ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 'ವಕೀಲರ ಸಂಘದ ಪದಾಧಿಕಾರಿಗಳ ರಾಜ್ಯ ಕಾನೂನು ಸಮ್ಮೇಳನ' ಆಯೋಜಿಸಲಾಗಿತ್ತು.

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 'ವಕೀಲರ ಸಂಘದ ಪದಾಧಿಕಾರಿಗಳ ರಾಜ್ಯ ಕಾನೂನು ಸಮ್ಮೇಳನ' ಆಯೋಜಿಸಲಾಗಿತ್ತು. ಈ ಮಹತ್ವದ ಸಮ್ಮೇಳನ 'ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವತಿಯಿಂದ ನಡೆಯಿತು. 

ಈ ಸಮ್ಮೇಳನವನ್ನು ಕೇಂದ್ರ ಸಚಿವರಾದ ಕಿರಣ್ ರಿಜಿಜು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಮಿತ್ತಲಕೋಡ್ ಅವರು ಉದ್ಘಾಟನೆ ನೆರವೇರಿಸಿದರು.


ಈ ಸಮ್ಮೇಳನದಲ್ಲಿ ಬಿ.ವೈ. ವಿಜಯೇಂದ್ರ ಅವರು ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ನೆಲದ ಕಾನೂನಿನ ಸೇವೆ ದೊರಕಬೇಕಿದೆ, ಈ ನಿಟ್ಟಿನಲ್ಲಿ ವಕೀಲ ಸಮುದಾಯ ಜನರ ದನಿಯಾಗಿ ಸೇವೆ ಸಲ್ಲಿಸಿ ನ್ಯಾಯ ದಾನ ವಿತರಣೆಯಲ್ಲಿ ಮಹತ್ವ ಪಾತ್ರ ನಿರ್ವಹಿಸಲಿ ಎಂಬ ಕರೆ ನೀಡಲಾಯಿತು.

ಜಗತ್ತಿನ ಅತ್ಯಂತ ಎತ್ತರದ ಪ್ರಜಾಪ್ರಭುತ್ವದ ದೇಶ ಭಾರತ ಇಂದು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳುತ್ತಿರುವ ನಿಟ್ಟಿನಲ್ಲಿ ಸದೃಢ ಹೆಜ್ಜೆ ಹಾಕುತ್ತಿದೆ, ಇದಕ್ಕೆ ನ್ಯಾಯಾಂಗ ವ್ಯವಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸಂವಿಧಾನದ ಆಶಯಗಳನ್ನು ಕಾಯುವ ನಿಟ್ಟಿನಲ್ಲಿ ಘನ ನ್ಯಾಯಾಲಯಗಳು ಭರವಸೆ ಬೆಳಕಾಗಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿವೆ, ಇದರಲ್ಲಿ ವಕೀಲ ಸಮೂಹದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 

ಓಡುತ್ತಿರುವ ಜಗತ್ತಿನೊಂದಿಗೆ ನ್ಯಾಯಾಂಗ ವ್ಯವಸ್ಥೆಯೂ ಕೂಡ ಸವಾಲುಗಳನ್ನು ಎದುರಿಸುತ್ತಿದೆ. ಸೈಬರ್ ಅಪರಾಧಗಳು, ಭಯೋತ್ಪಾದನೆಯಂತಹ ವಿದ್ರೋಹಿ ಚಟುವಟಿಕೆಗಳು ದೇಶದ ಸಾರ್ವಭೌಮತ್ವಕ್ಕೆ ಸವಾಲಾಗಿ ನಿಂತಿವೆ, ಈ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ದೇಶ ರಕ್ಷಣೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೆ ಸಂವಿಧಾನದ ಮಹತ್ವವನ್ನು ರಕ್ಷಿಸುತ್ತಿರುವುದು ಅತ್ಯಂತ ಅಭಿನಂದನೀಯ ಕಾರ್ಯವಾಗಿದೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ @KirenRijiju , ಭಾರತೀಯ ವಕೀಲರ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮನನ್ ಕುಮಾರ್ ಮಿಶ್ರಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ರಾಜ್ಯಾಧ್ಯಕ್ಷರಾದ ಶ್ರೀ ಎಸ್‌. ಎಸ್‌. ಮಿತ್ತಲ್‌ ಕೋಡ್‌, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಸದರಾದ ಶ್ರೀ @Tejasvi_Surya, ಹಿರಿಯ ವಕೀಲರು ಹಾಗೂ ಅಪರ ಅಟಾರ್ನಿ ಜನರಲ್ ಶ್ರೀ ಅರವಿಂದ್ ಕಾಮತ್ ಅವರು ಸೇರಿದಂತೆ ವಕೀಲರ ಪರಿಷತ್ತಿನ ಪ್ರಮುಖರು ಹಾಗೂ ವಕೀಲರು ಉಪಸ್ಥಿತರಿದ್ದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium