ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಕರ್ನಾಟಕ ಕೊರಚ ಮಹಾ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಕರ್ನಾಟಕ ಕೊರಚ ಮಹಾ ಸಂಘ'ದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

 ಈ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಧ್ಯಕ್ಷರಾದ ಕೆ.ಎನ್. ಪ್ರಭು ಅವರು ಮಾತನಾಡಿದರು.
ಪ್ರಧಾನ ಕಾರ್ಯದರ್ಶಿಯಾದ ವೈ. ಕುಮಾರ್, ಖಜಾಂಚಿ ಬಿ. ಎನ್. ಸುರೇಶ್ ಅವರು ಉಪಸ್ಥಿತರಿದ್ದರು.

ಕೊರಚ ಸಮಾಜವು ಅತಿ ಹಿಂದುಳಿದ ಅಲೆಮಾರಿ/ಅರೆ ಅಲೆಮಾರಿ ಸೂಕ್ಷ್ಮ ಜನಾಂಗಕ್ಕೆ ಆಗಿರುವ ಘೋರ ಅನ್ಯಾಯವನ್ನು ಸರಿಪಡಿಸಿ ನ್ಯಾಯಾ ಒದಗಿಸಲು ಸರ್ಕಾರಕ್ಕೆ ಒತ್ತಾಯ,

ಕರ್ನಾಟಕ ಸರ್ಕಾರವು ದಿನಾಂಕ:19.08.2025 ರಂದು ಪರಿಶಿಷ್ಟ ಜಾತಿಯಾರ ಒಳಮೀಸಲಾತಿಯನ್ನು 3 ಭಾಗಗಳಾಗಿ ವಿಂಗಡಿಸಿದ್ದು, ಅದರಲ್ಲಿ ಕೊರಚ ಜನಾಂಗದವರನ್ನು 3ನೇ ಪಟ್ಟಿಯಲ್ಲಿ ಸೇರಿಸಿರುವುದು ಘನ ಘೋರವಾದ ಅನ್ಯಾಯವಾಗಿರುತ್ತದೆ. ಕೊರಚರು, ಅಲೆಮಾರಿಗಳು, ಅಪರಾಧಿಕ ಬುಡ ಕಟ್ಟು ಜನಾಂಗದವರಾಗಿದ್ದು, ಈಗಲೂ ಸಹ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ರಾಜಕೀಯವಾಗಿ ಯಾವುದೇ ವಿಧಾನಸಭೆ ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಗಳಲ್ಲಿ ಹಾಗೂ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಲ್ಲಿಯೂ ಸಹ ಸ್ಥಾನಗಳನ್ನು ಶತಮಾನಗಳಿಂದಲೂ ಸಹ ಪಡೆದುಕೊಂಡಿರುವುದಿಲ್ಲ. ಇದು ಅಸಂಘಟಿತ ಸಮಾಜವಾಗಿದ್ದು, ಕಡು ಬಡವರಾಗಿ ನಿರ್ಗತಿಕರಾಗಿ ಸಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕವಾಗಿಯೂ ಹಿಂದೂಳಿದ ಸಮಾಜವಾಗಿರುತ್ತದೆ. ಇದನ್ನು ನಾಗಮೋಹನ್ ದಾಸ್ ವರದಿಯಲ್ಲಿಯೂ ಸಹ ಏಕ ಸದಸ್ಯ ಆಯೋಗವು ಸಹ ಹೇಳಿದರು ಸಹ ಸರ್ಕಾರವು ಈ ಜನಾಂಗವನ್ನು 3ನೇ ಪಟ್ಟಿಯಲ್ಲಿ ಸೇರಿಸಿ ಸಮಾಜದ ಅಭಿದ್ಯೋಕಕ್ಕೆ ಮಾರಕ ಉಂಟು ಮಾಡಿರುತ್ತದೆ.

1. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ದಿನಾಂಕ:01.08.2024 ರಂದು ಪಂಜಾಬ್ ರಾಜ್ಯ ಮತ್ತು ಇತರರು ವರ್ಸ್‌ಸ್ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಎಂದು ತೀರ್ಪು ನೀಡಿದೆ. ಅಂದರೆ ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸಾಂವಿಧಾನಿಕವಾಗಿ ದತ್ತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನದ ಅನುಚ್ಚೇಧ 14, 15 ಮತ್ತು 16 ರಲ್ಲಿ ತಿಳಿಯಪಡಿಸಿರುವ ಸಮಾನತೆಯ ತತ್ವಕ್ಕೆ ಯಾವುದೇ ಚ್ಯುತಿ ಬಾರದಂತೆ ಅದರ ಮೂಲ ಆಶಯವನ್ನು ಸದೃಢಗೊಳಿಸುವ ದೃಷ್ಟಿಯಿಂದ ಒಳ ಮೀಸಲಾತಿ ವ್ಯವಸ್ಥೆ ಕಲ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium