ರಾಜ್ಯದಲ್ಲಿನ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಎ. ಅಮೃತ್ ರಾಜ್ ಅವರು ಬಿಬಿಎಂಪಿ ಆಯುಕ್ತರಾದ ಮಹೇಶ್ವರರಾವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ಸಂಘಗಳ ಪರಿಷತ್ತು' ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ. ಅಮೃತ್ ರಾಜ್ ಅವರ ನೇತೃತ್ವದಲ್ಲಿ ನಡೆಯಿತು.
ಬೆಂಗಳೂರಿನ ಬಿಬಿಎಂಪಿ, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ ಧಾರವಾಡ, ಮಂಗಳೂರು, ತುಮಕೂರು, ಬೆಳಗಾಂ, ದಾವಣಗೆರೆ ಸೇರಿದಂತೆ ಒಟ್ಟು 10 ಪಾಲಿಕೆಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂದಿದ್ದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಫೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಕಾರ್ಯಕ್ರಮ ನಡೆಸಲಾಯಿತು.
ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್‌ರವರು ಗೌರವಾಧ್ಯಕ್ಷರಾದ ಎಸ್.ಹೆಚ್. ಗುರುಮೂರ್ತಿ, ರಾಜ್ಯ ಉಪಾಧ್ಯಕ್ಷರುಗಳಾದ ಜಿ.ವೆಂಕಟ್ ರಾಮ್, ವೇಣುಗೋಪಾಲ್ ಬಿ.ಎನ್. ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಖಜಾಂಚಿ ರುದ್ರೇಶ್ ಬಿ ಹಾಗೂ ರಾಜ್ಯ ಕಾರ್ಯದರ್ಶಿ ಪ್ರಹ್ಲಾದ್ ಕುಲಕರ್ಣಿ, ರಾಜ್ಯ ನಿರ್ದೇಶಕರುಗಳಾದ ಸಾಯಿಶಂಕರ್, ಜಗದೀಶ್ ಎಸ್. ಎ.ಜಿ.ಬಾಬು, ಶ್ರೀನಿವಾಸ್ ಕಟ್ಟಿ, ಬಾಬು ಪಿ. ನರಸಿಂಹ ಕೆ, ಶಾಂತಪ್ಪ ಮುಖೇಶಪ್ಪ ಪತ್ತಾರ, ರವೀಂದ್ರ ಶಿರಶ್ಯಾದ ಮತ್ತು 10ಮಹಾನಗರ ಪಾಲಿಕೆ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎ.ಅಮೃತ್ ರಾಜ್ ರವರು ಮಾತನಾಡಿ ಬಿಬಿಎಂಪಿ ಮತ್ತು 10ಮಹಾನಗರ ಪಾಲಿಕೆಯ ಅಧಿಕಾರಿ, ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಛೇರಿ ಮತ್ತು ಹೊರಗಡೆ ಕೆಲಸ ನಿರ್ವಹಿಸುತ್ತಿರುವುದರಿಂದ ಲಾಫ್ ಆಫ್ ಪದ್ಧತಿ ಬಿಡಬೇಕು. 6000ಅಧಿಕಾರಿ ಸಿಬ್ಬಂದಿಗಳ ಕೊರತೆ ಇದೆ ಕೊರತೆ ಭರ್ತಿ ಮಾಡಬೇಕು. ವಿದ್ಯಾಇಲಾಖ 'ಪ್ರಾಂಶುಪಾಲರು.ಮುಖ್ಯೋಪಾಧ್ಯಯರು ಮೇಲಿನ ಇಲಾಖೆ ವಿಚಾರಣೆ ಕೈಬಿಡಬೇಕು.ಸಹಾಯಕ ಕಾರ್ಯಪಾಲಕ, ಕಾರ್ಯಪಾಲಕ ಅಭಿಯಂತರುಗಳಗೆ ಮುಂಬಡ್ತಿ ನೀಡಬೇಕು. ಇ-ಆಸ್ತಿ ನೋಂದಾಣೆ ಪದ್ಧತಿ ಈ ಹಿಂದೆ ಇರುವ ನಿಯಮದಂತೆ ಮುಂದುವರೆಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಸೌಲಭ್ಯ ಪಾಲಿಕೆ ನೌಕರರಿಗೆ ಯೋಜನೆ ಜಾರಿಯಾಗಬೇಕು. ಎರವಲು ಸೇವೆ ಆಧಿಕಾರಿಗಳು ಮಾತೃ ಇಲಾಖೆಗೆ ವರ್ಗಾವಣೆ ಮಾಡಬೇಕು.ನೌಕರರ ಜೇಷ್ಠತಾ ಪಟ್ಟಿ ಅಂತಿಮಗೊಳಿಸಬೇಕು. ಹೆಲ್ತ್ ಸೂಪರ್ ವೈಸರ್ ಗಳಿಗೆ ವಾಣಿಜ್ಯ ಪರವಾನಗಿ ನೀಡುವ ಅಧಿಕಾರ ನೀಡಬೇಕು.ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್ ಗಳನ್ನು ರದ್ದುಪಡಿಸಬೇಕು. 7ನೇ ವೇತನ ಆಯೋಗದ ಮಹಾನಗರ ಪಾಲಿಕೆ ನೌಕರರಿಗೆ ವಿಸ್ತರಣೆ, ವೃಂದ ಮತ್ತು ನೇಮಕಾತಿಯಲ್ಲಿ ತಿದ್ದುಪಡಿ ಹಾಗೂ ಕೆಜಿಐಡಿ ಮತ್ತು ಜಿಪಿಎಫ್ ಸೌಲಭ್ಯ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಬೇಕು. ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ ಇಷ್ಟು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಎಂದು ಹೇಳಿದರು.
ಬಿಬಿಎಂಪಿ ಕಂದಾಯ, ಆರೋಗ್ಯ, ಇಂಜನಿಯರ್ ಮತ್ತು ಪೌರ ಕಾರ್ಮಿಕರ ಸಂಘಟನೆಗಳು, ರುದ್ರಭೂಮಿ ನೌಕರರು, ಐ.ಟಿ.ಮತ್ತು ಹೊರಗುತ್ತಿಗೆ ನೌಕರರು, ಆಡಳಿತ ಕಛೇರಿ ಅಧಿಕಾರಿ ಸಿಬ್ಬಂದಿಗಳು ಹಾಗೂ 10ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Comments
Post a Comment