾರಿ ಕಲಾ ಕಾಲೇಜಿನ ಆಟದ ಮೈದಾನವನ್ನು ಖಾಸಗಿ ಕ್ರಿಕೆಟ್ ಕ್ಲಬ್‌ನೊಂದಿಗೆ ಪ್ರಾಂಶುಪಾಲರಾಗಿದ್ದ ಡಾ.ಪಿ.ಟಿ ಶ್ರೀನಿವಾಸ ನಾಯಕ ರವರು ಒಡಂಬಡಿಕೆ ಮಾಡಿಕೊಂಡಿರುತ್ತಾರೆ, ಸದರಿ ಸರ್ಕಾರಿ ಜಾಗದಲ್ಲಿ ಖಾಸಗಿ ಕ್ರಿಕೆಟ್ ಕ್ಲಬ್ ನವರು ವಿವಿಧ ರೀತಿಯ ನಿರ್ಮಾನಗಳನ್ನು ಮಾಡಿ ಕಾಲೇಜು ಮೈದಾನ ಮತ್ತು ಕ್ರೀಡಾ ವಿಭಾಗದ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡು 6 ತಿಂಗಳ ಕಾಲ ಲಾಭದಾಯಕ ಚಟುವಟಿಕೆಗಳನ್ನು ನಡೆಸಿರುತ್ತಾರೆ, ಈ ಕುರಿತು ರಾಜ್ಯದ ಪ್ರತಿಷ್ಠಿತ ದಿನ ಪತ್ರಿಕೆಗಳು ಮತ್ತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿ ಕಾಲೇಜು ಶಿಕ್ಷಣ ಇಲಾಖೆಗೆ ತೀವ್ರ ಮುಜುಗರವಾಗಿರುತ್ತದೆ, ಈ ಕುರಿತು ನಾವು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದರೂ ಕಾನೂನು ಕ್ರಮ ಮತ್ತು ಶಿಸ್ತು ಕ್ರಮ ಕೈಗೊಳ್ಳದೆ ಭ್ರಷ್ಟ ಅಧಿಕಾರಿ ಡಾ.ಪಿ.ಟಿ ಶ್ರೀನಿವಾಸ ನಾಯಕ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಇತ್ತಿಚ್ಚಿಗೆ ಸದರಿಯವರು ವಯೋನಿವೃತ್ತಿ ಹೊಂದಿರುತ್ತಾರೆ, ಆದ್ದರಿಂದ ಇಲಾಖಾ ವಿಚಾರಣೆ
ಮುಕ್ತಾಯವಾಗುವರೆಗೂ ಅವರ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಈ ಕೂಡಲೇ ತಡೆಯಲು ಒತ್ತಾಯಿಸುತ್ತೇವೆ.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ.ಪಿ.ಟಿ ಶ್ರೀನಿವಾಸ ನಾಯಕ ರವರು ಕಛೇರಿ ಅವಧಿಯಲ್ಲಿ ತಮ್ಮ ಕಛೇರಿಯಲ್ಲಿ ಸಿಬ್ಬಂದಿಯೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬೇಜವಾಬ್ದಾರಿ ವರ್ತನೆ ತೋರಿರುತ್ತಾರೆ, ಈ ಕುರಿತು ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ.ರಾಮಕೃಷ್ಣಾರೆಡ್ಡಿ ರವರಿಗೆ ದಾಖಲೆ ಸಹಿತ ದೂರ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಆದ್ದರಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ.

ಈ ಹಿಂದೆ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ವೀಣಾ ಮತ್ತು ಪ್ರಾಂಶುಪಾಲರಾಗಿದ್ದ ಡಾ.ಪಿ.ಟಿ ಶ್ರೀನಿವಾಸ ನಾಯಕ ರವರು ಶಾಮೀಲಾಗಿ ವಿದ್ಯಾರ್ಥಿಗಳಿಗಾಗಿ ಚುನಾವಣಾ ಆಯೋಗದಿಂದ ಬಂದ ಹಣವನ್ನು ಲಪಟಾಯಿಸಲು ಸಂಚು ರೂಪಿಸಿ ಸಿಕ್ಕಿಬಿದ್ದಿದ್ದರು, ಈ ಕುರಿತು ದಾಖಲೆ ಸಮೇತ ದೂರು ನೀಡಿ 2 ವರ್ಷಗಳಾದರೂ ಶಿಸ್ತು ಕ್ರಮ ಕೈಗೊಳ್ಳದೆ, ವಿಳಂಬ ನೀತಿ ಅನುಸರಿಸಿ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡಲು ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಶೋಭ ಟಿ.ಆರ್ ರವರು ಪಣತೊಟ್ಟಿರುತ್ತಾರೆ.

ಕೆಲವು ಪ್ರಾಧ್ಯಾಪಕರು ಯುಜಿಸಿ ವೇತನ ಪಡೆಯುತ್ತಿದ್ದರೂ ಕಾಲೇಜುಗಳಲ್ಲಿ ತರಗತಿಗಳನ್ನು ಮಾಡದೆ, ತಮ್ಮ ಸ್ವಂತ ಕೆಲಸಗಳಲ್ಲಿ ತೊಡಗಿಸಿಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಬೋಧನಾ ಅನ್ಯಾಯ ಮಾಡುತ್ತಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಕುಮಾರಿ ಮಂಜುಶ್ರೀ ರವರು ದಕ್ಷ ಅಧಿಕಾರಿಗಳು, ಆದರೆ ಅವರ ಅಧೀನ ಅಧಿಕಾರಿಗಳಾದ ಶ್ರೀಮತಿ ಟಿ.ಆರ್ ಶೋಭ ( ಮುಖ್ಯ ಆಡಳಿತಾಧಿಕಾರಿಗಳು) ಡಾ.ರಾಮಕೃಷ್ಣಾರೆಡ್ಡಿ ( ಪ್ರಾದೇಶಿಕ ಜಂಟಿ ನಿರ್ದೇಶಕರು) ಆಯುಕ್ತರಿಗೆ ದಾರಿ ತಪ್ಪಸಿ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿರುತ್ತಾರೆ.

ಮುಖ್ಯ ಅಧಿಕಾರಿಗಳಾದ ಶ್ರೀಮತಿ ಟಿ.ಆರ್ ಶೋಭ ರವರು ದಲಿತ ವಿದ್ಯಾರ್ಥಿಗಳನ್ನು ತಮ್ಮ ಕಚೇರಿಯೊಳಗೆ ಬಿಟ್ಟುಕೊಳ್ಳದೆ ಅವಮಾನಿಸಿರುತ್ತಾರೆ ಎಂದು ಆರೋಪಿಸಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.