ಬಾಗೇಪಲ್ಲಿ ಹೆಸರು 'ಭಾಗ್ಯನಗರ'ವಾಗಿ ಮರುನಾಮಕರಣ: ಡಿಸಿಎಂ ಡಿ. ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಹೇಳಿದ ಶಾಸಕ ಎನ್. ಎಸ್. ಸುಬ್ಬಾ ರೆಡ್ಡಿ


ಬೆಂಗಳೂರು, ಜುಲೈ 3, 2025

  ಬಾಗೇಪಲ್ಲಿಯನ್ನು ಭಾಗ್ಯನಗರವೆಂದು ನಾಮಕರಣ ಮಾಡಲು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದಕ್ಕಾಗಿ ಶಾಸಕರಾದ ಎಸ್.ಎನ್.ಸುಬ್ಬಾ ರೆಡ್ಡಿ ಅವರು ಇಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಗೃಹಕಚೇರಿಯಲ್ಲಿ ಭೇಟಿಯಾಗಿ ಧನ್ಯವಾದ ತಿಳಿಸಿದರು. 

ಬಾಗೇಪಲ್ಲಿಗೆ ಮರು ನಾಮಕರಣ ಮಾಡಬೇಕೆನ್ನುವುದು ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿತ್ತು. ಈ ಬಗ್ಗೆ ಸುಬ್ಬಾ ರೆಡ್ಡಿಯವರು ಕೂಡ ಅನೇಕ ಬಾರಿ ನಮ್ಮ ಗಮನಕ್ಕೆ ತಂದಿದ್ದರು. ಅವರ ಮತ್ತು ಅಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿದ ಸಂತೃಪ್ತಿ ನಮಗಿದೆ. ಹೆಸರಿಗೆ ತಕ್ಕಂತೆ ಭಾಗ್ಯನಗರಕ್ಕೆ ಭಾಗ್ಯಗಳು ಲಭಿಸಲಿ ಎಂದು ಡಿ. ಕೆ. ಶಿವಕುಮಾರ್ ಅವರು ಹೇಳಿದರು.

'ಈ ಬಾಗೇಪಲ್ಲಿ ಭಾಗ್ಯನಗರವಾಗಲಿ, ಎಲ್ಲ ಭಾಗ್ಯವೂ ಇಲ್ಲಿ ತುಂಬಿಕೊಳ್ಳಲಿ'–ವರನಟ ರಾಜ್‌ಕುಮಾರ್ ಅವರು 1987ರ ಸೆ.9ರಂದು ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಶಾಲೆ ಆವರಣದಲ್ಲಿ ಕನ್ನಡ ಕಲಾ ಸಂಘವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೀಗೆ ಆಶಿಸಿದ್ದರು. ಅವರ ಈ ಆಶಯ 3 ದಶಕಗಳ ನಂತರ ಈಡೇರಿದೆ.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.