ಬೆಂಗಳೂರಿನ ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್ ನಲ್ಲಿ 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಬೆಂಗಳೂರು, ಜುಲೈ 12, 2025

ಬೆಂಗಳೂರಿನ ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್ ನಲ್ಲಿ 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. 

ದೀಪ ಬೆಳಗುವ ಮುಖೇನ ಈ ಕಾರ್ಯಕ್ರಮವನ್ನು ಸಂಸದರಾದ ಸುಧಾ ಮೂರ್ತಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯ‌ರ್, ಮಧುಸೂದನ್ ಸಾಯಿ ಅವರು ಉದ್ಘಾಟನೆ ಮಾಡಿದರು. 

ಫೌಂಡೇಷನ್‌ ಫಾರ್ ಇಂಡಿಯನ್ ಹಿಸ್ಟಾರಿಕಲ್ ಆ್ಯಂಡ್ ಕಲ್ಬರಲ್ ರಿಸರ್ಚ್ ಸಂಸ್ಥೆಯು 'ಯುವ ಪುಸ್ತಕ ಸರಣಿ' ಕಾರ್ಯಕ್ರಮವನ್ನು ಆಯೋಜಿಸಿತ್ತು. 

ಈ ಕಾರ್ಯಕ್ರಮದಲ್ಲಿ ಪ್ರಮುಖ ಲೇಖಕರ ಪುಸ್ತಕಗಳನ್ನು ಸುಧಾ ಮೂರ್ತಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯ‌ರ್ ಅವರು ಬಿಡುಗಡೆ ಮಾಡಿದರು. 
 
 ಈ ಸಂದರ್ಭದಲ್ಲಿ ದೇಶದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವಂತಹ ಕನ್ನಡ, ತೆಲುಗು, ತಮಿಳು ಹಾಗೂ ಭಾಷಾಂತರಗೊಂಡ ಪುಸ್ತಕಗಳನ್ನು ಬಿಡುಗಡೆ ಮಾಡಿದರು. 

ಈ ಕಾರ್ಯಕ್ರಮದಲ್ಲಿ ಇತಿಹಾಸದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ವಿವಿಧ ಶಾಲೆಗಳ ಮಕ್ಕಳು ಭಾಗಿಯಾಗಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium